ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪುರಿ ಜಗನ್ನಾಥ ದೇವಾಲಯದಲ್ಲಿ ನಡೆಯುವ ಅಚ್ಚರಿಯ ಸಂಗತಿಗಳೇನು ಗೊತ್ತಾ ..?

ಪುರಿ ಜಗನ್ನಾಥ ದೇವಾಲಯದಲ್ಲಿ ನಡೆಯುವ ಅಚ್ಚರಿಯ ಸಂಗತಿಗಳೇನು ಗೊತ್ತಾ..?

ಭಾರತದ ಪೂರ್ವ ಕರಾವಳಿಯಲ್ಲಿರುವ ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ಚಾರ್‌ಧಾಮ ಕ್ಷೇತ್ರಗಳಲ್ಲೊಂದು. ಐತಿಹಾಸಿಕ ಹಿನ್ನೆಲೆಯಿರುವ ಈ ದೇವಸ್ಥಾನದಲ್ಲಿ ಇಂದಿಗೂ ನಡೆಯುವ ಅಚ್ಚರಿ ಸಂಗತಿಗಳು ವೈಜ್ಞಾನಿಕ ತಾರ್ಕಿಕತೆಗೂ ನಿಲುಕದ ಸಂಗತಿಗಳಾಗಿದೆ.

ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದ್ಭುತ ಹಿನ್ನೆಲೆಯನ್ನು ಪಡೆದುಕೊಂಡಿರುವ ದೇವಾಲಯಗಳಲ್ಲಿ ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯವು ಒಂದು. ವಿಶಿಷ್ಟವಾದ ಹಿನ್ನೆಲೆ ಹಾಗೂ ದೈವ ಶಕ್ತಿಯನ್ನು ಹೊಂದಿರುವ ಈ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.

ಮರದಿಂದಲೇ ನಿರ್ಮಿಸಲಾಗಿರುವ ಈ ಅದ್ಭುತ ದೇವಾಲಯವು ಭಾರತದ ಚಾರ್‌ಧಾಮ್ ತೀರ್ಥಯಾತ್ರೆಯ ತಾಣಗಳಲ್ಲಿ ಒಂದು. ಇಲ್ಲಿ ನಡೆಯುವ ವಾರ್ಷಿಕ ರಥೋತ್ಸವ ಹಾಗೂ ರಥಯಾತ್ರೆ ಹೆಸರುವಾಸಿಯಾಗಿದೆ. ದೇವಾಲಯಕ್ಕೆ ಸಂಬಂಧಿಸಿದ ಕಥೆಯ ಪ್ರಕಾರ ಇಂದ್ರದ್ಯುಮ್ನ ಎಂಬ ರಾಜನಿಗೆ ಕನಸಿನಲ್ಲಿ ವಿಷ್ಣು ಕಾಣಿಸಿಕೊಂಡ ತರುವಾಯ ಇಂದ್ರದ್ಯುಮ್ನನು ಈ ದೇವಾಲಯವನ್ನು ಕಟ್ಟಿಸಿದ ಎನ್ನಲಾಗುತ್ತದೆ.

ಒಮ್ಮೆ ಇಂದ್ರದ್ಯುಮ್ನ ರಾಜನು ಸಮೀಪದಲ್ಲಿರುವ ಪವಿತ್ರವಾದ ನದಿಯ ಜಲವನ್ನು ಪ್ರೋಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಕಬ್ಬಿಣದ ಸಲಾಕೆಯೊಂದು ತೇಲುತ್ತಿರುವುದನ್ನು ಕಂಡನು. ಆ ಸಲಾಕೆಯು ತನ್ನ ಹೃದಯ, ಅದು ಭೂಮಿಯ ಮೇಲೆ ಶಾಶ್ವತವಾಗಿ ಉಳಿಯುವಂತೆ ಮಾಡು ಎಂದು ವಿಷ್ಣು ಪಿಸುಮಾತಿನಲ್ಲಿ ನುಡಿದಂತೆ ಭಾಸವಾಯಿತು. ನಂತರ ಜಗನ್ನಾಥ ದೇವರ ಬಳಿ ಓಡಿ ಹೋಗಿ, ಎಚ್ಚರಿಕೆಯಿಂದ ಅದನ್ನು ಅಲ್ಲಿ ಇರಿಸಿದನು. ಅಂದಿನಿಂದ ರಾಜನು ಆ ಕಬ್ಬಿಣದ ಸಲಾಕೆಯನ್ನು ಯಾರಿಗೂ ಮುಟ್ಟಲು ಅವಕಾಶ ನೀಡಲಿಲ್ಲ.

ಇನ್ನೊಂದು ಕಥೆಯ ಪ್ರಕಾರ ಪಾಂಡವರು ಮಹಾಭಾರತ ಯುದ್ಧಾನಂತರ ಯಮರಾಜನ ತೀರ್ಥಯಾತ್ರೆಯನ್ನು ಪ್ರಾರಂಭಿಸಿದರು. ಆಗ ಸಪ್ತ ಋಷಿಗಳು ಮೋಕ್ಷ ಪ್ರಾಪ್ತಿಯಾಗಬೇಕೆಂದರೆ ಮೊದಲು ಚಾರ್ ಧಾಮ್‌ಗಳಿಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದರು. ಆ ಸಂದರ್ಭದಲ್ಲಿ ಚಾರ್ ಧಾಮಗಳಲ್ಲಿ ಒಂದಾದ ಪುರಿಯ ಜಗನ್ನಾಥ್ ದೇವಾಲಯಕ್ಕೂ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ.

  ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ, ಚಿಕ್ಕತಿರುಪತಿ, ಮಾಲೂರು

ಈ ಎಲ್ಲಾ ಸಂಗತಿಗಳ ಹೊರತಾಗಿಯೂ ಪುರಿಯ ಜಗನ್ನಾಥ ದೇವಾಲಯವು ಯಾವುದೇ ವೈಜ್ಞಾನಿಕ ವಿವರಣೆಯ ತನಿಖೆಗೆ ಒಳಗಾಗದೆ, ಇಂದಿಗೂ ಕೆಲವು ರಹಸ್ಯಗಳನ್ನು ಒಳಗೊಂಡಿದೆ. ಈ ರಹಸ್ಯಗಳು ಭಗವಾನ್ ಜಗನ್ನಾಥನ ಪವಾಡ ಎಂದು ಜನರು ನಂಬುತ್ತಾರೆ. ಈ ಪ್ರಸಿದ್ಧ ಕ್ಷೇತ್ರವನ್ನು ಒಮ್ಮೆ ನೋಡುವುದರ ಮೂಲಕ ಅಥವಾ ದೇವರ ದರ್ಶನವನ್ನು ಪಡೆಯುವುದರ ಮೂಲಕ ಮುಕ್ತಿಯನ್ನು ಪಡೆಯಬಹುದು.

ದೇವಾಲಯದ ಮೇಲಿರುವ ಧ್ವಜ
ಈ ಪವಿತ್ರ ದೇವಾಲಯದ ಮೇಲೆ ಪುರಾತನ ಕಾಲದಿಂದಲೂ ಇರುವ ಧ್ವಜವಿದೆ. ಈ ಧ್ವಜವು ಯಾವಾಗಲೂ ಗಾಳಿಯ ವಿರುದ್ಧ ದಿಕ್ಕಿಗೆ ಹಾರುತ್ತದೆ. ವೈಜ್ಞಾನಿಕ ಸಂಗತಿಗಳಿಗೆ ಸವಾಲನ್ನು ಒಡ್ಡುವ ಈ ಒಂದು ಸಂಗತಿಯು, ವಿಜ್ಞಾನಕ್ಕೂ ಮಿಗಿಲಾದ ದೈವ ಶಕ್ತಿ ಇದೆ ಎನ್ನುವುದನ್ನು ತಿಳಿಸುತ್ತದೆ.

ಸುದರ್ಶನ ಚಕ್ರ
ದೇವಸ್ಥಾನದಲ್ಲಿ ಇರುವ ಸುದರ್ಶನ ಚಕ್ರವು ೨೦ ಅಡಿ ಎತ್ತರ ಮತ್ತು ಒಂದು ಟನ್ ತೂಕವನ್ನು ಹೊಂದಿದೆ. ಇದನ್ನು ದೇವಾಲಯದ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಈ ಚಕ್ರದ ವಿಶೇಷ ಎಂದರೆ, ಪುರಿ ನಗರದ ಯಾವುದೇ ಭಾಗದಲ್ಲಿ ನಿಂತು ನೋಡಿದರೂ ಚಕ್ರ ಕಾಣುವುದು. ಅಲ್ಲದೆ ಈ ಚಕ್ರವನ್ನು ನೀವು ಎಲ್ಲಿ ನಿಂತು ನೋಡಿದರೂ ಅದರ ಮುಖ ನಿಮ್ಮೆಡೆಗೆ ಇರುವಂತೆ ತೋರುವುದು.

ವಿಶಿಷ್ಟ ರಚನೆ ಹಾಗೂ ಶಕ್ತಿಯನ್ನು ಹೊಂದಿರುವ ಈ ಸುದರ್ಶನ ಚಕ್ರದ ಮೇಲೆ ಯಾವುದೇ ಪಕ್ಷಿಗಳು, ಕೀಟಗಳು ಹಾಗೂ ವಿಮಾನಗಳು ಹಾರುವುದಿಲ್ಲ. ಅದು ಚಕ್ರದ ಒಂದು ದೈವ ಶಕ್ತಿಯ ಪ್ರಭಾವ ಎಂದು ಪರಿಗಣಿಸಲಾಗಿದೆ. ಈ ನಿಗೂಢ ವಿದ್ಯಮಾನಗಳಿಗೆ ಕಾರಣ ಏನು ಎನ್ನುವುದನ್ನು ಇದುವರೆಗೂ ಕಂಡುಹಿಡಿಯಲಾಗಿಲ್ಲ.

  ಭಾರತದ ಚುನಾವಣಾ ಆಯೋಗ - ಪ್ರಜಾಕೀಯ

ದೇವಾಲಯದ ರಚನೆ
ಈ ದೇವಾಲಯದ ಇನ್ನೊಂದು ವಿಶೇಷ ಎಂದರೆ ಇಲ್ಲಿ ನೆರಳು ಬೀಳದೆ ಇರುವುದು. ಈ ದೇವಾಲಯದ ಒಳಗೆ ಹಾಗೂ ಹೊರಗೆ ಯಾವುದೇ ಸಮಯದಲ್ಲಿ ನೆರಳು ಬೀಳುವುದಿಲ್ಲ. ಇದೊಂದು ಪ್ರಕೃತಿಯ ಪವಾಡ ಹಾಗೂ ದೈವ ಶಕ್ತಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ಪ್ರವೇಶ ದ್ವಾರಗಳ ವಿಶೇಷ
ಈ ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಸಂಗೀತಗಳ ತರಂಗ ಕೇಳುವುದು. ಈ ದೇವಾಲಯದ ಒಳ ಪ್ರವೇಶಿಸಲು ನಾಲ್ಕು ಪ್ರಮುಖ ದ್ವಾರಗಳಿವೆ. ಇದರ ಮುಖ್ಯ ದ್ವಾರಕ್ಕೆ ಸಿಂಗದ್ವಾರ ಎಂದು ಕರೆಯುತ್ತಾರೆ. ಇಲ್ಲಿಂದ ಒಳಗೆ ದೇವರ ದರ್ಶನಕ್ಕೆ ತೆರಳುವಾಗ ಶಬ್ದಗಳ ತರಂಗಗಳು ಅಥವಾ ಧ್ವನಿಯು ಕೇಳುತ್ತವೆ. ಅದೇ ದ್ವಾರದ ಮೂಲಕ ನೀವು ಹಿಂತಿರುಗಿ ಬರುವಾಗ ಕೇಳುವುದಿಲ್ಲ. ಅಂತೆಯೇ ದೇವಸ್ಥಾನದ ಒಳಗೆ ಹೋದ ನಂತರ ದೀರ್ಘ ಸಮಯಗಳ ಕಾಲವೂ ಈ ಶಬ್ದಗಳು ಕೇಳುವುದಿಲ್ಲ.

ಸಮುದ್ರದ ಗಾಳಿ ರಹಸ್ಯ
ಪ್ರಪಂಚದ ಯಾವುದೇ ಸಮುದ್ರ ಪ್ರದೇಶಗಳಿಗೆ ಹೋದರೆ, ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಗಾಳಿಗಳು ಸಮುದ್ರದಿಂದ ಭೂಮಿಯೆಡೆಗೆ ಬೀಸುತ್ತವೆ. ಅಂತೆಯೇ ಸಂಜೆಯ ಹೊತ್ತಾದಂತೆ ಭೂಮಿಯಿಂದ ಸಮುದ್ರದ ಕಡೆಗೆ ಗಾಳಿ ಬೀಸುವುದು. ಆದರೆ ಈ ಪ್ರಕೃತಿಯ ನಿಯಮಗಳು ಪುರಿ ಜಗನ್ನಾಥ ದೇವಾಲಯದ ಬಳಿ ಇರುವ ಸಮುದ್ರದಲ್ಲಿ ತದ್ವಿರುದ್ಧವಾದ ನಿಯಮದಲ್ಲಿ ಉಂಟಾಗುವು.

1800 ವರ್ಷಗಳ ಹಳೆಯ ಆಚರಣೆ
ಈ ದೇವಾಲಯದಲ್ಲಿ ಪ್ರತಿದಿನ ಅರ್ಚಕರು ೪೫ ಮಹಡಿಯನ್ನು ಹೊಂದಿರುವ ಸುಮಾರು 1000 ಅಡಿ ಎತ್ತರದಲ್ಲಿರುವ ಗೋಪುರಗಳನ್ನು ಹತ್ತಿ, ಬಾವುಟಗಳನ್ನು ಬದಲಿಸುತ್ತಾರೆ. ಈ ಆಚರಣೆಯು 1800 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಈ ಆಚರಣೆಯು ಅನಿರೀಕ್ಷಿತವಾಗಿ ತಪ್ಪಿದರೆ ಮುಂದಿನ 18 ವರ್ಷಗಳ ಕಾಲ ದೇವಾಲಯವನ್ನು ಮುಚ್ಚಲ್ಪಡುತ್ತದೆ ಎಂದು ಹೇಳಲಾಗುವುದು.

  ಭಕ್ತಿಯೆಂದರೇನು ? ಭಕ್ತಿಯ 9 ರೂಪಗಳಾವುವು ?

ಪ್ರಸಾದದ ವಿಶೇಷತೆ
ಈ ದೇವಸ್ಥಾನದಲ್ಲಿ ಯಾವುದೇ ವಸ್ತುಗಳು ವ್ಯರ್ಥವಾಗುವುದಿಲ್ಲ. ದಿನಗಳಿಗೆ ಅನುಗುಣವಾಗಿ ಎರಡು ಸಾವಿರದಿಂದ ದ ಇಪ್ಪತ್ತು ಸಾವಿರದವರೆಗೂ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ದೇವಾಲಯದಲ್ಲಿ ಬೇಯಿಸುವ ಪ್ರಸಾದದ ಪ್ರಮಾಣವು ವರ್ಷದುದ್ದಕ್ಕೂ ಒಂದೇ ಆಗಿರುತ್ತದೆ. ಆದರೂ ಎಂದಿಗೂ ಪ್ರಸಾದ ಹೆಚ್ಚಾಗುವುದು, ಕಡಿಮೆಯಾಗುವುದು ಅಥವಾ ವ್ಯರ್ಥವಾಗುವ ಸನ್ನಿವೇಶಗಳು ಸಂಭವಿಸಿಲ್ಲ.

ಪ್ರಸಾದ ತಯಾರಿಯ ನಿಯಮ
ಉರುವಲು ಬಳಸಿಯೇ ವಿಶೇಷ ಸವಿಯ ಪ್ರಸಾದವನ್ನು ಇಲ್ಲಿ ತಯಾರಿಸಲಾಗುತ್ತದೆ. ಇಲ್ಲಿ ಮಾಡುವ ಅಡುಗೆ ಅಥವಾ ಪ್ರಸಾದಕ್ಕೆ ಮಣ್ಣಿನ ಮಡಿಕೆಯನ್ನೇ ಬಳಸಲಾಗುವುದು. ಪ್ರಸಾದ ತಯಾರಿಗೆ 7 ಮಡಿಕೆಯನ್ನು ಬಳಸಲಾಗುವುದು. ಆ ಮಡಿಕೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತಯಾರಿಸುತ್ತಾರೆ. ತುತ್ತ ತುದಿಯಲ್ಲಿ ಇರುವ ಮಡಿಕೆಯ ಪ್ರಸಾದವು ಮೊದಲು ಬೇಯುತ್ತದೆ. ನಂತರ ಅದರ ಕೆಳಗಿರುವ ಮಡಿಕೆ, ಹೀಗೆ ಮೇಲಿನಿಂದ ಕೆಳಭಾಗದ ವರೆಗೂ ಒಂದಾದನಂತರ ಒಂದರಂತೆ ಬೇಯುವುದು.

ಭಾರತದ ಪೂರ್ವ ಕರಾವಳಿ ತೀರದಲ್ಲಿರುವ ಈ ದೇವಾಲಯದ ಇನ್ನೊಂದು ವಿಶೇಷತೆ ಏನೆಂದರೆ ಈ ದೇವಸ್ಥಾನದ ವಿಗ್ರಹವನ್ನು 12-18 ವರ್ಷಗಳಿಗೊಮ್ಮೆ ಬದಲಿಸುತ್ತಾರೆ. ಇಲ್ಲಿ ಎಂಟು ವರ್ಷಗಳಿಗೊಮ್ಮೆ ಉತ್ಸವ ಜರುಗುತ್ತದೆ. ಕೃಷ್ಣ, ಸುಭದ್ರ ಹಾಗೂ ಬಲರಾಮನ ವಿಗ್ರಹಗಳನ್ನು ಬೇರೆ ಬೇರೆ ರಥದಲ್ಲಿ ಇರಿಸಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಇಂತಹ ವಿಸ್ಮಯಗಳಿರುವ ದೇವಸ್ಥಾನಕ್ಕೆ ನೀವೊಮ್ಮೆ ತೆರಳಲೇಬೇಕು.

Leave a Reply

Your email address will not be published. Required fields are marked *

Translate »