ಮಂಗಳಾದೇವಿ ದೇಗುಲ…!
ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೆ ಶರಣೈ ತ್ರಿಯಂಬಕೆ ಗೌರಿ ನಾರಾಯಣೀ ನಮೋಸ್ತುತೇ |
ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು #ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ.
ತಮಿಳುನಾಡನ್ನು ಆಳುತ್ತಿದ್ದ ಅರಸ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದ. ದೇವಿ ಮಂಗಳಾದೇವಿ ದೇವಾಲಯದ ಪ್ರಮುಖ ದೇವತೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ನವರಾತ್ರಿ ಉತ್ಸವದ ಒಂಬತ್ತನೇ ದಿನ ಬೃಹತ್ ರಥೋತ್ಸವ ಇಲ್ಲಿ ನಡೆಯುತ್ತದೆ. ದೊಡ್ಡ ಮೆರವಣಿಗೆ ಈ ಸಂದರ್ಭದಲ್ಲಿ ನಡೆಯುತ್ತದೆ. ಬೃಹತ್ ಮೆರವಣಿಗೆಯಲ್ಲಿ ದೇವಿಯನ್ನು ಹೊತ್ತು ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ಉತ್ತಮ ಕಾಲಕ್ಕಾಗಿ ಈ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ.
ಈ ದೇವಾಲಯದಲ್ಲಿ ಆಚರಣೆಯಾಗುವ ಇನ್ನೊಂದು ದೊಡ್ಡ ಹಬ್ಬ #ಗಣೇಶೋತ್ಸವ. ಮಂಗಳೂರು ನಗರ ಬಸ್ ನಿಲ್ದಾಣದಿಂದ ಈ ದೇವಾಲಯಕ್ಕೆ ಅತ್ಯಂತ ಸುಲಭವಾಗಿ ಬಸ್ ಮೂಲಕ ತೆರಳಬಹುದು. ಈ ದೇವಾಲಯ ಪ್ರಮುಖವಾಗಿ ಬಾಲೆಯರಿಗೆ ಪ್ರಮುಖವಾಗಿದೆ. #ಮಂಗಳ ಪಾರ್ವತಿ ವೃತ ದೇವಾಲಯದ ಪ್ರಮುಖ ವೃತಗಳಲ್ಲಿ ಒಂದು. ಇಲ್ಲಿ ಮಾತ್ರ ಇದನ್ನು ಆಚರಿಸಲಾಗುತ್ತದೆ. #ಕುವರಿಯರು ಇಲ್ಲಿ ಬಂದು ಈ ವೃತ ಮಾಡಿದರೆ ಉತ್ತಮ ಪತಿ ಸಿಕ್ಕು, ಜೀವನ ಅತ್ಯಂತ ಸುಗಮವಾಗಿ ಸಾಗುತ್ತದೆ ಎಂದು ನಂಬಲಾಗಿದೆ.