ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹಲಸಿನ ಹಣ‍್ಣು , ಪನಸ , ಆರ್ಟೋಕಾರ್ಪಸ್ ಹೆಟಿರೋಫೈಲಸ್ , ಜಾಕ್ ಫ‍್ರೂಟ್

ಇರುಳುಗಣ್ಣು ಮತ್ತು ಇನ್ನು ಹಲವು ರೋಗಗಳನ್ನು ನಿವಾರಿಸುತ್ತೆ ಹಲಸಿನ ಹಣ್ಣು ಈ ಮಾತು ನಿಜ ಕಣ್ರೀ ಇಲ್ಲಿ ನೋಡಿ..!

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ ‘ಪನಸ’ ಎಂದು ಕರೆಯುವ , ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳ ಗೊಂಡಿದೆ. ಹತ್ತರಂದ ಹನ್ನೆರಡು ಮೀಟರ್ ಗಳಷ್ಟು ಎತ್ತರಕ್ಕೆ ಬೆಳೆಯುವ ಹಲಸಿನ ಮರ, ಹಸಿರು ಎಲೆಗಳಿಂದ ಆವ್ರತವಾಗಿದೆ. ಹಲಸಿನ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮನ್ ಗಳು , ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್ , ಕ್ಯಾಲ್ಶಿಯಮ್ , ಪೊಟಾಶಿಯಮ್ ಅಂಶಗಳಿವೆ .

  ಭಗವಂತನ ನಾಮತ್ರಯ ಮಹಾತ್ಮೆ

ಇದರಲ್ಲಿನ ಔಷಧೀಯ ಗುಣಗಳು:
ವಯಸ್ಥಾಪಕ ಗುಣಅಂದರೆ ಮುಪ್ಪನ್ನು ಮುಂದೂಡುವ ಗುಣವನ್ನು ಹೊಂದಿದೆ.

ಈ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಗಳು ಕ್ಯಾನ್ಸರ್ನಲ್ಲಿ ಪ್ರತಿಬಂಧಕವಾಗಿ ಕಾರ್ಯವೆಸಗುತ್ತದೆ .

ಅಧಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಖ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ .

ಇದರಲ್ಲಿರುವ ತಾಮ್ರದ ಅಂಶ ಥೈರಾಯಿಡ್ ತೊಂದರೆಗಳಿಗೆ ಹಿತಕರ .

ಹಲಸಿನ ಹಣ್ಣಿನ ಸೊನೆ[ಹಾಲು] ಒಣಗಿಸಿದಾಗ ಅದರಲ್ಲಿ ಆರ್ಟೋಸ್ಟಿರಾನ್ ಎಂಬ ರಾಸಾಯನಿಕ ಅಂಶವು ಸಿಗುತ್ತದೆ . ಇದು ಪುರುಷರ ಹಾರ್ಮೋನ್-ಆಂಡ್ರೋಜೆನ್ ನಂತೆ ಕಾರ್ಯ ವೆಸಗುತ್ತದೆ .
ಜ್ವರ ಮತ್ತು ಭೇದಿ ಉಂಟಾದಾಗ ಹಲಸಿನ ಬೇರಿನ ಕಷಾಯವನ್ನು ಸೇವಿಸಿದರೆ ಗುಣಕಾರಿ.

  ತುಪ್ಪದ ಮಹತ್ವ - ಆರೋಗ್ಯ

ಮೂಳೆ ಸವೆತವನ್ನು ತಡೆಗಟ್ಟುತ್ತದೆ:
ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.

ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಕರವಾಗಿ ಇಡುತ್ತದೆ:
ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (micromineral) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.

ಜೀರ್ಣಶಕ್ತಿ:
ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ:
ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ homocystein ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

  ಅನಾನಸ್ ಹಣ್ಣು - Pineapple Benefits

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ:
ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

Leave a Reply

Your email address will not be published. Required fields are marked *

Translate »