ಜೋಗದಲ್ಲಿರುವ ದ್ವಿಮುಖಿ ಚಾಮುಂಡೇಶ್ವರಿ..!
ಇದು ಎರಡು ಮುಖ ಇರುವ ಚಾಮುಂಡಿ ಅಲ್ಲ. ಚತುರ್ಮುಖ ಬಸದಿಯಲ್ಲಿ ನಾಲ್ಕು ದಿಕ್ಕಿನಿಂದ ನೋಡುವಂತೆ ಏಕಶಿಲೆಯ ವಿಗ್ರಹ ಪ್ರತಿಷ್ಠಾಪಿಸಿದಂತೆ, ಈ ಚಾಮುಂಡಿ ವಿಗ್ರಹವಿದೆ.
ಒಂದೇ ಶಿಲೆಯಲ್ಲಿ ಹಿಂದೆ, ಮುಂದೆ ಎರಡೂ ಕಡೆ ಶಿಲ್ಪಿಯು ಚಾಮುಂಡಿಯನ್ನು ಕಡೆದಿದ್ದಾನೆ. ದೇವಿಯ ಎದುರು ಭಾಗದ ಮುಖ ಸೌಮ್ಯತೆಯಿಂದ ಕೂಡಿದ್ದರೆ, ಹಿಂಭಾಗದ
ಮುಖ ಸ್ವಲ್ಪ ರೌದ್ರವತಾರದಿಂದ ಕೂಡಿದೆ. ಭಕ್ತಾದಿಗಳಿಗೆ ಎರಡೂ ಮುಖ ದರ್ಶನ ಮಾಡಲನುವಾಗುವಂತೆ ಎರಡೂ ಕಡೆ ಬಾಗಿಲುಗಳಿವೆ.
ಇದು ಬಹಳ ಪುರಾತನವಾದ ಅತಿ ವಿರಳವಾದ, ಶಿಲ್ಪ ಕೆತ್ತನೆ.
ಇದರ ಬಗ್ಗೆ ಸ್ಥಳಪುರಾಣ..,
“ಹಿಂದೆ ಮಹಾತ್ಮಾಗಾಂಧಿ ವಿದ್ಯುದಾಗಾರ ನಿರ್ಮಾಣಕ್ಕಾಗಿ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್, ದಿವಾನರಾಗಿದ್ದ ಶ್ರೀ ವಿಶ್ವೇಶ್ವರಯ್ಯನವರು ಜೋಗದ ಎತ್ತರ ಪ್ರದೇಶದಲ್ಲಿದ್ದ ದೊಡ್ಡ ಬಂಡೆಯೊಂದರ ಮೇಲೆ ಕುಳಿತು ಹಿರೆಭಾಸ್ಕರ ಡ್ಯಾಂ ಮತ್ತು ವಿದ್ಯುದಾಗರ ನಿರ್ಮಿಸುವ ಬಗ್ಗೆ ಚರ್ಚಿಸಿ, ಅದನ್ನು ಕಟ್ಟಲು ತೀರ‍್ಮಾನಿಸಿ ಮೈಸೂರಿಗೆ ಹಿಂದಿರುಗಿದರು. (ಆ ಬಂಡೆ ಈಗ “ರಾಜ ಕಲ್ಲು” ಎಂದು ಖ್ಯಾತಿ ಪಡೆದಿದೆ!) ಚಾಮುಂಡಿ ಆರಾಧಕರಾಗಿದ್ದ ಮಹಾರಾಜರಿಗೆ,
ಅಂದು ರಾತ್ರಿ ಕನಸಿನಲ್ಲಿ ದೇವಿ ಕಾಣಿಸಿಕೊಂಡು
“ಅಲ್ಲಿನ ನೀರಿನಲ್ಲಿ ನಾನು ಮುಳುಗಿ ಹೋಗಿದ್ದೇನೆ. ಜತನದಿಂದ ವಿಗ್ರಹ ಮುಕ್ಕಾಗದಂತೆ ತೆಗೆದು ನನ್ನನ್ನೆತ್ತಿ ತಂದು ಮೇಲ್ಭಾಗದಲ್ಲಿ ಗುಡಿ ಕಟ್ಟಿಸಿ ಪೂಜೆಯ ವ್ಯವಸ್ಥೆ ಮಾಡಿ” ಎಂದು ಆದೇಶಿಸಿದಳು.
ಅಂತೆಯೇ ನದಿಯ ನೀರಿನಲ್ಲಿ ಹುಡುಕಿಸಿದಾಗ ದೇವಿಯ ವಿಗ್ರಹ ಕಾಣಿಸಿತು.! ವಿಗ್ರಹವನ್ನು ಮೇಲೆತ್ತಿ ನೋಡಿದವರಿಗೆ ಅಚ್ಚರಿ ಕಾದಿತ್ತು.!!
ಹಿಂದೂ-ಮುಂದೂ ದೇವಿಯ ಸುಂದರ ಮೂರ್ತಿ!!
ನೀರಿನಿಂದ ತೊಳೆದು ಅಲ್ಲಿಯೇ ಪೂಜಿಸಿದರು. ನಂತರ ಮೇಲ್ಭಾಗದಲ್ಲಿ ಸಣ್ಣ ಗುಡಿಕಟ್ಟಿ ಪ್ರತಿಷ್ಠಾಪನೆ ಮಾಡಿ ಪೂಜೆಗೆ ಅರ್ಚಕರನ್ನಿಟ್ಟು,
ವ್ಯವಸ್ಥೆ ಮಾಡಿದರು.
ಕೆಲವು ವರ್ಷಗಳ ನಂತರ ಶರಾವತಿ ವಿದ್ಯುತ್ ಯೋಜನೆಯ ಕಾಲದಲ್ಲಿ ಕೆಲಸಕ್ಕೆ ವಿಘ್ನಗಳಾಗ ತೊಡಗಿ, “ದೇವಿಯ ಗುಡಿ ಸರಿಯಿಲ್ಲ. ಅದರಿಂದಲೇ ಹೀಗಾಗುತ್ತಿದೆ ಎಂದು ಮುಖ್ಯ ಅಭಿಯಂತರರಿಗೆ ದೇವೀ ಪ್ರೇರಣೆಯಾಗಿ, ಕೆಪಿಸಿ ಉದ್ಯೋಗಿಗಳೆಲ್ಲ ವಂತಿಗೆ ಹಾಕಿ ಈಗಿರುವ ದೇವಸ್ಥಾನ ಕಟ್ಟಿ ಪುನರ್ಪ್ರತಿಷ್ಠೆ ಮಾಡಿಸಿದರು.
ಮುಖ್ಯ ಇಂಜನಿಯರ್
ದೇವಸ್ಥಾನದ ಆಡಳಿತಕ್ಕೆ ಸಮಿತಿಯೊಂದನ್ನು ನೇಮಿಸಿದರು. ಅಂದಿನಿಂದ ಈ ವರೆಗೂ ಬದಲಾಗುತ್ತಿರುವ ಸದಸ್ಯರ ಸಮಿತಿಯೇ ಆಡಳಿತ ನಡೆಸುತ್ತಿದೆ.ವರ್ಷಕ್ಕೊಮ್ಮೆ ಶತಚಂಡಿಯಾಗ,
ವರ್ಧಂತ್ಯುತ್ಸವ,
ಹಬ್ಬಹರಿದಿನಗಳಲ್ಲಿ,
ನವರಾತ್ರಿಯಲ್ಲಿ ವಿಶೇಷ ಪೂಜಾದ್ಯುತ್ಸವ, ಚಂಡಿಹೋಮಾದಿಗಳು ನಡೆಯುತ್ತಿವೆ.
ಮೈಸೂರಿನ ಅರಸರು ಪತ್ನೀ ಸಮೇತರಾಗಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!
ಅಡ್ಮಿನ್ ಬಳಗ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಅರಿವು ಮತ್ತು ಅಗತ್ಯತೆ ನಮ್ಮ ಸಮಾಜಕ್ಕಿದೆ.
ಈ ಬಗ್ಗೆ ನಿರಂತರ ಮಾಹಿತಿ ಹಂಚಿಕೆ ನಮ್ಮಿಂದ ನಿಮಗಾಗಿ ಇರಲಿದೆ.ನಮ್ಮ ಸಂಪಾದಕೀಯ ಶಾಖೆ ಮಂಗಳೂರು.
ಮೊಬೈಲ್ +919945295560.
ಮುಖ್ಯ ಕಛೇರಿ ಯುರೋಪ್. ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಆಧ್ಯಾತ್ಮಿಕ ವಿಚಾರದ ಉಪಯುಕ್ತ ಮಾಹಿತಿಯ ಲಿಂಕ್ ಇಲ್ಲಿದೆ. WhatsApp:https://https://chat.whatsapp.com/FqUi1KzYPujLPayVNuTxRR
⬆️ಇಲ್ಲಿ ಕ್ಲಿಕ್ ಮಾಡಿ.