ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಎಂತಹ ಸರಕಾರವಯ್ಯಾ ?

Suresh Kunder:
ಪಾರದರ್ಶಕ ಸರಕಾರ.

1. ಎಲ್ಲಾ ಪ್ರತಿನಿಧಿಗಳು ಆರಿಸಿ ಬಂದ ಒಂದು ವಾರದೊಳಗೆ ತಮ್ಮ ಹಾಗು ತಮ್ಮ ಹೆಂಡತಿ ಮಕ್ಕಳ ಆಸ್ತಿ ವಿವರ ಆಪಿಡೆವಿಟ್ ಮಾಡಿ ತಿಳಿಸ ಬೇಕು. ಅದನ್ನು ಪತ್ರಿಕೆ ಮೂಲಕ ಕೂಡಲೆ ಪ್ರಜೆಗಳಿಗೆ ತಿಳಿಸಬೇಕು.

2. ಇದನ್ನು ಟ್ಯಾಕ್ಸ್ ಡಿಪಾರ್ಟ್ಮೆಂಟ್ಗೂ ACB ಹಾಗು ಲೋಕಾಯುಕ್ತರಿಗೆ ಕಳುಹಿಸ ಬೇಕು. ಅವರು ಸ್ಪೇಷಲ್ ನಿಗಹ ಇಡಬೇಕು.

3. ಮೊಟ್ಟ ಮೊದಲು, ಪ್ರಜೆಗಳ ಡಾಟಾ ಬೇಸ್ ತಯಾರು ಮಾಡ ಬೇಕು. ಅದು ನೂರಕ್ಕೆ- ನೂರು ಶೇಖಡಾ ಸರಿ ಇರಬೇಕು.

ಎಲ್ಲಾ ಪ್ರಜೆಗಳಿಗೆ ತಲುಪ ಬೇಕಾದ ಸೌಕರ್ಯ- ಸೌಲಭ್ಯಗಳು ಈ ಡಾಟಾ ಬೇಸ್ ಪ್ರಕಾರ ನಡೆಯ ಬೇಕು.
ವಿಧ್ಯಾಭ್ಯಾಸ, ಆರೋಗ್ಯ, ರೇಷನ್, ನೀರು, ವಿಧ್ಯುತ್, ಮನೆ, ರಸ್ತೆ, ಸಾರಿಗೆ, ಸಾರ್ವಜನೀಕ ಸೌಲಭ್ಯಗಳು ಈ ಡಾಟಾ- ಬೇಸ್ ನ ಮೇಲೆ ನಿರ್ಧರಿಸಬೇಕು.‌

4. ಪ್ರತೀಯೊಂದು ಪ್ರೋಜೆಕ್ಟ್- ರಸ್ತೆ, ರೈಲ್ವೆ, ಎಲ್ಲವೂ ಆ ಪ್ರಾಂತ್ಯದ ಜನರಿಗೆ ತಿಳಿಸಿ, ಪೋಲಿಂಗ್ ಮಾಡಿ ಮುಂದುವರಿಯಬೇಕು. ಪ್ರೊಜೆಕ್ಟ್ ಪ್ರಾರಂಭವಾಗುವಲ್ಲಿ ಒಂದು ಬ್ರಹತ್ ಗಾತ್ರದ ಬೋರ್ಡ್ ನಲ್ಲಿ ಆ ಪ್ರೊಜೆಕ್ಟ್ ಗೆ ತಗಲುವ ವೆಚ್ಚ, ಕಂಟ್ರ್ಯಾಕ್ಟರನ, ಕನ್ಷಲ್ಟೆಂಟ್ನನ, ಸಂಬಂದ ಪಟ್ಟ ಇಂಜಿನಿಯರ್ ಹಾಗು ಸುಪರ್ವೈಸರ್ನ ಹೆಸರು, ವಿಳಾಸ ಹಾಗು ದೂರವಾಣಿ ವಿವರ ವಿರಬೇಕು. ಎಷ್ಟು ಸಮಯದಲ್ಲಿ ಅದು ಸಂಪೂರ್ಣವಾಗ ಬೇಕೆಂದು ತಾರೀಖಿನ ಮುಖಾಂತರ ತಿಳಿಸ ಬೇಕು.
ಆ ಪ್ರೋಜೆಕ್ಟನ ಸಂಪೂರ್ಣ ವಿವರ ಸಂಕ್ಷಿಪ್ತವಾಗಿ ಬರೆದಿರಬೇಕು.
ಉಳಿದ ವಿಷಯ ಆ ಪ್ರಾಂತ್ಯದ ಜನರೇ ನೋಡಿ ಕೊಳ್ಳುತ್ತಾರೆ ಹಾಗು ಅದರಲ್ಲಿ ಭಾಗವಹಿಸುವ ಎಲ್ಲಾ ಸಂಸ್ಥೆಗೂ ಭಯ ಮೂಡುವುದು. ಪ್ರಜೆಗಳೇ ಪ್ರಶ್ನೆ ಮಾಡುವ ಸ್ತಿತಿ ಬರುವುದು.

5. ಸರಕಾರದ ಪ್ರತೀಯೊಂದು ಕಾರ್ಯಕಲಾಪವೂ ಟೆಲಿವಿಷನ್ ಮುಖಾಂತರ ಲೈವ್ ತೋರಿಸಬೇಕು.

6. ಸರಕಾರದ ಟೆಂಡರ್ ಪ್ರಕ್ರೀಯೆವು ಪಾರದರ್ಶಕವಾಗಿ ಟೆಲಿವಿಷನ್ ಮುಖಾಂತರ ಪ್ರಜೆಗಳಿಗೆ ಓಪನ್ ಇರಬೇಕು.

7. ಟೆಂಡರ್ ಕೊಡುವ ಮೊದಲು ಕಾಂಟ್ರಾಕ್ಟಿಂಗ್ ಹಾಗು ಕನ್ಸಲ್ಟೆಂಟ್ ನವರ ಕ್ವಾಲಿಫಿಕೇಷನ್ ಪ್ರಕ್ರೀಯೆ ನಡೆಯ ಬೇಕು. ಎಲ್ಲವೂ ಫಿಸಿಕಲ್ ವೆರಿಫಿಕೇಷನ್ ಆಗಬೇಕು. ಮ್ಯಾನ್ ಪವರ್, ಉಪಕರಣ, ಸೇಫ್ಟಿ ಉಪಕರಣಗಳು, ಮ್ಯಾನ್ ಪವರಿಗೆ ಬೇಕಾದ ಸೌಲಭ್ಯ- ಸೌಕರ್ಯಗಳು, ವಸತಿ, ಟ್ರಾನ್ಸ್ ಪೋರ್ಟ್, ಎಲ್ಲದರ ವೆರಿಫಿಕೇಷನ್ ಆದ ಮೇಲೆಯೇ, ಕ್ವಾಲಿಫಿಕೇಷನ್ ಆಗ ಬೇಕು. ಎಲ್ಲವೂ ಅಂತರಾಷ್ಟ್ರೀಯ ಮಟ್ಟದಾಗಿರ ಬೇಕು. ಯಾರಿಂದ ಇದು ಸಾಧ್ಯವಿಲ್ಲವೋ, ಅವರನ್ನು ರಿಜೆಕ್ಟ್ ಮಾಡ ಬೇಕು. ಗುಣ ಮಟ್ಟದ ಕೆಲಸವಾಗ ಬೇಕಾದರೆ, ಇದು ಮೊದಲ ಹೆಜ್ಜೆ. ಇದು ಕೂಲಂಕುಷವಾಗಿ ನಡೆಯ ಬೇಕು.‌ ಇದೇ ಭ್ರಷ್ಟಾಚಾರದ ನಿರ್ಮೂಲನೆ ಹಾಗು ಗುಣ ಮಟ್ಟದ ಯೋಜನೆಗಳಿಗೆ ಮೂಲ. ಇದನ್ನೂ ಪ್ರಜೆಗಳಿಗೆ ತೆರೆದಿಡ ಬೇಕು.

  ಪಾರದರ್ಶಕ ಸರಕಾರ - ಪ್ರಜಾಕೀಯ

8. ಕೆಲಸ ಮಾಡುವಾಗ ಕೆಲಸಗಾರರಿಗೆ ಬೇಕಾದ ಸೇಫ್ಟಿ ಉಪಕರಣ, ಉಡುಗೆ- ತೊಡುಗೆ, ಸಾರಿಗೆ ವ್ಯವಸ್ಥೆ, ಇತ್ಯಾದಿ ಒದಗಿಸುವ ಕಂಟ್ಯ್ರಾಕ್ಟರಿಗೆ ಮಾತ್ರ ಅವಕಾಶವಿರ ಬೇಕು. ಅವನು ಮಾಡದಿದ್ದರೆ ಕಾಂಟ್ರ್ಯಾಕ್ಟ್ ಹಿಂದೆ ತೆಗೆದು ಕೊಳ್ಳುವಂತಿರ ಬೇಕು. ಕೆಲಸ ಮಾಡಿದಷ್ಟನ್ನು ತಿಳಿದು ಅವನಿಗೆ ಪೇಮೆಂಟ್ ಮಾಡಿ ಬೇರೆ ಕಂಟ್ರ್ಯಾಕ್ಟರ್ಗೆ ಕೊಡ ಬೇಕು. ಮೊದಲಿನವನನ್ನು ಬ್ಲ್ಯಾಕ್ ಲೀಸ್ಟ್ ಮಾಡ ಬೇಕು.

9. ಪ್ರತೀ ಕಾಂಟ್ರೇಕ್ಟರ್ ಹಾಗು ಕನ್ಸಲ್ಟೆಂಟ್ ನ ಬ್ಯಾಂಕ್ ಅಕೌಂಟ್ ಸರಕಾರಿ ಡಾಟಾ ಬ್ಯಾಂಕ್ನಲ್ಲಿದ್ದು, ಹಂತ- ಹಂತಕ್ಕೆ ಕೆಲಸ ಮುಗಿದ ಕೂಡಲೆ ಹಾಗು ಕನ್ಸಲ್ಟೆಂಟ್ ನ ಅಪ್ರೂವಲ್ ಬಂದಾಗ ಹಣ ಕಾಂಟ್ರೇಕ್ಟರ್ನ ಅಕೌಂಟ್ಗೆ ಟ್ರಾನ್ಸ್ಫರ್ ಆಗಬೇಕು.

ಆನಂತರ, ಕೇವಲ ಕನ್ಸ್ಲಟೆಂಟ್ ಮಾತ್ರ, ಆಗಿ ಹೋದ ಕೆಲಸಕ್ಕೆ ಹೊಣೆಯಾಗುತ್ತಾನೆ.

ಕಾಂಟ್ರೇಕ್ಟರ್ ಹಾಗು ಕನ್ಸಲ್ಟೆಂಟ್ ಇಬ್ಬರೂ ಬ್ಯಾಂಕ್ ಗ್ಯಾರೆಂಟಿ ಒದಗಿಸ ಬೇಕು.

10. ಎಲ್ಲವನ್ನೂ ಟೆಲಿವಿಷನ್ ಮೂಲಕ ಪ್ರಜೆಗಳಿಗೆ ತಲುಪಿಸ ಬೇಕು.

11. ಸರ್ಕಾರಿ ಆಫೀಸ್ ಗಳಲ್ಲಿ ಸಿ.ಸಿ. ಟಿವಿ ಅಳವಡಿಸಬೇಕು.

12. ಸರ್ಕಾರಿ ನೌಕರರಿಗೆ ಸಮ ವಸ್ತ್ರವಿರಬೇಕು. ಒಂದೊಂದು ಮಂತ್ರಾಲಯಕ್ಕೆ ಒಂದೊಂದು ಬಣ್ಣವಿರ ಬೇಕು. ಪೋಲೀಸ್, ನರ್ಸ್, ಡಾಕ್ಟರ್, ಮಿಲಿಟರಿಯವರು ಸಮವಸ್ತ್ರ ಧರಿಸುವಾಗ, ಸರ್ಕಾರಿ ನೌಕರರು ದರಿಸುವುದರಲ್ಲಿ ಯಾವುದೇ ಅತಿಶಯೊಕ್ತಿ ಇಲ್ಲಿ.

13. ಸರ್ಕಾರಿ ನೌಕರರು ತಮ್ಮ ಹೆಸರು, ಪೊಸಿಶನ್, ಮಿನೀಷ್ಟ್ರಿ ಹೆಸರು ಹೊಂದಿದ ಐ.ಡಿ. ಕಾರ್ಡ್ನನ್ನು ತಮ್ಮ ಎದೆಯ ಮೇಲೆ ದರಿಸಲೆ ಬೇಕೆಂಬ ಕಾನೂನು ತರಬೇಕು. ಐ.ಡಿ. ಇಲ್ಲದೆ ಆಫೀಸಿಗೆ ಬರುವಂತಿಲ್ಲ.

14. ಎಲ್ಲಾ ಸರ್ಕಾರಿ ಆಫೀಸ್ ಗಳಲ್ಲಿ ಬಯೋಮೆಟ್ರಿಕ್ ಎಟೆಂಡೆನ್ಸ್ ಮೆಶೀನ್ ಇದ್ದು, ಕೇವಲ ಅದರ ಎಟೆಂಡೆನ್ಸ್ನ ಮೇಲೆ ಸಂಬಳ ತಯಾರಿಸಬೇಕು.

15. ಪ್ರತಿಯೊಂದು ಸರಕಾರಿ ಕೆಲಸಗಳಿಗೆ ಸಮಯ ನಿರ್ಧರಿಸಬೇಕು. ಪ್ರಜೆಗಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನೋಡಿ ಕೊಳ್ಳಬೇಕು. ಯಾವುದೇ ಕೆಲಸಕ್ಕೆ ಕೇವಲ 2 ಸಲ ಸರ್ಕಾರಿ ಆಫೀಸಿಗೆ ಹೋಗುವಂತಿರ ಬೇಕು. ಒಮ್ಮೆ ಸಬ್ಮಿಷನ್ ಹಾಗು ವೆರಿಫಿಕೇಷನ್, ಎರಡನೆ ಸಲ ಬೇಕಾದ ಡೊಕುಮೆಂಟ್ ಕಲೆಕ್ಟ್ ಮಾಡಲು. ಇದರಿಂದ ಪ್ರಜೆಗಳ ಮಿಲಿಯನ್- ಮಿಲಿಯನ್ ಮ್ಯಾನ್ ಡೇ ಉಳಿತಾಯವಾಗುವುದು. ಪ್ರೊಡಕ್ಟಿವಿಟಿ ಒಳ್ಳೆದಾಗುವುದು.

  ಸಾಯುವ ಸಮಯ - ಜೆನ್ ಕಥೆ ವಿಷಯ

16. ಸಮಯಕ್ಕೆ ಸರಿಯಾಗಿ ಮಾಡಿ ಕೊಡದ ಸರಕಾರಿ ನೌಕರನಿಗೆ ನೆಗೆಟಿವ್ ಪೋಯಿಂಟ್ ಅವನ ಪರ್ಸನಲ್ ಫೈಲ್ನಲ್ಲಿ ರೆಕಾರ್ಡ್ ಆಗಬೇಕು.ಅಗತ್ಯ ಬಿದ್ದರೆ ಟ್ರೈನಿಂಗ್ ಗೆ ಕಳುಹಿಸಬೇಕು ಅಥವಾ ಟ್ರಾನ್ಸ್ಫರ್ ಮಾಡ ಬೇಕು.

17. ಪೋಲೀಸ್, ಭ್ರಷ್ಟಾಚಾರ ನಿಗ್ರಹ ಸಂಸ್ಥೆ, ಲೋಕಾಯುಕ್ತ ಇವುಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸ ಬೇಕು. ಪ್ರಜೆಗಳ ಪ್ರತಿನಿಧಿಯಾಗಲಿ ಅಥವಾ ಸರ್ಕಾರಿ ಆಫೀಸರ್ಗಳು ಇವರ ಕೆಲಸದಲ್ಲಿ ಕೈ ಹಾಕುವಂತಿಲ್ಲ. ಇವುಗಳಿಗೆ ಬೇಕಾದ ಟ್ರೈನ್ಡ್ ಮ್ಯಾನ್ ಪವರ್, ಉಪಕರಣ, ವಾಹನ, ಆಫೀಸ್ ಹಾಗು ಸೌಕರ್ಯ ಒದಗಿಸ ಬೇಕು.

18. ಈಗಿರುವ 80,000 ಪೋಲೀಸ್ ಪಡೆಯನ್ನು ಡಬಲ್ ಮಾಡಬೇಕು( 1,60,000 ರಿಂದ 2,00,000). ಪ್ರತೀ ಗ್ರಾಮ ಪಂಚಾಯಿತಿ( 6100 ) ಹಾಗು ಪ್ರತೀ ವಾರ್ಡ್( 6000)ಗಳಲ್ಲಿ ಸಂಪೂರ್ಣ ಮೋಡರ್ನ್ ಪೊಲೀಸ್ ಸ್ಟೇಷನ್ ಇರ ಬೇಕು.ಸಂಪೂರ್ಣ ರಾಜ್ಯ ಪೋಲೀಸ್ ಸರ್ವೆಲೆನ್ಸ್ನಲ್ಲಿರ ಬೇಕು. ಕ್ರೈಮ್ ತನ್ನಷ್ಟಕ್ಕೆ ತಾನೆ ಕಡಿಮೆಯಾಗುವುದು.

19. ಪ್ರತೀಯೊಂದು ಸರ್ಕಾರಿ ಸಂಸ್ಥೆ, ಶಾಲೆ, ಆಸ್ಪತ್ರೆ, ಪೋಲೀಸ್ ಸ್ಟೇಷನ್, ಕಟ್ರಾಂಕ್ಟರ್, ಕನ್ಸಲ್ಟೆಂಟ್, ಸ

ಪ್ಲೈಯರ್, ಸರ್ಕಾರಿ ಡಿಪಾರ್ಟ್ ಮೆಂಟ್ಗಳ ಬ್ಯಾಂಕ್ ಅಕೌಂಟ್ ಸರಕಾರಿ ಡಾಟಾ ಬೇಸ್ನಲ್ಲಿದ್ಧು, ಹಣ ನೇರ ಅವರ ಅಕೌಂಟ್ಗೆ ವರ್ಗಾವಣೆ ಆಗಬೇಕು. ಎಲ್ಲಿಯೂ ಕ್ಯಾಶ್ ಅಥವಾ ಚೆಕ್ ವ್ಯವಹಾರವಿರ ಬಾರದು. ಸಮಯ- ಸಮಯಕ್ಕೆ ಹಣದ ವರ್ಗಾವಣೆ ಆಗಲೆ ಬೇಕು. ಬೇಕಾದರೆ ಬ್ಯಾಂಕ್ನಲ್ಲಿ ಸರಕ್ಕಾಗಿ ಓವರ್ ಡ್ರಾಫ್ಟ್ ವ್ಯವಸ್ಥೆ ಇರಲೆ ಬೇಕು.

20. ಸರಕಾರದ ಎಲ್ಲಾ ವ್ಯವಹಾರವೂ ಕಂಪ್ಯೂಟರ್ ಮುಖಾಂತರವೇ ಆಗಬೇಕು. ಎಲ್ಲಾ ಸರ್ಕಾರಿ ಆಫೀಸ್ ಗಳು ಕಂಪ್ಯೂಟರ್ ವ್ಯವಸ್ಥೆ ಯಿಂದ ಕೂಡಿರಬೇಕು. ಎಲ್ಲವೂ ಸರ್ಕಾರದ ಮೈನ್ ಕಂಪ್ಯೂಟರ್ಗೆ 24 ಗಂಟೆ ಕನೆಕ್ಟ್ ಆಗಿ ಇರಬೇಕು.
ಎಲ್ಲಾ ಇನ್ಫಾರ್ಮೇಷನ್ ಸರಕಾರದ ಮೈನ್ ಕಂಪೂಟರ್ನಲ್ಲಿ ಯಾವಾಗ ಬೇಕು, ಆವಾಗ ಸಿಗುವಂತಿರಬೇಕು.

Note:- ಎಲ್ಲದಕ್ಕೂ ಮೂಲ, ಪ್ರಜೆಗಳ ಡಾಟಾ ಬೇಸ್ ಸರಿಯಾಗಿ ಮಾಡಬೇಕು. ಒಂದು ದೊಡ್ಡ ಕಂಪ್ಯೂಟರ್ನಲ್ಲಿ ಎಲ್ಲವನ್ನೂ ತಯಾರಿಸಿ, ಅದಕ್ಕೆ ಕನೆಕ್ಟ್ ಮಾಡಿ ಸುಮಾರು 15,000 ಲ್ಯಾಪ್ಟಾಪ್ ಗಳಲ್ಲಿ ಪ್ರತೀ ಗ್ರಾಮ ಪಂಚಿಯಿತಿ, ವಾರ್ಡ್ಗಳ ಪ್ರಜೆಗಳ ವಿವರ ಸಂಗ್ರಹಿಸ ಬೇಕು. ಆನಂತರ ಇನ್ನೊಂದು ಗ್ರೂಪ್ ಇದನ್ನು ವೆರಿಫೈ ಮಾಡ ಬೇಕು. ಎಲ್ಲವೂ ಮನೆ- ಮನೆಗೆ ಹೋಗಿ ಸಂಗ್ರಹಿಸಬೇಕು. ಇದಕ್ಕೆ 3 ರಿಂದ 6 ತಿಂಗಳು ತಗಲ ಬಹುದು. ಪ್ರತೀಯೊಬ್ಬ ವಿವರ ಸಂಗ್ರಹಕರಿಗೆ ಸರಕಾರದಿಂದ ಐಡಿ ಒದಗಿಸಬೇಕು. ಇದನ್ನು ಜನರಿಗೆ ಮೊದಲೆ ತಿಳಿಸಬೇಕು ಹಾಗು ಡಾಟಾ ಬೇಸ್ನ ಮಹತ್ವವನ್ನೂ ತಿಳಿಸಿ ಬೇಕು. ಇದು ತಯಾರಾದರೆ ಮುಂದೆ ‌ಪ್ರಜೆಗಳ ಕೆಲಸ ಕೂಡಲೆ, ಯಾವುದೇ ವಿಳಂಬವಿಲ್ಲದೆ ಆಗುವುದಕ್ಕೆ ಸಂಶಯವಿಲ್ಲ. ರೈತನಾರು, ಬಡವನಾರು, ಶ್ರೀಮಂತನಾರು, ಸೀನಿಯರ್ ಸಿಟಿಜನ್ ಯಾರು, ಮಕ್ಕಳೆಷ್ಟು, ಯುವಕರೆಷ್ಟು, ವಿದುರನಾರು, ವಿದವೆಯಾರು, ಮನೆ ಇದ್ದವರಾರು, ಮನೆ ಇಲ್ಲದವರಾರು, ಆದಾಯವೆಷ್ಟು, ಯಾರ್ಯರಿಗೆ ಏನು ಸೌಲಭ್ಯ- ಸೌಕರ್ಯ ಸರಕಾರ ಒದಗಿಸ ಬೇಕೆಂಬ ಲೆಕ್ಕ ಸಿಕ್ಕಿದಾಗ, ಅದಕ್ಕೆ ಬೇಕಾದ ಹಣದ ವ್ಯವಸ್ಥೆ ಮಾಡಲಾಗುವುದು. ಎಲ್ಲವನ್ನೂ ಪ್ರಜೆಗಳಿಗೆ ತಿಳಿಸಿಯೆ ಮಾಡಬಹುದು.

  ರಾಜ್ಯದ ಮುಖ್ಯಮಂತ್ರಿ ಅಥವಾ ಮಂತ್ರಿ - ಪ್ರಜಾಕೀಯ

ಇದರೊಂದಿಗೆ ಹುಟ್ಪು- ಸಾವಿನ ವಿವರ ಸಂಗ್ರಹಕ್ಕೆ ಬೇಕಾದ ವ್ಯವಸ್ಥೆ ಕೂಡಾ ಮಾಡ ಬೇಕು. ಇಲ್ಲವಾದರೆ ಸಮಯ ಹೋಗುತ್ತಾ ಡಾಟ ಬೇಸ್ ದಾರಿ ತಪ್ಪ ಬಹುದು. ಹಾಗೆ ವೀದೇಶಕ್ಕೆ ಹೋಗಿ ಸೆಟ್ಲ್ ಆಗುವವರ ವಿವರವನ್ನೂ ಸಂಗ್ರಹಿಸ ಬೇಕು.

ಇದರಲ್ಲಿ ಯಾವೂದೂ ಆಗದಂತಹ ವಿಷಯವಿಲ್ಲ. ಇದು ಖಂಡಿತಾ ಸಾಧ್ಯ. ಕೇವಲ 2 ರಿಂದ 5,000 ಕೋಟಿ ಒಂದು ಸಲದ ಖರ್ಚು ತಗಲ ಬಹುದು.

ಇದು ಕೇವಲ 2% ಕರ್ನಾಟಕದ ವಾರ್ಷಿಕ ಬಜೆಟ್. ಅದು ಕೂಡಾ ಕೇವಲ ಒಂದು ಸಲ ಮಾಡಿದರೆ ಸಾಕು. 25 ವರ್ಷಕ್ಕೋ ಅಥವಾ 50 ವರ್ಷಕ್ಕೆ ಒಂದು ಸಲ. ಇದು ಈಗಿರುವ ಒಬ್ಬ ರಾಜಕಾರಣಿಯ ಸಂಪತ್ತಿಗಿಂತ ಕಡಿಮೆ. ಲೂಟಿ ಹೊಡೆಯಲು ಅಸಾಧ್ಯವಾಗುವುದೆಂಬ ಕಾರಣದಿಂದ ಇದನ್ನು ನಮ್ಮ ಸರಕಾರಗಳು ಮಾಡಲೆ ಇಲ್ಲ. ದೊಡ್ಡ-ದೊಡ್ಡ ವಿಧ್ಯಾವಂತರು, ಮೇಧಾವಿಗಳು ನಮ್ಮ ಸರಕಾರದಲ್ಲಿ ಇದ್ದಾರೆ.

ಅತಿಶಯೊಕ್ತಿ ಎಂದರೆ, ಸಂಪೂರ್ಣ ಜಗತ್ತಿಗೆ ನಮ್ಮ ಬೆಂಗಳೂರು IT Solution ಕೊಡುತ್ತಿದೆ. ಆದರೆ, ನಮ್ಮ ರಾಜ್ಯ ಲೂಟಿಕೊರರಿಂದ ಇದು ಇಲ್ಲಿ ಅಳವಡಿಸಲೇ ಇಲ್ಲಿ.

ಎಂತಹ ಧುರಾಧ್ರಷ್ಟವಯ್ಯಾ ?
ಎಂತಹ ಸರಕಾರವಯ್ಯಾ ?
ಇದು ಎಂತಹ ಲೋಕವಯ್ಯಾ ?

Leave a Reply

Your email address will not be published. Required fields are marked *

Translate »