MLA Constituency – ವಿಧಾನ ಸಭಾ ಕ್ಷೇತ್ರ.
ಪ್ರತೀಯೊಬ್ಬ “ಅಭ್ಯರ್ಥಿ ಅಕಾಂಕ್ಷಿಯು” ತನ್ನ ಕ್ಷೇತ್ರದ ಮಾಪನೆ, ಅಲ್ಲಿರುವ ಬೇರೆ “ಪ್ರಜೆಗಳ ಪ್ರತಿನಿಧಿಗಳ” ಸಂಖ್ಯೆ, ಅದರ ಕ್ಷೇತ್ರ ಫಲ, ಅಲ್ಲಿರುವ ಪ್ರಜೆಗಳ ಸಂಖ್ಯೆ, ಇತ್ಯಾದಿಗಳ ವಿವರ ತಿಳಿಯುವುದು, ಅತೀ ಅವಶ್ಯ.
ಹಳ್ಳಿ ಪ್ರದೇಶದ ಕ್ಷೇತ್ರ
ಒಂದು ವಿಧಾನ ಸಭಾ ಕ್ಷೇತ್ರವು, ಹಳ್ಳಿ ಪ್ರದೇಶವಾದರೆ, ಸುಮಾರು 400(20X20) ಚ.ಕಿ. ನಿಂದ 600(30X20) ಚ.ಕಿ. ಆಗಿರುವುದು. ಇದರಲ್ಲಿ ಸುಮಾರು 50 ರಿಂದ 60 ಗ್ರಾಮ ಪಂಚಾಯಿತಿ ಇರುವುದು. ಇದರಲ್ಲಿ ಸುಮಾರು 600 ರಿಂದ 800 ಚುನಾಯಿತ “ಗ್ರಾಮ ಪಂಚಾಯಿತಿ ಸದಸ್ಯರು” ಇರುವರು. ಹಾಗೆ 40-50 ಚುನಾಯಿತ “ತಾಲೂಕು ಪಂಚಾಯಿತಿ ಸದಸ್ಯರು ಹಾಗು 10 ರಿಂದ 15 “ಜಿಲ್ಲಾ ಪಂಚಾಯಿತಿ ಸದಸ್ಯರು” ಇರುವರು. ಹಾಗೆ, 8 ರಿಂದ 10 “ವಿಧಾನ ಸಭಾ ಸದಸ್ಯರು” ಗಳಿಗೆ ಒಬ್ಬ ಚುನಾಯಿತ “ಲೋಕ ಸಭಾ ಸದಸ್ಯರು(MP)” ಇರುವರು.
ಅಂದರೆ, ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 700 ರಿಂದ 800, ಪ್ರಜೆಗಳಿಂದ ಚುನಾಯಿತ ಪ್ರತಿನಿಧಿಗಳು ಇರುವರು. ಅಂದರೆ ಪ್ರತೀ ಚ.ಕಿಲೋ ಮೀಟರಿಗೆ ಒಬ್ಬರಂತೆ ಇರುವರು. ಇದನ್ನು ತಿಳಿದಾಗ, ಎಲ್ಲರಿಗೂ ಆಶ್ಚರ್ಯ ಆಗುವುದು ಖಂಡಿತಾ. ಅದರಲ್ಲೂ, “ಗ್ರಾಮ ಪಂಚಾಯಿತಿ ಸದಸ್ಯರು”, ಯಾವುದೇ ಪಕ್ಷವನ್ನು ಪ್ರತಿನಿಧಿಸುವಂತಿಲ್ಲ. ಅವರು, ಯಾವುದೇ ಪಕ್ಷದ ವಿಷಯ ಮಾತನಾಡುವಂತಿಲ್ಲ. ಎಲ್ಲಾ “ಅಭ್ಯರ್ಥಿ ಅಕಾಂಕ್ಷಿಗಳು” ಇದನ್ನು ತಿಳಿದು ಕೊಳ್ಳುವುದು, ಅತೀ ಅವಶ್ಯ.
ಪಟ್ಟಣ ಪ್ರದೇಶ ಕ್ಷೇತ್ರ
ಪಟ್ಟಣ ಪ್ರದೇಶ ವಿಧಾನ ಸಭಾ ಕ್ಷೇತ್ರದಲ್ಲಿ, ಇದು, ವಿಸ್ತೀರ್ಣದಲ್ಲಿ, ತುಂಬಹ ಸಣ್ಣದಾಗಿರುವುದು. ಬೆಂಗಳೂರಿನಂತಹ ಭೃಹತ್ ನಗರದಲ್ಲಿ ಕೇವಲ 30 (5 X 6)ಚ.ಕಿ.ಮೀ. ಆಗಿರುವುದು. ಆದರೆ ಇಲ್ಲಿ ಚುನಾಯಿತ ಪ್ರತಿನಿಧಿಗಳು ತುಂಬಹ ವಿರಳ. ಬೆಂಗಳೂರಿನಲ್ಲಿ ಕೇವಲ 8 ರಿಂದ 9 ಚುನಾಯಿತ ಕಾರ್ಪರೇಟರ್ಗಳು ಇರುವರು. ಹಳ್ಳಿ ಪ್ರದೇಶದಲ್ಲಿ, ಗ್ರಾಮ ಪಂಚಾಯಿತಿ ಇದ್ದ ಹಾಗೆ, ಇಲ್ಲಿ ನಗರ ಪಾಲಿಕೆಗಳು ಇದ್ದು, ಹೆಚ್ಚಿನ ಅಭಿವೃಧ್ಧಿ ಕಾರ್ಯ, ಅವರಿಂದ ಆಗಬೇಕು.
ಸಣ್ಣ ಪಟ್ಟಣಗಳಲ್ಲಿ, ಕ್ಷೇತ್ರದ ವಿಸ್ತೀರ್ಣ ಸುಮಾರು 60(6 X 10) ಚ.ಕಿ.ಮೀ. ನಷ್ಟು ಆಗಿರುವುದು. ಆದರೆ ಅಲ್ಲಿ ಸುಮಾರು 30 ಚುನಾಯಿತ ಕೌನ್ಸಿಲರ್ಗಳು ಇರುವರು ಹಾಗು ನಗರ ಸಭೆಗಳು ಇರುವುದು.
ಆದ್ದರಿಂದ, ವಿಧಾನ ಸಭಾ ಸದಸ್ಯರು(MLA), ಇವರೆಲ್ಲರನ್ನು ಖಂಡಿತಾ, ಪ್ರಜೆಗಳ ಕೆಲಸಕ್ಕಾಗಿ ಉಪಯೋಗಿಸಿ ಕೊಳ್ಳಬೇಕು. ಇಲ್ಲಿ, ನಿಮ್ಮ-ನಿಮ್ಮ ವಿಧಾನ ಸಭಾ ಕ್ಷೇತ್ರದಲ್ಲಿ, ನೀವೊಬ್ಬರೆ ಚುನಾಯಿತ ಪ್ರತಿನಿಧಿ ಅಲ್ಲ, ಒಂದು ದೊಡ್ಡ ಚುನಾಯಿತ ಪ್ರತಿನಿಧಿಗಳ ಸಮೂಹವೇ ಇರುವುದು.
ವಿಧಾನ ಸಭಾ ಕ್ಷೇತ್ರದ ಜನ ಸಂಖ್ಯೆ
ಕರ್ನಾಟಕದ ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 2,50,000(ಎರಡುವರೆ ಲಕ್ಷ) ಮತದಾರರು ಇರುವರು.ಇದು 1,80,000 ಮತದಾರರಿಂದ 2,50,000ವರೆಗೆ ಬೇರೆ-ಬೇರೆ ಕ್ಷೇತ್ರಗಳಲ್ಲಿ ಇರುವುದು. ಹಾಗೆ ಜನ ಸಂಖ್ಯೆಯು ಸುಮಾರು 3,00,000(ಮೂರು ಲಕ್ಷ)ದ ಮೇಲೆ ಇರುವುದು
ಆದರೆ, ಬೆಂಗಳೂರಿನ ವಿಧಾನ ಸಭಾ ಕ್ಷೇತ್ರವಾದ “ಬೆಂಗಳೂರು ದಕ್ಷಿಣ” ನಲ್ಲಿ ಸುಮಾರು 6,03,000 ಮತದಾರರಿದ್ದು, ಇದು ಕರ್ನಾಟಕದ ಅತೀ ಹೆಚ್ಚು ಮತದಾರರಿರುವ ಕ್ಷೇತ್ರ ಆಗಿರುವುದು. ಹಾಗೆ ಬೆಂಗಳೂರಿನ 7 ಕ್ಷೇತ್ರಗಳಲ್ಲಿ 3,00,000 ಮತದಾರರಿಂದ ಹಿಡಿದು 4,50,000 ಮತದಾರರಿರುವರು. ಆದ್ದರಿಂದ ಈ 8 ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾರರಿರುವರು. ಉಳಿದ ಎಲ್ಲಾ 216 ಕ್ಷೇತ್ರದಲ್ಲಿ ಕೇವಲ ಸುಮಾರು 2,50,000ಮತದಾರರಿರುವರು.
ಮತದಾನ ಕೇಂದ್ರ
ಪ್ರತೀ ವಿಧಾನ ಸಭಾ ಕ್ಷೇತ್ರದಲ್ಲಿ, ಸುಮಾರು 200 ರಿಂದ 250 ಮತದಾನ ಕೇಂದ್ರ ಇರುವುದು. ಆದರೆ, ಅತೀ ಹೆಚ್ಚು ಮತದಾರರಿರುವ “ಬೆಂಗಳೂರು ದಕ್ಷಿಣ” ಕ್ಷೇತ್ರದಲ್ಲಿ 550 ಮತದಾನ ಕೇಂದ್ರಗಳಿವೆ.
ಪ್ರತೀ ಮತದಾನ ಕೇಂದ್ರದಲ್ಲಿ, ಪ್ರತಿಯೊಬ್ಬ ಮತದಾರನ ಗುರುತು ಚಿಟ್ಟಿ ಮೂಲಕ ನಿಗದಿ ಪಡಿಸಿಕೊಂಡು, ನಂತರ, ಬೆರಳಿಗೆ ಶಾಯಿ ಮಾರ್ಕ್ ಹಾಕಿ, ಮತ ಹಾಕಲು ಅವಕಾಶ ಮಾಡಿ ಕೊಡಲಾಗುವುದು. ಇದಕ್ಕೆ ಸ್ವಲ್ಪ ಸಮಯ ತಗಲುವುದರಿಂದ, ಪ್ರತೀ ಮತದಾನ ಕೇಂದ್ರದಲ್ಲಿ ಕೇವಲ 1000 ಮತದಾರರಿಗೆ, ಒಂದು ದಿನ ( ಸುಮಾರು 10ಗಂಟೆ) ಮತದಾನ ಮಾಡುವ ಅವಕಾಶ ಮಾಡಲಾಗಿದೆ.
ಚುನಾಯಿಸಿ ಬಂದ ಮೇಲೆ, ಪ್ರಜೆಗಳ ಅಭಿಪ್ರಾಯ ತಿಳಿಯುವ ವಿಧಾನ
ಹಳ್ಳಿ ಪ್ರದೇಶಗಳಲ್ಲಿ, ಪ್ರತೀ 400 ಮತದಾರರಿಗೆ, ಒಂದು ವಾರ್ಡ್ ಹಾಗು ಒಬ್ಬ ಪ್ರತಿನಿಧಿ ಇರುವನು. ಇವರಿಂದ ಎಲ್ಲಾ 400 ಮತದಾರರ ಟೆಲಿಫೋನ್ ಸಂಗ್ರಹಿಸಲು ಸಾಧ್ಯ ಇದೆ. ಅದನ್ನು ಒಂದು ಕಂಪ್ಯೂಟರಿನಲ್ಲಿ ಹಾಕಿ, ಅವಶ್ಯಕತೆಯ ಪ್ರಕಾರ, ಅವರ ಅಭಿಪ್ರಾಯ ತಿಳಿಯ ಬಹುದು. ಮತದಾರನೆಂದರೆ 18ವರ್ಷ ಮೇಲಿನ ಪ್ರಜೆಗಳು. ಪ್ರತೀ ವಾರ್ಡ್ ನಲ್ಲಿ ಸುಮಾರು 120 ರಿಂದ 150 ಮನೆಗಳಿಗೆ, ಅವರು ಸಂಪರ್ಕಿಸ ಬೇಕಾಗುವುದು.
ಆದರೆ ಪಟ್ಟಣ ಪ್ರದೇಶಗಳಲ್ಲಿ, ಅದು ತುಂಬಹ ಅತಿಯಾಗಿರುವುದು. ಸಣ್ಣ ಪಟ್ಟಣದ ವಾರ್ಡ್ಗಳಲ್ಲಿ ಸುಮಾರು 10,000 ಮತದಾರರಿದ್ದು, ಒಬ್ಬ ಕೌನ್ಸಿಲರ್ ಇರುವರು. ಸುಮಾರು 2,500 ಮನೆಗಳಿರುವುದು.
ಬೆಂಗಳೂರಿನಂತಹ ಭೃಹತ್ ನಗರದಲ್ಲಿ ಪ್ರತೀ ವಾರ್ಡ್ನಲ್ಲಿ 40 ರಿಂದ 50,000 ಮತದಾರರಿದ್ದು, ಒಬ್ಬ ಚುನಾಯಿತ ಕಾರ್ಪರೇಟರ್, ಸುಮಾರು 15,000 ಮನೆಗಳಿಗೆ ಜವಾಬ್ದಾರರು. ಇಲ್ಲಿ ಪ್ರಜೆಗಳ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಬೇರೆ ವಿಧಾನವನ್ನು ಅನುಸರಿಸ ಬೇಕಾಗುವುದು.
ಎರಡನೇ ವಿಧಾನ, ಸರಕಾರದಿಂದ ಸಹಾಯ ಪಡೆದು, ಪ್ರಜೆಗಳ ಮೊಬೈಲ್ ಸಂಖ್ಯೆ ಸಂಗ್ರಹ ಮಾಡಿ, SMS ಮುಖಾಂತರ ಅವರನ್ನು ಸಂಪರ್ಕಿಸುವುದು.
ಮೂರನೇ ವಿಧಾನ, ಯಾವುದೇ ಸಾಮಾಜಿಕ ಜಾಲತಾಣದ ಕಂಪೆನಿಗಳನ್ನು ಸಂಪರ್ಕಿಸಿ, ಸುಮಾರು 3,00,000 ಪ್ರಜೆಗಳ ಅಭಿಪ್ರಾಯ ತಿಳಿಯಲು ಒಂದು ಸಾಮಾಜಿಕ ಜಾಲತಾಣದ ಖಾತೆ ನಿರ್ಮಾಣ ಮಾಡುವುದು. ಅದನ್ನು ಕಂಪ್ಯೂಟರ್ಗೆ ಸಂಪರ್ಕ ಮಾಡಿ, ಅದರಿಂದ ಅಭಿಪ್ರಾಯ ತಿಳಿಯುವುದು. ಇದಕ್ಕೆ ಬರುವ ಖರ್ಚು, ಸರಕಾರದಿಂದ ಖಂಡಿತಾ ಬರಬೇಕು. ಇದು ಪ್ರಜೆಗಳ ಹಾಗು ಸರಕಾರದ ಕೆಲಸಕ್ಕಾಗಿ ಉಪಯೋಗಿಸಲ್ಪಡುವುದರಿಂದ, ಸರಕಾರದ ಕಡೆಯಿಂದ ಇದರ ಖರ್ಚು ಆಗಲೇ ಬೇಕು.
ನಾಲ್ಕನೆಯದಾಗಿ, ಒಂದು ವೆಬ್ ಸೈಟ್ ಮಾಡಿ, ಅದರಿಂದ ಪ್ರಜೆಗಳ ಅಭಿಪ್ರಾಯ ತಿಳಿಯುವುದು. ಇದಕ್ಕೆ, ಎಲ್ಲರ ಮೊಬೈಲ್ ಮುಖಾಂತರ ಸಂಪರ್ಕಿಸುವ ಸೌಲಭ್ಯ ಇರಬೇಕು.
ಐದನೆಯದಾಗಿ, ಸರಕಾರದಲ್ಲಿರುವ ಮತದಾರರ ಲಿಸ್ಟ್ ಮುಖಾಂತರ ಪ್ರಜೆಗಳನ್ನು ಸಂಪರ್ಕಿಸಿ, ಎಲ್ಲರ ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ, ಅದರ ಮುಖಾಂತರ ಪ್ರಜೆಗಳ ಅಭಿಪ್ರಾಯ ತಿಳಿದು ಕೊಳ್ಳ ಬಹುದು.,
ಆರನೆಯದಾಗಿ, ಪ್ರಜಾಕೀಯದ ಸರಕಾರ ಸ್ಥಾಪನೆ ಆದರೆ, ರಾಜ್ಯದ, ಎಲ್ಲಾ ಪ್ರಜೆಗಳ ಡಾಟಾ ಸಂಗ್ರಹಿಸಿ, ಅದರ ಮುಖಾಂತರ ಪ್ರಜೆಗಳನ್ನು ಸಂಪರ್ಕಿಸುವುದು ಹಾಗು ಪ್ರಜೆಗಳಿಗೆ ಸಿಗಬೇಕಾದ ಸರಕಾರಿ ಯೋಜನೆಗಳನ್ನು ನೇರ ಪ್ರಜೆಗಳಿಗೆ ತಲುಪಿಸಿ, ಸಂಪೂರ್ಣ ಭೃಷ್ಟ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೋಗೆಯುವುದು.
ಎಳನೇಯದಾಗಿ, ಎಲ್ಲಾ ಮೊಬೈಲ್ ಕಂಪೆನಿಗಳನ್ನು ಸಂಪರ್ಕಿಸಿ, ಆ ಕ್ಷೇತ್ರದ ಎಲ್ಲಾ ಪ್ರಜೆಗಳ ಮೊಬೈಲ್ ಸಂಖ್ಯೆ ಪಡೆದು, ಪ್ರಜೆಗಳನ್ನು ಸಂಪರ್ಕಿಸಿ, ಅವರ ಅಭಿಪ್ರಾಯ ತಿಳಿದು ಕೊಳ್ಳುವುದು. ಬಹುಶ, ಸರಕಾರದಿಂದ ಅಧಿಕೃತ ಆಜ್ಞೆ ಬೇಕಾಗ ಬಹುದು.
ಖಂಡಿತಾ, ಇನ್ನೂ ಕೆಲವು ವಿಧಾನಗಳು ಇರ ಬಹುದು. ಅದನ್ನು IT ತಜ್ಞರು ತಿಳಿಸ ಬಹುದು.
ಈ ಲೇಖನ ಎಲ್ಲಾ ಪ್ರಜಾಕೀಯ “ಅಭ್ಯರ್ಥಿ ಅಕಾಂಕ್ಷಿ” ಗಳಿಗೆ ಉಪಯೋಗವಾಗಲಿ ಎಂದು ಬರೆಯಲಾಗಿದೆ. ನನ್ನ ತಿಳುವಳಿಕೆ ಪ್ರಕಾರ ಬರೆದಿರುವೆನು.
ಸುರೇಶ್ ಕುಂದರ್
ಜೈ ಪ್ರಜಾಕೀಯ