ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ಸಮಗ್ರ ಗ್ರಾಮ ಪಂಚಾಯಿತಿ

ಎಲ್ಲಾ ಸಮಸ್ಯೆಗೆ ಒಂದೇ ಉತ್ತರ.

Integrated Grama Panchayats- ಸಮಗ್ರ ಗ್ರಾಮ ಪಂಚಾಯಿತಿ.

ರಾಜ್ಯ ಹಾಗು ಕೇಂದ್ರ ಸರಕಾರದ ಮೈಕ್ರೋ ಮೇನೇಜ್ಮೆಂಟ್ ಕೇಂದ್ರ – ಗ್ರಾಮ ಪಂಚಾಯಿತಿ. ಇದೇ ರಾಜ್ಯದ- ದೇಶದ ಬೇರು. ಅಬಿವ್ರಧ್ಧಿ ಇಲ್ಲಿಂದಲೇ ಪ್ರಾರಂಭವಾಗ ಬೇಕು.

ಹೇಗೇ ?

ಸುಮಾರು 5 ರಿಂದ 10 ಎಕ್ರೆ ಸರಕಾರಿ ಜಾಗವನ್ನು ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಗುರುತಿಸಿ ಈ ಯೋಜನೆಯನ್ನು ಪ್ರಾರಂಭಿಸಬೇಕು.

ಸರ್ಕಾರಿ ಸ್ಥಳ ಇಲ್ಲವಾದರೆ, ಸರಕಾರದಿಂದ ಖಾಸಾಗಿ ಸ್ಥಳವನ್ನು ಖರೀದಿಸಬೇಕು.

ಇದರಲ್ಲಿ

1. ಅಂಗನವಾಡಿಯಿಂದ 12ನೇ ತರಗತಿಯವರೆಗೆ ಸುಮಾರು 2000 ವಿಧ್ಯಾರ್ಥಿಗಳಿಗೆ ಬೇಕಾಗುವಷ್ಟು ದೊಡ್ಡ ಅತ್ಯಾಧುನಿಕ ತಂತ್ರ ಜ್ಞಾನವನ್ನು ಅಳವಡಿಸಿ ಸರ್ಕಾರಿ ಶಾಲೆ ನಿರ್ಮಾಣವಾಗ ಬೇಕು. ಇದರಲ್ಲಿ ಸುಮಾರು 3 ಎಕ್ರೆ ಸ್ಥಳ ಪ್ಲೇಗ್ರೌಂಡ್ಗಾಗಿ ರಿಸರ್ವ್ ಮಾಡ ಬೇಕು. ಇಲ್ಲಿ ಎಲ್ಲಾ ರೀತಿಯ ಸೌಕರ್ಯ- ಮಕ್ಕಳಿಗೆ ಹಾಗು ಟೀಚರ್ಗಳಿಗೆ ಸಂಪೂರ್ಣ ಸಾರಿಗೆ ವ್ಯವಸ್ಥೆ ಮಾಡ ಬೇಕು. ಸಮಗ್ರ ಯೋಜನೆಯನ್ನು ತಯಾರಿಸಬೇಕು. ಶಾಲಾ ಮೈದಾನದಲ್ಲಿ ಎಲ್ಲಾ ರೀತಿಯ ಕ್ರೀಡೆಗಳಿಗೆ ಬೇಕಾದ ವ್ಯವಸ್ಥೆ ಇರಬೇಕು. ಹಾಗು ಒಂದು ಸ್ವಿಮ್ಮಿಂಗ್ ಪೂಲ್ ಕೂಡಾ ಇರಬೇಕು.

ಕನ್ನಡ ಹಾಗು ಇಂಗ್ಲೀಷ್ ಭಾಷೆಯನ್ನು ಅಂಗನವಾಡಿಯಿಂದಲೇ ಪ್ರಾರಂಭಿಸಿ, ವಿಧ್ಯಾರ್ಥಿಗಳು ಎರಡರಲ್ಲೂ ಮಾತನಾಡುವಂತೆ ನೋಡಿ ಕೊಳ್ಳಬೇಕು.

2. ಅತ್ಯಾಧುನಿಕ ಆರೋಗ್ಯ ಕೇಂದ್ರವೂ ಇದೆ ಕಾಂಪ್ಲೆಕ್ಸ್ ನಲ್ಲಿ ಕನಿಷ್ಟ 12 ಮೆಟೆರ್ನಿಟಿ ಬೆಡ್ ನಿಂದ ಕೂಡಿರಬೇಕು.
ಇಲ್ಲಿ ಒಬ್ಬ ಸರ್ಜನ್, ಒಬ್ಬ ಜಿ.ಪಿ. ಹಾಗು ಇಬ್ಬರು ಗೈನಾಕಾಲಜಿಸ್ಟ್ ಹಾಗು ಉಳಿದ ಸಿಬ್ಬಂದಿ ವರ್ಗ ಇರಬೇಕು.

  ಉತ್ತಮ ಪ್ರಜಾಕೀಯಾ ಪಕ್ಷ - ರಾಜಕಾರಣಿಗಳ ಹಣೆಬರಹ

ಲ್ಯಾಬ್, X ray ಹಾಗು ಸ್ಕ್ಯಾನಿಂಗ್ ಫೆಸಿಲಿಟಿ ಇರಬೇಕು. ಇದಕ್ಕೆ ಬೇಕಾದ ಸಿಬ್ಬಂದಿ ವರ್ಗ ಇರಬೇಕು.

ಈ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ವ್ಯವಸ್ಥೆ ಹಾಗು ಹೊರ ರೋಗಿಗಳ ಟ್ರಿಟ್ಮೆಂಟ್ ವ್ಯವಸ್ಥೆ ಇರಬೇಕು.

3. ಈ ಕಾಂಪ್ಲೆಕ್ಸ್ ನಲ್ಲಿ ಒಂದು ಸಾವಿರ ಜನರಿಗೆ ಕುಳಿತು ಕೊಳ್ಳಲು ಸಾಧ್ಯವಾಗುವಂತಹ ಒಂದು ಕಮ್ಯುನಿಟಿ ಸಭಾಗ್ರಹವಿರಬೇಕು. ಇದನ್ನು ಆ ಗ್ರಾಮದ ಜನರು ಮದುವೆ- ಸಮಾರಂಭಗಳಿಗೆ ಸಣ್ಣ ಬಾಡಿಗೆಯೊಂದಿಗೆ “First come First” ರೀತಿಯಲ್ಲಿ ವ್ಯವಹರಿಸಬೇಕು. ಶಾಲೆ ಹಾಗು ಸರ್ಕಾರಿ ಕಾರ್ಯಕ್ರಮಗಳಿಗೆ ಇದನ್ನೇ ಉಪಯೋಗಿಸಬೇಕು.

4. ಪಂಚಾಯಿತಿ ಹಾಗು ರಾಜ್ಯ ಸರಕಾರದ ಎಲ್ಲಾ ಕಚೇರಿಗಳು ಈ ಕಾಂಪ್ಲೆಕ್ಸನ ಒಳಗೆ ಇರಬೇಕು. ಎಲ್ಲಾ ಸರಕಾರದ ವ್ಯವಸ್ಥೆ ಗಳು ಇಲ್ಲಿಯೇ ಪ್ರಜೆಗಳಿಗೆ ಒಂದೇ ಸ್ಥಾನದಲ್ಲಿ ದೊರಕಬೇಕು.

5. ಒಂದು ಸುಸಜ್ಜಿತ ಪೋಲೀಸ್ ಸ್ಟೇಷನ್, ಇದೆ ಕಾಂಪ್ಲೆಕ್ಸ್ನ ಒಂದು ಮೂಲೆಯಲ್ಲಿ ಸ್ಥಾಪಿಸಬೇಕು. ಸಂಪೂರ್ಣ ಗ್ರಾಮ ಪಂಚಾಯಿತಿ ಪೋಲೀಸ್ ವಿಜಿಲೆನ್ಸ್ ನಲ್ಲಿರ ಬೇಕು. ಆವಾಗ ಅನ್ಯಾಯ -ಕ್ರೈಮ್ ತನ್ನಿಂದ ತಾನೆ ಮಾಯವಾಗುವುದು. ಪೋಲೀಸರಿಗೆ ಪ್ರಜೆಗಳೊಂದಿಗೆ ಸೌಹಾರ್ಧ ದಿಂದ ನಡೆದು ಕೊಳ್ಳುವಂತೆ ತರಬೇತಿ ಕೊಡಬೇಕು. ಎಲ್ಲಾ ತರಹದ ಆಧುನಿಕ ವಾಹನ- ಉಪಕರಣಗಳನ್ನು ಒದಗಿಸ ಬೇಕು.

  ಶ್ರೀ ವಾದಿರಾಜತೀರ್ಥ ವಿರಚಿತ ಶ್ರೀ ಲಕ್ಷ್ಮಿ ಶೋಭಾನ ಪದ

6. ಇದೇ ಕಾಂಪ್ಲೆಕ್ಸ್ ನಲ್ಲಿ ಒಂದು 20 ರಿಂದ 50 ಜನರಿಗಾಗುವ ಒಂದು ” Old Age Home” ನಿರ್ಮಿಸಬೇಕು. ಶಾಲೆ ಹಾಗು ಮಕ್ಕಳ ಸಾಮಿಪ್ಯ ಇವರ ಜೀವನಕ್ಕೆ ಅತೀಯಾದ ಪ್ರೋತ್ಸಾಹ ಹಾಗು ಲವ- ಲವಿಕೆಯನ್ನು ಪ್ರಧಾನ ಮಾಡುವುದು.

7. ಒಂದು 4 – 5 ರೂಮಿನ ಸರಕಾರಿ ಗೆಸ್ಟ್ ಹೌಸ್ ಕೂಡಾ ಇರಬೇಕು. ಸರ್ಕಾರಿ ಆಫೀಸರ್ ಹಾಗು ಟೀಚರ್ಗಳ ಟ್ರಾನ್ಸ್ಫರ್ ಸಮಯದಲ್ಲಿ ತಾತ್ಕಾಲಿಕವಾಗಿ ಉಳಕೊಳ್ಳಲು ಬೇಕಾದ ವ್ಯವಸ್ಥೆ ಯಾಗುವುದು.

Note:- 6100 ಗ್ರಾಮ ಪಂಚಾಯಿತಿಯಲ್ಲಿ ಈ ವ್ಯವಸ್ಥೆ ತಯಾರಾದಾಗ ರಾಜ್ಯದ 70% ಪ್ರಜೆಗಳ ಮೂಲಭೂತ ಸೌಕರ್ಯವೂ ನೂರಕ್ಕೆ- ನೂರು ಶೇಕಡಾ ಲಭಿಸುವುದು.

ಹೀಗೆ ಉಳಿದ 30% ಪಟ್ಟಣಗಳಲ್ಲಿ ವಾಸಿಸುವ ಪ್ರಜೆಗಳಿಗೆ, ಪಟ್ಟಣದ 6000 ವಾರ್ಡ್ಗಳಲ್ಲಿ ಇಂತಹದೇ ಕಾರ್ಯಕ್ರಮವನ್ನು ಮುಂದುವರಿಸಬಹುದು.

ಇದೊಂದು “ಕ್ರಾಂತಿಕಾರಿ ಅಬಿವ್ರಧ್ಧಿ”ಯಾಗುವುದರಲ್ಲಿ ಸಂಶಯವಿಲ್ಲ.

ಇದನ್ನು 5 ವರ್ಷದಲ್ಲಿ ಸಾಧಿಸಿ ಬಹುದು. ಪ್ರತೀ ವರ್ಷ ಇದಕ್ಕಾಗಿ 35,000 – 40,000 ಸಾವಿರ ಕೋಟಿ ಮೀಸಲಿಡಬೇಕು.

ಇದು ಕರ್ನಾಟಕದ ವಾರ್ಷಿಕ ಬಜೆಟ್ನ ಕೇವಲ 15% ಆಗಿರುತ್ತದೆ. ಇಂತಹ Infrastructure ಹಾಗು growth based project ಗಳಿಗೆ IMF ಹಾಗು World Bank ಗಳು ಲೋಂಗ್ ಟೆರ್ಮ್ ಸಾಲ ಕೂಡಾ ಕೊಡುವುದು.

  ಕಗ್ಗ - ವೈಯಕ್ತಿಕ ಸ್ವಾತಂತ್ರ್ಯ - individual freedom limit

“ಮನಸ್ಸಿದ್ದರೆ ಮಾರ್ಗ “

ಈ Integrated Grama Panchayat ಯೋಜನೆಯಲ್ಲಿ ಯಾವರೀತಿಯ ನೆಗೆಟಿವ್ ಆಗಲು ಸಾಧ್ಯವೇ ಇಲ್ಲ.

ಗ್ರಾಮಗಳಲ್ಲಿ ಬೇಕಾದಷ್ಟು ಉದ್ಯೋಗವೂ ನಿರ್ಮಾಣವಾಗುವುದು. ಪಟ್ಟಣ ಪಲಾಯನವೂ ನಿಲ್ಲುವುದು.

ಪ್ರತೀ ಗ್ರಾಮದಲ್ಲಿ ಸರಕಾರದಿಂದ ಸಂಬಳ ಪಡೆಯುವವರ ಸಂಖ್ಯೆಯು ಏರಿ, ಮಾರ್ಕೇಟ್ ಕೂಡಾ ಬೆಳೆಯುವುದು.

ಇಲ್ಲಿಗೆ ಟ್ರಾನ್ಸ್ಫರ್ ಆಗುವ ಡಾಕ್ಟರ್, ಟೆಕ್ನೀಷನ್, ಆಫೀಸರ್ ಗಳಿಗೆ ಒಳ್ಳೆಯ ಸೌಕರ್ಯ- ಸೌಲಭ್ಯಗಳನ್ನು ಕೊಟ್ಟರೆ, ಅವರೂ ಗ್ರಾಮದಲ್ಲೊಬ್ಬರಾಗಿ ಪರಿವರ್ತನೆ ಹೊಂದುವರು.

ಇದು ಆಗಬೇಕಾದರೆ ಭ್ರಷ್ಟಾಚಾರವು ಸಂಪೂರ್ಣ ವಾಸಿಯಾಗ ಬೇಕು.

ಭ್ರಷ್ಟಾಚಾರವೆಂಬ ಕುಷ್ಠರೋಗ ನಮ್ಮ ರಾಜ್ಯವನ್ನೆ ರೋಗ ಗ್ರಸ್ತವಾಗಿ ಮಾಡಿದೆ.

ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯಾ ಪಕ್ಷದಿಂದ ಇದು ಖಂಡಿತಾ ಸಾಧ್ಯ. ನಾವೆಲ್ಲರೂ ಇದಕ್ಕಾಗಿ ಪಣ ತೊಟ್ಟಿರುವೆವು.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ(UPP).

Leave a Reply

Your email address will not be published. Required fields are marked *

Translate »