Suresh Kunder
First of all, ಜನ್ಮ ಜಯಂತಿ ಖಾಸಾಗಿ ವಿಷಯ. ಅವರವರಿಗೆ ಸಂಬಂದ ಪಟ್ಟವರು ಆಚರಿಸ ಬೇಕು. ಕಾಂಗ್ರೇಸ್ಸಿನ ಪ್ರಧಾನ ಮಂತ್ರಿಗಳ ಜಯಂತಿ ಕಾಂಗ್ರೇಸ್ ಪಕ್ಷದವರು ಆಚರಿಸಲಿ. ಹಾಗೆ ಬಿಜೆಪಿಯವರ ಬಿಜೆಪಿ,ಹಾಗೂ ಬೇರೆ ಪಾರ್ಟಿಯವರು.
ನನ್ನ ಅನಿಸಿಕೆ ಪ್ರಕಾರ ರಾಷ್ಟ್ರ ಪಿತಾಮಹಾ ಗಾಂಧೀಜಿಯವರ ಜಯಂತಿ ಹಾಗು ತಿಥಿ ಕೇವಲ ರಾಷ್ಟ್ರದ ಎಲ್ಲಾ ಪ್ರಜೆಗಳು ಆಚರಿಸಬೇಕು ಹಾಗು ರಜೆಯಾಗ ಬೇಕು.
ಐದು ವರ್ಷಕ್ಕೆ ಒಬ್ಬ ಪ್ರಧಾನ ಮಂತ್ರಿ, ರಾಷ್ಟ್ರಪತಿ, ಮಹಾ ಪ್ರಜೆಗಳು ಆಗಿ ಹೋಗ ಬಹುದು. ಇನ್ನೊಂದು 50 ವರ್ಷದಲ್ಲಿ 356 ದಿನವೂ ಆಚರಿಸುವುದು ಹಾಗು ರಜೆ ಮಾಡುವುದಾಗ ಬಹುದು. ದೇಶ- ರಾಜ್ಯ ಸಂಪೂರ್ಣ ಬಂದ್ ಇಡ ಬೇಕಾಗುವುದು.
ನಾವು ಕೇವಲ ಭಾವನೆಯಲ್ಲಿ ಮುಳುಗಿ, ಅಬಿವ್ರಧ್ಧಿಯನ್ನೆ ಮರೆತಿರುವೆವು. ಭಾವನೆಯಿಂದ ದೇಶ ಉದ್ಧಾರವಾಗುವುದಿಲ್ಲ.
ಎರಡನೆ ಮಹಾಯುದ್ಧದ ನಂತರ ಕೆಲವೊಂದು ದೇಶಗಳು ಅಬಿವ್ರಧ್ಧಿ ಹೊಂದಿದ ದೇಶಗಳಾದವು, ಆದರೆ ಅದೇ ಸಮಯಕ್ಕೆ ಸ್ವಾತಂತ್ರ ಪಡೆದ ಭಾರತ ಧರ್ಮ, ಜಾತಿ, ಪಂಗಡ, ಪ್ರಾಂತ್ಯ, ಸಂಸ್ಕ್ರತಿ, ಮೂಡನಂಬಿಕೆ, ದ್ವೇಷ, ಕಿಚ್ಚು, ಹಣವಂತನ ಬಾಲ, ದೊಡ್ಡವನ ಚಮ್ಚ, ಹೀಗೆ ಭಾವನೆಯಲ್ಲಿ ಹರಿದು ನರಳುತ್ತಾ ನಮ್ಮ ಮೂರು ತಲೆಮಾರು ಸವೆದು ಹೋಯಿತು.
ಈಗಾಲಾದರೂ ಪ್ರಯೋಗಾತ್ಮಕ ( Practical) ಆಲೋಚನೆ ಮಾಡಿ ಅಬಿವ್ರಧ್ಧಿ ಕಡೆ ಸಾಗುವ.
ಈ ಜಯಂತಿ- ತಿಥಿ ಗಳಿಗೆ ಹಾಗು ಚರಿತ್ರೆಯಲ್ಲಿ ನಡೆದದ್ದನ್ನು ಈಗ ಅಳವಡಿಸುವ ನಮ್ಮ ಭಾವನೆಗಳು ವ್ಯರ್ಥ.
ಯಾಕೆಂದರೆ,ಈ ಯುಗ ಬೇರೆ. ಎಲ್ಲವೂ ಟೆಕ್ನಾಲಜಿಯಿಂದ ನಡೆಯುವುದು.
ನಾವು ಕಳೆದ 72 ವರ್ಷ ಭಾವನೆಯಲ್ಲಿಯೆ ಮುಳುಗಿ, ದೇಶದ ಪ್ರತಿಯೊಂದು ಸೌಕರ್ಯ- ಸೌಲಭ್ಯಗಳು ಪಳೆಯುಳಿಕೆಗಳಾಗಿವೆ.
Let us be Practical.
ಜೈ ಪ್ರಜಾಕೀಯಾ.
ನಮ್ಮ ದೇಶದ ಪ್ರೊಡಕ್ಟಿವಿಟಿ.
ನಾವೆಲ್ಲರೂ, ಜಯಂತಿ, ತಿಥಿ, ಹಬ್ಬ ಹಾಗು ಹೆಸರಿನಲ್ಲಿ ಎಷ್ಟು ಕೆಲಸ ಮಾಡುತ್ತಿರುವೆವು ಹಾಗು ನಮ್ಮಿಂದ ದೇಶಕ್ಕೆ ಎಷ್ಟು ಪ್ರೊಡಕ್ಟಿವಿಟಿ ಸಿಗುವುದೆಂದು ವಿಶ್ಲೇಷಣೆ ಮಾಡಿದರೆ, ನಾವೆಲ್ಲರೂ ನಾಚಿಕೆ ಪಡುವಂತಹ ಸ್ತಿತಿ ಇದೆ.
ಅದರ ವಿಶ್ಲೇಷಣೆ ಕೆಳಗೆ ತಿಳಿಸುತ್ತಿರುವೆನು.
ಕೇಂದ್ರ ಸರ್ಕಾರದ ನೌಕರರ ಪ್ರೊಡಕ್ಟಿವಿಟಿ.
ಒಂದು ವರ್ಷ = 365 ದಿನ
ಒಂದು ವರ್ಷ = 52 ವಾರ( 52 ಸಂಡೆ + 52 ಸಾಟರ್ಡೆ = 104 ದಿನ) ವಾರದ ರಜೆ.
ಸುಮಾರು 24 ದಿನ ಜಯಂತಿ, ತಿಥಿ, ಹಬ್ಬ- ಹರಿದಿನವೆಂಬ ರಜೆ.
ವರ್ಷಕ್ಕೆ 12 ದಿನ Casual ಹಾಗು Sick leave )
ವರ್ಷಕ್ಕೆ Annual Leave 30 ದಿನ.
ವಾರದ ರಜೆ =104 ದಿನ
ಹಬ್ಬದ ರಜೆ =. 24 ದಿನ
C & S ರಜೆ =. 12 ದಿನ
Ann ರಜೆ. =.30 ದಿನ
Total ರಜೆ. 170 ದಿನ
365 -170 = 195 ದಿನ
195 ದಿನದ 24 ಗಂಟೆಯಲ್ಲಿ ಕೇವಲ ದಿನಕ್ಕೆ 8 ಗಂಟೆ ಕೆಲಸ ಮಾಡುತ್ತೇವೆ. ಅಂದರೆ 1/3 ಮೂರನೆ ಒಂದಂಶ.
ಅಂದರೆ ವರ್ಷದ 365ದಿನದ ಕೇವಲ 65 ದಿನ ಮಾತ್ರ ನಾವು ಕೆಲಸ ಮಾಡುತ್ತೇವೆ.
ಅಂದರೆ ವರ್ಷದ ಕೇವಲ 17.8% (65ದಿನ)ಮಾತ್ರ ನಾವು ಕೆಲಸ ಮಾಡಿದ್ದಕ್ಕೆ , ಸಂಪೂರ್ಣ 365 ದಿನದ ಸಂಬಳ ಸಿಗುತ್ತದೆ.
ಅಂದರೆ, ನಮ್ಮ ನಿಜವಾದ ಪ್ರೋಡಕ್ಟಿವಿಟಿ ಕೇವಲ 17.8% (65 ದಿನ).
ಅದರಲ್ಲೂ, ಸರ್ಕಾರಿ ಕ್ಷೇತ್ರಗಳಲ್ಲಿ, ಕೆಲವು ಆಲಸಿಗಳು ದಿನಕ್ಕೆ 5 ಗಂಟೆಯೂ ಸರಿಯಾಗಿ ಕೆಲಸ ಮಾಡುವುದಿಲ್ಲ.
ಅವರ ಪ್ರೊಡಕ್ಟಿವಿಟಿ 10% ( 37ದಿನ) ಇರುವುದಿಲ್ಲ.
ಹೀಗಿರುವಾಗ, ದೇಶ ಉದ್ದಾರವಾಗುವುದಾದರೂ ಹೇಗೆ ?
ನಮಗೆ ನಾವೇ ಪ್ರಶ್ನೆ ಹಾಕಬೇಕು.
ಇದು ನಮ್ಮ ದೇಶದ ದುರಾಧ್ರಷ್ಟ ಹಾಗು ಪರಿಸ್ತಿತಿ.
ದೇಶ ಅಬಿವ್ರಧ್ಧಿಯಾಗ ಬೇಕಾದರೆ ಪ್ರಜೆಗಳು ಸರಿಯಾಗಿ ದುಡಿಯ ಬೇಕು.
ಇದು ಕೇವಲ ವಿಶ್ಲೇಷಣೆ ಮಾಡಿದರೆ ಮಾತ್ರ ಅರಿವಾಗುವುದು.
ಪ್ರೈವೇಟ್ ಸೆಕ್ಟರ್ ನಲ್ಲಿ ಇದು ಸುಮಾರು 22 ರಿಂದ 25% ಇರುವುದು. ಅಂದರೆ ಸುಮಾರು 80 ರಿಂದ 90 ದಿನ ಆಗಬಹುದು.
ಇಲ್ಲಿಯಾವುದು ಕೂಡಾ ಅತಿಶಯೋಕ್ತಿಯಲ್ಲ.