ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಹೋರಾಟ, ಪ್ರತಿಭಟನೆ ಹಾಗು ಸಮಾಜಸೇವೆ – ಪ್ರಜಾಕೀಯ

ಹೋರಾಟ, ಪ್ರತಿಭಟನೆ ಹಾಗು ಸಮಾಜಸೇವೆ.

ಹೋರಾಟ, ಪ್ರತಿಭಟನೆ ಹಾಗು ಸಮಾಜಸೇವೆ ಎಂಬುದು ಕಳೆದ 72 ವರ್ಷದ ರಾಜಕೀಯದ ಕೊಡುಗೆ.

ಸರ್ಕಾರಗಳು ಹಾಗು ರಾಜಕೀಯಾ ಪಕ್ಷ ಹಾಗು ರಾಜಕಾರಣಿಗಳು ಪ್ರಜೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ, ಇವುಗಳ ಅವಶ್ಯಕತೆ ಇದೆಯೇ ?

ಪ್ರಜೆಗಳು ಒಂದು ಕಡೆ ತೆರಿಗೆ, ಇನ್ನೊಂದು ಕಡೆ ಲಂಚ ಹಾಗು ಮೂರನೆಯದು ಸಮಾಜ ಸೇವೆ ಸಂಘಗಳು ನಿರ್ಮಿಸಿದ ದೇಣಿಗೆ ( ಡೊನೇಷನ್) ಎಂಬ ಮೂರು ತರಹದ ತೆರಿಗೆ ಕಟ್ಟುವಂತಾಗಿದೆ.

ಲೆಕ್ಕಕ್ಕೆ ಕೇವಲ ಸರ್ಕಾರಕ್ಕೆ ಕಟ್ಟಿದ ತೆರಿಗೆ ಮಾತ್ರ.

ಇಲ್ಲಿ ನಾವೆಲ್ಲರೂ ಗಮನಿಸ ಬೇಕಾದ ವಿಷಯ, ಹೋರಾಟಗಾರರು, ಪ್ರತಿಭಟನೆಗಾರರು ಫುಲ್ ಸಮಯ ಕೊಡುವುದಾದರೆ, ಅವರ ಕುಟುಂಬವನ್ನು ಸಾಕುವುದಾರು ? ಎಲ್ಲಿಂದಲೊ ಅವರಿಗೆ ಫಂಡ್ ಬರಲೇ ಬೇಕಲ್ಲವೇ ? ಇಲ್ಲವಾದರೆ, ಇವರ ಕುಟುಂಬದವರು ಇವರ ವಿರುದ್ದ ಹೋರಾಟ ಮಾಡುತ್ತಾರೆ.

  ಉತ್ತಮ ಪ್ರಜಾಕೀಯ ಪಕ್ಷದ (UPP) ಪ್ರತಿಯೊಂದು ಜಿಲ್ಲೆಯ ಟೆಲಿಗ್ರಾಮ್ ಗ್ರೂಪ್ ಲಿಂಕ್ - uttama prajaakeeya party district telegram group link

ಹೊರಾಟ – ಪ್ರತಿಭಟನೆ ಈಗಿನ ಕಾಲದಲ್ಲಿ, ಸಮಾಜದಲ್ಲಿ ಎದ್ದು ಕಾಣಲು ಹಾಗು ಸಾಮಾಜಿಕ ಪ್ರತೀಷ್ಟೆಗಾಗಿ 90% ನಡೆಯುತ್ತಿದೆ. ಅವರವರನ್ನೆ ಅವರು ಪ್ರಶ್ನೆ ಮಾಡಿ ಕೊಳ್ಳಲಿ. ಆವಾಗ ಅರ್ಥವಾಗುವುದು. ಅದರಲ್ಲಿ ಒಂದು 10% ನಿಸ್ವಾರ್ಥ ಸೇವೆ ಮಾಡುವವರೂ ಇರುವರು. ಅವರೂ ಮುಂದೆ ಯಾವುದಾದರೂ ರಾಜ್ಯದ- ದೇಶದ ಪಾರಿತೋಷಕಕ್ಕೆ ಬಲಿಯಾಗುತ್ತಾರೆ. ಆವಾಗ ಪುನಹ ಪ್ರತೀಷ್ಟೆ ಬರುವುದು. ಇದು ನಗ್ನ ಸತ್ಯ.

ಆದ್ದರಿಂದಲೆ ಪ್ರಜಾಕೀಯಾದಲ್ಲಿ ಇದಾವುದೂ ಇರುವುದಿಲ್ಲ.

ಪ್ರಜೆಗಳ ತೆರಿಗೆ ಹಣವನ್ನು ಭ್ರಷ್ಟಾಚಾರವಿಲ್ಲದೆ ನೂರಕ್ಕೆ ನೂರು ಶೇಖಡಾ ಪ್ರಜೆಗಳ ಮೂಲಭೂತ ಸೌಕರ್ಯ- ಸೌಲಭ್ಯಗಳಿಗೆ ART of Governance ( Accountability, Responsibility, Transparency) ಮುಖಾಂತರ ಉಪಯೋಗಿಸುವುದೇ ಪ್ರಜಾಕೀಯಾ.

  ಶಾಸಕಾಂಗ ಸಭೆಯ ಸದಸ್ಯರ ಪಾತ್ರಗಳು ಮತ್ತು ಜವಾಬ್ದಾರಿಗಳು. ಶಾಸಕರ (ಎಂಎಲ್‌ಎ) ಪಾತ್ರವೇನು ತಿಳಿಯಿರಿ ?

ಆಗ ಯಾವ ಹೋರಾಟವು ಬೇಡ ಯಾವ ಪ್ರತಿಭಟನೆಯೂ ಬೇಡ.

ಅದೂ ಕೂಡಾ ಪ್ರಜಾಕೀಯಾದಲ್ಲಿ ಪ್ರತಿಯೊಂದು ಪ್ರಜೆಗಳ ಸಮ್ಮತಿಯಿಂದಲೆ ನಡೆಯುವುದು.

ಇಲ್ಲಿ ಆರಿಸಿ ಬಂದವರು ನಾಯಕರೂ ಅಲ್ಲಿ ಅಥವಾ ಸೇವಕರೂ ಅಲ್ಲ. ಕೇವಲ ಸಂಬಳ ತೆಗೆದು ಕೊಂಡು ಕೆಲಸ ಮಾಡುವ ಪ್ರಜಾಕಾರ್ಮಿಕರು. ಸಂಬಳ, ಮನೆ ಬಾಡಿಗೆ, ಸಾರಿಗೆ, ಪಿಂಚಣಿ ತೆಗೆದು ಕೊಳ್ಳುವ MLA- MP ಗಳು ಹೇಗೆ ಸೇವಕರಾಗುವರು ಅಥವಾ ನಾಯಕರಾಗುವರು ?

ಮೊದಲು ಪ್ರಜಾಪ್ರಭುತ್ವದ ಅರ್ಥ ತಿಳಿಯಬೇಕು.

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ.

  ಶಿಫಾರಸು - ಪ್ರಜಾಕೀಯ

ಇಲ್ಲಿ ಪ್ರಜೆಯೇ ಅಗ್ರಗಣ್ಯ ನಾಗ ಬೇಕು.

ಆದರೆ ರಾಜಕೀಯಾ ಪಾರ್ಟಿ, ರಾಜಕಾರಣೀ ಹಾಗು ಅದಕ್ಕೆ ಹಣ ಹೊಂದಿಸುವ ಹಣದ ಕುಲವಾರಿಗಳಿಗೆ ದೇಶ ನಡೆಯುತ್ತಿದೆ.

ಅಲ್ಲಿಂದ ಪ್ರಜೆಗಳ ಕೈಗೆ ಅಧಿಕಾರ ಹಸ್ತಾಂತರವೇ ಪ್ರಜಾಕೀಯಾದ ಮುಖ್ಯ ಧ್ಯೇಯ.

ಹೋರಾಟ, ಪ್ರತಿಭಟನೆ ಹಾಗು ಸಮಾಜ ಸೇವೆಯೆಂಬ ಜನರನ್ನು ಬಲಿಕೊಡುವ ಕಾರ್ಯಕ್ರಮವಲ್ಲ.

Leave a Reply

Your email address will not be published. Required fields are marked *

Translate »