ಪ್ರತಿ ಪ್ರಜೆಯ ಸಮಯದ ವಿಶ್ಲೇಷಣೆ- ಒಂದು ನೋಟ.
ಒಬ್ಬ ಸಂಪನ್ಮೂಲ ಪ್ರಜೆಯು, ದಿನದ ಸಮಯವನ್ನು, ಅವನು ಹೇಗೆ ಕಳೆಯುವನು ಎಂಬ ಒಂದು ವಿಶ್ಲೇಷಣೆ.
1. 8 ಗಂಟೆ ನಿದ್ರೆ ಮಾಡುವನು(ದಿನದ 1/3 ಅಂಶ).
ಇದು ಪ್ರತಿಯೊಂದು ದೇಹದ ಅವಶ್ಯಕತೆ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇದನ್ನು ನಿರ್ಲಕ್ಷಿಸಿದರೆ, ಕಾಯಿಲೆ ತಪ್ಪಿದ್ದಿಲ್ಲ. ಪ್ರತೀಯೊಬ್ಬ 18 ವರ್ಷದ ಮೇಲಿನ ವ್ಯಕ್ತಿ 8 ಗಂಟೆ, ಖಂಡಿತಾ ನಿದ್ರೆ ಮಾಡಲೇ ಬೇಕು. ಇದು ಜೀವನದ ಅವಶ್ಯಕತೆ.
2. 8 ಗಂಟೆ ಕೆಲಸ- ಉದ್ಯೋಗ- ವ್ಯವಹಾರ-ವ್ಯವಸಾಯ ಮಾಡುವನು. ಇದು ಅವನ ಸಂಪನ್ಮೂಲ ಸಮಯ. ಇದು ದೇಶವನ್ನೂ ಸಂಪನ್ಮೂಲವಾಗಿ ಮಾಡುವುದು.(ದಿನದ 1/3 ಅಂಶ).
ಕೆಲವೊಂದು ಪ್ರಜೆಗಳ ಜೀವನದಲ್ಲಿ, ಇದು 8 ಗಂಟೆಯಿಂದ 10-12 ಗಂಟೆ ಆಗಿರ ಬಹುದು. ಈ ಸಮಯ, ಪ್ರತಿಯೊಬ್ಬ ಪ್ರಭುದ್ದ ಪ್ರಜೆಗೆ ಹಾಗು ದೇಶಕ್ಕೆ ಅತೀ ಪ್ರಾಮುಖ್ಯವಾಗಿದೆ. ಯಾವುದೇ ದೇಶದ ಸಂಪನ್ಮೂಲವು ವೃಧ್ಧಿ ಆಗ ಬೇಕಾದರೆ, ಈ ಸಮಯವನ್ನು ಪ್ರತಿಯೊಬ್ಬ ಪ್ರಜೆಯು ತುಂಬಹ ಶಿಸ್ತು ಬದ್ದವಾಗಿ ಹಾಗು ಪರಿಣಾಮಕಾರಿಯಾಗಿ ಉಪಯೋಗಿಸ ಬೇಕು.
ಇಲ್ಲಿ, ನಾವು ಖಂಡಿತಾ 1/3 ಅಂಶಕ್ಕಿತ ಖಂಡಿತಾ ಕಡಿಮೆ ಮಾಡುವೆವು. ಕಾರಣ, ವರ್ಷದಲ್ಲಿ ನಮಗೆ 52 ದಿನ ವಾರದ ರಜೆ, 20 ದಿನ ಹಬ್ಬ ಹರಿದಿನಗಳ ರಜೆ, 30 ದಿನ ವಾರ್ಷಿಕ ರಜೆಯು ಬರುವುದು. ಆಂದರೆ, ಸುಮಾರು, ವರ್ಷದಲ್ಲಿ 102 ದಿನ, ನಾವು ಸಂಪನ್ಮೂಲ ಪ್ರಜೆಗಳಾಗಿರುವುದಿಲ್ಲ. ಇದು, *ವಾರಕ್ಕೆ ಎರಡು ದಿನ ( ಶನಿವಾರ & ಆಧಿತ್ಯವಾರ) ರಜೆ ಇರುವ ಕಂಪೆನಿಗಳಲ್ಲಿ ಇದು, *ವರ್ಷಕ್ಕೆ 154 ದಿನವಾಗುವುದು.*
ಅಂದರೆ, ವಾರಕ್ಕೆ ಒಂದು ದಿನದ ರಜೆ ಸಂದರ್ಭದಲ್ಲಿ 365-102= 263 ದಿನ ಹಾಗು 365 – 154= 211 ದಿನಗಳ ಕೇವಲ 8 ಗಂಟೆ, ಸಂಪನ್ನೂಲರಾಗಿರುತ್ತೇವೆ. ಆದ್ದರಿಂದ, ನಾವೆಲ್ಲರೂ, ಇದನ್ನು ಸಂಪೂರ್ಣ ಮನಸಾರೆ ಹಾಗು ಅತೀ ಮುತುವರ್ಜಿ ವಹಿಸಿ ಮಾಡಲೇ ಬೇಕು.
ಇದೇ, ಸಮಯದಿಂದ, ನಮ್ಮ 24 ಗಂಟೆ ಹಾಗು 365 ದಿನಗಳ ಅವಶ್ಯಕತೆಯ ಪೂರೈಕೆ ಆಗುವುದು. ಇದರ ಮೇಲೆ, ಪ್ರತೀ ಪ್ರಜೆಯು ತನ್ನ ಶಕ್ತಿ, ಯುಕ್ತಿ ಹಾಗು ಮನಸ್ಸನ್ನು ಕೇಂದ್ರೀಕರಿಸ ಬೇಕು.
ಇದೇ, ದೇಶದ ಸಂಪತ್ತನ್ನು ವೃಧ್ಧಿ ಮಾಡುವುದು. ಪ್ರಜೆಗಳ ಜೀವನವನ್ನೂ ವೃಧ್ಧಿ ಮಾಡುವುದು.
3. ಉಳಿದ ದಿನದ 8 ಗಂಟೆಯು, ಪ್ರಜೆಯ ಸ್ವಂತ -ವೈಕ್ತಿಕ ಜೀವನಕ್ಕೆ ಸಿಗುವುದು.
ಇದರಲ್ಲಿ, ಪ್ರಜೆಯು ಸಾವಿರಾರು ಕೆಲಸಕ್ಕಾಗಿ ಉಪಯೋಗಿಸುವರು. ಇದರಲ್ಲೂ ಕೆಲವೊಬ್ಬರು, ಕೆಲವೊಂದು ಗಂಟೆ ಓವರ್ ಟೈಮ್ ಕೆಲಸ, ಪಾರ್ಟ್ ಟೈಮ್ ಕೆಲಸ, ಕರ ಕುಶಲತೆ ಹಾಗು ಬೇರೆ- ಬೇರೆ ಸಂಪಾದನೆ ಮಾಡುವ ಮಾರ್ಗವನ್ನು ಅನುಸರಿಸಿ, ಇದರ ಕೆಲವೊಂದು ಗಂಟೆಯನ್ನು ಸಂಪನ್ಮೂಲವಾಗಿಸುವರು.
ಕೆಲವೊಂದು ಗಂಟೆ, ಮನೆಯಿಂದ ಕೆಲಸ ಮಾಡುವ ಸ್ಥಳಕ್ಕೆ ತಲುಪಲು ಹಾಗು ಹಿಂದೆ ಬರಲು, ಸಾರಿಗೆಗೆ ಸಮಯ ಕೊಡ ಬೇಕಾಗುವುದು.
ಕೆಲವೊಂದು ಗಂಟೆ, ತನ್ನ ದೇಹದ ಹಾಗು ತನ್ನ ಮನೆ, ವಠಾರದ ಸ್ವಚ್ಛತೆಗಾಗಿ ಉಪಯೋಗಿಸುವರು.?
ಕೆಲವೊಂದು ಗಂಟೆ ಟಿ.ವಿ., ವಾರ್ತಾ ಪತ್ರಿಕೆ, ಮೊಬೈಲ್, ಪುಸ್ತಕ, ಇತ್ಯಾದಿಗಳಿಗಾಗಿ ಉಪಯೋಗಿಸಲ್ಪಡುವುದು.
ಕನೀಷ್ಟ ಒಂದು ಗಂಟೆ, ಊಟ- ತಿಂಡಿಗಾಗಿ ಉಪಯೋಗಿಸಲ್ಪಡುವುದು.
ಇದೊಂದು ಸಾದರಣ ಸಂಪನ್ಮೂಲ ಪ್ರಜೆಯ ಸಮಯವನ್ನು ತೆಗೆದು ಕೊಳ್ಳಲಾಗಿದೆ.
18 ವರ್ಷದ ಕೆಳಗಿನ, ವಿಧ್ಯಾರ್ಥಿಗಳ, ಹಾಗು 60 ವರ್ಷ ಮೇಲಿನ ನಿವೃತ್ತ ಪ್ರಜೆಗಳು, ಈ ಸಮಯದ ವಿಶ್ಲೇಷಣೆಯಲ್ಲಿ ಬರುವುದಿಲ್ಲ.
ನಾವೆಲ್ಲರೂ, ದಿನಾಲು -ಜೀವನ ಪರ್ಯಂತ ಸಮಯವನ್ನು ಉಪಯೋಗಿಸುತ್ತೇವೆ. ಬಹುಶ, ಸಮಯವೇ ನಮ್ಮನ್ನು ಉಪಯೋಗಿಸುತ್ತಿರಲೂ ಬಹುದು. ಆದರೆ, ನಾವು, ಎಂದೂ, ಅದನ್ನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ.
ವಿಶ್ಲೇಷಣೆ, ಮಾಡಿದರೆ, ನಮಗೆ, ಖಂಡಿತಾ, ಸಮಯದ ಪ್ರಾಮುಖ್ಯತೆಯ ಅರಿವಾಗಿ, ನಾವು, ಸಮಯಕ್ಕೆ ಬೆಲೆ ಕೊಡಲು ಪ್ರಾರಂಭಿಸುತ್ತೇವೆ. ನಮ್ಮ ಕರ್ತವ್ಯ ಹಾಗು ನಮ್ಮ ಕೆಲಸ, ಉದ್ಯೋಗ, ವ್ಯವಸಾಯ, ವ್ಯವಹಾರದ, ಇತ್ಯಾದಿ ಕಡೆ ನಮ್ಮ ಮನಸ್ಸು ಕೇಂದ್ರಿಕೃತವಾಗಿ, ನಾವು ಉತ್ತಮ ಸಂಪನ್ಮೂಲ ಪ್ರಜೆಗಳಾಗುವುದಲ್ಲಿ ಸಂಶಯ ಇಲ್ಲ.
ಜೈ ಪ್ರಜಾಕೀಯ