ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸಾವಿರ ಕನ್ನಡ ಗಾದೆಗಳು ಭಾಗ – ೪ – thousand Kannada proverb

ಜನಪ್ರಿಯ ಗಾದೆಗಳು | Kannada Gaade Maathu | kannada gaade maathu | ಕನ್ನಡ ಗಾದೆ ಮಾತು | ಗಾದೆ ವಿಸ್ತರಣೆ | Gaade expand | ಗಾದೆ ಅರ್ಥ ಸಹಿತ | proverbs with meanings | Kannada Gaadegalu | ಕನ್ನಡ ಗಾದೆಗಳು | Kannada Proverbs | ಕನ್ನಡ ಜನಪ್ರಿಯ ಗಾದೆಗಳು | Kannada Popular Proverbs | Janapriya Gaadegalu | Kannada Gaadegalu | ಕನ್ನಡ ಗಾದೆಗಳು | Kannada Proverbs |

ಸಾವಿರ ಕನ್ನಡ ಗಾದೆಗಳು ಭಾಗ – 4 thousand Kannada proverb collection

ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಹಾಳೂರಿಗೆ ಉಳಿದೋನೇ ಗೌಡ,
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಬಂತು
ಲಕ್ಷ್ಮಿ ಚಂಚಲೆ
ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
ಬೆಣ್ಣೆಯೊಳಗಿನ ಕೂದಲು ತೆಗೆದಂತೆ
ಅಳಿಯ ಅಲ್ಲ, ಮಗಳ ಗಂಡ
ರವಿ ಕಾಣದ್ದನ್ನು ಕವಿ ಕ೦ಡ.
ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೋಜನ ಸಿಕ್ಕಿದರೆ ಬಿಡಲೊಲ್ಲ
ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು
ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
ಏನಾದರೂ ಆಗು ಮೊದಲುdda ಮಾನವನಾಗು.
ಕಣ್ಣಿಗೂ ಮೂಗಿಗೂ ಮೂರು ಗಾವುದ.
ಗಂಜಿಯ ಕುಡಿದರೂ ಗಂಡನ ಮನೆ ಲೇಸು
ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು
ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ
ಮಾಡಿದ ಪಾಪ ದಾನದಿಂದ ಹೋದೀತೆ
ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
ಹಾಲಿದ್ದ ಕ೦ಡಲ್ಲಿ ಬೆಕ್ಕು ಹೇಲು ಕ೦ಡಲ್ಲಿ ನಾಯಿ
ದಾಯವಾಗಿ ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
ಮೊಂಡ ಮಾವನಿಗೊಬ್ಬ ಭಂಡ ಅಳಿಯ.
ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
ತಾಯಿ ಕಂಡರೆ ತಲೆ ನೋವು
ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
ಆರಿದ್ರಾ ಮಳೆ ಆರದೇ ಹುಯ್ಯುತ್ತೆ.
ಕೊಡಲಾರದ ಹೆಣ್ಣಿಗೆ ತೆರವು ಕೇಳಿದರಂತೆ
ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ.
ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
ಹತ್ತು ಕಟ್ಟುವಲ್ಲಿ ಒಂದು ಮುತ್ತು ಟು.
ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
ಮೋಕ್ಷಕ್ಕೆ ಗ್ನಾನ ಬೇಕು ಯೋಗಕ್ಕೆ ಧ್ಯಾನ ಬೇಕು
ತಿಳಿದವ ಮಾಡ್ಯಾನು ನಳಪಾಕವ
ತೂತು ಗತ್ತಲೇಲಿ ತಾತನ ಮದುವೆ
ಹೆದರುವವರ ಮೇಲೆ ಕಪ್ಪೆ ಎಸೆದಂತೆ
ಸೊಸೆ ಸತ್ತರೆ ಸೊಬಾನ ಮಗ ಸತ್ತರೆ ಮನೆ ಹಾಳು.
ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು
ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ
ನೆರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
ಏನೂ ಇಲ್ಲದವಗೆ ಭಯವಿಲ್ಲ
ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
ಹಾಲಿನಲ್ಲಿ ಹುಳಿ ಹಿಂಡಿದಂತೆ
ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ
ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
ಬೀಜ ಸಣ್ಣದಾದರೆ ಮರ ಸಣ್ಣದೋ
ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
ಮೊಂಡ ಕೊಡಲಿ ರಟ್ಟೆಗೆ ಮೂಲ.
ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ
ಅಶ್ವಥ ಸುತ್ತಿದರೆ ಮಕ್ಕಳಾಗುತ್ತೆ ಅ೦ದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊ೦ಡಳ೦ತೆ.
ತೀರದ ಕಾರ್ಯ ಹಾರಿದರೂ ಆಗದು
ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು
ಅಜ್ಜ ಮದುವೆ ಅಂದ್ರೆ ನನಗೋ ಅಂದ
ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು
ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ
ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ
ಕೊಂದ ಪಾಪ ತಿಂದು ಪರಿಹಾರ
ಉದ್ಯೋಗವೇ ಗಂಡಸಿಗೆ ಲಕ್ಷಣ
ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
ಕಾರ್ಯವಾಸಿ ಕತ್ತೆ ಕಾಲು ಕಟ್ಟು
ಸರಿ ಸರಿಯಾಗಿದ್ರೆ, ಪರಿ ಪರಿ ನೆಂಟರು
ಕಲ್ಲಲ್ಲಿ ಇಟ್ಟವನ ಬೆಲ್ಲದಲ್ಲಿ ಇಡಬೇಕು
ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
ಮಾಡೋದು ಅನಾಚಾರ ; ಮನೆ ಮುಂದೆ ಬೃಂದಾವನ
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
ಪ್ರಸ್ತಕ್ಕಿಲ್ಲದ ಮಾತು ಹತ್ತು ಸಾವಿರವಿದ್ದೇನು
ತುಪ್ಪತೊಗೆ ತಿನ್ನೋರ ರಂಪ ನೋಡು
ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು
ತೀರಕ್ಕೆ ಬಂದ ಮೇಲೆ ತೆರೆಯ ಭಯವೇ
ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
ಕೋರಿ ಒಲುಮೆ ತನಗೆ ಅನ್ನೋ ಮಾರನಿಗೆ ಮಾರಿ ಹಿಡಿಯಿತು.
ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟೂ ಒಳ್ಳೆಯದು .
ಬಳ್ಳಿಗೆ ಕಾಯಿ ಭಾರವೇ
ವಜ್ರಕ್ಕೆ ಸಾಣಿ ಹಿಡಿದಂತೆ.
ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ
ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
ಅತ್ತು ಹೆದರಿಸೋನೊಬ್ಬ
ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
ನಿನ್ನ ನಾಲಗೆ ಸೇದು ಹೋಗ
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
ಅತ್ತೆ ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
ಹುಚ್ಚಲ್ಲ,ಬೆಪ್ಪಲ್ಲ,ಶಿವಲೀಲೆ
ಎಡಗಣ್ಣು ಹೊಡೆದರೆ ನಾರಿಗೆ ಶುಭ.
ಎಲ್ಲರ ಮನೆ ದೋಸೇನೂ ತೂತೇ.
ಅಣ್ಣಿಗೇರ‍್ಯಾಗ ಎಣ್ಣೆ ಮೊಣಕಾಲ ಮಟ್ಟ
ಕಡ್ಡೀನ ಗುಡ್ಡ ಮಾಡು.
ತಾರಕ್ಕೆ (ಎರಡು ಕಾಸಿನ ನಾಣ್ಯ) ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ
ಊರಿಗೆ ದೊರೆ ಆದರೂ ತಾಯಿಗೆ ಮಗನೆ.
ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
ಆವು ಕಪ್ಪಾದ್ರೆ ಹಾಲು ಕಪ್ಪೇನು
ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?
ಬೇಲಿನೆ ಎದ್ದು ಹೊಲ ಮೇಯಿತಂತೆ
ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು
ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ
ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ
ನಮ್ಮ ಮನೆ ರಾಗಿ ಕಲ್ಲಾಡಿದರೆ ನಾಡೆಲ್ಲಾ ನೆಂಟರು
ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
ನಿನ್ನ ಹೆಣ ಎತ್ತ
ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು
ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
ಆಪತ್ತಿಗಾದವನೇ ನೆಂಟ
ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ
ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು
ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
ಅತ್ತ ದರಿ; ಇತ್ತ ಪುಲಿ
ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು
ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು
ಬರೀ ಮಾತಾಡಿ ಬಯ್ಯಿಸಿಕೊಂಡ
ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ
ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ
ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ
ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ
ಪ್ರಥಮ ಚುಂಬನೇ ದಂತ ಭಗ್ನಮ್
ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
ಉಪದೇಶಕ್ಕಿಂತ ಉದಾಹರಣೆ ಆಗಿರುವುದು ಉತ್ತಮ
ಮೃತ್ಯು ಬಂದ ಮೇಲೆ ವೈದ್ಯ ಬಂದ.
ಮೊಲ ಎಬ್ಬಿಸಿ …ಕ್ಕೆ ಕೂತರು
ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
ಕಡ್ಡೀನ ಗುಡ್ಡ ಮಾಡು
ಹಿತ್ತಲ ಗಿಡ ಮದ್ದಲ್ಲ
ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
ಹನಿಹನಿಗೂಡಿದರೆ ಹಳ್ಳ; ತೆನೆತೆನೆಗೂಡಿದರೆ ಬಳ್ಳ
ತಾ ಬಲವೋ ಜಗ ಬಲವೋ
ಛೀ ಅಂದರೆ ನನ್ನ ಭಲಾ ಅಂದರು ಅಂದಂತೆ
ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
ತಟಕಿನಿಂದ ತಟಪಟವಾಯಿತು
ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ ತಾನೂ ಕುಡಿಯ ಕುಡಿಯಲೀಸ
ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು
ಗ೦ಡಸಿಗೇಕೆ ಗೌರಿ ದುಃಖ ?
ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
ತರಗೆಲೆ ಅಡಿಕೆ ತಿರಿದು ತಿನ್ನಬೇಕೆ
ಮಾಡಿದ ಕರ್ಮ ಬೆನ್ನಾಡಿ ಬಂತು
ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ
ಕಯ್ಯಾರೆ ಮಾಡುವ ಧರ್ಮ ಲೇಸು
ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
ಹೆಂಡ್ರನ್ನ ಸಸಾರ ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
ಕೆಟ್ಟು ಬದುಕಬಹುದು ಬದುಕಿ ಕೆಡಬಾರದು
ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ
ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
ಕಟ್ಟಲಿಲ್ಲ ಬಿಚ್ಚಲಿಲ್ಲ ಹಿ೦ಡಿಕೊಳ್ಳೋಕೆ ಹೊತ್ತಾಯ್ತು ಅ೦ದಳು.
ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.
ಪಾಪಿಯ ಪಾಪಿ ತಿಂದೋಗಲಿ
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
ಹೊಳೆಯುವುದೆಲ್ಲಾ ಚಿನ್ನವಲ್ಲ
ಕುಡಿಯೋದು ಅ೦ಬಲಿ ಮುಕ್ಕಳಿಸೋದು ಪನ್ನೀರು.
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
ಅಕ್ಕನ ಹಗೆ ಬಾವನ ನೆಂಟು
ಬಾಳಿಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ
ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
ದಾಕ್ಷಿಣ್ಯಕ್ಕೆ ಬಸಿರಾಗೋದು
ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
ಜನ ಮರುಳೋ ಜಾತ್ರೆ ಮರುಳೋ.
ಆರು ದೋಸೆ ಕೊಟ್ರೆ ಅತ್ತೆ ಕಡೆ, ಮೂರು ದೋಸೆ ಕೊಟ್ರೆ ಸೊಸೆ ಕಡೆ
ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
ಅಲ್ಲದ ಕನಸು ಕಂಡರೆ ಎದ್ದು ಕುಂಡ್ರು.
ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು
ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
ನೀ ನೆಗೆದು ಬಿದ್ದು ನಲ್ಲಿಕಾಯಾಗ
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ
ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.
ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
ತುಂಬಿದ ಕೊಡ, ತುಳುಕೋದಿಲ್ಲ
ತಿಮ್ಮಪ್ಪನ ದಯೆ ತಿಳಿದ ಕಳ್ಳ ತಿರಿಗಿದರೂ ಬಿಡ
ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು
ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
ಉಂಬಾಗ ಉಡುವಾಗ ಊರೆಲ್ಲ ನೆಂಟರು
ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ
ವೇದ ಸುಳ್ಳು ಆದರು ಗಾದೆ ಸುಳ್ಳಾಗದು.
ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
ಕೈ ಕೆಸರಾದರೆ ಬಾಯಿ ಮೊಸರು.
ನೆಂಟ ನೆರವಲ್ಲ ಕುಂಟ ಜೊತೆಯಲ್ಲ
ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
ಎಲ್ಲಾ ಜಾಣ; ತುಸ ಕೋಣ
ತಾನೂ ತಿನ್ನ; ಪರರಿಗೂ ಕೊಡ
ಗದ್ದೆ ಸುಟ್ಟರೂ ಹಾಳಾಗದು ಗಾದೆ.
ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
ನೀರಿನಲ್ಲಿ ಹೋಮ ಮಾಡಿದಂತೆ
ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ.
ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
ಅತ್ತು ಹೆದರಿಸೋನೊಬ್ಬ ;ಹೇ.. ಹೆದರಿಸೋನೊಬ್ಬ
ಕಚ್ಚುವ ನಾಯಿ ಬೊಗಳದು ಬೊಗಳುವ ನಾಯಿ ಕಚ್ಚದು
ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
ತನ್ನ ನೆರಳಿಗೆ ತಾನಂಜಿ ನಡೆಯಬೇಕು
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ
ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
ಉತ್ತಮನು ಎತ್ತ ಹೋದರೂ ಶುಭವೇ
ಅಂದು ಬಾ ಅಂದ್ರೆ ಮಿಂದು ಬಂದ
ಮೀಸೆ ಬ೦ದವಗೆ ದೇಶ ಕಾಣದು, ಮೊಲೆ ಬ೦ದವಳಿಗೆ ನೆಲ ಕಾಣದು.
ತರುವವ ಹೋದಮೇಲೆ ಮರಗುವವರುಂಟೇ
ಲೊಳಲೊಟ್ಟೆ ಗಂಡನಿಗೆ ಹಳಸಿದ ಊಟ
ಮಘಾ ಮಳೆ ಬಂದಷ್ಟು ಒಳ್ಳೇದು ; ಮನೆ ಮಗ ಉಂಡಷ್ಟು ಒಳ್ಳೇದು.
ಲಂಘನಮ್ ಪರಮೌಷಧಮ್
ಮಂದಾಳಿಗೊಂದು ಮುಂದಾಳು
ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
ಚಂದಕ್ಕೆ ನಾಮ ಇಕ್ಕಿಸ್ಕೊಳ್ಳೋಕೆ ಮೇಲ್‍ಕ್ವಾಟೆಗೆ ಹೋದ.
ಕಡು ಕೋಪ ಬಂದಾಗ ತಡಕೊಂಡವನೇ ಜಾಣ
ಕೋತಿಗೆ ಹೆಂಡ ಕುಡಿಸಿದಂತೆ
ತಿಪ್ಪೇ ಮೇಲೇ ಮುಪ್ಪಾದ ಕುಂಬಾರ ತಿಪ್ಪ
ಕೆಲಸವಿಲ್ಲದ ಕುಂಬಾರ ಮಕ್ಕಳ ಅಂ.. ತಟ್ಟಿದ
ಅತಿ ಆಸೆ ಗತಿಗೇಡು
ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ
ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
ಎಲ್ಲರ ಮನೆಯ ದೋಸೆಯೂ ತೂತೆ !
ನೆತ್ತರು ಉಕ್ಕಿದರೆ ಜೀವ ತೊಡಕೀತು
ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
ಮುದುಕೀ ನಿನ್ನಾಟ ಮುಂದೈತಿ
ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
ತಾಯಿ ಬೇಕು ಇಲ್ಲವೇ ಬಾಯಿ ಬೇಕು.
ಕಾಸಿಗೆ ತಕ್ಕ ಕಜ್ಜಾಯ.
ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
ನಡೆವರ್ ಎಡವದೇ ಕುಳಿತವರ್ ಎಡವುವರೇ
ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
ಚೆಂದಕ್ಕೆ ಚೆನ್ನವೀರಿ ಅಂದೊತ್ತಿಗೆ ಕಂಡಕಂಡವರೆಲ್ಲ ಹಲ್‍ಗಿರೀರಿ ಅಂದ್ಲಂತೆ.
ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು
ಚರ್ಮ ತೊಳೆದರೆ ಕರ್ಮ ಹೋದೀತೆ/ತಪ್ಪೀತೆ?
ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ.
ಬೊಗಳುವ ನಾಯಿ ಕಚ್ಚುವುದಿಲ್ಲ
ಶ್ಯಾನುಭೋಗರ ಸ೦ಬಳ ಸ೦ತೋಷ ಕೇಳಬೇಡಾ.
ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋಡಿಕೊ೦ಡನ೦ತೆ.
ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
ಉ೦ಡೂ ಹೋದ, ಕೊ೦ಡೂ ಹೋದ.
ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
ತಾನು ಕೋತಿಯಾಗಿ ರತಿಯನ್ನು ಬಯಸುವುದೇ?
ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
ಹಾಲಿನ ದುಡ್ಡು ಹಾಲಿಗೆ;ನೀರಿನ ದುಡ್ಡು ನೀರಿಗೆ
ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
ಹಿರೀ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
ಹನುಮಂತರಾಯ ಹಗ್ಗ ತಿನ್ನುವಾಗ ಪೂಜಾರಿ ಶಾವಿಗೆ ಬೇಡಿದನಂತೆ
ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
ನಾಯಿ ಬಾಲ ಡೊಂಕು
ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
ಹಿರೀಮಗ ಆಗಬೇಡ, ಹಿತ್ತಿಲ ಕದ ಆಗಬೇಡ
ಇಂದಿನ ಸೋಲು ನಾಳಿನ ಗೆಲುವು.
ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ
ಸುಳ್ಳು ದೇವರಿಗೆ ಕಳ್ಳ ಪೂಜಾರಿ.
ಸಂದೀಲಿ ಸಮಾರಾಧನೆ
ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ್‍ದು
ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು
ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ
ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಹಸಿದು ಹಲಸು, ಉಂಡು ಮಾವು
ಸತ್ತು ಕೊಳ್ಳೋ ಸೊರ‍್ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
ಹೆಡ್ಡಾಳಾದ್ರೂ ದೊಡ್ಡಾಳು ಮೇಲು
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
ಮಾತು ಆಡಿದರೆ ಹೋಯ್ತು,ಮುತ್ತು ಒಡೆದರೆ ಹೋಯ್ತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು
ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
ಆಡು ಮುಟ್ಟದ ಸೊಪ್ಪಿಲ್ಲ
ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಅಡವಿಯ ದೊಣ್ಣೆ ಪರದೇಸಿಯ ತಲೆ
ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.
ಕಣ್ಣೆರಡಾದರೂ ನೋಟ ಒಂದೇ
ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
ಆತುರಗಾರನಿಗೆ ಬುದ್ಧಿ ಮಟ್ಟ
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
ಮಂತ್ರ ಸ್ವಲ್ಪ, ಉಗುಳೇ ಬಹಳ.
ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
ಹೇಮಗೇಡಿ ನೇಮ ಬೆಳಗಿದ
ನುಡಿಯಲಿ ಸಲ್ಲನದಾವುದಕೂ.
ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು
ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
ಮನೆಮನೆ ಮುದ್ದೆ ಮಾರಿಗುಡಿ ನಿದ್ದೆ
ತಾನೂ ತಿನ್ನ, ಪರರಿಗೂ ಕೊಡ.
ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
ದಯವಿಲ್ಲದ ಧರ್ಮವಿಲ್ಲ.
ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
ಪಾಲಿಗೆ ಬಂದದ್ದು ಪಂಚಾಮೃತ
ಕೈಲಾಗದೋನು ಮೈ ಪರಚಿಕೊಂಡ
ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು)
ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
ಯಥಾ ರಾಜ ತಥಾ ಪ್ರಜಾ.
ಆಳಾಗಬಲ್ಲವನು ಅರಸಾಗಬಲ್ಲ
ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
ಸೂಳೆಗೆ ಮದುವೆ ಮಾಡಿದ ಹಾಗೆ
ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
ಆಸೆಗೆ ಕೊನೆಯಿಲ್ಲ
ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
ಕಡಲೆ ತಿಂದು ಕೈತೊಳೆದ ಹಾಗೆ.
ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
ಊರು ಸುಟ್ಟರೂ ಹನುಮಂತರಾಯ ಹೊರಗೆ
ದೇವರು ಒಲಿದರೂ ಪೂಜಾರಿ ಒಲಿಯೊಲ್ಲ.
ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
ತರಗು ತಿಂಬವನಿಗೆ ಒರಗೊಂದು ಕೇಡು
ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
ಒಡೆದ ಹಾಲು ಹೆಪ್ಪಿಗೆ ಬಂದೀತೇ
ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.
ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
ಒಲುಮೆಗೆ ನೋಟಬೇಟವೇ ಮೊದಲು
ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
ಕೃಷಿತೋನಾಸ್ತಿ ದುರ್ಭಿಕ್ಷಂ
ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
ಗಡ್ಡಕ್ಕೆ ಬೇರೆ ಸೀಗೇಕಾಯಿ
ಲಿಂಗ ಹರಿದ ಮೇಲೆ ಜಂಗಮನ ಹಂಗೇನು
ದುಡಿಮೆಯೇ ದೇವರು
ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು
ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ
ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
ಒಂದಕ್ಕೆರಡು ದಂಡ, ಹೆಂಡಕ್ಕೆ ರಾಗಿ ದಂಡ
ಕಣ್ಣು ಕುರುಡಾದರೆ ಬಾಯಿ ಕುರುಡೇ
ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
ಕತ್ತಿ ಬಂಗಾರದ್ದಾಗಿದೆಯೆಂದು ಕತ್ತು ಕೊಯ್ದುಕೊಳ್ಳಲು ಸಾಧ್ಯವೇ?
ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು
ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು
ಬಂಗಾರಕ್ಕೆ ಕುಂದಣವಿಟ್ಟಂತೆ.
ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
ಬೇಕೆಂಬುದು ಬಾಳು ಸಾಕೆಂಬುದು ಸಾವು
ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
ತಾಳು ಬಡಿದರೆ ಕಾಳು ಸಿಕ್ಕೀತೇ
ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
ಭಾಷೆ ಕೊಟ್ಟವನು ಪೋಷಣೆ ಮಾಡನೇ?
ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
ಏರಿದವ ಇಳಿದಾನು
ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
ಎಲ್ಲಾ ಜಾಣ, ತುಸು ಕೋಣ.
ತಡೇ ಕಟ್ಟುವವನ ಮುಂದೆ ಮುಡಿಯೇನು
ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು
ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
ಕರೆದು ಹೆಣ್ಣು ಕೊಟ್ಟರೆ ಮಲ್ಲೋಗರ ಬಂತಂತೆ.
ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ
ಅತಿ ಸ್ನೇಹ ಗತಿ ಕೇಡು
ತೋಳ ಬಿದ್ದರೆ ಆಳಿಗೊಂದು ಕಲ್ಲು
ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
ತನ್ನ ಮನೆ ಉಪ್ಪು ಇಲ್ಲ ಬೆನ್ನ ಹಿಂದೆ ಉರಿಯೋ
ಕೊಲ್ಲದಿರುವುದೇ ಧರ್ಮ
ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ
ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
ಬೆನ್ನಹಿಂದೆ ಬಿದ್ದು (ಓಡಿ)ಬನ್ನ ಪಟ್ಟ
ಉರಿದು ಉಪ್ಪಾಗಿ ತಿಂದು ಮಣ್ಣಾದಳು
ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
ಊರಿಗೆ ದಾರೀಯ ಯಾರು ತೋರಿದರೇನು
ಕಂಡ ಕಳ್ಳ ಜೀವ ಸಹಿತ ಬಿಡ
ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
ಓದಿ ಓದಿ ಮರುಳಾದ ಕೂಚು ಭಟ್ಟ; ಓದದೆ ಅನ್ನ ಕೊಟ್ಟ ನಮ್ಮ ರೈತ
ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
ಬ್ಬರ ಕೂಳು ಇನ್ನೊಬ್ಬರ ಕುತ್ತು.
ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ
ಕಳ್ಳನ ಮನಸ್ಸು ಹುಳ್ಳಗೆ
ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
ತಡವ ಮಾಡುವವನ ಗೊಡವೆ ಬೇಡ
ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ
ತರುಬಿದವಗೂ ಓಡಿದವಗೂ ಸರಿಪಾಲು
ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
ಹೆಸರಿಗೆ ಹೆಂಡ್ರ ಕಾಣೆ ಮಗನ ಹೆಸರು ನಂಜುಂಡ
ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
ತಾಳ ತಪ್ಪಿದ ಬಾಳು, ತಾಳಲಾರದ ಗೋಳು
ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
ಹಾಸಿಗೆ ಇದ್ದಷ್ಟು ಕಾಲು ಚಾಚು
ತನ್ನ ತಾನರಿತರೆ ಸುಜ್ಞ್ನಾನಿ
ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಳಗೆ ತೂರು.
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
ಎತ್ತಲೊ ಸಮತೆ ತೊಟ್ಟು ಪದವಿ ಮುಟ್ಟು ಇದ್ದೂ
ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ
ಮನೆಗೆ ಮಾರಿ, ಊರಿಗೆ ಉಪಕಾರಿ.
ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ … ಅದ್ದುವ ಬುದ್ಧಿ)
ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
ಬಡ್ಡಿ ಬಾಯಿಗಂಜ್ತೀಯೋ, ದೊಡ್ಡೆತ್ತಿನ ಕೋಡಿಗಂಜ್ತೀಯೋ
ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ
ಯುದ್ಫ ಕಾಲದಲ್ಲಿ ಶಸ್ತ್ರಾಭ್ಯಾಸ.
ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
ನಾಯಿಯ ಕನಸೆಲ್ಲ ಮೂಳೇನೇ.
ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
ಯುದ್ಧ ಕಾಲೇ ಶಸ್ತ್ರಾಭ್ಯಾಸ.
ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು
ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ?
ಕೃಷಿತೋ ನಾಸ್ತಿ ದುರ್ಭಿಕ್ಷಂ
ಮುಖ ನೋಡಿ ಮಣೆ ಹಾಕು
ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು
ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ
ಕೊಡುವವನ ಕೈ ಯಾವಾಲು ಮೇಲೆ
ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಆಟಕ್ಕುಂಟು,ಲೆಕ್ಕಕ್ಕಿಲ್ಲ
ಸಾಯ್ತೀನಿ ಸಾಯ್ತೀನಿ ಅಂತಾ ಸಾವಿರ ಕೋಳಿ ತಿಂದಳಂತೆ
ಬಲ್ಲವರ ಮಾತು ಬೆಲ್ಲ ಸವಿದಂತೆ.
ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
ಗಿಣಿ ಸಾಕಿ ಗಿಡುಗದ ಕೈಗೆ ಕೊಟ್ಟರು
ಬಡವ, ನೀ ಮಡಗಿದ ಹಾಗೆ ಇರು.
ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
ವಿಧಿ ಮುನಿದರೆ ಸರಿ ಬೆಸವಾಯ್ತು
ಕಂತೆಗೆ ತಕ್ಕ ಬೊಂತೆ
ಮಾತು ಬೆಳ್ಳಿ, ಮೌನ ಬಂಗಾರ
ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
ಅತಿಯಾದರೆ ಅಮೃತವೂ ವಿಷ
ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
ನಾಯಿನ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದ ಹಾಗಾಯ್ತು.
ಕಳ್ಳನ ಹೆಂಡತಿ ಎಂದಿದ್ದರೂ ಮುಂ..
ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
ಶಾನುಭೋಗರ ಮನೇಲಿ ಶೋಭನ ಅಂದ್ರೆ ಪಟೇಲನ ಮನೇಲಿ ನಿದ್ದೆ ಮಾಡ್ಲಿಲ್ವಂತೆ
ಬಾಣಲೆಯಿಂದ ಬೆಂಕಿಗೆ
ದಾನವಾಗಿ ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
ತೋಟದ ಬೇಲಿಯನ್ನು ದಾಟಿ ನೋಡದವರಾರು
ಬಂದ ದಾರಿಗೆ ಸುಂಕವಿಲ್ಲ
’ಕೋ’ ಅನ್ನೋದು ಕುಲದಲ್ಲಿಲ್ಲ ,’ತಾ’ ಅನ್ನೋದು ತಾತರಾಯನ ಕಾಲದ್ದು
ಹೆಣ್ಣು ಜಲ್ಮಕ್ಕೆ ಹೆಜ್ಜೆಗೊಂದು ಮುಳ್ಳು
ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು.
ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
ಓದುವಾಗ ಓದು; ಆಡುವಾಗ ಆಡು
ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ
ಎಂಜಲ ತಿಂದರೂ ಅಂಜದೆ ತಿನ್ನು
ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
ಆಳಾಗಬಲ್ಲವನು ಅರಸನಾಗಬಲ್ಲ.
(ನೀನು)ಮೊಳ ಬಿಟ್ಟರೆ,(ನಾನು) ಮಾರು ಬಿಡುತ್ತೇನೆ
ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
ಆದರೆ ಹಬ್ಬ, ಇಲ್ಲದಿದ್ದರೆ ಬರಗಾಲ.
ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
ತನ್ನ ತಾ ತನ್ನಿಂದಲೇ ಅರಿಯಬೇಕು
ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ
ಆಕಾಶಕ್ಕೆ ಏಣಿ ಹಾಕಿದ ಹಾಗೆ
ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
ವಿಧಿ ಕಾಣದ ಎಡೆಗಳಿಲ್ಲ
ಹಣ ಇಲ್ಲದವ ಹೆಣಕ್ಕಿಂತ ಕಡೆ
ಮಾಡಿದುಣ್ಣೊ ಮಾರಾಯ
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ
ಮಂತ್ರಿ‌ಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
ಊರಿಗಾಗದ ಗೌಡ, ಮೇಲೆರಗುವ ಗಿಡುಗ
ಸಾದೆತ್ತಿಗೆ ಎರಡು ಹೇರು (ಹೊರೆ)
ಆಪತ್ತಿಗಾದವನೇ ನೇಂಟ
ಹೆಂಡತಿಯಿಲ್ಲದ ಮನೆ ದೇವರಿಲ್ಲದ ಗುಡಿ
ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ
ಹಗೆ ಬಿತ್ತಿ ಬೆಂಕಿ ಬೆಳೆದ
ಚ೦ಡಾಲ ದೇವರಿಗೆ ಚಪ್ಪಲಿ ಪೂಜೆ.
ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
ತಟ್ಟಿ ಬೈಸಿಕೊಂಡರೂ ತಟ್ಟೇ ಹುಳಿ ಚೆನ್ನಾಗಿದೆ
ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
ಮುಖ ನೋಡಿ ಮನ ತಿಳಿ.
ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು
ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
ಹಾರೋ ಹಕ್ಕಿಗೆ ಹಾದರ ಕಟ್ಟಿದರು.
ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.
ಹೂವಿನ ಜೊತೆ ದಾರ ಮುಡಿಯೇರಿತು
ಹುಟ್ಟು ಗುಣ ಸುಟ್ಟರೂ ಹೋಗಲ್ಲ
ತುಂತುರು ಮಳೆಯಿಂದ ತೂಬು ಒಡೆದೀತೆ?
ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
ಕೆಡುವವರು ಮನೇಲಿದ್ರು ಕೆಡುತ್ತಾರೆ.
ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ.
ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
ಎಲ್ಲರೂ ಪಲ್ಲಕ್ಕಿಲಿ ಕೂತರೆ ಹೊರೋರು ಯಾರು
ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?
ಬಂಟರ ಅಬ್ಬರ ಸೇವಿನ ಗೊಬ್ಬರ
ಇಡೀ ಮುಳುಗಿದರೂ ಮೂಗು ಮೇಲೆ
ಮುಲಾಜಿಗೆ ಬಸುರಾಗಿ ಹೆರೋಕೆ ತಾವಿಲ್ಲ
ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
ಮದುವೆ ಸಾಲ ಮಸಣಾದವರೆಗೂ.
ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
ಚಿನ್ನ ತಿನ್ನಬೇಕಾದ್ರೆ ಮೇಣದಂತಾ ಹಲ್ಲು ಬೇಕು.
ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
ತಪ್ಪಿ ಬಿದ್ದವನಿಗೆ ತೆಪ್ಪ ಏನು ಮಾಡೀತು
ಚಿತ್ತಾರದ ಅಂದವನ್ನು ಮಸಿ ನುಂಗಿತು
ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ ಬಾಗಿಲು ಹಾಕಿದರಂತೆ.
ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
ಹುತ್ತ ಬಡಿದರೆ ಹಾವು ಸಾಯುವುದೇ
ಸಂಸಾರ ಗುಟ್ಟು; ವ್ಯಾಧಿ ರಟ್ಟು
ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
ಬೀದೀಲಿ ಹೋಗೋ ಮಾರೀನ ಮನೆ ಹೊಕ್ಕು ಹೋಗು ಅಂದಂತಾಯ್ತು
ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
ಕಾಯಕವೇ ಕೈಲಾಸ
ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ
ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
ಅತಿ ಸ್ನೇಹ ಗತಿ ಕೆಡಿಸಿತು
ಮಾಡುವವ ಉತ್ತಮ ಆಡಿ ಮಾಡದವ ಅಧಮ ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
ಬಿಸಿಲು ಬಂದ ಕಡೆಗೆ ಕೊಡೆ ಹಿಡಿ.
ಹಾರದ ಕೋತಿಗೆ ಮುಪ್ಪಾಗ ಬೆಲ್ಲ ತಿನ್ನಿಸಿದರಂತೆ
ಹೋದ ಬದುಕಿಗೆ ಹನ್ನೆರಡು ದೇವರು
ಕಳ್ಳನ ಮನಸ್ಸು ಹುಳ್ಳ- ಹುಳ್ಳಗೆ
ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
ಕಳ್ಳನಿಗೊಂದು ಪಿಳ್ಳೆ ನೆವ
ಹಾಲು ಬಿಟ್ಟವರ ಮನೆಗೆ ಸೀಬಿ ಅಂದಂಗೆ.
ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
ಹೂ-ದವರು ‌ಯಾರು ಅಂದರೆ ಮಾಸಿದ ಸೀರೆಯವರು.
ಹುಣ್ಣಿನ ಮೇಲೆ ಉಪ್ಪು ಸವರಿದಂತೆ
ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
ಕಾಸಿಗೊಂದು,ಕೊಸರಿಗೆರಡು
ಚೊಕ್ಕಣ್ಣನ ಕೋಪ ಸಣ್ಣಪ್ಪನ ದವಡೆಗೆ ಮೂಲ.
ಯಾರದೊ ದುಡ್ಡಿನಲ್ಲಿ ಯೆಲ್ಲಮನ್ನ ಜಾತ್ರೆ
ನಯಶಾಲಿ ಆದವನು ಜಯಶಾಲಿ ಆದಾನು
ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
ಇಕ್ಕಲಾರದ ಕೈ ಎಂಜಲು
ಕರೆಯದವರ ಮನೆಗೆ ಕಳಸಗಿತ್ತಿಯಾಗು
ಸೊಕ್ಕುವುದು ಕೆಕ್ಕರಿಸಿ ನೋಡುವುದು ಸೇರಕ್ಕಿಯ ಗುಣ
ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
ಉಂಡ ಮನೆ ಜಂತೆ ಎಣಿಸಬಾರದು
ವಶಗೆಡದೆ ಹಸಗೆಡಲ್ಲ
ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ
ಉತ್ತಮವಾದ ನಗು ನೇಸರನ ಮಗು.
ಕುಚುಕು ಬುದ್ಧಿ ಹೊಕ್ಕವನು ಕೆಟ್ಟ
ಹರಕಿನಲ್ಲಿ ಇಲಿ ಕಡಿಯಿತು
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
ಅ೦ಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.
ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.
ಊಟ ತನ್ನಿಚ್ಚೆ,ನೋಟ ಪರರಿಚ್ಚೆ
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು
ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
ಮದುವೆ ಆಗೋ ಗ೦ಡಿಗೆ ಅದೇ ಇಲ್ಲ ಅ೦ದ೦ಗೆ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
ಪಥ್ಯ ಹಾಕುವವನ ಬೆರಳು ಕಚ್ಚಿದ ಹಾಗೆ.
ತಿಳಿಯಕ್ಕಿಲ್ಲ ನೋಡಕ್ಕಿಲ್ಲ ಹುಚ್ಚು ಮೂಕನ ಆಟ
ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
ಪದದೊಳಿಲ್ಲ ತಾನರ್ಥದೊಳಿಲ್ಲವು
ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ತಾನೊಲಿದ ಮಂಕು ಮಾಣಿಕ್ಯ
ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
ಕೊಂಕಿಗೆ ಕೊಂಕೇ ಮದ್ದು
ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಕುಡಿಯೋ ನೀರಿನಲ್ಲಿ … ಅದ್ದುವ ಬುದ್ಧಿ
ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ
ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ
ಶಂಖದಿಂದ ಬಂದರೇ ತೀರ್ಥ
ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು
ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯ್ತು.
ಬಂಗಾರಕ್ಕೆ ಕುಂದಣವಿಟ್ಟಂತೆ
ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ
ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
ಅಲ್ಪರ ಸಂಗ ಅಭಿಮಾನ ಭಂಗ.
ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
ಪಾಪಿ ಚಿರಾಯು
ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
ಸರಿಸರಿಯಾಗಿದ್ರೆ,ಪರಿಪರಿ ನೆಂಟರು
ಕಂಗಾಲಾದರೂ ಹಂಗಾಳಾಗಬಾರದು
ಗಂಡ ಹೆಂಡಿರ ಜಗಳದಲ್ಲಿ ಮಕ್ಕಳು ಜಗಳ ಕಲಿತವು
ತನ್ನೂರಲಿ ರಂಗ, ಪರೂರಲಿ ಮಂಗ
ಮಗಳನ್ನು ಹೊಗಳಿ ಬೆಳಸಬೇಕು.ಮಗನನ್ನು ಶಿಸ್ತಿನಲ್ಲಿ ಬೆಳಸಬೇಕು
ನಾಳೆ ಯಾರೋ ನಾನು ಯಾರೋ!
ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ ಗವುಜಿ ಗದ್ದಲ ಏನೂ ಇಲ್ಲ,
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು
ಎರಡೂ ಕೈ ತಟ್ಟಿದರೆ ಸದ್ದು
ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
ಮದ್ದಿನ ಗುಣದಿಂದ ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
ಇಬ್ಬರ ಜಗಳ ಮೂರನೆಯವನಿಗೆ ಲಾಭ
ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
ಹೆಣ್ಣಿನ ಬಾಳು ಕಣ್ಣೀರಿನ ಗೋಳು.
ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
ಕಳ್ಳನ ನಂಬಿದ್ರು ಕುಳ್ಳನ ನಂಬಬೇಡ
ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
ಬೇಡಿದರೆ ಇಲ್ಲ ಅನ್ನೋದ್ ಕಷ್ಟ ನೀಡುವರ ಬೇಡ ಅನ್ನೋದ್ ಕಷ್ಟ
ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
ಕೂಳಿಗೆ ಕೇಡು ಭೂಮಿಗೆ ಭಾರ
ಕೊಡಲಿ ಕಾವು ಕುಲಕ್ಕೆ ಸಾವು
ತಲೆ ಗಟ್ಟಿ ಅಂತ ಕಲ್ಲ ಹಾಯಬಾರದು
ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
ಹೇಳೊದು ವೇದ ಹಾಕೊದು ಗಾಳ
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದ ಹಾಗೆ
ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
ಹೆತ್ತವರಿಗೆ ಹೆಗ್ಗಣ ಮುದ್ದು.
ಒಂದೊಂದು ಕಾಲಕ್ಕೆ ಒಂದೊಂದು ಪರಿ
ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ
ಬಾಯಲ್ಲಿ ಬೆಲ್ಲ ಕರುಳು ಕತ್ತರಿ
ಕೆರೆಗೆ ತೊರೆ ಕೂಡಿ ಸರೋವರ ವಾಯ್ತು
ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ
ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
ಐದು ಬೆರಳೂ ಒಂದೇ ಸಮ ಇರೋಲ್ಲ
ಸೂಳೆ ಕೈಲಿ ಜೋಳ ಕುಟ್ಟಿಸಿದ ಹಾಗೆ
ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ
ಅನುಭವಿಗೆ ಬೇರೆ ಮತವಿಲ್ಲ
ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು
ಕೋ’ ಅನ್ನೋದು ಕುಲದಲ್ಲಿಲ್ಲ ,’ತಾ’ ಅನ್ನೋದು ತಾತರಾಯನ ಕಾಲದ್ದು
ಇಲ್ಲು ಪೋಗಂಡ ಅಲ್ಲು ಪೋಗಂಡ
ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
ಕೋತಿ ತಾನೂ ಕೆಡೋದಲ್ದೆ ವನಾನೂ ಕೆಡಿಸ್ತು
ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.
ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
ಉ.. ಕುಡಿದರೂ ತನ್ನಿಚ್ಚೇಲಿರಬೇಕು
ಪದವೂ ಮುಗಿಯಿತು, ತಂತಿಯೂ ಹರಿಯಿತು.
ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ
ಹರೆಯಕ್ಕೆ ಬಂದಾಗ ಹಂದಿನೂ ಚಂದ
ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
ಜಗವೆಲ್ಲ ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ
ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
ಚಿಕ್ಕ ಮೀನು ದೊಡ್ಡ ಮೀನು ನುಂಗಿತಂತೆ
ಹೆತ್ತವರು ಹೆಸರಿಕ್ಕ ಬೇಕು
ಅಕ್ಕ ಬರಬೇಕು ಅಕ್ಕಿ ಮುಗೀಬಾರದು
ಹಾಯ್ದೆ ಇದ್ದರೂ ಎತ್ತಿನ ಕೊಂಬು ಉದ್ದ
ಹೊರಗೆ ಬೆಳಕು ಒಳಗೆ ಕೊಳಕು
ತಿಮರು (=ಕಡಿತ, ನವೆ) ತುರಿಸಿದರೆ ಅರಸಿನ ಹಾಗೆ
ಎಡವಿದ ಕಾಲೇ ಎಡವುದು ಹೆಚ್ಚು.
ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
ಒಳ್ಳೇನಾದ ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
ಉದ್ದುದ್ದ ಮಾತಿನವರ ಮೊಳಕೈ ಮೊಂಡ.
ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
ಕಳಿತರೆ ಬಾಳೆ ರುಚಿ.ಹುಳಿತರೆ ಜೇನು ರುಚಿ.
ಆನೆಗೂ ಅಡಿ ತಪ್ಪೀತು
ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
ಹೂವಿನಿಂದ ನಾರಿಗೂ ಸ್ವರ್ಗ
ಬಸವನ ಹಿಂದೆ ಬಾಲ,ಸೂಜಿ ಹಿಂದೆ ದಾರ
ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.
ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
ಆತ್ಮೀಯವಾದ ಪ್ರೇಮ ಅಮರವಾದದ್ದು.
ಅತ್ತ ದರಿ, ಇತ್ತ ಪುಲಿ.
ಊರಿಗೆ ಉಪಕಾರಿ, ಮನೆಗೆ ಮಾರಿ
ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
ಬಡವನಿಗೆ ಉಳಿದಷ್ಟೆ ಅಭಿಮಾನ
ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
ಊರಿಗೊಂದು ದಾರಿಯಾದ್ರೆ, ಎಡವಟ್ಟಂಗೆ ಅವನದ್ದೇ ದಾರಿ
ಬೆಂಕಿಯಿಂದ ಸುಟ್ಟ ಹುಣ್ಣು ಮಾಯುವುದು, ನಾಲಿಗೆಯಿಂದ ಸುಟ್ಟದ್ದು ಮಾಯದು.
ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.
ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
ಆಡೋದು ಮಡಿ ಉಂಬೋದು ಮೈಲಿಗೆ
ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
ಅವರವರ ತಲೆಗೆ ಅವರವರದೇ ಕೈ
ಉಸ್ ಎಂದರೆ ಉಸಳಿ ಬೇಡಿದ್ದನಂತೆ
ಕಾಸಿದ್ರೆ ಕೈಲಾಸ
ದಿನಾ ಸಾಯೋರಿಗೆ ಅಳೋರ್ ‍ಯಾರು?
ಹುಟ್ಟಿದವಗೆ ಸಾವು ತಪ್ಪದು
ಬಡವರ ಮಕ್ಕಳಿಗೆ ಬಂಗಡೆ ಮೀನು ಕಜ್ಜಾಯ.
ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು
ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
ಹಬ್ಬ ಹಸನಾಗಲಿ, ಗೋದಿ ಜತನಾಗಲಿ, ಬಂದ ಬೀಗರು ಉಂಡು ಹೋಗಲಿ
ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತಾಯ್ತು (ಮುದ್ದಣ)
ತಿರುಪಿನಂತೆ ಇರಬೇಕು ತಿಳಿದವ
ಆಕಾಶ ನೋಡೊದಕ್ಕೆ ನೂಕುನುಗ್ಗಲೆ ?
ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
ತಾನು ತಿಂಬೋದು ಪಲ್ಲೆ ಸೊಪ್ಪು ಹಿರೇ ಕುದರೆ ಚೇಷ್ಟೆ
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
ಊಟಕ್ಕಿಲ್ಲದ ಉಪ್ಪಿನಕಾಯಿ ..ಕ್ಕೆ ಸಮಾನ
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ
ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ
ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
ನೇಮ ಉಳ್ಳವನ ಕಂಡರೆ ಯಮನಿಗೂ ಭಯ
ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
ನಿದ್ದೆ ಗೈಯೋನ ಹೊತ್ತು ನುಂಗ್ತು
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
ಇಂಬರಿದು ಕೊಡುವಳೆ ರಂಭೆ
ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು
ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
ವಿನಾಶ ಕಾಲೇ ವಿಪರೀತ ಬುದ್ಧಿ.
ತಿರುಳು ಹೋಗಿ ಬೆಂಡು ಉಳೀತು ತಿರೋಕಲ್ಲು
ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
ಯೋಗ ಇದ್ದಷ್ಟೇ ಭೋಗ ಹಾಕ್ಮಣೆ,
ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು
ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
ಆಡೋಣ ಬಾ ಕೆಡಿಸೋಣ ಬಾ
ತಾನು ಬಾಳಲಾರದೆ ವಿಧಿಯ ಬೈದಂತೆ
ನಿಜ ಆಡಿದರೆ ನಿಷ್ಠೂರ
ಇರುಳು ಕ೦ಡ ಬಾವಿಯಲ್ಲಿ ಹಗಲು ಬಿದ್ದರ೦ತೆ.
ಮುಖ ನೋಡಿ ಮಣೆ ಹಾಕು.
ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
ತನ್ನ ಮರ‍್ಯಾದೆ ಕೆಟ್ಟವ ಪರರ ಮರ‍್ಯಾದೆ ಇಟ್ಟಾನೆ?
ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು
ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
ತಪ್ಪಿದವನಿಗೆ ಒಪ್ಪು ಇಲ್ಲ
ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
ಕಟ್ಟಿದ ಗೂಟ , ಹಾಕಿದ ಹಲ್ಲು.
ಜನ ಮರುಳೋ ಜಾತ್ರೆ ಮರುಳೋ
ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ
ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
ಸಜ್ಜನರ ಸಂಗ ಹೆಜ್ಜೇನು ಸವಿದಂತೆ
ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
ನಾಯಿ ಬೊಗಳಿದರೆ ದೇವಲೋಕ ಹಾಳೇನು
ತುಟ್ಟಿಯಾದರೂ ಹೊಟ್ಟೆ ಕೇಳದು
ಕಾಮಾಲೆ ಕಣ್ಣೊನಿಗೆ ಕಂಡಿದ್ದೆಲ್ಲ ಹಳದಿ ನೇ
ಬೆಟ್ಟಕ್ಕೆ ಕಲ್ಲು ಹೊತ್ತ ಹಾಗೆ.
ತಿವಿದುಕೊಂಡರೆ ಬಂದೀತೇ ತಿಮ್ಮಪ್ಪನ ದಯೆ
ಆಲಸ್ಯಂ ಅಮೃತಂ ವಿಷಂ
ಕಾಲ್ಮುರುಕ ದೇವರಿಗೆ ಕೈಲಾಸವೇ
ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
ಉಂಡದ್ದೇ ಉಗಾದಿ ; ಮಿಂದದ್ದೇ ದೀವಳಿಗೆ
ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
ಹೊಳೆಗೆ ಸುರಿದರೂ ಅಳೆದು ಸುರಿ
ಎಟ್ಟ್ ಗಂಡಗೆ ಖೊಟ್ಟಿ ಹೆಂಡತಿ
ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.
ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
ಕಬ್ಬು ಡೊಂಕಾದ್ರೆ ಸವಿ ಡೊಂಕೇ
ಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು
ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ
ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ತಾ ಕೋಡಗ ಪರರ ಅಣಕಿಸಿತು
ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ
ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
ಇದ್ದದ್ದು ಹೋಯಿತು ಮದ್ದಿನ ಗುಣದಿಂದ
ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.
ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
ಆಶ್ಲೇಷ ಮಳೆ , ಈಸಲಾರದ ಹೊಳೆ.
ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ
ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ
ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
ತಲೇ ಒಡೆದವನೂ ಸಮ ಲೇಪ ಹಚ್ಚಿದವನೂ ಸಮ
ತಮ್ಮನ ಸಂಗಡ ತಿಮ್ಮ ಬಂದರೆ ತಂಗಳನ್ನವೇ ಗತಿ
ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ
ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ
ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ
ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
ಮಾಡೋದು ದುರಾಚಾರ, ಮನೆ ಮುಂದೆ ಬೃಂದಾವನ
ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ
ನಾರಿ ಮುನಿದರೆ ಮಾರಿ.
ದೇಶ ಸುತ್ತು ; ಕೋಶ ಓದು.
ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು
ತಕ್ಕಡಿ ಬಲ್ಲದೇ ಮನೆಯ ಬಡತನವ
ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
ತಾಳಲಾರದ ವಿರಹ ತಿಣಕಿದರೆ ಹೋದೀತೇ?
ಮಂತ್ರಕ್ಕಿಂತ ಉಗುಳೇ ಹೆಚ್ಚು.
ರಾಜ ಇರೋತನಕ ರಾಣಿ ಭೋಗ
ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
ಬೆಂದ ಮನೇಲಿ ಹಿರಿದದ್ದೇ ಲಾಭ
ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
ತರ್ಕಾ ಮಾಡುವವ ಮೂರ್ಕನಿಂದ ಕಡೆ
ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ ಮುರವ
ತುಂಬಿದ ಕೊಡ ತುಳುಕುವುದಿಲ್ಲ
ದುಡಿಮೆಯೇ ದುಡ್ಡಿನ ತಾಯಿ
ಕೋಮಟಿ ಕೊಡ ;ಜೈನಿಗ ಬಿಡ
ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
ಕೊಟ್ಟೋನು ಕೋಡಂಗಿ;ಇಸಕೊಂಡೋನು ಈರಭದ್ರ
ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.
ಕೆಲಸವಿಲ್ಲದ ಬಡಗಿ ಮಗುವಿನ … ಕೆತ್ತಿದ
ಹೇಳೋದು ಶಾಸ್ತ್ರ, ಹಾಕೋದು ಗಾಣ
ನೂಕ್ಮಣೆ, ಯಾಕ್ಮಣೆ ತೇಗಿ ತೇಗಿ ಬೀಗಿ ಬಿದ್ದ
ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
ಅರಗಿನಂತೆ ತಾಯಿ, ಮರದಂತೆ ಮಕ್ಕಳು
ಹಣ ಎರವಲು ತಂದು ಮಣ ಉರುವಲು ಕೊಂಡ
ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು
ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
ಕುರು ಮೇಲೆ ಬರೆ ಎಳೆದ ಹಾಗೆ
ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
ಹಿರೀಮಗ ಆಗಬೇಡ,ಹಿತ್ತಿಲ ಕದ ಆಗಬೇಡ
ಓದಿ ಓದಿ ಮರುಳಾದ ಕೂಚು ಭಟ್ಟ
ಸಂತೇಲಿ ಮಂತ್ರ ಹೇಳಿದಂಗೆ
ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
ದೀಪದ ಕೆಳಗೆ ಯಾವತ್ತೂ ಕತ್ತಲೇ
ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು
ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
ಎತ್ತು ಈಯಿತು ಅನ್ದರೆ ಕೊಟ್ಟಿಗೆಗೆ ಕಟ್ಟು ಎನ್ದರಂತೆ
ಪಾಲಿಗೆ ಬಂದದ್ದೆ ಪರಮಾನ್ನ.
ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
ನಿಷ್ಠೆ ಇಲ್ಲದವನಿಗೆ ದೈವ ಬಟ್ಟ ಬಯಲು
ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ
ಹಾಳೂರಿಗೆ ಉಳಿದವನೇ ಗೌಡ
ಉಪ್ಪು ತಿಂದವನು ನೀರು ಕುಡಿಯಲೇ ಬೇಕು
ಹಾಲಿಗಿಂತ ಕೆನೆ ರುಚಿ
ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
ಸೂಳೆ ಪಾಪ ಸನ್ಯಾಸಿಗೆ
ಕೆಲಸವಿಲ್ಲದ ಶಾನುಭೋಗ ಹಳೆ ಲೆಕ್ಕ ನೋಡಿದ ಹಾಗೆ.

  ಮಾತು ಮಾತಿಗೂ ಗಾದೆ ಮಾತು

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೨ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೩ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೪ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೫ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ಗಾದೆ - ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು 

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೬ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೭ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೮ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೯ ಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೦ ಕ್ಕೆ ಇಲ್ಲಿ ಕ್ಲಿಕ್ ಮಾಡಿ

  ಕರ್ಮ ಅಂದರೇನು ? ರಾಜ ಮತ್ತು ಮಂತ್ರಿಯರ ಕಥೆ

ಕನ್ನಡ ಜನಪ್ರಿಯ ಗಾದೆಗಳ ಸಂಗ್ರಹ ಭಾಗ – ೧೧ ಕ್ಕೆ ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

Translate »