ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶನೈಶ್ಚರ / ಶನಿ ಅನುಗ್ರಹಕ್ಕೆ 10 ಸರಳ ಮಾರ್ಗಗಳು

ಶನೈಶ್ಚರ ಸ್ವಾಮಿಯ ಅನುಗ್ರಹಕ್ಕೆ 10 ಸರಳ ಮಾರ್ಗಗಳು…

ನವಗ್ರಹಗಳ ಪೈಕಿ ಶನೈಶ್ಚರ ಎಂದರೆ ಜನ ಸಾಮಾನ್ಯರಲ್ಲಿ ಅತಂಕ ಶುರುವಾಗುತ್ತದೆ ಮತ್ತು ಶನಿ ಅಂದರೆ ತೊಂದರೆ ಅಂತಲೂ ಭಾವಿಸುವವರಿದ್ದಾರೆ. ಆದರೆ ಈ ಭಾವನೆ ಪೂರ್ಣ ಸತ್ಯವಲ್ಲ. ಶನಿ ಮಹರ್ದಶೆ ಹಾಗೂ ಗೋಚಾರದಲ್ಲಿ ಉತ್ತಮ ಸ್ಥಿತಿಯಲ್ಲಿರುವಾಗ ಸಕಲ ಸಂಪತ್ತು, ಆಯುಷ್ಯ ಹಾಗೂ ಆರೋಗ್ಯ ದಯಪಾಲಿಸುತ್ತಾನೆ ಶನೈಶ್ಚರ ಸ್ವಾಮಿ.

ಇನ್ನೊಂದು ವಿಚಾರ ನೆನಪಿಟ್ಟುಕೊಳ್ಳಿ, ಧರ್ಮದ ಹಾದಿ ಬಿಟ್ಟು ನಡೆದರೆ ಶನಿಯ ದುಷ್ಪ್ರಭಾವವನ್ನು ಅನುಭವಿಸಬೇಕಾಗುತ್ತದೆ. ಇನ್ನೊಬ್ಬರಿಗೆ ಕೇಡು ಬಗೆಯುವ ಆಲೋಚನೆ ಕೂಡ ಮಾಡಬೇಡಿ. ನಮ್ಮ ರಾಶಿಗೆ ಶನಿಯು ಯಾವ ರೀತಿ ಪ್ರಭಾವ ಬೀರುತ್ತಿದ್ದಾನೆ ಅನ್ನೋದನ್ನು ತಿಳಿದುಕೊಳ್ಳಿ. ಅದು ಹೇಗೆ ಅಂತೀರಾ?
ಇದನ್ನು ಓದಿದರೆ ಶನಿಯು ನಿಮ್ಮ ರಾಶಿಗೆ ಯಾವ ರೀತಿಯ ಫಲ ನೀಡಲಿದ್ದಾನೆ ಎಂದು ತಿಳಿಯುತ್ತದೆ. ಅಗ ಆತನ ಪ್ರಭಾವ ಒಳ್ಳೆ ರೀತಿಯಲ್ಲಿ ಆಗಲು, ತೀಕ್ಷ್ಣತೆ ಕಡಿಮೆ ಆಗುವುದಕ್ಕೆ ಈ ಲೇಖನದಲ್ಲಿ ಅತ್ಯುತ್ತಮ ಸಲಹೆಗಳನ್ನು ಕೊಡಲಾಗಿದೆ.
‌ ‌ ‌ ಸಾಡೇಸಾತ್, ಪಂಚಮ, ಚತುರ್ಥ ಹಾಗೂ ಅಷ್ಟಮ ಸ್ಥಾನಗಳಲ್ಲಿ ಈಗ ಶನಿ ಸಂಚಾರ ಆಗುತ್ತಿರುವ ರಾಶಿಗಳವರು ಮಾಡಿಕೊಳ್ಳಬೇಕಾದ ಶನಿಯ ಶಾಂತಿ ಕ್ರಮಗಳನ್ನು ಅನುಸರಿಸಿ. ನಿಮ್ಮ ಬದುಕು ಬಂಗಾರವಾಗಲಿ…

  ತ್ರಿಕೂಟೇಶ್ವರ ದೇವಸ್ಥಾನ ಗದಗ

ಆಂಜನೇಯನಿಗೆ ಉದ್ದಿನವಡೆ ಹಾರ
ನಿಮ್ಮ ಮನೆಯ ಬಳಿಯೋ ಅಥವಾ ಮನೆ ದೇವರ ಗುಡಿಯಲ್ಲಿ ಆಂಜನೇಯ ಮೂರ್ತಿಯಿದ್ದರೆ ಶನಿವಾರದಂದು ದೇಗುಲದಲ್ಲಿ ಸ್ವಾಮಿಗೆ ಉದ್ದಿನವಡೆ ಹಾರ ಮಾಡಿಸಿ ಹಾಕಿ ಹಾಗೂ ಎಳ್ಳುಬೆಲ್ಲದ ನೈವೇದ್ಯ ಮಾಡಿಸಿ.

ಶನೈಶ್ಚರ ವ್ರತ ಮಾಡಿಸಬಹುದು
ಎಷ್ಟೋ ಜನರಿಗೆ ತಿಳಿದಿಲ್ಲ. ಸತ್ಯನಾರಾಯಣ ಪೂಜೆ ವಿಧಾನದಲ್ಲಿಯೇ ಶನೈಶ್ಚರ ವ್ರತ ಎಂದು ಸಹ ಇದೆ. ಈ ವ್ರತವನ್ನು ಶನಿವಾರದಂದು, ಜನ್ಮ ನಕ್ಷತ್ರ ಬಂದಾಗ ಅಥವಾ ಶನಿವಾರದಂದೇ ಮಾಡಿಸಿದರೆ ಉತ್ತಮ. ಶೀಘ್ರವಾಗಿ ಶನಿ ಕಾಟದಿಂದ ಪರಿಹಾರ ಪಡೆಯ ಬಹುದು.

ರುದ್ರ ಹವನ ಮಾಡಿಸಿ
ಪೂರ್ವಾರ್ಜಿತ ಕರ್ಮ ಫಲ ಅಂದರೆ ಹಿಂದಿನ ಜನುಮದ ಪಾಪ ಶೇಷ ಹೆಚ್ಚಿದ್ದರೆ ಈ ಜನುಮದಲ್ಲಿ ಶನಿ ಕಾಟ ಹೆಚ್ಚು ಇರುತ್ತದೆ. ಆದುದರಿಂದ ಹಿಂದಿನ ಜನುಮದ ಪಾಪ ಪರಿಹಾರಕ್ಕಾಗಿ ಕರಿ ಎಳ್ಳು ಹಾಗೂ ಭತ್ತಕ್ಕೆ ಶುದ್ಧ ಹಸುವಿನ ತುಪ್ಪ ಬೆರೆಸಿ, ರುದ್ರ ಹವನ ಮಾಡಿಸಿ

ದತ್ತಾತ್ರೇಯ ವಜ್ರಕವಚ ಸ್ತೋತ್ರ ಪಠಣ
ಪ್ರತಿ ದಿನ ತಪ್ಪದೇ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರ ಪಠಣ ಮಾಡಿದರೆ ಶನಿ ಕಾಟದಿಂದ ರಕ್ಷಣೆ ದೊರೆಯುತ್ತದೆ

ಕರಿ ಎಳ್ಳು ದಾನ
ಬ್ರಾಹ್ಮಣ ಪುರೋಹಿತ ಅಥವಾ ಅರ್ಚಕರಿಗೆ ಶನಿವಾರದಂದು ಕಬ್ಬಿಣದ ಬಾಂಡಲಿಯಲ್ಲಿ ಪರಿಶುದ್ಧವಾದ ಹಾಗೂ ಅಡುಗೆ ಮಾಡಲು ಉಪಯುಕ್ತವಾದ ಎಳ್ಳಎಣ್ಣೆ ದಕ್ಷಿಣೆ ಸಹಿತ ದಾನ ಮಾಡಿ. ನೀವು ಕೊಡುವ ಈ ದಾನ ತನಗೆ ನಿತ್ಯ ಬಳಸಲು ಬರದ ಕಾರಣ ಒಂದು ಪಕ್ಷ ದಾನ ತೆಗೆದುಕೊಳ್ಳಲು ಅವರು ನಿರಾಕರಿಸಿದರೆ ಹೊಸದಾದ ಸ್ಟೇನ್ ಲೆಸ್ ಸ್ಟೀಲ್ ತಟ್ಟೆಯಲ್ಲಿ ಸ್ವಲ್ಪ ಕರಿ ಎಳ್ಳು ಇಟ್ಟು ದಕ್ಷಿಣೆ ಸಹಿತ ದಾನ ಮಾಡಿ.

  ಪ್ರಜಾಕೀಯ - ಸಮಗ್ರ ಗ್ರಾಮ ಪಂಚಾಯಿತಿ

ಹತ್ತಿಯ ಬತ್ತಿಯಲ್ಲಿ ದೀಪ ಹಚ್ಚಿ
ನಿಮ್ಮ ಮನೆಯ ಹತ್ತಿರದ ನವಗ್ರಹ ದೇಗುಲದಲ್ಲಿ ಅಥವಾ ಅದೇ ದೇಗುಲದ ಆವರಣದ ದೊಡ್ಡ ಮರದ ಬುಡದಲ್ಲಿ ಹೆಚ್ಚು ಗಾಳಿ ಆಡದ ವ್ಯವಸ್ಥೇ ಮಾಡಿ, ಅಲ್ಲಿ ಕಬ್ಬಿಣದ ಬಾಂಡಲಿ ನಲ್ಲಿ ಪರಿಶುದ್ಧ (ಅಡುಗೆಗೆ ಬಳಸುವ ಗುಣಮಟ್ಟದ್ದು) ಎಳ್ಳು ಎಣ್ಣೆ ಹಾಕಿ ಅದರಲ್ಲಿ ನಿಮ್ಮ ಮುಖ ನೋಡಿ, ಹತ್ತಿಯ ಬತ್ತಿ ಹಾಕಿ ದೀಪ ಹಚ್ಚಿ.

ಶನಿದೇವರಿಗೆ ತೈಲಾಭಿಷೇಕ
ಇನ್ನು ಶನಿವಾರಗಳಂದು ಶನಿ ದೇಗುಲದಲ್ಲಿ ಸ್ವಾಮಿಗೆ ಪರಿಶುದ್ಧ ಎಳ್ಳು ಎಣ್ಣೆಯಲ್ಲಿ ತೈಲಾಭಿಷೇಕ ಮಾಡಿಸಿ. ಆ ಸಮಯದಲ್ಲಿ ನೀವು ಖುದ್ದಾಗಿ ಇದ್ದು, ಕುಟುಂಬ-ಪರಿವಾರದವರ ಸಂಕಲ್ಪ ಮಾಡಿಸಿದರೆ ಒಳ್ಳೆಯದು.

ಶನೈಶ್ಚರ ಅಷ್ಟೋತ್ತರ ಪಠಿಸಿ
ಸ್ನಾನ ನಂತರ ಮನೆಯಲ್ಲಿಯೋ ಅಥವಾ ಪ್ರಶಾಂತ ಎನಿಸುವಂಥ ಸ್ಥಳದಲ್ಲಿ ಕೂತು ಪ್ರತಿ ದಿನ ಶನೈಶ್ಚರ ಅಷ್ಟೋತ್ತರ ಪಠಿಸಿ. ನೆನಪಿಡಿ, ಸ್ಥಳದ ಆಯ್ಕೆ ಬಹಳ ಮುಖ್ಯ. ಮನಸ್ಸಿನ ಉದ್ದೇಶ ಕದಡುವಂಥ ಕಡೆ ಬೇಡ.

  ತುಮಕೂರಿನ ಮಧುಗಿರಿ ಲಿಂಗಾಪುರದ ಶ್ರೀಕೊಳಗ ಮಹಾಲಕ್ಷ್ಮಿ ದೇವಾಲಯ

ದಶರಥ ಕೃತ ಶನಿ ಸ್ತೋತ್ರ
ಮತ್ತೊಂದು ಸ್ತೋತ್ರ ಪಠಣ ಇದೆ. ಈ ಸ್ತೋತ್ರ ರಚನೆ ಮಾಡಿರುವುದು ದಶರಥ. ಆ ಕಾರಣದಿಂದ ಅದನ್ನು ದಶರಥ ಕೃತ ಶನಿ ಸ್ತೋತ್ರ ಎಂದು ಕರೆಯುತ್ತಾರೆ. ಅದನ್ನು ಪ್ರತಿದಿನ ಪಠಿಸಿ

ಶನೈಶ್ಚರ ಶಾಂತಿ ಹವನ
19000 ಸಂಖ್ಯೆಯಲ್ಲಿ ಶನಿ ಮಂತ್ರದ ಜಪ ಮಾಡಿಸಿ, ಅದರ ದಶಾಂಶ ಅಂದರೆ ಹತ್ತನೇ ಒಂದು ಭಾಗದಷ್ಟು ಸಂಖ್ಯೆಯಲ್ಲಿ ಕೃಸರಾನ್ನ ಹಾಗೂ ಶಮಿ ಸಮಿಧ, ಆಜ್ಯ ಈ ದ್ರವ್ಯಗಳಲ್ಲಿ ಶನಿ ಶಾಂತಿ ಹವನ, ನಂತರ ಅದೇ ದಶಾಂಶ ವಿಧಾನದಲ್ಲಿ ತರ್ಪಣ ಪರೋಕ್ಷಣ ಹಾಗೂ ಪ್ರಾಶನ ಮಾಡಿದರೆ ಅತ್ಯಂತ ಶೀಘ್ರ ಹಾಗೂ ಅತ್ಯತ್ತಮ ನಿರೀಕ್ಷಿತ ಫಲಗಳನ್ನು ಕೊಡುತ್ತವೆ.

Leave a Reply

Your email address will not be published. Required fields are marked *

Translate »