ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ನೀತಿಕಥೆ

*ಪ್ರಜಾಕೀಯ ಒಳ್ಳೆಯ ನೀತಿಕಥೆ.*

ಒಮ್ಮೆ ಇಬ್ಬರು ನೆರೆ ಹೊರೆಯ ರಾಜರು ರಥದಲ್ಲಿ ಪ್ರಯಾಣಿಸುತ್ತ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಎದಿರಾಗುತ್ತಾರೆ. ಒಬ್ಬರು ಮುಂದೆ ಹೋಗಬೇಕಾದರೆ, ಇನ್ನೊಬ್ಬ ರಾಜನು ತನ್ನ ರಥವನ್ನು ಹಿಂತೆಗೆಯಬೇಕು. ಆದರೆ ಇಬ್ಬರು ರಾಜರೂ ಸಹ ರಥವನ್ನು ಹಿಂದೆಗೆಯಲು ಸಿದ್ಧರಿರಲಿಲ್ಲ.
ಕೊನೆಗೆ ಇಬ್ಬರ ರಾಜರ ರಥಸಾರಥಿಯರು ಒಂದು ಒಪ್ಪಂದಕ್ಕೆ ಬಂದರು. ಇಬ್ಬರೂ ತಮ್ಮ ರಾಜನು ಮಾಡಿದ ಸತ್ಕಾರ್ಯಗಳನ್ನು ಕುರಿತು ಹೇಳುವುದು. ಯಾವ ರಾಜನು ಹೆಚ್ಚಿನ ಸತ್ಕಾರ್ಯಗಳನ್ನು ಮಾಡಿ ರುತ್ತಾರೋ ಅಂತಹ ರಾಜನು ಮುಂದೆ ಹೋಗುವುದು. ಇನ್ನೊಬ್ಬ ರಾಜನು ರಥವನ್ನು ಹಿಂತೆಗೆದುಕೊಳ್ಳುವುದು.

ಮೊದಲನೆಯ ರಾಜನ ಸಾರಥಿಯು, ಹೇಳುವನು. ನಮ್ಮ ಮಹಾರಾಜರು ಪ್ರತಿದಿನವೂ ಕನಿಷ್ಟ ಒಂದು ನೂರು ಜನ ಹಸಿವೆಯಿಂದ ಬಳಲುವ ಅಭಾಗ್ಯರಿಗೆ
ಭೋಜನ ಏರ್ಪಡಿಸಿದ ನಂತರವೇ ತಾವು ಭೋಜನ ಮಾಡುತ್ತಾರೆ. ತೊಡಲು ಬಟ್ಟೆ ಇಲ್ಲದ ನಿರ್ಗತಿಕರು ಕನಿಷ್ಠ ಐದುನೂರು ಜನರಿಗೆ ಬಟ್ಟೆ ಹಂಚುತ್ತಾರೆ. ರಾಜ್ಯದಲ್ಲಿ ಅನೇಕ ಅನಾಥಾಲಯಗಳನ್ನು ಮತ್ತು ವೃದ್ಧಾಶ್ರಮ ಗಳನ್ನು ಕಟ್ಟಿಸಿರುತ್ತಾರೆ. ಬಡಬಗ್ಗರಿಗೆ,ರಿಯಾಯಿತಿ ದರದಲ್ಲಿ ಧಾನ್ಯಗಳು ಸಿಗುವ ಏರ್ಪಾಟು ಮಾಡಿದ್ದಾರೆ. ಇವೇ ಮುಂತಾದ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.
ಇಷ್ಟು ಹೇಳಿದ ನಂತರ ಎರಡನೇ ರಾಜನ ಸಾರಥಿಯು, ತಲೆ ಬಗ್ಗಿಸಿ,ಕಣ್ಣಲ್ಲಿ ನೀರಿಡುತ್ತಾ ತನ್ನ ರಥವನ್ನು ಹಿಂತೆಗೆಯಲು ಅನುವಾದನು.

  ಸ್ವಾಮಿ ವಿವೇಕಾನಂದರ ಕಥೆ : ವಿಗ್ರಹ ಪೂಜೆ

ಅದನ್ನು ನೋಡಿ, ಆ ಮೊದಲನೆಯ ರಾಜ ಕೇಳಿದನು, “ಎಲೈ ಸಾರಥಿಯೇ! ಹೀಗೇಕೆ ಒಮ್ಮಿಂದೊಮ್ಮೆ ರಥವನ್ನು ಹಿಂತೆಗೆಯಲು ಸಿದ್ಧನಾಗಿರುವೆ? ನಿಮ್ಮ ರಾಜನಲ್ಲಿ ದಾನಗುಣವಿಲ್ಲವೇ?ನಿಮ್ಮ ರಾಜನು ಯಾವ ಸತ್ಕಾರ್ಯಗಳನ್ನೂ ಮಾಡಲಿಲ್ಲವೇ?”

ಅದಕ್ಕೆ ಆ ಎರಡನೇ ರಾಜನ ಸಾರಥಿ ಸವಿನಯವಾಗಿ ಹೇಳುತ್ತ ಹೇಳುತ್ತಾನೆ ” ರಾಜಾ, ನಮ್ಮ ರಾಜ್ಯದಲ್ಲಿ ನಮ್ಮ ರಾಜನು ದಾನ ಮಾಡುತ್ತ ಇರುವುದನ್ನು ನೋಡುವ ಅದೃಷ್ಟ ಯಾರಿಗೂ ಸಿಕ್ಕಿಲ್ಲ. ನಮ್ಮ ರಾಜ್ಯದಲ್ಲಿ, ದಾನ ಮಾಡಬೇಕೆಂದರೆ ಸಾಮಾನ್ಯರಾದ ನಮ್ಮಂತಹವರಲ್ಲಿಯೇ ಒಬ್ಬರೂ ದಾನ ಸ್ವೀಕರಿಸಲು ದೀನದಲಿತರಿಲ್ಲ. ಯಾವ ವೃದ್ಧರಿಗೂ ವೃದ್ಧ ಆಶ್ರಮದಲ್ಲಿ ಇರುವ ಅವಶ್ಯಕತೆ ಬಂದಿಲ್ಲ. ಹೀಗಾಗಿ ನಮ್ಮರಾಜರಿಗೆ ದಾನಮಾಡುವ ಅವಕಾಶ ಹೇಗೆ ಸಿಗಬೇಕು?

  ಪ್ರಜಾಕೀಯ ವಿಶ್ಲೇಷಣೆ - ಕರ್ನಾಟಕ ರಾಜ್ಯದ ಬಜೆಟ್ ಹಣ

ಇದನ್ನು ಕೇಳಿ ಮೊದಲನೆಯ ರಾಜನು ತಕ್ಷಣವೇ ತನ್ನ ರಥದಿಂದ ಕೆಳಗಿಳಿದುಬಂದು , ಎರಡನೆಯ ರಾಜನಿಗೆ ನಮಿಸಿ,ತನ್ನ ರಥವನ್ನು ಹಿಂದಕ್ಕೆ ತೆಗೆಸಿದನು.

*ಸಾವಿರಾರು ವೃದ್ಧಾಶ್ರಮಗಳೂ, ಅನೇಕಾನೇಕ ಸಂಕ್ಷೇಮಭಿವೃದ್ಧಿ ಕಾರ್ಯಕ್ರಮಗಳು, ರಿಯಾಯಿತಿಗಳು, ಉಚಿತಗಳೂ, ವರ್ಷಾನುಗಟ್ಟಲೆ ಅಮಲಿನಲ್ಲಿರುವ ದೇಶ ಮತ್ತು ಇಂತಹ ರಿಯಾಯಿತಿಗಳೂ ಮತ್ತು ಉಚಿತ ಕಾರ್ಯ ಕ್ರಮಗಳಿಗಾಗಿ ಆಸೆ ಪಡುವ ಪ್ರಜೆಗಳು ಇರುವ ಯಾವ ದೇಶವೂ ಒಳ್ಳೆಯ ಆಳ್ವಿಕೆಯಲ್ಲಿಲ್ಲ ಎಂದರ್ಥ.*

*ಪಾಲಕರ ಮತ್ತು ಪ್ರಜೆಗಳ ದೌರ್ಭಾಗ್ಯದ ಸಂಕೇತ ಇಂತಹ ದೇಶ.*
👌🌹🌹🌹🌹🌹👏
ಈ ಮೆಸೇಜ್ ಕಳಿಸಿದ ವ್ಯಕ್ತಿಗೆ ಅನಂತ ವಂದನೆಗಳು. ಇದೊಂದು ಸಮಾಜದ ನಗ್ನ ಸತ್ಯ. *ಯಾವ ದೇಶದಲ್ಲಿ ರಿಯಾಯಿತಿಗಳ* *ಅವಶ್ಯಕತೆಯಿಲ್ಲವೋ,*
*ಅಂತಹ ರಾಷ್ಟ್ರವೇ ಸಂಪನ್ನ* *ರಾಷ್ಟ್ರ. ರಿಯಾಯಿತಿಗಳು ದೇಶದ ಹೀನ ಪರಿಸ್ಥಿತಿಯ ಕನ್ನಡಿ ಇದ್ದಂತೆ.* ಕೆ.ಜಿ. ಅಕ್ಕಿಯನ್ನು ಕಡಮೆ ದರಕ್ಕೆ ಮಾರುವ ಸರ್ಕಾರಕ್ಕಿಂತ, ಎಷ್ಟು ದರವಾಗಲಿ ಕೊಳ್ಳಲು ಶಕ್ತಿ ಇರುವ ಪ್ರಜೆಗಳನ್ನು ಹೊಂದಿರುವ ಸರ್ಕಾರವೇ ಪ್ರಜಾಕೀಯ ಸರ್ಕಾರವು. ಸ್ವಚ್ಛ ಸುಪರಿಪಾಲನೆ ಮಾಡುವ ಪ್ರಭುತ್ವ. ಈ ವಿಷಯವು ಎಲ್ಲ ವಿಧಾನಗಳಿಗೂ ಅನ್ವಯಿಸುತ್ತದೆ. ಆದರೆ ಪ್ರಜೆಗಳು ಈ ವಿಷಯವನ್ನರಿತು ಎಂದು ಎಚ್ಚರ ಗೊಳ್ಳುತ್ತಾರೆ ಎನ್ನುವುದೇ ದೊಡ್ಡ ಪ್ರಶ್ನೆ!

Leave a Reply

Your email address will not be published. Required fields are marked *

Translate »