ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಡುಗೆಗೂ – ಜೀವನಕ್ಕೂ ಎಷ್ಟು ಸಾಮ್ಯತೆ ?

🎋🥀🌾🌴🌲🌱🌿🍃🍀

ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ..ಅದು ಉಪ್ಪನ್ನು ಹೀರ್ಕೊಳುತ್ತೆ.
ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ …ಸಾಲದ ಹೊರೆಯೇರಿದಾಗ ತೀರ್ಸೋಕೆ.

ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.
ದುಃಖದಿಂದ ಕಣ್ಣೀರು ಬಂದಾಗ ,ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ

ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ
ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.

ಬೇಳೆ ಬೇಯೋಕೆ ಚಿಟಿಕೆ ಅರಿಶಿನ,ಮಿಳ್ಳೆ ಎಣ್ಣೆ ಸಹಕಾರಿ.
ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ ,ಮುಷ್ಟಿಯಷ್ಟು ಕಾಳಜಿ ಸಹಕಾರಿ.

ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ ಹರಿಯೋಲ್ಲ ಹೇಗೆ ತಟ್ಟಿದರೂ
ಸಂಬಂಧಗಳೂ ಹಾಗೇನೆ , ನಾದಿ ಹದವಾಗಿದ್ದರೆ ತಟ್ಟಿದರೂ ,ಲಟ್ಟಿಸಿದರೂ, ಬಿಸಿಮೇಲೆ ಬೇಯಿಸಿದರೂ ಹರಿಯೋಲ್ಲ .

  ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳ ಜೀವನ ಘಟನೆಗಳು

ಅಲಸಂದೆ ,ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ತೇಲುತ್ತದೆ
ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು ,ಗಟ್ಟಿ ಯಾರು ಅಂತ ಗೊತ್ತಾಗತ್ತೆ.

ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ
ಗಳಿಸಿದ್ದ ಗೆಳೆತನ,ಪ್ರೀತಿ, ಆಸ್ತಿ ನೂ ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ.

ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ ಹಿಡೀದಿರ್ಲಿ ಅಂತ
ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು ..ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..

  ಕಂಕಣ ಸೂರ್ಯಗ್ರಹಣ - ಸಂಪೂರ್ಣ ಮಾಹಿತಿ - 26 DECEMBER 2019

ಸಾರು ಹುಳೀ ಕುದ್ಯೋವಾಗ ಚೂರು ಬೆಲ್ಲ ಹಾಕ್ತೀವಿ ಘಾಟು ಹೋಗೋಕೆ
ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ ,ಕಲಹದ ಘಾಟು ತಡ್ಯೋಕೆ.

ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು..
ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ…ಜೋಪಾನ

ಕಾದ ಎಣ್ಣೆಗೆ ಸಣ್ಣ ಹನಿ ನೀರು ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ…
ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ
ಸಿಡಿದೇಳತ್ತೆ.

ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ ,ಬೇಗ ಹಳಸೋಗತ್ತೆ…
ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ.

ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ.
ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ ಹರಡ್ತಾರೆ..

  ಸಾವಿರ ಕನ್ನಡ ಗಾದೆಗಳು ಭಾಗ - ೪ - thousand Kannada proverb

ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ
ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ
ಕೆಲವರ ಮಾತುಗಳೂ ಹಾಗೇನೇ,ಸಿಹಿಯಲ್ಲಿ ಕುಟಿಲ ,ಕಹಿಯಲ್ಲಿ ಕಾಳಜಿ.

ಮೊಸರನ್ನ ಉಪ್ಪಿನ ಕಾಯಿ , ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು..
ಬದುಕನ್ನೂ ಹಾಗೇ ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು.

ಲೈಫ್ ಈಸ್ ಬ್ಯುಟಿಫುಲ್ BUT ನಾವು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ ಮೇಲೆ ಅವಲಂಬಿಸಿದೆ

🍀🍃🌿🌱🎋🥀🌾🌲🌴

Leave a Reply

Your email address will not be published. Required fields are marked *

Translate »