ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ತಮ ಆರೋಗ್ಯಕ್ಕೆ 35 ಸೂತ್ರಗಳು

ನಮ್ಮೆಲ್ಲರ ಆರೋಗ್ಯದ ಗುಟ್ಟು ಈ 35 ಸೂತ್ರಗಳಲ್ಲಡಗಿದೆ.

  1. ಬೆಳಿಗ್ಗೆ 4.30 ಕ್ಕೆ ನಿದ್ದೆಯಿಂದ ಏಳಬೇಕು.
  2. ನಿದ್ದೆಯಿಂದೆ ಎಚ್ಚರಗೊಂಡ ತಕ್ಷಣ ಕುಳಿತುಕೊಂಡು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸಬೇಕು.
  3. ಐಸ್ ಕ್ರೀಂ ತಿನ್ನಲೇ ಬಾರದು.
  4. ಫ್ರಿಡ್ಜ್ ನಿಂದ ಹೊರತೆಗೆದ ಆಹಾರ ಪದಾರ್ಥಗಳನ್ನು, ಒಂದು ಗಂಟೆಯ ನಂತರ ಉಪಯೋಗಿಸಬೇಕು.
  5. ತಂಪು ಪಾನೀಯವನ್ನು ಸೇವಿಸಲೇ ಬಾರದು.
  6. ಮಾಡಿದ ಅಡುಗೆ ಬಿಸಿಯಾಗಿರುವಾಗಲೇ40 ನಿಮಿಷಗಳ ಒಳಗೆ ತಿನ್ನಬೇಕು.
  7. ಊಟವಾದ ನಂತರ 5-10 ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು.
  8. ಬೆಳಿಗ್ಗೆ 8.30 ರ ಒಳಗೆ ಉಪಹಾರವನ್ನು ಸೇವಿಸಬೇಕು.
  9. ಬೆಳಿಗ್ಗೆ ಉಪಹಾರದೊಂದಿಗೆ ಹಣ್ಣಿನ ರಸವನ್ನು ಕುಡಿಯಬೇಕು.ಷ
  10. ಉಪಹಾರದ ನಂತರ ತಪ್ಪದೇ ಕೆಲಸ ಮಾಡಬೇಕು.
  11. ಮಧ್ಯಾನ್ಹದ ಒಳಗೆ 2-3 ಲೋಟ ನೀರು ಕುಡಿಯಬೇಕು.
  12. ಊಟ ಮಾಡುವ 48 ನಿಮಿಷಗಳ ಮೊದಲು ನೀರು ಸೇವಿಸಬೇಕು.
  13. ಕುಳಿತುಕೊಂಡು ಊಟ ಮಾಡಬೇಕು.
  14. ಆಹಾರವನ್ನು ಚೆನ್ನಾಗಿ ಜಗಿದು ನುಂಗಬೇಕು.
  15. ಮಧ್ಯಾನ್ಹದ ಸಾಂಬಾರಿನಲ್ಲಿ ಓಮ ಪುಡಿಯನ್ನು ಉಪಯೋಗಿಸಬೇಕು.
  16. ಮಧ್ಯಾನ್ಹ ಹೊಟ್ಟೆ ತುಂಬಾ ಊಟ ಮಾಡಬೇಕು.
  17. ಮಧ್ಯಾನ್ಹದ ಊಟದ ನಂತರ ಮಜ್ಜಿಗೆ ಸೇವಿಸಬೇಕು.
  18. ಊಟದ ನಂತರ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು.
  19. ಸೂರ್ಯ ಮುಳುಗುವುದಕ್ಕೆ ಮುಂಚೆಯೇ ಊಟ ಮಾಡಬೇಕು.
  20. ರಾತ್ರಿಯ ವೇಳೆ ಮಿತವಾಗಿ ಊಟಮಾಡಬೇಕು.
  21. ರಾತ್ರಿ ಊಟದ ನಂತರ ಒಂದು ಕಿ.ಮೀ ದೂರ ನಡೆಯಬೇಕು.
  22. ರಾತ್ರಿ ಊಟವಾದ ಒಂದು ಗಂಟೆಯ ನಂತರ ಹಾಲು ಕುಡಿಯಬೇಕು.
  23. ರಾತ್ರಿವೇಳೆ ಲಸ್ಸೀ, ಮಜ್ಜಿಗೆ ಕುಡಿಯ ಬಾರದು.
  24. ರಾತ್ರಿಯ ವೇಳೆ ಹುಳಿ ಹಣ್ಣುಗಳನ್ನು ತಿನ್ನಬಾರದು.
  25. ರಾತ್ರಿ 9 ರಿಂದ 10 ಗಂಟೆಗೆ ಮಲಗಬೇಕು.
  26. ಸಕ್ಕರೆ, ಮೈದಾ, ಉಪ್ಪು ಕಡಿಮೆ ಉಪಯೋಗಿಸಬೇಕು.
  27. ರಾತ್ರಿ ಸಲಾಡ್ ತಿನ್ನಬಾರದು.
  28. ವಿದೇಶಿ ಆಹಾರ ಪದಾರ್ಥಗಳನ್ನು ತಿನ್ನಲೇ ಬಾರದು.
  29. ಟೀ, ಕಾಫೀ ಕುಡಿಯದಿರಲು ಪ್ರಯತ್ನಿಸಿ.
  30. ಹಾಲಿಗೆ ಅರಶಿನ ಬೆರೆಸಿ ಕುಡಿದರೆ, ಕ್ಯಾನ್ಸರ್ ಬರುವುದಿಲ್ಲ.
  31. ಆಯುರ್ವೇದ ಚಿಕಿತ್ಸಾ ಪದ್ದತಿ ಒಳ್ಳೆಯದು.
  32. ಅಕ್ಟೋಬರ್ ನಿಂದ ಮಾರ್ಚ್ (ಚಳಿಗಾಲ) ಬೆಳ್ಳಿ, ಬಂಗಾರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
  33. ಜೂನ್ ನಿಂದ ಸೆಪ್ಟೆಂಬರ್ ( ಮಳೆಗಾಲ) ತಿಂಗಳಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯಬೇಕು.
  34. ಮಾರ್ಚ್ ನಿಂದ ಜೂನ್ ( ಬೇಸಿಗೆ ಕಾಲ) ಮಣ್ಣಿನ ಪಾತ್ರೆಯಲ್ಲಿರಿಸಿದ ನೀರನ್ನು ಕುಡಿಯಬೇಕು.
  35. ಊಟ ಮಾಡುವಾಗ ನೀರು ಕುಡಿಯ ಬಾರದು.
    ಅವಶ್ಯವಿದ್ದಾಗ ಮಾತ್ರ ನೀರು ಕುಡಿಯಬೇಕು.
  ಯಾಂತ್ರಿಕ ಜೀವನ - ಗಂಡ ಹೆಂಡತಿ

Be Healthy & Stay Healthy…
💐💐💐💐

ಕೂತರೇ, ನಿಂತರೇ ವೈದ್ಯರ ಬಳಿ ಓಡ ಬೇಡಿ. ಅಂಗೈಯಲ್ಲಿ ಆರೋಗ್ಯ

ಬಿಕ್ಕಳಿಕೆ:ಹುರುಳಿ ಕಷಾಯ ಸೇವಿಸಿರಿ.

ಕಫ:ಶುಂಠಿ ಕಷಾಯ ಸೇವಿಸಿರಿ.

ಹೊಟ್ಟೆಯಲ್ಲಿ ಹರಳಾದರೇ:ಬಾಳೆ ದಿಂಡಿನ ಪಲ್ಯ ಸೇವಿಸಿರಿ.

ಬಿಳಿ ಕೂದಲೇ:
ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.

ಮರೆವು ಬರುವುದೇ:
ನಿತ್ಯ ಸೇವಿಸಿ ಜೇನು ತುಪ್ಪ .

ಕೋಪ ಬರುವುದೇ:
ಕಾಳು ಮೆಣಸು ಸೇವಿಸಿ.

ಮೂಲವ್ಯಾಧಿಯೇ:
ನಿತ್ಯ ಸೇವಿಸಿ ಎಳ್ಳು.

ಮುಪ್ಪು ಬೇಡವೇ:
ಗರಿಕೆ ರಸ ಸೇವಿಸಿ.

  ಕನ್ನಡ ಪದಗಳಲ್ಲಿ ಜೀವನ

ನಿಶ್ಶಕ್ತಿಯೇ:ದೇಶಿ ಆಕಳ ಹಾಲು ಸೇವಿಸಿ.

ಇರುಳುಗಣ್ಣು ಇದೆಯೇ:ತುಲಸಿ ರಸ ಕಣ್ಣಿಗೆ ಹಾಕಿ.

ಕುಳ್ಳಗಿರುವಿರೇ:
ನಿತ್ಯ ಸೇವಿಸಿ ನಿಂಬೆ ಹಣ್ಣು.

ತೆಳ್ಳಗಿರುವಿರೇ:ನಿತ್ಯ ಸೇವಿಸಿ ಸೀತಾ ಫಲ.

ತೆಳ್ಳಗಾಗಬೇಕೇ:
ನಿತ್ಯ ಸೇವಿಸಿ ಬಿಸಿ ನೀರು.

ಹಸಿವಿಲ್ಲವೇ:ನಿತ್ಯ ಸೇವಿಸಿ ಓಂ ಕಾಳು.

ತುಂಬಾ ಹಸಿವೇ:
ಸೇವಿಸಿ ಹಸಿ ಶೇಂಗಾ.

ಬಾಯಾರಿಕೆಯೇ:
ಸೇವಿಸಿ ತುಳಸಿ.

ಬಾಯಾರಿಕೆ ಇಲ್ಲವೇ:
ಸೇವಿಸಿ ಬೆಲ್ಲ.

ಸಕ್ಕರೆ ಕಾಯಿಲೆಯೇ:
ಬಿಡಿ ಸಕ್ಕರೆ, ಸೇವಿಸಿ ರಾಗಿ.

ರಕ್ತ ಹೀನತೆಯೇ:ನಿತ್ಯ ಸೇವಿಸಿ ಪಾಲಕ್ ಸೊಪ್ಪು.

ತಲೆ ಸುತ್ತುವುದೇ:
ಬೆಳ್ಳುಳ್ಳಿ ಕಷಾಯ ಸೇವಿಸಿ.

ಬಂಜೆತನವೇ:
ಔದುಂಬರ ಚಕ್ಕೆ ಕಷಾಯ.

ಸ್ವಪ್ನ ದೋಷವೇ:
ತುಳಸಿ ಕಷಾಯ ಸೇವಿಸಿ.

ಅಲರ್ಜಿ ಇದೆಯೇ:
ಅಮೃತ ಬಳ್ಳಿ ಕಷಾಯ ಸೇವಿಸಿ.

ಹೃದಯ ದೌರ್ಬಲವೇ:
ಸೋರೆಕಾಯಿ ರಸ ಸೇವಿಸಿ.

ರಕ್ತ ದೋಷವೇ:
ಕೇಸರಿ ಹಾಲು ಸೇವಿಸಿ.

ದುರ್ಗಂಧವೇ:
ಹೆಸರು ಹಿಟ್ಟು ಸ್ನಾನ ಮಾಡಿ.

ಕೋಳಿ ಜ್ವರಕ್ಕೆ:
ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.

ಕಾಲಲ್ಲಿ ಆಣಿ ಇದೆಯೇ :
ಉತ್ತರಾಣಿ ಸೊಪ್ಪು ಕಟ್ಟಿರಿ.

ಮೊಣಕಾಲು ನೋವು:
ನಿತ್ಯ ಮಾಡಿ ವಜ್ರಾಸನ.

ಸಂಕಟ ಆಗುವುದೇ:
ಎಳನೀರು ಸೇವಿಸಿ.

ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ:
ನಿತ್ಯ ಕೊಡಿ ಜೇನು ತುಪ್ಪ .

  ದೇವರ ದರ್ಶನ ಹೇಗೆ ಮಾಡಬೇಕು?

ಜಲ ಶುದ್ಧಿ ಮಾಡ ಬೇಕೇ:ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.

ವಾಂತಿಯಾಗುವುದೇ:
ಎಳನೀರು-ಜೇನು ತುಪ್ಪ ಸೇವಿಸಿ.

ಭೇದಿ ತುಂಬಾ ಆಗುವುದೇ:ಅನ್ನ ಮಜ್ಜಿಗೆ ಊಟ ಮಾಡಿ.

ಹಲ್ಲು ಸಡಿಲವೇ:
ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.

ಕಾಮಾಲೆ ರೋಗವೇ:
ನಿತ್ಯ ಮೊಸರು ಸೇವಿಸಿ.

ಉಗುರು ಸುತ್ತು ಇದೆಯೇ:ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.

ಎದೆ ಹಾಲಿನ ಕೊರತೆಯೇ:
ನಿತ್ಯ ಸೇವಿಸಿ ಎಳ್ಳು.

ಎಲುಬುಗಳ ನೋವೇ:
ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.

ತುಟಿ ಸೀಳಿದಿಯೇ:
ಹಾಲಿನ ಕೆನೆ ಹಚ್ಚಿರಿ.

ಪಿತ್ತವೇ:ಚಹಾ ಬಿಟ್ಟು ಬಿಡಿ.

ಉಷ್ಣವೇ:ಕಾಫಿ ಬಿಟ್ಟು ಬಿಡಿ.

ಚಂಚಲವೇ:ನಾಸಿಕ
ದಲ್ಲಿ ದೇಶಿ ತುಪ್ಪ ಹಾಕಿ.

ಬಹು ಮೂತ್ರವೇ:
ದಾಲ್ಚಿನ್ನಿ ಕಷಾಯ ಸೇವಿಸಿ.

ಮೂತ್ರ ತಡೆಗೆ:
ಜೀರಿಗೆ ಕಷಾಯ ಸೇವಿಸಿ.

ಆಯಾಸವೇ:
ಅಭ್ಯಂಗ ಸ್ನಾನ ಮಾಡಿ.

ಹಿಮ್ಮಡಿ ಸೀಳುವುದೇ:
ಔಡಲ ಎಣ್ಣೆ ಸುಣ್ಣ ಕಲಸಿ ಲೇಪಿಸಿ ನಿಮಗೆ ನೀವೇ.

ವೈದ್ಯರಾಗಿ ತಾಳ್ಮೆಯಿಂದ ಯೋಚಿಸಿ ಕಾಯಿಲೆಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ.

Leave a Reply

Your email address will not be published. Required fields are marked *

Translate »