ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇಹದ ಆರೋಗ್ಯ ಇಂದ್ರಿಯ ದೇವತೆ

ದೇಹದ ಆರೋಗ್ಯ ಇಂದ್ರಿಯ ದೇವತೆ..!

ನಮ್ಮ ಆಯುರ್ವೇದ ಶಾಸ್ತ್ರದಲ್ಲಿ ಹೇಳುವಂತೆ ನಮ್ಮ ದೇಹದ ಆರೋಗ್ಯ ಸ್ಥಿರವಾಗಿ ಇರಬೇಕಾದರೆ ಮೊದಲು ನಮ್ಮ ಉಸಿರಾಟ ಸ್ಥಿರವಾಗಬೇಕು…‌

ಏಳನೇ ವಯಸ್ಸಿಗೆ ಉಪನಯನವಾದ ವಟುವಿಗೆ ಮೊದಲು ಕೊಡುವ ಟ್ರೈನಿಂಗ್ ಪ್ರಾಣಾಯಾಮ…

ಸಂಧ್ಯಾವಂದನೆ ಅಥವಾ ಯಾವುದೇ ಧಾರ್ಮಿಕ ಕ್ರಿಯೆಯಲ್ಲದಾರೂ ಕೂಡ ಮೊದಲು ಆಚಮನ, ಪ್ರಾಣಾಯಾಮ ಆಮೇಲೆ ತಾನು ಏನು ಕರ್ಮ ಮಾಡ್ತೇನ ಅನ್ನುವ ಸಂಕಲ್ಪ….

ನಮ್ಮ ಶಾಸ್ತ್ರ ಹೇಳುತ್ತೆ, ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗದ ಕ್ರಿಯೆ ನಡೆಯುವುದು ಆಯಾ ದೇವತಾ ಶಕ್ತಿ ಆಯಾ ದೇಹದ ಭಾಗದಲ್ಲಿ ಕೂತು ಮಾಡುವ ಕ್ರಿಯೆ ಅದು ಅಂತ…

ಉದಾಹರಣೆಗೆ, ನಮ್ಮ ಕಣ್ಣು ಸುಂದರ ಜಗತ್ತಿನ ಅನುಭವವನ್ನು ಕಾಣ್ಕೆಯ ಮೂಲಕ ನಮಗೆ ಕೊಡುತ್ತೆ.

ಕಣ್ಣು ಅಥವಾ ಯಾವುದೇ ಇಂದ್ರಿಯ ಗಳಾಗಲಿ ಅದು ಜಡ ವಸ್ತು… ‌ಕಣ್ಣಿನ ಅಭಿಮಾನಿದೇವತೆಯಾಗಿ “ಸೂರ್ಯ” ಕಣ್ಣಿನಲ್ಲಿ ಕೂತದ್ದರಿಂದ ನಮಗೆ ಕಣ್ಣು ಕಾಣೋದು…

ಹೊರಗೆ ಆಕಾಶದಲ್ಲಿ ಜಗಮಗಿಸುವ ಸೂರ್ಯಮಂಡಲ ಉಂಟಲ್ಲ ಅದು ಜಡ ಅದು ನಮ್ಮ ಕಣ್ಣಿಗೂ ಕಾಣುತ್ತೆ, ಅದರ ಅಭಿಮಾನಿದೇವತೆ ಸೂರ್ಯ…

ಆ ದೇವತೆ ನಮ್ಮ ಕಣ್ಣಿಗೆ ಕಾಣಿಸೋಲ್ಲ… ಯಾವ ಸೂರ್ಯ ಸೂರ್ಯಂಡಲದ ಅಭಿಮಾನಿ ದೇವತೆಯೋ (ಅದರಿಂದಲೇ ಆಕಾಶದ ಸೂರ್ಯನನ್ನು ಮುಗಿಲಕಣ್ಣು ಅಂತಾರೆ) ಅದೇ ಸೂರ್ಯ ನಮ್ಮ ಕಣ್ಣಿನ ದೇವತೆ ಕೂಡ… ಅದರಿಂದಲೇ, ಸೂರ್ಯ ಆಗಸದಲ್ಲಿ ಉದಯಿಸಿದಾಗ ನಮ್ಮ ಕಣ್ಣು ತೆರೆಯುತ್ತೆ… ಸೂರ್ಯ ಮುಳುಗಿದಾಗ ನಮ್ಮ ಕಣ್ಣೂ ಮುಚ್ಚುತ್ತೆ…

ಹಾಗೆ ನಮ್ಮ ಪ್ರತಿಯೊಂದು ಇಂದ್ರಿಯಗಳಿಗೂ ಒಬೊಬ್ಬ ಅಭಿಮಾನಿದೇವತೆ ಇದ್ದಾನೆ…

ಕಿವಿಗೆ ಚಂದ್ರ, 🌙
ಅವನು ರಾತ್ರಿಯಲ್ಲಿ ಪ್ರಕಾಶ ಹರಿಸುವವನು… ಅದರಿಂದಲೇ ರಾತ್ರಿಯಲ್ಲಿ ನಮ್ಮ ಕಿವಿ ತುಂಬಾ ಚುರುಕು ಒಂದು ಸಣ್ಣ ಶಬ್ದ ಕೂಡ (Pin Drop) ಕಿವಿಗೆ ಬಂದು ಬಡಿಯುತ್ತೆ…

  ಧರ್ಮ ಹಾಗು ದೇಶದ ಕಾನೂನು - ಪ್ರಜಾಕೀಯ

ಮೂಗಿಗೆ ಅಶ್ವಿದೇವತೆಗಳು👃

ಅಭಿಮಾನಿ ದೇವತೆಗಳು … ಅಶ್ವಿಗಳು Twins ನಮ್ಮ ಮೂಗು ಒಂದೇ ಆದರೂ ಎರಡು ಹೊರಳೆಗಳು…
ಹೀಗೆ ಪ್ರತಿಯೊಂದು ಇಂದ್ರಿಗಳಿಗೂ ಒಬ್ಬೊಬ್ಬ ಅಭಿಮಾನಿ ದೇವತೆ..

ನಮ್ಮ ಕೈಗೆ ಇಂದ್ರ, 👋

ಬಾಯಿಗೆ ವರುಣ,

ಮಾತಿಗೆ ಪಾರ್ವತಿ,

ಚರ್ಮಕ್ಕೆ (ಸ್ಪರ್ಶದ ಸುಖ ಕೊಡುವ) ಕುಬೇರ,

ಕಾಲುಗಳಿಗೆ ಜಯಂತ,

ನಮ್ಮ ಒಳಗಿನ ಇಂದ್ರಿಯಗಳಾದ ಮನಸ್ಸು-ಬುದ್ಧಿ-ಅಹಂಕಾರಕ್ಕೆ ಶಿವ,

ನಮ್ಮ ಉಸಿರಾಟಕ್ಕೆ ಮುಖ್ಯಪ್ರಾಣನೆನಿಸಿದ ವಾಯು…

ಈ ದೇಹದಲ್ಲಿ ನಿರಂತರ ಕ್ರಿಯೆ ನಡೆಯುತ್ತಿದೆ…
It is not merely biological Chemical Reaction…
ದೇಹ ಜಡವಾದರೂ ಈ ದೇಹದಲ್ಲಿ ಅನೇಕ ಕ್ರಿಯೆಗಳು ನಡೆಯುತ್ತಿವೆ ಅದಕ್ಕೆ ಅತೀಂದ್ರಿಯ ಶಕ್ತಿ ಗಳೆನಿಸಿದ ದೇವತಾಶಕ್ತಿಗಳು ಕಾರಣ..‌.

ಈ ದೇಹದಲ್ಲಿ ಮುಖ್ಯವಾಗಿ 24 ತತ್ವಾಭಿಮಾನಿ ದೇವತೆಗಳಿದ್ದು ಈ ದೇಹವನ್ನು ನಿಯಂತ್ರಿಸುತ್ತಿದ್ದಾರೆ…

ಇದು ಒಂದು ಕಥೆ…

ಒಮ್ಮೆ ದೇವತೆಗಳಲ್ಲಿ ಚರ್ಚೆ ನಡೆಯಿತು ಯಾರು ಈ ದೇಹದಲ್ಲಿ ಯಾರ ಸ್ಥಾನಮಾನ ಮುಖ್ಯ ಅಂತ… ಒಬ್ಬೊಬ್ಬ ದೇವತೆ ಈ ದೇಹದಿಂದ ಹೊರಗೆ ಹೋದಾಗ ಏನಾಯಿತು…

ಸೂರ್ಯ ಹೊರಗೆ ಹೋದ ವ್ಯಕ್ತಿ ಕುರುಡನಾಗಿ ಬದುಕಿದ…
ಚಂದ್ರ ಹೊರಗೆ ಹೋದ ವ್ಯಕ್ತಿ ಕಿವುಡನಾಗಿ ಬದುಕಿದ…

ಇಂದ್ರ ಹೊರಗೆ ಹೋದ ಕೈಯಿಲ್ಲದೆ ವ್ಯಕ್ತಿ ಬದುಕಿದ, ಜಯಂತ ಹೊರಗೆ ಹೋದ ಕಾಲಿಲ್ಲದೆ ಬದುಕಿದ ಪಾರ್ವತಿ ಹೊರಗೆ ಹೋದಳು ವ್ಯಕ್ತಿ ಮೂಕನಾಗಿ ಬದುಕಿದ ಮನೋಭಿಮಾನಿ ಶಿವನೂ ಹೊರಗೆ ಹೋದ ಮನಷ್ಯ ಕೋಮಾಸ್ಥಿಯಲ್ಲಿ ಬದುಕಿದ…
ಹೀಗೆ ಯಾವುದೇ ದೇವತೆ ಹೊರಗೆ ಹೋದರು ದೇಹಬಿದ್ದುಹೋಗಲಿಲ್ಲ… ಯಾವಾಗ ಪ್ರಾಣದೇವರು ಉಸಿರಾಟ ನಿಲ್ಲಿಸಿದರೋ ದೇಹದೊಪ್ಪೆಂದು ಬಿತ್ತು…

ನಮ್ಮ ಒಳಗಿರುವ ಭಗವಂತ ಈ ದೇಹ ಪ್ರವೇಶಮಾಡುವುದಾಗಲಿ ದೇಹ ಬಿಡುವುದಾಗಲಿ ಪ್ರಾಣನೊಟ್ಟಿಗೆ…

ದೇಹವನ್ನು ನಿಯಂತ್ರಿಸುವ ಎಲ್ಲ ದೇವತೆಗಳನ್ನು ಮತ್ತೆ ದೇಹಕ್ಕೆ ಕರೆಯಲಾಯಿತು… ದೇಹದ ಎಲ್ಲ ಅಂಗಗಳೂ ಸರಿಯಾಗಿವೆ ದೇಹ ಆರೋಗ್ಯವಾಗಿದೆ ವ್ಯಕ್ತಿ ಬಲಿಷ್ಠ ನಾಗಿದ್ದಾನೆ… ಈಗ ಸುಮ್ಮನೆ ವಾಯುದೇವ ದೇಹದಿಂದ ಹೊರನಡೆದ ಶರೀರ ದೊಪ್ಪೆಂದು ಬಿತ್ತು… ಇದು ಪ್ರಾಣಶಕ್ತಿ… ಅದೇ ಉಸಿರು…‌ ಈ ದೇಹದಲ್ಲಿ ಉಸಿರಿರುವ ತನಕವಷ್ಟೇ ಈ ದೇಹದಲ್ಲಿ ಚಟುವಟಿಕೆ…

  ನಮಸ್ತೇ ಶಾರದಾ ದೇವಿ ಕಾಶ್ಮೀರಪುರವಾಸಿನಿ

ರಾತ್ರಿ ನಾವು ಮಲಗಿದಾಗ ಕೂಡ ನಮ್ಮೊಟ್ಟಿಗೆ ಎಲ್ಲ ಇಂದ್ರಿಯಾಭಿಮಾನಿ ದೇವತೆಗಳೂ Rest ತಗೋತಾರೆ…

ಆದರೆ ಪ್ರಾಣದೇವರಿಗೆ Rest ಇಲ್ಲ..‌.

ವಾಯು ನಮ್ಮ ದೇಹದಲ್ಲಿ 24×7 all 365 days till end of Life ಒಂದು ಕ್ಷಣ ಬಿಡದೇ ನಮ್ಮನ್ನು ಉಸಿರಾಡಿಸುತ್ತಿರಬೇಕು…

ಪ್ರಾಣಶಕ್ತಿಯಿಂದಾಗಿ ಈ ದೇಹದಲ್ಲಿ ಮೇಲಕ್ಕೂ ಕೆಳಕ್ಕೂ ರಕ್ತಸಂಚಾರ, ನಾವು ಉಂಡ ಆಹಾರ ಜೀರ್ಣವಾಗುವುದು..‌

ಅದಕೆಂದೇ ನಾವು ನಿತ್ಯ ಉಟಮಾಡುವಾಗ ಮೊದಲು ಪಂಚರೂಪದಿಂದ ಈ ದೇಹದ ಚಟುವಟಿಕೆಗಳನ್ನು ನಡೆಸುವ ಪ್ರಾಣನಿಗೆ ಆಹುತಿ ಕೊಟ್ಟು ಪ್ರಾಣನ ಉಪಕಾರ ಸ್ಮರಣೆಯನ್ನು ಸ್ಮರಿಸುವುದು…‌

ಪ್ರಾಣಾಯ ಸ್ಚಾಹಾ, ಅಪಾನಾಯ ಸ್ವಾಹಾ, ವ್ಯಾನಾಯ ಸ್ವಾಹಾ, ಉದಾನಾಯ ಸ್ವಾಹಾ, ಸಮಾನಾಯ ಸ್ವಾಹಾ..

ಅದರಿಂದ ಬದುಕು ಎಂದರೆ ಉಸಿರು… ಉಸಿರಾಟ ಸರಿಯಾಗಿದ್ದರೆ ದೇಹದಾರೋಗ್ಯ.


ಪುನರಪಿ ಜನನಂ ಪುನರಪಿ ಮರಣಂ !
ಶ್ರೀವಿಷ್ಣು, ವಿಶ್ವಕ್ಕೆ ಮೂಲ, ಮಾಯಾಲೋಲ, ದೇವ, ಸರ್ವಕ್ಕೂ ಒಡೆಯನಾದ ಪರಬ್ರಹ್ಮ ಎಂದು ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು.

ನಾವೆಲ್ಲಾ ಆತ್ಮಗಳಾದರೆ ನಮ್ಮನ್ನು ಆಳುವವನು ಪರಮಾತ್ಮ. ಅದನ್ನು ನಿಯಾಮಕ, ನಿಯಂತ್ರಕ, ದೇವರು ಎಂದೆಲ್ಲ ಕರೆಯುತ್ತಾರೆ.

ಯಾರು ಏನೇ ಹೆಸರಿಟ್ಟು ಕರೆದರೂ ಅದು ಪರಮ ಶಕ್ತಿ. ಇಡೀ ಜಗತ್ತನ್ನು ಸೃಷ್ಟಿಸಿ ನಿಯಂತ್ರಿಸುವ ಒಂದು ಪರಮ ಶಕ್ತಿ.

ಇದನ್ನು ಹಲವಾರು ಸದ್ಭಕ್ತರು ತಮ್ಮ ತಮ್ಮದೇ ರೀತಿಯಲ್ಲಿ ತಮ್ಮ ಅಂತರಂಗದಲ್ಲಿ ಕಂಡುಕೊಂಡು ಅನುಭವಿಸಿದ್ದಾರೆ. ಯಾರು ಹೇಗೆ ಅನುಭವಿಸಿದರೋ ಅವರಿಗೆ ಹಾಗೆ ಕಂಡಿದೆ.

  ಮೇಷಶೃಂಗೀ (ಮಧುನಾಶಿನಿ) ಯ ಔಷಧೀಯ ಗುಣಗಳು

ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆ.

ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು, ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ, ಪ್ರೀತಿಯಿಂದ ನಮಿಸಬೇಕು
ಜೀವ ತನ್ನ ದೇಹವನ್ನು ಕಳಚಿ ಮೋಕ್ಷಕ್ಕೆ ಹೋಗುವ ಪ್ರಕ್ರಿಯೆಯನ್ನು ಯಮ ಇಲ್ಲಿ ವಿವರಿಸಿದ್ದಾನೆ.

ನಮ್ಮ ದೇಹದ ಎಡಭಾಗದಲ್ಲಿ ಐವತ್ತು ಮತ್ತು ಬಲಭಾಗದಲ್ಲಿ ಐವತ್ತು ಮುಖ್ಯ ನಾಡಿಗಳಿವೆ. ನಡುವಿನಲ್ಲಿ ಹೃದಯದಿಂದ ಮೇಲೆ ಹೋಗುವ ಸುಷುಮ್ನಾ ಅಥವಾ ಬ್ರಹ್ಮನಾಡಿ ಇದೆ. ಅದರ ತುದಿ ನಮ್ಮ ನೆತ್ತಿಯಲ್ಲಿದೆ.
ಅದನ್ನೇ ಸಹಸ್ರಾರ ಎನ್ನುತ್ತಾರೆ.

ಈ ನಾಡಿಯ ಮೂಲಕ, ಸಹಸ್ರಾರದಿಂದ ಜೀವ ದೇಹದಿಂದ ಹೊರ ಹೋದರೆ, ಆ ಜೀವ ಮತ್ತೆ ಮರಳಿ ಹುಟ್ಟುವುದಿಲ್ಲ. ಇದು ಜೀವ ಹುಟ್ಟು ಸಾವಿನ ಚಕ್ರದಿಂದ ಕಳಚಿಕೊಂಡು ಮೋಕ್ಷವನ್ನು ಸೇರುವ ಮಾರ್ಗ. ದೇಹದಲ್ಲಿನ ಇತರ ನಾಡಿಗಳು ಸಂಸಾರಕ್ಕೆ ಕಾರಣವಾಗಿರುತ್ತವೆ.

ಅಂದರೆ ಸಹಸ್ರಾರವಲ್ಲದೇ ದೇಹದ ಇತರ ಯಾವುದೇ ದ್ವಾರದ ಮೂಲಕ ಜೀವ ಹೊರ ಹೋದರೂ, ಮರಳಿ ಸಂಸಾರ ಚಕ್ರದಲ್ಲಿ ಸಿಲುಕುತ್ತಾನೆ.

ಪುನರಪಿ ಜನನಂ ಪುನರಪಿ ಮರಣಂ I ಪುನರಪಿ ಜನನೀಜಠರೇ ಶಯನಮ್ II ಇಹ ಸಂಸಾರೇ ಬಹುದುಸ್ತಾರೇ I ಕೃಪಯಾsಪಾರೇ ಪಾಹಿ ಮುರಾರೇ II

▬▬▬ஜ۩۞۩ஜ▬▬▬▬▬▬ஜ۩۞۩ஜ▬▬ ಧಮೋ೯ ರಕ್ಷತಿ ರಕ್ಷಿತ: ಕೃಷ್ಣಾರ್ಪಣಮಸ್ತು
ಸರ್ವಜನಾಃ ಸುಖಿನೋಭವತು
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬

Leave a Reply

Your email address will not be published. Required fields are marked *

Translate »