ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕೊಲ್ಲೂರು ಮೂಕಾಂಬಿಕಾ ದೇವಾಲಯ ಕಥೆ

ಕೊಲ್ಲೂರು ಮೂಕಾಂಬಿಕೆ ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ..!

ಮೂಕಾಂಬಿಕಾ ದೇವಾಲಯವು ದಕ್ಷಿಣಭಾರತದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿದೆ. ಕೊಲ್ಲೂರು ತಪ್ಪಲಿನಲ್ಲಿ ಪಶ್ಚಿಮ ಕರಾವಳಿ ನೆಲೆಗೊಂಡಿದೆ, ಮತ್ತು ನೈಸರ್ಗಿಕ ಸೌಂದರ್ಯ ಹಾಗೂ ಧಾರ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ.

ಕೊಲ್ಲೂರು ದೇವಾಲಯ

ಈ ದೇವಾಲಯದಲ್ಲಿ ಶಕ್ತಿಯನ್ನು ಶ್ರೀ ಮುಕಾಂಬಿಕ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತದೆ. ಕೊಲ್ಲೂರು ದೇವಾಲಯವನ್ನು ಸಾಮಾನ್ಯವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ‘ಮುಕಾಂಬಿ’ ಅಥವಾ ‘ಮೂಂಗ್ಬಂಗಿ’ ಎಂದು ಕರೆಯಲಾಗುತ್ತದೆ.

ಮೂಕಾಂಬಿಕ ಕ್ಷೇತ್ರ

ಕೊಲ್ಲೂರು ಮೂಕಾಂಬಿಕ ಆ ದೇವಸ್ಥಾನ ಕರ್ನಾಟಕದಲ್ಲಿದೆ. ಆದರೆ ಇಲ್ಲಿಗೆ ಬರುವ ಬಹುತೇಕ ಭಕ್ತರು ಕೇರಳ ಹಾಗೂ ತಮಿಳುನಾಡಿನವರಾಗಿದ್ದಾರೆ. ಮೂಕಾಂಬಿಕ ಕ್ಷೇತ್ರವು ಇತರ ಹಿಂದೂ ದೇವತೆಗಳ ದೇವರುಗಳ ನಡುವೆ ಅನನ್ಯ ಏಕೆಂದರೆ ಮೂಕಾಂಬಿಕೆಯು ಮಹಾಲಕ್ಷ್ಮಿ, ಮಹಾಸರಸ್ವತಿ, ಮಹಾಕಾಳಿ ಅಧಿಕಾರಗಳ ಒಂದು ರೂಪವಾಗಿದೆ.

ದಿವ್ಯಶಕ್ತಿಗಳ ರೂಪ

ಹಿಂದೂಗಳ ಪವಿತ್ರ ಸ್ಥಳ ಹಾಗೂ ಧಾರ್ಮಿಕ ಕ್ಷೇತ್ರವಾಗಿದೆ. ಮೂಕಾಂಬಿಕೆಯನ್ನು ಎಲ್ಲಾ ದಿವ್ಯಶಕ್ತಿಗಳ ರೂಪ ಎನ್ನಲಾಗುತ್ತದೆ. ಆಕೆಯನ್ನು ಎಲ್ಲಾ ರೂಪದಲ್ಲೂ ಪೂಜಿಸಲಾಗುತ್ತದೆ.

ಸಾವಿರಾರುದೇವಾಲಯಕ್ಕೆ ಸಮ

ಸ್ಕಂದ ಪುರಾಣದಲ್ಲಿ ಮುಕಾಂಬಿಕ ಜ್ಯೋತಿರ್ಲಿಂಗವು ಪುರುಷರು ಮತ್ತು ಪ್ರಕೃತಿಯ ಏಕೀಕರಣದಿಂದಾಗಿ ಎನ್ನಲಾಗುತ್ತದೆ. ಇಲ್ಲಿ ಪ್ರಾರ್ಥನೆ ಮಾಡಿದ್ರೆ ಸಾವಿರಾರು ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಿರುವುದಕ್ಕೆ ಸಮನಾಗಿರುತ್ತದೆ ಎಂದು ನಂಬಲಾಗಿದೆ.

ಪೌರಾಣಿಕ ಕಥೆ

ಈ ದೇವಸ್ಥಾನಕ್ಕೆ ಸೇರಿದ ಅನೇಕ ಪೌರಾಣಿಕ ಕಥೆಗಳಿವೆ. ಪ್ರಾಚೀನ ಕಾಲದಲ್ಲಿ ಕೋಲಾ ಎನ್ನುವ ಮಹರ್ಷಿ ಒಂದು ದೈತ್ಯ ರಾಕ್ಷಸನಿಗೆ ಬಲಿಯಾಗುತ್ತಾರೆ. ಆ ರಾಕ್ಷಸನು ಹೆಚ್ಚು ಶಕ್ತಿ ಪಡೆಯುವ ನಿಟ್ಟಿನಲ್ಲಿ ತಪಸ್ಸು ಮಾಡುತ್ತಿದ್ದನು, ಶ್ರೀ ಮೂಕಾಂಬಿಕೆಯು ಸರಸ್ವತಿ ರೂಪದಲ್ಲಿ ಆ ರಾಕ್ಷಸನು ತನ್ನ ಇಚ್ಛೆಯನ್ನು ದೇವರ ಮುಂದೆ ಪ್ರಕಟಗೊಳಿಸದಂತೆ ಆತನನ್ನು ಮೂಕನನ್ನಾಗಿ ಮಾಡಿದಳು.

  ಶ್ರೀಕ್ಷೇತ್ರ ಉಜ್ಜೈನ್ - ಉಜ್ಜಯಿನಿ

ಮೂಕಾಸುರ

ಮೂಕನಾದರಿಂದ ಆ ರಾಕ್ಷಸನ ಹೆಸರು ಮೂಕಾಸುರವೆಂದಾಯಿತು. ಮೂಕನಾದ ಕಾರಣ ಆತಂಕಕ್ಕೊಳಗಾಗಿ ಆತನು ಋಷಿಮುನಿಗಳಿಗೆ ಕಾಟ ನೀಡಲಾರಂಭಿಸಿದನು. ಆಗ ಪಾರ್ವತಿಯು ಶಕ್ತಿಯ ರೂಪದಲ್ಲಿ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಹಾಗಾಗಿ ದೇವಿಯ ಹೆಸರು ಮೂಕಾಂಬಿಕೆ ಎಂದಾಯಿತು. ಕೋಲಾ ಮಹರ್ಷಿಯ ಹೆಸರಿನಿಂದ ಊರಿನ ಹೆಸರು ಕೊಲ್ಲೂರು ಎಂದಾಯಿತು.

ಯಾವಾಗಭೇಟಿನೀಡುವುದು_ಸೂಕ್ತ

ಇದೊಂದು ಪ್ರಸಿದ್ಧ ದೇವಸ್ಥಾನವಾಗಿದ್ದು, ವರ್ಷವಿಡೀ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಹವಾಮಾನದ ಪ್ರಕಾರ, ಬೇಸಿಗೆ ಕಾಲದಲ್ಲಿ ಈ ಸ್ಥಳವು ತುಂಬಾ ಬಿಸಿಯಾಗಿರುತ್ತದೆ. ಇಲ್ಲಿಗೆ ಹೋಗಲು ಸೂಕ್ತ ಸಮಯವೆಂದರೆ ನವೆಂಬರ್ ಮಧ್ಯದಿಂದ ಮಾರ್ಚ್ ಮಧ್ಯದವರೆಗೆ, ತಾಪಮಾನವು ತುಂಬಾ ಅನುಕೂಲಕರವಾಗಿರುತ್ತದೆ.

ಇತರ_ಆಕರ್ಷಣೆಗಳ

ಮುಕಾಂಬಿಕಾ ದೇವಾಲಯವು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ. ಅಲ್ಲಿ ನೀವು ಅನೇಕ ಮಹಾನ್ ತಾಣಗಳನ್ನು ಅನ್ವೇಷಿಸಬಹುದು. ಇಲ್ಲಿ ನೀವು ಕಾಶಿ ತೀರ್ಥಕ್ಕೆ ಭೇಟಿ ನೀಡಬಹುದು. ಇದು ನದಿಯ ಗೋಳವಾಗಿದ್ದು, ನಿಮ್ಮ ಕುಟುಂಬ ಸ್ನೇಹಿತರೊಂದಿಗೆ ನೀವು ಉತ್ತಮ ಸಮಯ ಕಳೆಯಬಹುದು.

ಇದು ಮೂಕಾಂಬಿಕಾ ದೇವಸ್ಥಾನದಿಂದ ಕೇವಲ 1 ಕಿ.ಮೀ ದೂರದಲ್ಲಿದೆ. ಇದಲ್ಲದೆ, ನೀವು ಅನೆಗುಡ್ಡ ವಿನಾಯಕ ದೇವಸ್ಥಾನದ ಭೇಟಿಯನ್ನೂ ಮಾಡಬಹುದು. ನೀವು ಕೊಡಚಾದ್ರಿ ಬೆಟ್ಟ, ಮುಕಾಂಬಿಕ ವನ್ಯಜೀವಿ ಧಾಮ, ಮರವಂತೆ ಬೀಚ್ ಇತ್ಯಾದಿಗಳನ್ನು ಭೇಟಿ ಮಾಡಬಹುದು.

ತಲುಪುವುದು_ಹೇಗೆ?

ತಲುಪುವುದು ಹೇಗೆ?
ಕೊಲ್ಲೂರು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿದೆ, ಅಲ್ಲಿ ನೀವು ಮೂರು ಸಾರಿಗೆ ವ್ಯವಸ್ಥೆಗಳ ಸಹಾಯದಿಂದ ತಲುಪಬಹುದು, ಹತ್ತಿರದ ವಿಮಾನ ನಿಲ್ದಾಣವು ಮಂಗಳೂರು ವಿಮಾನ ನಿಲ್ದಾಣವಾಗಿದೆ. ರೈಲ್ವೆ ಮಾರ್ಗಕ್ಕಾಗಿ ನೀವು ಬಿಜೂರ್ ರೈಲು ನಿಲ್ದಾಣದ ಸಹಾಯ ಪಡೆಯಬಹುದು. ನಿಮಗೆ ಬೇಕಾದರೆ ರಸ್ತೆಯ ಮೂಲಕ ಇಲ್ಲಿಗೆ ತಲುಪಬಹುದು. ಕೊಲ್ಲೂರು ಉತ್ತಮ ರಸ್ತೆಗಳೊಂದಿಗೆ ರಾಜ್ಯದ ದೊಡ್ಡ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

  ಭರತ ಹುಣ್ಣಿಮೆ ದಿನ ಸವದತ್ತಿ ಯಲ್ಲಮ್ಮನ ಜಾತ್ರೆ

🔯 ಆಧ್ಯಾತ್ಮಿಕ ವಿಚಾರ.📖🔯

ಕೇರಳದ ಜನರಿಗೆ ಯಾಕೆ ಕೊಲ್ಲೂರ ಮೂಕಾಂಬಿಕೆ ಕುಲದೇವರು..?

ಅದು ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು. ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಎಳವೆಯ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ ‘ ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ ? ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ?” ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ” ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸಿನಿಂದ ನನ್ನನ್ನು ಜ್ಞಾನಿಸು, ನೀನು ಜ್ಞಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾನಡೆಸಿಕೊದುತ್ತೇನೆ” ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸೀನಲ್ಲೆ ಸಾವಿನ ಮಂಚದಿಂದ ಮಗನನ್ನು ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು!!.
ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ. ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ ತಾಯಿಯ ಸಾವು. ತಾನು ಸನ್ಯಾಸಿಯಾಗಿ ತಾಯಿಯ ಹೆಣವನ್ನು ಸಂಸ್ಕಾರ ಮಾಡುವ ಹಾಗಿಲ್ಲ. ತನ್ನ ತಾಯಿ ವಿಧವೆ ಅನ್ನುವ ಕಾರಣಕ್ಕೆ ಊರ ಮಂದಿ ಯಾರೂ ಸಹಾಯ ಮಾಡುವುದಿಲ್ಲ. ಇನ್ನು ಕೆಲವರು ಸಹಾಯ ಮಾಡಲು ಬಂದವರನ್ನು ಸಹಾಯ ಮಾಡಲು ಬಿಡುವುದಿಲ್ಲ. ನಿಸಾಹಯಕರಾಗಿ ತಾಯಿ ಕೊಲ್ಲೂರ ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ. ತಾಯಿ ದೇಹ ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ. ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ. ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ. ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ‘ ಮಂಗಳ ಪ್ರದಾಯಿನಿಯಾದ ಕೊಲ್ಲೂರ ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ಪರಿಮಾರ್ಜನೆಯ ದಾರಿ ತೋರಿಸುತ್ತಾರೆ.
ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶರುವಾಗುತ್ತದೆ…🙏

Leave a Reply

Your email address will not be published. Required fields are marked *

Translate »