ಪ್ರಜಾಕೀಯಾದ ಕರ್ನಾಟಕ- ( My Vision)
1. ಪ್ರತಿ ಗ್ರಾಮಪಂಚಾಯಿತಿಯಲ್ಲಿ ಕುಡಿಯಲು ಪೈಪ್ ನೀರು. ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಟ್ಯಾಂಕ್ ಮಾಡಬೇಕು( ಕೆಲವು ಕಡೆ ಈಗಲೇ ಇದೆ). ಅದಕ್ಕೆ ಹತ್ತಿರದ ಕೆರೆ ಬಾವಿಗಳಿಂದ ನೀರು ಪೈಪ್ ಅಥವಾ ಟ್ಯಾಂಕರ್ ಮೂಲಕ ಸರಬರಾಜು ಮಾಡಬೇಕು.
2. ಪ್ರತಿಯೊಂದು ವಿಧ್ಯುತ್-ಟೆಲಿಫೋನ್ ಕೇಬಲ್ಗಳು ನೆಲದೊಳಗೆ ಹೋಗ ಬೇಕು. ಈಗಾಗಲೆ ಕರ್ನಾಟಕ ಸುಮಾರು 12,500 ಮೇಘ ವಾಟ್ ವಿದ್ಯುತ್ ಉತ್ಪಾದನೆ ಮಾಡುವುದು. ನಮ್ಮ ಅವಶ್ಯಕತೆ ಕೇವಲ 9,500 ಮೆಘ ವಾಟ್. ಈಗಿನ ಕಂಬಗಳು ಮೇಲಿನ ಕೇಬಲ್ ಗಳಿಂದ ತುಂಬಿಸಿ ವಿದ್ಯುತ್ ಕಳವಾಗುತ್ತಿದೆ ಹಾಗು ವೇಸ್ಟ್ ಆಗುತ್ತಿದೆ.
ಈಗ ಸುಮಾರು 30% ವೇಸ್ಟ್ ಆಗುತ್ತಿದೆ.
3. ಅಂಗನವಾಡಿಯಿಂದ 12ನೆ ತರಗತಿಯ ಶಾಲೆ – 2000 ವಿಧ್ಯಾರ್ಥಿಗಳಿಗೆ ಆಗುವಷ್ಟು, ಅಂತರಾಷ್ಟ್ರೀಯಾ ಮಟ್ಟದ ಹಾಗು ಸಾರಿಗೆ ವ್ಯವಸ್ಥೆ ಹಾಗು ಎಲ್ಲಾ ತರಹದ ಮಕ್ಕಳ ಬೆಳವಣಿಗೆಗೆ ಬೇಕಾದ ಆಟದ ವ್ಯವಸ್ಥೆ ಹಾಗು ಉಪಕರಣಗಳೊಂದಿಗೆ, ಪ್ರತಿ ಗ್ರಾಮ ಪಂಚಾಯಿತಿ ಹಾಗು ವಾರ್ಡ್ಗಲ್ಲಿ. ಸುಮಾರು 12,500 ಶಾಲೆ X 2000 ವಿದ್ಯಾರ್ಥಿ = 2,50,00,000( 2 ಕೋಟಿ 50 ಲಕ್ಷ). ಕನ್ನಡ ಹಾಗು ಇಂಗ್ಲೀಷ್ನಲ್ಲಿ ಮಾತನಾಡುವ ಪಾಂಡಿತ್ಯ ಪ್ರೈಮರಿಯಲ್ಲಿಯೇ ಮಾಡಲಾಗುವುದು.
4. ಆರೋಗ್ಯ ವ್ಯವಸ್ಥೆ.
Label -1
ಪ್ರತೀ ಗ್ರಾಮ ಪಂಚಾಯಿತಿ ಹಾಗು ವಾರ್ಡ್ಗಳಲ್ಲಿ ಸುಸಜ್ಜಿತ ಹಾಗು ಆಧುನಿಕ ಆರೋಗ್ಯ ಕೇಂದ್ರ ಹಾಗು ಮೆಟೆರ್ನಿಟಿ ಹೋಮ್.
Label -2
ಪ್ರತೀ ತಾಲೂಕಿನಲ್ಲಿ 500 ಬೆಡ್ ಸುಸಜ್ಜಿತ ಹಾಗು ಆಧುನಿಕ ಆಸ್ಪತ್ರೆ.
Lavel-3
ಪ್ರತೀ ಜಿಲ್ಲೆಯಲ್ಲಿ 750 ಬೆಡ್ ಸುಸಜ್ಜಿತ ಹಾಗು ಆಧುನಿಕ ಸ್ಪೆಷಾಲಿಟಿ ಆಸ್ಪತ್ರೆ.
Lavel-4
ಪ್ರತೀ ನಾಲ್ಕು ಜಿಲ್ಲೆಗೆ ಒಂದು 1000ಬೆಡ್ ಸೂಪರ್ ಸ್ಪೆಷಾಲಿಟಿ ಸುಸಜ್ಜಿತ ಹಾಗು ಆಧುನಿಕ AIIMS ಲೆವೆಲಿನ ಆಸ್ಪತ್ರೆ.
ಇವೆಲ್ಲಾ ರೆಫೆರಲ್ ನಿಯಮದ ಪ್ರಕಾರ ನಡೆದು ಪ್ರಜೆಗಳಿಗೆ ಸಂಪೂರ್ಣ ಉಚಿತವಿರ ಬೇಕು.
ಈ ಎಲ್ಲಾ ಕಡೆ ಕಟ್ಟು- ನಿಟ್ಟಿನ ಕಾನೂನು ಇರುವುದು. ಪ್ರತೀ ಪ್ರಜೆಯ ವಿವರ ಕಂಪ್ಯೂಟರ್ನಿಂದ ಯಾವ ಲೆವೆಲ್ನಲ್ಲು ತಿಳಿಯುವಂತಹ Integrated Software ಹಾಕಲಾಗುವುದು. ಇದೂ “Block Chain Technology” ಯ Software ಆಗಿರುವುದು.
5. ಕಾನೂನು ವ್ಯವಸ್ಥೆ- Law & Order.
ಪ್ರತೀ ಗ್ರಾಮಪಂಚಾಯಿತಿಯಲ್ಲಿ ಹಾಗು ವಾರ್ಡ್ ಗಳಲ್ಲಿ 12,100 (6100 GP+600 Ward) ಸುಸಜ್ಜಿತ ಹಾಗು ಆಧುನಿಕ ಪೋಲೀಸ್ ಸ್ಟೇಷನ್ ಮಾಡಿ ಸಂಪೂರ್ಣ ಕರ್ನಾಟಕ ಪೋಲೀಸ್ ವಿಜಿಲೆನ್ಸ್ ಬರುವುದು. ಕ್ರೈಮ್ 80% ಕಡಿಮೆಯಾಗುವುದು.ಇಡಿ ದೇಶವೇ ಕರ್ನಾಟಕದ ಕಡೆ ಹುಬ್ಬೇರಿಸುವಂತಾಗುವುದು.
ಇದೆ ನಿಜವಾದ ಕಾನೂನು ವ್ಯವಸ್ಥೆ ಹಾಗು ಪ್ರಜೆಗಳಿಗೆ ನೆಮ್ಮದಿ ಕೊಡುವುದು. ಇದು ಕ್ರಾಂತಿಯಾಗುವುದು.
ನಮ್ಮ ಕರ್ನಾಟಕದಲ್ಲಿ ಈಗಾಗಲೆ 80,000 ಪೋಲೀಸ್ ಪಡೆ ಇದ್ದು, ಅದರಲ್ಲಿ ಕೇವಲ 60% ಇದಕ್ಕಾಗಿ ಬೇಕಾಗುವುದು. ಇದು ಸಂಪೂರ್ಣ 6.5 ಕೋಟಿ ಪ್ರಜೆಗಳ ನೆಮ್ಮದಿಗೆ ಕಾರಣವಾಗುವುದು. ಈಗ ನಮ್ಮ 20% ಪೋಲೀಸ್ ಕೇವಲ 224 ಶಾಸಕರ ಹಾಗು ಬೇರೆ ಕೇಂದ್ರ ಸರ್ಕಾರದ ಕೆಲಸದಲ್ಲಿ, ಲೆಕ್ಕ ಮಾಡುವಷ್ಟು ಪ್ರಜೆಗಳ ಸೇವೆಯಲ್ಲಿರುವುದು ವಿಪರೀತ.
Note- ಈ ಮೇಲಿನ ಐದು ವಿಷಯದಿಂದಲೇ ಸರ್ಕಾರಿ ವಲಯದಲ್ಲಿ ಸುಮಾರು ಕನೀಷ್ಟ 2ಲಕ್ಷ ಉದ್ಯೋಗ ನಿರ್ಮಾಣವಾಗುವುದು. ಹಾಗೆ ನಿರ್ಮಾಣ ಕಾರ್ಯದಲ್ಲಿ ಸುಮಾರು 5 ಲಕ್ಷ ಉದ್ಯೋಗ ಸ್ರಷ್ಟಿಯಾಗುವುದು.
ಈ ಎಲ್ಲಾ ಕಟ್ಟಡಗಳನ್ನು ನಿರ್ಮಿಸಲು ಹಾಗು ಉಪಕರಣಗಳಿಗಾಗಿ ವರ್ಲ್ಡ್ ಬ್ಯಾಂಕ್ ಅಥವಾ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ಖಂಡಿತಾ ಸಾಲ ಕೊಡುವುದು. ಯಾಕೆಂದರೆ ಇಲ್ಲಿ GDP ಹಾಗು ಸರ್ಕಾರಿ Asset ಉತ್ಪತ್ತಿಯಾಗುವುದು.
ಉಳಿದ ವಿಷಯ ಮುಂದಿನ ಸಂಚಿಕೆಯಲ್ಲಿ.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ ( UPP).