ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ದೇವಾಲಯಗಳಲ್ಲಿ ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು

ನಮಸ್ಕಾರ ಎಲ್ಲಿ, ಹೇಗೆ ಮಾಡಬೇಕು

ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ
ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು. ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು. ಏಕೆಂದರೆ ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ. ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. ಅಗ್ರೇ ಮೃತ್ಯುಮವಾಪ್ನೋತಿ ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.

  ವಿಭೂತಿ ಧರಿಸಿದವರ ಮಹತ್ವ

ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ವಾಮಭಾಗೇ ಭವೇನ್ನಾಶಃ ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು. ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ. ದಕ್ಷಿಣೇ ಸರ್ವಕಾಮದಃ ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

Leave a Reply

Your email address will not be published. Required fields are marked *

Translate »