ಪ್ರಜಾಕೀಯ- ಒಂದು ಸಂಭಾಷಣೆ ಪ್ರಜೆಯೊಂದಿಗೆ.
ಪ್ರಜಾಕೀಯ ಅನುಯಾಯಿ: ನಮಸ್ಕಾರ, ಹೇಗಿದ್ದಿರಾ ?
ಪ್ರಜೆ: ಆರಾಮ, ನೀವೇಗಿದ್ದಿರಾ ?
ಪ್ರಜಾಕೀಯ ಅನುಯಾಯಿ: ನನ್ನ ಹೆಸರು ..….….. ನಾನು ಪ್ರಜಾಕೀಯ ಸಿಧ್ಧಾಂತದ ಪ್ರಕಾರ ನಡೆಯುವ ಉತ್ತಮ ಪ್ರಜಾಕೀಯ ಪಕ್ಷದಿಂದ ಬಂದಿರುವೆನು.
ಪ್ರಜೆ: ಹೋ, ಇನ್ನೊಂದು ರಾಜಕೀಯ ಪಕ್ಷ. ಯಾರೇ ಬಂದರೂ, ಅಷ್ಟೇ. ನಾವು ಪಡುವ ಕಷ್ಟ ಏನೂ ಕಡಿಮೆ ಆಗುವುದಿಲ್ಲ. ದಿನೇ-ದಿನೇ ನಮ್ಮ ಕಷ್ಟ- ಕಾರ್ಪಣ್ಯಗಳು ಜಾಸ್ತಿ ಆಗುವುದೇ ವಿನಹ, ಕಡಿಮೆ ಆಗುವುದಿಲ್ಲ.ಇಲೆಕ್ಷನ್ ಬಂದಾಗ ಎಲ್ಲರೂ ಬರುತ್ತಾರೆ, ನಂತರ ನಾವು ಅವರನ್ನು ಟೋರ್ಚ್ ಹಾಕಿ ಹುಡುಕಬೇಕು.
ಪ್ರಜಾಕೀಯ ಅನುಯಾಯಿ: ಖಂಡಿತಾ ನಿಮ್ಮ ನೋವು ನಮಗೆ ಅರ್ಥ ಆಗುತ್ತಿದೆ. ಆದರೆ, ಈ ಪರಿಸ್ಥಿತಿ ಬದಲಾವಣೆ ಆಗುವುದು ಬೇಡವೇ ?
ಪ್ರಜೆ: ಖಂಡಿತಾ ಆಗಬೇಕು. ಯಾರು ಮಾಡುವುದು ಹಾಗು ಹೇಗೆ ? ವೇದ ವಾಕ್ಯ, ಎಲ್ಲರೂ ಹೇಳುವರು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು ?
ಪ್ರಜಾಕೀಯ ಅನುಯಾಯಿ: ಬದಲಾವಣೆ- ಅಭಿವೃಧ್ಧಿ, ನಮಗೆಲ್ಲರಿಗೂ ಬೇಕು. ಆದರೆ ಹೇಗೆ- ಯಾರು ಮಾಡುವುದು ಎಂಬುದು ಇಲ್ಲಿ ಇರುವ ಪ್ರಶ್ನೆ. ಪ್ರಜಾಪ್ರಭುತ್ವ ಎಂದರೆ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಯುವ ಸರಕಾರ. ಆದರೆ, ಈಗ ಕೇವಲ ರಾಜಕೀಯ ವ್ಯಕ್ತಿ ಹಾಗು ರಾಜಕೀಯ ಪಕ್ಷಗಳಿಗಾಗಿ ನಡೆಯುತ್ತಿದೆ.
ಪ್ರಜೆ: ನಿಜ ಹೇಳಿದಿರಿ.ನಮ್ಮನ್ನು ಕೇಳುವವರೆ ಇಲ್ಲ.
ಪ್ರಜಾಕೀಯ ಅನುಯಾಯಿ: ಹಾಗಾದರೆ, ಪ್ರಜೆಗಳನ್ನು ಕೇಳುವ, ಪ್ರಜೆಗಳಿಗೆ ಪಾರಧರ್ಶಕವಾಗಿ, ಪ್ರಜೆಗಳ ಮೂಲಭೂತ ಸೌಕರ್ಯ- ಸೌಲಭ್ಯವನ್ನು ಒದಗಿಸುವ ಸರಕಾರ ಬರಬೇಕಲ್ಲವೇ ?
ಪ್ರಜೆ: ನಿಜ, ಆದರೆ, ಹೇಗೆ, ಯಾರು ಮಾಡುವುದು ?
ಪ್ರಜಾಕೀಯ ಅನುಯಾಯಿ: ಪ್ರಜಾಕೀಯವು ಅದನ್ನೆ ಮಾಡಲು ಹೊರಟಿರುವುದು. ಪ್ರಜೆಗಳನ್ನು-ನಿಮ್ಮನ್ನು ಕೇಳಿ, ನಿಮ್ಮ ಅಭಿಪ್ರಾಯದಂತೆ, ಪ್ರಜೆಗಳಿಗೆ ಪಾರಧರ್ಶಕವಾಗಿ ನಡೆಯುವ ಸರಕಾರವನ್ನು ಸ್ಥಾಪಿಸುವುದು.
ಇಲ್ಲಿ, ಚುನಾವಣಾ ಅಭ್ಯರ್ಥಿಯನ್ನು ಪ್ರಜೆಗಳೇ ಆಯ್ಕೆ ಮಾಡುವರು, ಚುನಾವಣೆ ಹೇಗೂ ಪ್ರಜೆಗಳಿಂದಲೇ ಆಗುವುದು. ಚುನಾಯಿಸಿ ಬಂದ ಮೇಲೆ, ಪ್ರತೀ 6 ತಿಂಗಳು, 1 ವರ್ಷಕ್ಕೆ ಒಮ್ಮೆ, ಅವನು ಕೆಲಸ ಮಾಡುವ ವಿಧಾನ ಹಾಗು ಅವನ ಪ್ರದರ್ಶನ ವಿಷಯ, ಅವನ ಕ್ಷೇತ್ರದ ಪ್ರಜೆಗಳಿಂದ ತಿಳಿದು, ಮೆಜೋರಿಟಿ ಪ್ರಜೆಗಳು ಸಮ್ಮತಿ ಸೂಚಿಸದಿದ್ದರೆ, ಅವನಿಗೆ, ತಿದ್ದಿ ಕೊಳ್ಳಲು, ಇನ್ನೊಂದು 6 ತಿಂಗಳ ಅಥವಾ ಒಂದು ವರ್ಷದ ಅವಕಾಶ ಕೊಡಲಾಗುವುದು. ನಂತರವೂ ತಿದ್ದಿ ಕೊಳ್ಳದಿದ್ದರೆ, ಅವನು ರಾಜಿನಾಮೆ ಕೊಟ್ಟು ಹೋಗ ಬೇಕಾಗುವುದು.
ಪ್ರಜೆ: ಇದು ಸಾಧ್ಯವೇ ? ಅಂತಹ ಕಾನೂನು ಇಲ್ವಲ್ಲಾ ? ಚುನಾಯಿತ ಪ್ರತಿನಿಧಿಯನ್ನು ತಿರಸ್ಕರಿಸುವ ಕಾನೂನು (Right to Recall) ಇಲ್ಲವಲ್ಲ ?
ಪ್ರಜಾಕೀಯ ಅನುಯಾಯಿ: ಇದು ಸಾಧ್ಯವೇ ಎಂಬ ಪ್ರಶ್ನೆಯು ನಿಮ್ಮಲ್ಲಿ ಉದ್ಭವಿಸುವುದು ಸ್ವಾಭಾವಿಕ. ಆದರೆ, ಅವನೇ ತನ್ನ ಆಯ್ಕೆ ಸಮಯದಲ್ಲಿ, ತಾನು ಸರಿಯಾಗಿ ಪ್ರಜೆಗಳ ಸಂಪರ್ಕದಲ್ಲಿದ್ದು, ತನ್ನ ಜವಾಬ್ದಾರಿ ಸರಿಯಾಗಿ ಮಾಡದಿದ್ದಲ್ಲಿ, ಮೆಜೋರಿಟಿ ಪ್ರಜೆಗಳ ಅಭಿಪ್ರಾಯದಂತೆ, ಸ್ವತಹ, ತಾನೇ ರಾಜಿನಾಮೆ ಕೊಡುವೆನೆಂದು, ಸಹಿ ಹಾಕಿ ಒಪ್ಪಿರುತ್ತಾನೆ. ಅವನು ಸರಿಯಾಗಿ, ಪ್ರಜೆಗಳ ಸಂಪರ್ಕದಲ್ಲಿದ್ದು, ತನ್ನ ಜವಾಬ್ದಾರಿಯನ್ನು ಪ್ರಜೆಗಳ ಒಪ್ಪಿಗೆ ಪ್ರಕಾರ ಮಾಡಿದ್ದಲ್ಲಿ, ಪ್ರಜೆಗಳೇ, ಅವನನ್ನು ಪುರಸ್ಕಾರ ಮಾಡುವರು.
ಹೀಗೆ ಅವನ ಆಯ್ಕೆ, ಚುನಾವಣೆ, ತಿದ್ದುಪಡಿ, ತಿರಸ್ಕಾರ ಹಾಗು ಪುರಸ್ಕಾರ ಪ್ರಜೆಗಳೇ ಮಾಡುವರು. ಸಂಪೂರ್ಣ ಹಾಗು ಶುಧ್ಧ ಪ್ರಜಾಪ್ರಭುತ್ವ.
ಪ್ರಜೆ: ಸಿಧ್ಧಾಂತ ಒಳ್ಳೆಯದಿದೆ, ಆದರೆ ಇದು ಸಾಧ್ಯವೇ ?
ಪ್ರಜಾಕೀಯ ಅನುಯಾಯಿ: ಇದು ಖಂಡಿತಾ ಸಾಧ್ಯ ಹಾಗು ಅದನ್ನು ಸಾಧ್ಯವಾಗಿ ಮಾಡಲು ಬಂದಿರುವುದೇ ” ಪ್ರಜಾಕೀಯ ಸಿಧ್ಧಾಂತದಂತೆ ನಡೆಯುವ ಉತ್ತಮ ಪ್ರಜಾಕೀಯ ಪಕ್ಷ-ನಾವೆಲ್ಲರೂ ಸೇರಿ ಮಾಡ ಬೇಕಾಗಿದೆ.
ಹಾಗೇ, ಪ್ರಜಾಕೀಯದ ಕೆಲವೊಂದು ವಿಷಯವನ್ನು ತಿಳಿಸಲು ಅವಕಾಶ ಕೊಡುವಿರಾ ?
ಪ್ರಜೆ: ಖಂಡಿತಾ, ಮುಂದುವರಿಯಿರಿ.
ಪ್ರಜಾಕೀಯ ಅನುಯಾಯಿ: ಉತ್ತಮ ಪ್ರಜಾಕೀಯ ಪಕ್ಷ, ಹಣ ಇಲ್ಲದೆ ನಡೆಯುವುದು. ಇಲ್ಲಿ ಸದಸ್ಯತ್ವ ಶುಲ್ಕ ಇಲ್ಲ, ದೇಣಿಗೆ ತೆಗೆದು ಕೊಳ್ಳುವುದಿಲ್ಲ, ಪಕ್ಷದ ನಿಧಿ ಇಲ್ಲ. ಇಲ್ಲಿ ಎಲ್ಲಾ ಪ್ರಜೆಗಳಿಗೆ ಸ್ವಾಗತ.
ಇದೊಂದು ಸಾಮಾನ್ಯ ಪ್ರಜೆಗಳಿಗಾಗಿ ಮಾಡಿರುವ ವೇದಿಕೆ. ಎಲ್ಲವೂ ಇಲೊಕ್ಟ್ರಾನಿಕ್ ಮಾಧ್ಯಮದಿಂದ ನಡೆಯುವುದು.
ಪ್ರಜೆಗಳ ನೇರ ಸಂಪರ್ಕ, ಸಾಮಾಜಿಕ ಜಾಲತಾಣ ಹಾಗು ಅವಕಾಶ ಸಿಕ್ಕಿದರೆ ಬೇರೆ ಮಾಧ್ಯಮಗಳ ಮೂಲಕ ಪ್ರಜೆಗಳನ್ನು ತಲುಪಲಾಗುವುದು. ಪ್ರತೀ ಮನೆಯಲ್ಲಿ 1ಅಥವಾ ಜಾಸ್ತಿ ಮೊಬೈಲ್ ಟೆಲಿಫೋನ್ ಇರುವುದರಿಂದ, ಸಾಮಾಜಿಕ ಜಾಲತಾಣವು ಸೂಕ್ತವಾಗಿರುವುದು. ಅದನ್ನು ಉಪಯೋಗಿಸದವರಿಗೆ, ನೇರ ಸಂಪರ್ಕದಿಂದ ತಿಳಿಸಲಾಗುವುದು.
ಉತ್ತಮ ಪ್ರಜಾಕೀಯ ಪಕ್ಷಕ್ಕೆ ಯಾರೂ ತಮ್ಮ ಉದ್ಯೋಗ, ವ್ಯವಹಾರ ಹಾಗು ಖಾಸಾಗಿ ಜವಾಬ್ದಾರಿಯನ್ನು ತ್ಯಜಿಸಿ, ಸೇರುವ ಅವಶ್ಯಕತೆ ಇಲ್ಲ. ನಮ್ಮ-ನಮ್ಮ ಬಿಡುವಿನ ಸಮಯದಲ್ಲಿ, ನಮ್ಮಲ್ಲಿರುವ ಸಂಸಾಧನೆಗಳ (Convenience) ಪ್ರಕಾರ ಪ್ರಚಾರ ಮಾಡುವ.
ಪ್ರಜಾಕೀಯವು ಒಂದು “ಮೌನ ಕ್ರಾಂತಿ(Silent Revolution)”.
ದಯವಿಟ್ಟು, ನಮ್ಮ ವೆಬ್ಸೈಟ್ www.prajaakeeya.org ಗೆ ಸಂಪರ್ಕಿಸಿ ಹಾಗು ಗೂಗ್ಲ್ ಪ್ಲೇ ಸ್ಟೋರ್ನಲ್ಲಿ ನಮ್ಮ UPP(i)PRAJAAKEEYA ಯಾಪನ್ನು ಡೌನ್ ಲೋಡ್ ಮಾಡಿ ಕೊಳ್ಳಿ. ಎಲ್ಲಾ ವಿವರಗಳನ್ನು ಅವುಗಳಲ್ಲಿ ಕೊಡಲಾಗಿದೆ.
ನೆನಪಿರಲಿ, ಪ್ರಜೆಗಳಲ್ಲಿ ಬದಲಾವಣೆ ಆದಾಗ ಮಾತ್ರ ರಾಜ್ಯ-ದೇಶದಲ್ಲಿ ಬದಲಾವಣೆ ಸಾಧ್ಯ. ಪ್ರಜಾಕೀಯವು ಅದಕ್ಕೆ ಒಂದು ವೇದಿಕೆಯನ್ನು ಸೃಷ್ಟಿ ಮಾಡಿದೆ.
ದಾರಿ ಪ್ರಜಾಕೀಯ, ಅದರಲ್ಲಿ ನಡೆಯ ಬೇಕಾದವರು ಪ್ರಜೆಗಳು- ನಾವೆಲ್ಲರೂ.
ನಾನು ಬದಲಾವಣೆ ಆಗಿರುವೆನು, ನೀವು…?
ನಿಮ್ಮ ಇಷ್ಟೊಂದು ಸಮಯವನ್ನು ನಮಗಾಗಿ ಕೊಟ್ಟು, ನಮ್ಮನ್ನು ಆಲಿಸಿದಕ್ಕಾಗಿ, ನಿಮಗೆ ಧನ್ಯವಾದಗಳು.
ನೆನಪಿರಲಿ, ಪ್ರಜಾಕೀಯ
ಜೈ ಪ್ರಜಾಕೀಯ