ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಧರ್ಮ ಹಾಗು ದೇಶದ ಕಾನೂನು – ಪ್ರಜಾಕೀಯ

ಧರ್ಮ ಹಾಗು ದೇಶದ ಕಾನೂನು.

ಧರ್ಮವೆಂಬುದು ಕೇವಲ ಮನುಷ್ಯನ ನಂಬಿಕೆ. ಪ್ರಾಣಿಗಳಿಗೆ ಇದು ಅಳವಡಿಸುವುದಿಲ್ಲ.

ಮಿಲಿಯನ್- ಮಿಲಿಯನ್ ಜೀವ ಜಂತುಗಳಲ್ಲಿ ಕೇವಲ ಮನುಷ್ಯ ಜೀವಕ್ಕೆ ಮಾತ್ರ ಇದು ಅಳವಡಿಸುತ್ತಿದೆ.

ಯಾಕೆಂದರೆ, ಇದು ಮನುಷ್ಯ ನಿರ್ಮಿತ. ಇದರಲ್ಲಿ ನಮ್ಮನ್ನು ನಿರ್ಮಿಸಿದ ಪ್ರಕ್ರತಿಯ ಪಾತ್ರವೆ ಇಲ್ಲ.

ಪುರಾತನ ಕಾಲದಲ್ಲಿ ಯಾವುದೇ ಲಿಖಿತ ಕಾನೂನುಗಳು ಇಲ್ಲವಾದ ಕಾರಣ, ಮನುಷ್ಯನಿಂದ ಧರ್ಮದ ನಿರ್ಮಾಣವಾಯಿತು.

ರಾಜ- ಮಹಾರಾಜರ ಕಾಲದಲ್ಲೂ, ಧರ್ಮ ಗ್ರಂಥಗಳೇ ಮನುಷ್ಯನ ತಪ್ಪು-ಒಪ್ಪುಗಳನ್ನು ನಿರ್ಧರಿಸುತಿತ್ತು. ಆವಾಗ ಒಂದು ರಾಜ್ಯದಲ್ಲಿ ಕೇವಲ ಒಂದು ಧರ್ಮದವರು ವಾಸಿಸುತ್ತಿದ್ದರು.

  ಪ್ರಜಾಕೀಯ ಒಂದು ಮೌನ ಕ್ರಾಂತಿ Silent Revolution

ಮನುಷ್ಯ ಜಾತಿಯನ್ನು ನಿಯಂತ್ರಿಸಲು, ಧರ್ಮದ ಗ್ರಂಥಗಳನ್ನು, ನಮ್ಮ ಪೂರ್ವಜರು ಬರೆದಿಟ್ಟು ಹೋದರು.

ನಾವು ಮನುಷ್ಯರು ಅದನ್ನು ಸಾವಿರ- ಸಾವಿರ ವರ್ಷ ಅನುಸರಿಸಿದೆವು.

ಆದರೆ, ಈಗ ಪ್ರತಿ ದೇಶದಲ್ಲಿ ಅದರದ್ದೆ ಆದ ಹಾಗು ಸಂವಿಧಾನ ಬದ್ಧವಾದ ಬರೆದಿಟ್ಟ ಕಾನೂನು ಇರುವುದು. ಅಷ್ಟೆ ಅಲ್ಲ, ಪ್ರತೀ ದೇಶದಲ್ಲಿ ಬೇರೆ ಬೇರೆ ಧರ್ಮದ ಜನರು ವಾಸಿಸುವುದು, ಅಥವಾ ಕೆಲಸ ಮಾಡುವುದು, ಯಾತ್ರಿಗಳು ಇರುವಾಗ ಧರ್ಮದಿಂದ ದೇಶವನ್ನು ನಿಯಂತ್ರಿಸಲಾಗುವುದಿಲ್ಲ.

ಆದ್ದರಿಂದ ಕೇವಲ ಆ ದೇಶದ ಕಾನೂನು, ಎಲ್ಲಕ್ಕಿಂತಲೂ ಮಿಗಿಲಾಗುವುದು.

ಆದ್ದರಿಂದ, ಧರ್ಮವು ಅವರವರ ನಂಬಿಕೆಯಾಗುವುದು ಹಾಗು ಧರ್ಮದ ನಿಯಮವನ್ನು ದೇಶವನ್ನು ನಿಯಂತ್ರಿಸಲು ಉಪಯೋಗಿಸುವಂತಿಲ್ಲ

  ಚಂದ್ರಘಂಟ ಅವತಾರ - ನವರಾತ್ರಿ 3ನೇ ದಿನ - ಪೂಜಾ ವಿಧಾನ

ಒಂದು ವೇಳೆ ಇದನ್ನು ಹೇರಲು ಪ್ರಯತ್ನಿಸಿದಲ್ಲಿ, ಆ ದೇಶಗಳಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದು.

ಆದ್ದರಿಂದ ದೇಶದ- ನಾಡಿನ ಕಾನೂನು ಚಾಚು ತಪ್ಪದೆ ಪಾಲಿಸಿ ದಾಗ, ಎಲ್ಲಾ ಪ್ರಜೆಗಳು ಶಾಂತಿ ಹಾಗು ಸಯ್ಯಮದಿಂದ ಬದುಕಲು ಅವಕಾಶ ಸಿಗುವುದು. ಆವಾಗಲೇ ಸಮ್ರಧ್ಧಿ.

ಧರ್ಮವು ಅವರವರ ನಂಬಿಕೆ ಹಾಗು ಅವರವರ ಖಾಸಾಗಿ ವಿಷಯವಾಗ ಬೇಕು.

ಯಾವ- ಯಾವ ದೇಶಗಳು ಧರ್ಮವನ್ನು ಖಾಸಾಗಿ ವಿಷಯವಾಗಿ ಪರಿಗಣಿಸಿ, ಕಾನೂನಿಗೆ ಪ್ರಾಮುಖ್ಯತೆ ಕೊಟ್ಟಾಗ, ಆ ದೇಶಗಳು ಸಮ್ರಧ್ಧಿ ಹೊಂದಿದ ದೇಶಗಳಾದವು.

  ಎದ್ದೇಳಿ ಪ್ರಜೆಗಳೇ , ರಾಜಕಾರಣ, ರಾಜಕೀಯಾ ಹಾಗು ರಾಜಕಾರಣಿ

ಯಾವ ದೇಶಗಳು ಧರ್ಮಕ್ಕೆ ಪ್ರಾಮುಖ್ಯತೆ ಕೊಟ್ಟವೋ, ಅಲ್ಲಿಯೆಲ್ಲಾ ಉಗ್ರಗಾಮಿಗಳ ಉದಯವಾಯಿತು. ಕೆಲವು ದೇಶಗಳು ಚಿದ್ರ-ಚಿದ್ರವಾಯಿತು.

ಆದ್ದರಿಂದ ದೇಶದ ಸಂವಿಧಾನ ಬದ್ಧವಾದ ಕಾನೂನಿನ ಮುಂದೆ, ಧರ್ಮ, ಜಾತಿ, ಪಂಗಡ, ಪ್ರಾಂತ್ಯವೆಂಬ ನಿಯಮಗಳಿಗೆ ಅವಕಾಶವಿಲ್ಲ. ಅವೆಲ್ಲಾ ಖಾಸಾಗಿ ವಿಷಯಗಳಾಗ ಬೇಕು.

Leave a Reply

Your email address will not be published. Required fields are marked *

Translate »