ಕಾನೂನು ವ್ಯವಸ್ಥೆ.
ಯಾವ ದೇಶದಲ್ಲಿ ಕಾನೂನು ವ್ಯವಸ್ಥೆ ಸರಿಯಾಗಿರುವುದೊ, ಅಲ್ಲಿ ಪ್ರಜೆಗಳು ನೆಮ್ಮದಿಯಿಂದ ಬದುಕಲು ಸಾಧ್ಯ, ಹೆಂಗಳೆಯರು ಯಾವುದೇ ಮುಜುಗರವಿಲ್ಲದೆ ಸಂಚಾರ ಮಾಡಲು ಸಾಧ್ಯ. ಭ್ರಷ್ಟಾಚಾರವೂ ಅಡಗಿ ಹೋಗುತ್ತದೆ. ಇದೇ ಪ್ರಜೆಗಳನ್ನು ಪ್ರಾಮಾಣಿಕವಾಗಿ ಬದುಕಲು ಪ್ರೆರೇಪಿಸುತ್ತದೆ.
ಕೇವಲ ಕಾನೂನು ಬರೆದಿಟ್ಟ ಕಾರಣಕ್ಕೆ ಯಾವುದೇ ಬದಲಾವಣೆಯಾಗುವುದಿಲ್ಲ. ಕಾನೂನು ಸಮಾಜದಲ್ಲಿ ಅಳವಡಿಸ( Implement) ಬೇಕು.
ಅದಕ್ಕೆ ಬೇಕಾಗುವುದು ಸರಿಯಾದ ಹಾಗು ಆಧುನಿಕ ಕಚೇರಿ, ಉಪಕರಣ ಹಾಗು ತರಬೇತಿ ಪಡೆದ ಕೆಲಸಗಾರರು ಬೇಕು.
ಅದರೊಂದಿಗೆ ತೀವ್ರ ಗತಿಯಿಂದ ನಡೆಯುವ ಕೋರ್ಟ್- ಕಚೇರಿಗಳು ಬೇಕು.
ಮೊಟ್ಟ ಮೊದಲಿಗೆ ಪೋಲೀಸ್ ಸ್ಟೇಷನ್ ಹಾಗು ಪೋಲೀಸ್ ಪಡೆ ಬೇಕು. ಸಂಪೂರ್ಣ ಕರ್ನಾಟಕದ ಕಣ್ಗಾವಲು( Vigilance) ಆಗ ಬೇಕು.
ಮೈಕ್ರೊ ಗವರ್ನೆಂನ್ಸ್ ನಿಂದ ಪ್ರಾರಂಭ ಮಾಡುವುದಾದರೆ, ಅದು ಗ್ರಾಮ ಪಂಚಾಯಿತಿ ಹಾಗು ಪಟ್ಟಣದಲ್ಲಿ ವಾರ್ಡ್ ಗಳು.
6,100 ಗ್ರಾಮ ಪಂಚಾಯಿತಿ.
6000 ವಾರ್ಡ್ಗಳು.
ಮೊಟ್ಟ ಮೊದಲು ಈ 12,100 ಕೇಂದ್ರಗಳಲ್ಲಿ ಪೋಲೀಸ್ ಸ್ಟೇಷನ್ ಗಳು ನಿರ್ಮಾಣವಾಗ ಬೇಕು. ಇವುಗಳು, ಪೋಲೀಸ್ ಸ್ಟೇಷನ್ ಗಿಂತ ” ಕಾನೂನು ಕೇಂದ್ರ” ಗಳೆಂದು ಸಂಭೊಧಿಸುವುದು ಉತ್ತಮ.
ಕಾನೂನಿನ ಪ್ರತೀ ಪ್ರಕ್ರೀಯೆ ಇಲ್ಲಿಂದಲೆ ಪ್ರಾರಂಭವಾಗ ಬೇಕು.
256 ತಾಲೂಕು ಹಾಗು 30 ಜಿಲ್ಲಾ ಕೇಂದ್ರಗಳೂ ಇರಬೇಕು. ಬಹುಶ ಇವುಗಳು ಈಗಾಗಲೆ ಇದೆ. ಅವುಗಳನ್ನು ಆಧುನಿಕ ಮಟ್ಟಕ್ಕೆ ತಲುಪಿಸಬೇಕು.
ಕರ್ನಾಟಕದಲ್ಲಿ ಈಗಾಗಲೆ 80,000 ( ಎಂಬತ್ತು ಸಾವಿರ)ದ ಮೇಲೆ ಪೊಲೀಸ್ ಪಡೆ ಇರುವುದು.
ಪ್ರತೀ ಗ್ರಾಮ ಪಂಚಾಯಿತಿ ಹಾಗು ವಾರ್ಡ್ಗಳಲ್ಲಿ 1ರಿಂದ 2 ಎಕ್ರೆ ಜಾಗ ಇದಕ್ಕಾಗಿ ಮೀಸಲಿಡಬೇಕು. ಇಲ್ಲವಾದರೆ ಕೂಡಲೆ ಖರೀದಿಸಬೇಕು.
ಈ ಸ್ಥಳಗಳಲ್ಲಿ “ಕಾನೂನು ಕೇಂದ್ರ” ಗಳಿಗೆ ಬೇಕಾದ ಎಲ್ಲಾ ಕಟ್ಟಡ ವ್ಯವಸ್ಥೆ ನಿರ್ಮಿಸ ಬೇಕು.
ಅದರ ಪ್ಲಾನಿಂಗ್, ಇಲ್ಲಿ ನಾನು ವಿವರಿಸುವುದಿಲ್ಲ. ಅದನ್ನು ಕೂಲಂಕುಷವಾಗಿ ಬರೆಯ ಬೇಕಾಗುವುದು. ಇಲ್ಲಿ ಅದಕ್ಕೆ ಅವಕಾಶವಿಲ್ಲ.
ಈ 12,100 ಕಾನೂನು ಕೇಂದ್ರಗಳಲ್ಲಿ, ಪ್ರತೀ ಕೇಂದ್ರದಲ್ಲಿ 8 ರಿಂದ 12 ಪೋಲಿಸ್ ಪಡೆ ಇರಬೇಕು. ಇದು ಪ್ರೈಮರಿ ಲೆವೆಲ್ನ ಕಾನೂನು ಕೇಂದ್ರಗಳಾಗ ಬೇಕು.
12,100 X 8 = 96,800 ಪಡೆ.
ಈ ಎಂಟು ಜನರಲ್ಲಿ ಇಬ್ಬರು ಸರಾಗವಾಗಿ ಇಂಗ್ಲೀಷ್- ಕನ್ನಡ ಬರೆಯಲು-ಓದಲು ಬರುವ ಪೇದೆಗಳು ಕಾನೂನು ಕೇಂದ್ರದಲ್ಲಿ ಜನರ ಕಂಪ್ಲೈಂಟ್ ತೆಗೆದು ಕೊಳ್ಳುವಂತಿರ ಬೇಕು. ಎರಡು ಇನ್ಸ್ಪೆಕ್ಟರ್ ಹಾಗು ಎರಡು ಸಬ್ ಇನ್ಸ್ಪೆಕ್ಟರ್ ಇರಬೇಕು. ಎರಡು ಸಪೋರ್ಟಿಂಗ್ ಪೇದೆಗಳಿರ ಬೇಕು.
ನಿಜವಾಗಿ ಹೇಳುವುದಾದರೆ ಸುಮಾರು 2,00,000 ರಿಂದ 4,00,000 ಪೊಲೀಸ್ ಪಡೆ, ಕರ್ನಾಟಕದ 6,50,00,000 ಜನಸಂಖ್ಯೆಗೆ ಕನೀಷ್ಟ ಇರಬೇಕು.
1,30,00,000( ಒಂದು ಕೋಟಿ ಮೂವತ್ತು ಲಕ್ಷ) ಮಕ್ಕಳಿಗೆ ಪಾಠ ಹೇಳಿ ಕೊಡಲು 4,00,000 ಲಕ್ಷ ಅಧ್ಯಾಪಕರಿರುವ ರಾಜ್ಯದಲ್ಲಿ, 6,50,00,000( ಆರು ಕೋಟಿ ಐವತ್ತು ಲಕ್ಷ ) ಜನ ಸಂಖ್ಯೆಗೆ ಕಾನೂನು ಪಾಠ ಹೇಳಿ ಕೊಡಲು ಹಾಗು ಕಾನೂನು ಕಾಪಾಡಲು ಕೇವಲ 80,000 ಪೊಲೀಸ್ ಪಡೆ ? ಇದು ಯಾವ ನ್ಯಾಯ ?
ಇದರಿಂದ ನಮ್ಮ ರಾಜಕಾರಣಿಗಳು ಕಳೆದ 72ವರ್ಷದಲ್ಲಿ ರಾಜ್ಯದ ಕಾನೂನು ವ್ಯವಸ್ಥೆಗೆ ಎಷ್ಟು ಪ್ರಾಮುಖ್ಯತೆ ಕೊಟ್ಟಿರುವರೆಂದು ತಿಳಿಯುತ್ತದೆ. ನಮ್ಮ ರಾಜ್ಯ ಹಾಗು ದೇಶದ ಅದೋಗತಿಗೆ ಕಾರಣ ಈ ರಾಜಕಾರಣಿಗಳು ಹಾಗು ರಾಜಕೀಯಾ ಪಕ್ಷಗಳು. ಎದ್ದೇಳಿ ಪ್ರಜೆಗಳೆ.
33 ಮಕ್ಕಳಿಗೆ ಒಂದು ಅಧ್ಯಾಪಕರಿರುವ ರಾಜ್ಯದಲ್ಲಿ ಕಾನೂನು ಪಾಠ ಹೇಳಿ ಕೊಡಲು, ಸಮಾಜದ ರಾಕ್ಷಸರನ್ನು ಹಿಡಿಯಲು, ಶಾಂತಿ ಕಾಪಾಡಲು, ರಾಜಕಾರಣಿಗಳನ್ನು ಕಾಯಲು, ಇತ್ಯಾದಿಗಳಿಗೆ 813 ಜನರಿಗೆ ಒಬ್ಬರಂತೆ ಪೊಲೀಸ್ ಇರುವುದು ನ್ಯಾಯವೇ ?
This is the Gross Negligence of Law & Order.
ಪೊಲೀಸ್ ಪಡೆಯನ್ನು ಅತೀಯಾಗಿ ಉಪಯೋಗಿಸಿ, ಹಾಗು ಸಮಯ – ಸಮಯಕ್ಕೆ ಅವರಿಗೆ ಬೇಕಾದ ತರಬೇತಿ ಕೊಡದೆ, ಅವರೆಲ್ಲರನ್ನೂ ಅರ್ಧ ಸತ್ತಾಗೆ ಮಾಡಿರುವುದು ನಮ್ಮ ಸರ್ಕಾರಗಳು. ದೇಶದ ಕಾನೂನಿನ ಅಧೋಗತಿಗೆ ಕಾರಣರಾದ ಈ ರಾಜಕಾರಣವನ್ನು ತಿರಸ್ಕರಿಸ ಬೇಕು.
Prevention is better than cure.
ಅನ್ಯಾಯ( ಕ್ರೈಮ್) ನಡೆದು, ಅದನ್ನು ಕಂಡು ಹಿಡಿದು, ನಂತರ ಅದಕ್ಕೆ ಸಂಬಂದ ಪಟ್ಟ ವರಿಗೆ ಶಿಕ್ಷೆ ಕೊಡಲು ಎಷ್ಟು ಜನ – ಹಣ ಖರ್ಚಾಗುವುದು ಹಾಗು ಅದರಿಂದ ಪ್ರಾಣ ಹಾನಿ- ಸಂಪತ್ತು ಹಾನಿಯಾದ ಕುಟುಂಬಗಳ ಗೋಳಿಗಿಂತ, ಅದು ಆಗದ ಹಾಗೆ ನೋಡಿ ಕೊಂಡರೆ, ಎಷ್ಟು ಪ್ರಾಣ, ಸಂಪತ್ತು, ಪೊಲೀಸ್- ಸರ್ಕಾರದ ಸಂಪತ್ತು ಹಾಗು ಸಮಯವನ್ನು ಉಳಿಸ ಬಹುದು. ಅದೇ ಹಣದಿಂದ ಇನ್ನೆರಡು ಲಕ್ಷ ಪೊಲೀಸ್ ಪಡೆಗೆ ಸಂಬಳ ಕೊಡಬಹುದು. ಕೋರ್ಟ್ ಕಚೇರಿಗಳಿಗೂ ಅಷ್ಟು ಹಣ ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ.
ನಮ್ಮಂತಹ ” ಸತ್ತ ಮೇಲೆ ಮದ್ದು ಕೊಡುವ ಸರಕಾರ” ಗಳು ಇರುವವರೆಗೆ ನಾವು ಹೀಗೆ ಬದುಕು ಬೇಕಾಗುವುದು.
ಪ್ರಜೆಗಳೇ, ನೀವೇ ನಿರ್ಧಾರ ಮಾಡಿ.
ಸತ್ತ ಮೇಲೆ ಬರುವ ಸರಕಾರ ಬೇಕೇ ?
ಅಥವಾ ಸಾಯದಂತೆ ನೋಡಿ ಕೊಳ್ಳುವ ಸರಕಾರ ಬೇಕೇ ?
ಸೂಕ್ಷ್ಮ, ಸಕ್ಷಮ ಹಾಗು ಅವಶ್ಯಕತೆಯ ದೇಶದ ಕಾನೂನು ವ್ಯವಸ್ಥೆಯೇ ಇದಕ್ಕೆ ಮೂಲ ಹಾಗು ಪರಿಹಾರ ವ್ಯವಸ್ಥೆ.
ಬನ್ನಿ ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯಾ ಪಕ್ಷ ದೊಂದಿಗೆ ಕೈ ಜೋಡಿಸಿ.
ಜೈ ಪ್ರಜಾಕೀಯಾ.