ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೀಪಾವಳಿ ಹಾಗು ಬಲಿ ಪಾಡ್ಯಮಿ

” ಬಲಿ ಪಾಡ್ಯಮಿ “
————————–
ಕಾರ್ತಿಕ ಮಾಸದಶುಕ್ಲ ಪಕ್ಷ ಪಾಡ್ಯ” ಬಲಿ ಪಾಡ್ಯಮಿ ” ಆಚರಿಸಲಾಗುತ್ತಿದೆ.
ದೀಪಾವಳಿ ಅಮವಾಸ್ಯ ಮರುದಿನ ಬರುವ ಈ ಪಾಡ್ಯ ಬಹಳ ವೈಶಿಷ್ಟ್ಯ ಪಡೆದಿದೆ.
ಬಲಿ ಚಕ್ರವರ್ತಿ ವಿಷ್ಣುವಿನ ಪರಮ ಭಕ್ತನಾದ ” ಪ್ರಲ್ಹಾದ ಚಕ್ರವರ್ತಿಯ ” ಮೊಮ್ಮಗ.
ಬಲಿಯ ತ್ಯಾಗವನ್ನು ಕೊಂಡಾಡುವ ಹಬ್ಬ ಬಲಿಪಾಡ್ಯಮಿ.
ಭಗವಂತ ವಾಮನ ರೂಪದಲ್ಲಿ ಅವತರಿಸಿ,
ಬಲಿ ಚಕ್ರವರ್ತಿ ಗೆ ” ” ಓಂ ಭವತಿ ಭಿಕ್ಷಾಂದೇಹಿ”
ಎಂದು ವಾಮನನ್ನು ಕೇಳುತ್ತಾನೆ.
ಆಗಲಿ ಏನು ಬೇಕು ಎಂದು ಕೇಳಿದಾಗ ,
ವಾಮನನು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು.ಆಗಲಿ ಎಂದು ಬಲಿ ಹೇಳುತ್ತಾನೆ.
ವಾಮನನು ವಿರಾಟ ರೂಪ ತಾಳಿ ಒಂದು ಪಾದವನ್ನು ಭೂಮಿಯ ಮೇಲಿಡತ್ತಾನೆ.
ಎರಡನೆಯ ಪಾದವನ್ನು ಅಂತರಿಕ್ಷದಲ್ಲಿ ಇಡುತ್ತಾನೆ.

  ಕನ್ನಡ ಒಗಟು - Kannada Riddles - ಇಡೀ ಊರಿಗೆಲ್ಲ ಒಂದೇ

ಭೂಮಿ ಆಕಾಶ ಎಲ್ಲವೂ ಭಗವಂತನಿಂದ ಆವೃತವಾಗುತ್ತದೆ.ಮೂರನೆಯ ಪಾದವನ್ನು ಎಲ್ಲಿಡಲಿ ಎಂದು ಬಲಿಯನ್ನು ಕೇಳಿದಾಗ- ತನ್ನ ಶಿರದ ಮೇಲಿಡಿ ಎಂದು ಹೇಳುತ್ತಾನೆ.ಆಗಲಿ ನಿನ್ನ ಕೊನೆಯ ಇಚ್ಛೆಯನ್ನು
ತಿಳಿಸು ಎಂದು ಮಹಾವಿಷ್ಣು ಕೇಳಿದಾಗ ” ಮೂರುದಿನಗಳ ಕಾಲ ಭೂಲೋಕದಲ್ಲಿ ನನ್ನನ್ನು ಗುರುತಿಸಲ್ಪಡಲಿ, ದೀಪದಾನ ಮಾಡಲಿ.
ದೀಪದಾನ ಮಾಡುವವರಿಗೆ ಅಪಮೃತ್ಯು ಬರದಿರಲಿ.

ಲಕ್ಷ್ಮೀಯು ಅವರ ಮನೆಯಲ್ಲಿ ನೆಲೆಸಲು ಎಂದು ಪ್ರಾರ್ಥಿಸುತ್ತಾನೆ.
ಅಶ್ವಯುಜ ಚತುರ್ದಶಿ , ಅಮವಾಸ್ಯ,.ಕಾರ್ತಿಕ ಶುಕ್ಲಪಾಡ್ಯ .ಇವೇ ಆಮೂರು ದಿನಗಳು.

ಇದಕ್ಕೆ ” ಬಲಿರಾಜ್ಯ ” ವೆನ್ನುತ್ತಾರೆ.
ಕಾರ್ತಿಕ ಶುಕ್ಲ ಪಾಡ್ಯ ಮೂರುವರೆ ಮುಹೂರ್ತ ವಾಗಿದೆ, ಶ್ರೇಷ್ಟ ಮೂಹೂರ್ತವಾಗಿದೆ.
ವಿಕ್ರಮ ಸಂವತ್ಸರ ಪ್ರಕಾರ ವರ್ಷದ ಮೊದಲದಿನ.
ಎಲ್ಲಾ ವ್ಯವಹಾರ ವಹಿವಾಟಗಳು ಪ್ರಾರಂಭಿಸುತ್ತಾರೆ.

  ಯಜ್ಞ ಎಂದರೇನು?

ಯಾವುದೇ ಶುಭ ಕಾರ್ಯ ಮಾಡಿದರೂ ಶುಭ ಫಲನೀಡುತ್ತದೆ.
ಬಲಿಯು ಅಸುರನಾದರೂ ಅವನಲ್ಲಿರುವ ಈಶ್ವರಿ ಕಾರ್ಯಗಳನ್ನು ಮೆಚ್ಚಿ ಮಹಾವಿಷ್ಣುವಿನ
ಪ್ರೀತಿಗೆಪಾತ್ರನಾಗುತ್ತಾನೆ.

ಭೂಲೋಕದಲ್ಲಿ ಅಮರನಾದನು.
ಭೂಲೋಕದಲ್ಲಿ ಪ್ರತಿವರ್ಷ ಬಲಿಯನ್ನು ನೆನೆಯುತ್ತಾ ” ದೀಪಾವಳಿ ” ಆಚರಿಸುವದು
ರೂಡಿಯಲ್ಲಿ ಬಂದಿದೆ.
” ದೀಪಾವಳಿ ಹಾಗು ಬಲಿ ಪಾಡ್ಯಮಿ ಯ ಶುಭಾಶಯಗಳು ”

Leave a Reply

Your email address will not be published. Required fields are marked *

Translate »