ನೀರು – ನೀರು- ನೀರು.
ಜೂನ್, ಜುಲೈ, ಅಗಸ್ಟ್, ಸೆಪ್ಟೆಂಬರ್ ಎಲ್ಲಾ ನದಿಗಳು ಉಕ್ಕಿ ಹರಿದು 90% ಮಳೆ ನೀರು ಸಮುದ್ರ ಸೇರಿ ಉಪ್ಪು ನೀರಾಗುತ್ತದೆ.
ಈಗ ಅದೇ ಉಪ್ಪು ನೀರನ್ನು ಕೋಟಿ- ಕೋಟಿ ಖರ್ಚು ಮಾಡಿ, ಡಿಸ್ಯಾಲಿನೇಷನ್ ಮುಖಾಂತರ ಉಪ್ಪು ತೆಗೆದು ಪುನಹ ಉಪಯೋಗಿಸುವದನ್ನು ಮನುಷ್ಯ ಮಾಡುತ್ತಿದ್ದಾನೆ. ಭಾರತದಲ್ಲಿ ಇಂದು ತಮಿಳು ನಾಡಿನಲ್ಲಿ ನಡೆಯುತ್ತಿರುವುದು.
ಹಾಗೆ ಮಳೆ ಇಲ್ಲದ ಕೊಲ್ಲಿ ರಾಷ್ಟ್ರಗಳಲ್ಲಿ ಇದೇ ನೀರಿನ ಅವಶ್ಯಕತೆಯನ್ನು ಪೂರೈಸುವುದು. ಆದರೆ ಇದಕ್ಕೆ ಇಂಧನವಾಗಿ ಪೆಟ್ರೋಲ್ ಹಾಗು ವಿಧ್ಯುತ್ ಉಪಯೋಗಿಸಲ್ಪಡುತ್ತದೆ.
ಆಶ್ಚರ್ಯವೆಂದರೆ, ಮೇಲೆ ಹೇಳಿದ ನಾಲ್ಕು ತಿಂಗಳಲ್ಲಿ ಸಮುದ್ರಕ್ಕೆ ಹರಿದು ಹೋಗುವ 90% ನೀರನ್ನು ನಾವು ನೀರಿಲ್ಲದೆ ಜಿಲ್ಲೆಗಳಿಗೆ ಪೈಪ್ ಅಥವಾ ಕೇನಾಲ್ ಮುಖಾಂತರ ಕಳುಹಿಸಿದರೆ, ನಮ್ಮ ಭೂಮಿಯ ಜಲಮಟ್ಟ ಖಂಡಿತಾ ತುಂಬಹ ಮೇಲೆ ಬರುವುದು.
ನದಿಗಳು ಸಮುದ್ರಕ್ಕೆ ಸೇರುವ 4- 5 ಕಿಲೊ ಮೀಟರ್ ಹಿಂದೆ, ಅವುಗಳನ್ನು ಸ್ವಲ್ಪ ಮಟ್ಟಿಗೆ ಇಂಟರ್ಸೆಫ್ಟ್ ಮಾಡ ಬೇಕು.
ನದಿಯ ಅಗಲದ ಒಂದು ಅರ್ಧ ಅಥವಾ ಮೂರನೆ ಒಂದಂಶದಷ್ಟು ನದಿಯಿಂದ ಸಮುದ್ರ ಕಡೆ ಹರಿಯುವ ನೀರನ್ನು ಕಾಲುವೆ ಅಥವಾ ಪೈಪ್ ಮುಖಾಂತರ ಡೈವರ್ಟ್ ಮಾಡ ಬೇಕು.
ಇಲ್ಲಿ ಪಶ್ಚಿಮ ಘಟ್ಟದ ಅಡಚನೆ ಖಂಡಿತಾ ಇದೆ. ಇದಕ್ಕೆ ಸುರಂಗ ಮಾರ್ಗ ಅಥವಾ ಗುಡ್ಡದ ಕಾಲುವೆ ಪ್ರದೇಶದ ಮೂಲಕ ಹಾಗು ಪೈಪ್ ಲೈನ್ ಮುಖಾಂತರ ಮಾಡ ಬೇಕು.
ಸರ್ಕಾರದಲ್ಲಿ ನಮ್ಮಲ್ಲಿ ನೀರಾವರಿ ತಜ್ಞರ ಕೊರತೆ ಇದೆಯೇ ?
ಸರ್ಕಾರದಲ್ಲಿ ಯಾರೂ ಇಂತಹ ಇನಿಸಿಯೇಟಿವ್ ತೆಗೆದು ಕೊಳ್ಳುವುದಿಲ್ಲ ವೋ ?
ಹೈವೆ- ರಸ್ತೆಗಳಷ್ಷೆ ಇವುಗಳಿಗೆ ಖರ್ಚು ಬರಬಹುದು.
ನೀರಿನ ವಿಷಯ ಈಗಲೇ ಸರಿಯಾದ ಮುಂದಾಲೋಚನೆ ಮಾಡದಿದ್ದರೆ, ಮುಂದೆ ನಮ್ಮ ಬಜೆಟ್ನ ಅರ್ದಾಂಶ ಇದಕ್ಕಾಗಿ ಮೀಸಲಿಡುವ ಪ್ರಮೇಯಾ ಬೇರೆ ಬಹುದು, ಬರುತ್ತದೆ.
ತನ್ನ ಆಸ್ತಿ, ತನ್ನ ಹೆಂಡತಿ ಮಕ್ಕಳು ಎಂದು ನಿದ್ದೆ ಮಾಡುತ್ತಿರುವ ಪ್ರಜಾ ಪ್ರತಿನಿಧಿಗಳೆ, ನಿಮ್ಮ ನರನಾಡಿಗಳು ಸತ್ತಿರುವುದೇ ?
ನೀರು- ಗಾಳಿ- ಆಹಾರವಿಲ್ಲದೆ ಮನುಷ್ಯ ಉಳಿಯುವುದಿಲ್ಲ.
ಸುಮ್ಮನೆ ಪ್ರಕ್ರತಿಯನ್ನು ಶಪಿಸುವುದನ್ನು ಬಿಟ್ಟು, ಪ್ರಕೃತಿ ಕೊಟ್ಟಾಗ, ಕೊಟ್ಟಲ್ಲಿ ಹಾಗು ಕೊಟ್ಟಷ್ಟನ್ನು ಉಪಯೋಗಿಸಲು ಕಲಿಯ ಬೇಕು.
ಪ್ರಕೃತಿಯ 90% ಸಂಪತ್ತನ್ನು ಕೇವಲ ಮನುಷ್ಯ ಜಾತಿ ಉಪಯೋಗಿಸುತ್ತಿರುವಾಗ, ಮನುಷ್ಯ ಕುಲದ ಜವಾಬ್ದಾರಿಯಾಗುವುದು ಪ್ರಕೃತಿಯ ಸದುಪಯೋಗ ಮಾಡುವುದು.
ಸಮುದ್ರದ ತಲದಲ್ಲಿ ಸಾವಿರ- ಸಾವಿರ ಕಿಲೊ ಮೀಟರ್ ಪೆಟ್ರೋಲ್ ಪೈಪ್ ಲೈನ್ ಹಾಕಲು ಸಾಧ್ಯವಿರುವಾಗ, ನೆಲದ ಮೇಲೆ ಪೈಪ್ ಲೈನ್ ಹಾಕಲು ನಾವು ಹಿಂದೆ- ಮುಂದೆ ನೋಡುತ್ತಿರುವೆವು.
ಯಾವುದೆ ವಿಝನ್ ಇಲ್ಲದ ಹಾಗು ಜನರ ಬವಣೆಯನ್ನು ಅರಿಯದ ಈ ನಮ್ಮ ಪ್ರಜಾಪ್ರತಿನಿಧಿಗಳು, ಸರ್ಕಾರಿ ಆಫೀಸರ್ಗಳು ನಮಗೆ ಬೇಕೇ ?
ಹೀಗೆ ಬೆಜವಾಬ್ದಾರಿಯಿಂದ ಮುನ್ನಡೆದರೆ, ಮನುಷ್ಯ ಉಪಯೋಗಕ್ಕೆ ಬೇಕಾದ ನೀರು ಅತೀ ವಿರಳವಾಗುವುದರಲ್ಲಿ ಸಂಶಯವಿಲ್ಲ.
ನಾವು ಭೂಮಿಗೆ ನೀರನ್ನು ರಿಚಾರ್ಜ್ ಮಾಡಲೆ ಬೇಕು.ನೀರಿದ್ದ ಕಡೆಯಿಂದ, ನೀರಿಲ್ಲದ ಕಡೆ ನೀರನ್ನು ಕೊಂಡೊಯ್ಯುವುದು ಅತೀ ಅವಶ್ಯ.
ಭೂಮಿಯೇ ನೀರನ್ನು ಫಿಲ್ಟರ್ ಮಾಡಿ ನಮಗೆ ಒದಗಿಸುವುದು.
ಸುಮ್ಮನೆ ಪ್ರಕೃತಿಯನ್ನು ದೂಶಿಸುವುದು ತಪ್ಪು. ಪ್ರಕೃತಿಯು ನಮ್ಮೆಲ್ಲರ ಪ್ರತಿಯೊಂದು ಕೆಟ್ಟ ಉಪಯೋಗದಿಂದ ಬದಲಾವಣೆಯನ್ನು ಕಾಣುತ್ತದೆ.
ಜೈ ಪ್ರಜಾಕೀಯಾ.