ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ರಾಜಕೀಯ

ರಾಜ- ನಾಯಕ- ಸೇವಕ ಎಂಬುದು ರಾಜಕೀಯಾ ಹಾಗು ರಾಜರ ಮಾತು.

ಪ್ರಜಾಕಾರ್ಮಿಕ – ಪ್ರಜೆಗಳ ಪ್ರತಿನಿಧಿ ಎಂಬುದು ಪ್ರಜಾಕೀಯಾ.

Representation of People’s Act ನಲ್ಲೂ ಹೇಳಿರುವುದು “ಪ್ರಜೆಗಳ ಪ್ರತಿನಿಧಿ” ಎಂದು ಮಾತ್ರ. ಎಲ್ಲೂ ನಾಯಕ -ಸೇವಕ ಎಂದು ಹೇಳಲಿಲ್ಲ.

ಪ್ರಜೆಗಳು ಕಟ್ಟಿದ ತೆರಿಗೆ ಹಣವನ್ನು ಪ್ರಜೆಗಳ ಸೌಕರ್ಯ- ಸೌಲಭ್ಯಗಳಿಗೆ ಸೂಕ್ತವಾಗಿ ಅಳವಡಿಸಿ, ಪ್ರಜೆಗಳು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಲು, ನಾವು ಪ್ರತಿನಿಧಿಯನ್ನು ಆರಿಸುತ್ತೇವೆ.

ಅದಕ್ಕಾಗಿ ಅವನಿಗೆ ಸಂಬಳ, ಭತ್ತೆ, ಮನೆ, ವಾಹನ, ಸಾರಿಗೆ ಖರ್ಚು, ಕೆಲಸಕ್ಕೆ ಜನ, ಮೆಡಿಕಲ್ ಹಾಗು ಪಿಂಚಣಿ, ನಮ್ಮ ತೆರಿಗೆ ಹಣದಿಂದ ಕೊಡುತ್ತಿರುವಾಗ, ಎಲ್ಲಿಯ ಸೇವೆ- ಎಲ್ಲಿಯ ನಾಯಕ ?

  ಸಣ್ಣವರಿದ್ದಾಗ - ದೊಡ್ಡವರಾದ ಮೇಲೆ - ಕಾಲ

ನಿಜವಾಗಿ ಅವನು ಪ್ರಜೆಗಳ ಕಾರ್ಮಿಕ- ಪ್ರಜೆಗಳ ಕೆಲಸದವನು.

ಇನ್ನು ಮುಂದೆ ಈ ದೇಶದಲ್ಲಿ ನಾಯಕನೂ ಇರಬಾರದು ಹಾಗು ಸೇವಕನೂ ಇರಬಾರದು.

ಕೇವಲ ಪ್ರಜಾಕಾರ್ಮಿಕನಿರ ಬೇಕು.

ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯಾ ಪಕ್ಷ(UPP) ಇದನ್ನೆ ಪ್ರತಿಪಾದಿಸುತ್ತದೆ ಹಾಗು ಅದೇ ದಿಕ್ಕಿನಲ್ಲಿ ಮುಂದುವರಿದು, ದೇಶ- ರಾಜ್ಯವನ್ನು ಭ್ರಷ್ಟ ರಾಜಕಾರಣಿ, ರಾಜಕೀಯಾ ಪಕ್ಷ, ನಾಯಕ ಹಾಗು ಸೇವಕರಿಂದ ಮುಕ್ತವಾಗಿ ಮಾಡುವುದು ಹಾಗು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು.

ಎಲ್ಲಾ ನಿರ್ಧಾರವು ಪ್ರಜೆಗಳಿಂದಲೇ ಬರುವಂತಹ ಸ್ವಚ್ಚ – ಪಾರದರ್ಶಕ ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗದ ನಿರ್ಮಾಣ ಮಾಡುವುದು.

  ಶಾಸಕಾಂಗ ಸಭೆಯ ಸದಸ್ಯರ ಪಾತ್ರಗಳು ಮತ್ತು ಜವಾಬ್ದಾರಿಗಳು. ಶಾಸಕರ (ಎಂಎಲ್‌ಎ) ಪಾತ್ರವೇನು ತಿಳಿಯಿರಿ ?

ಎಲ್ಲಾ ಮಾಧ್ಯಮಗಳು ಯಾವುದೇ ಪ್ರತಿನಿಧಿ, ಸರ್ಕಾರಿ ನೌಕರರು ಹಾಗು ಭ್ರಷ್ಟ ರಾಜಕೀಯಾ ಪಕ್ಷಗಳ ಒತ್ತಡಕ್ಕೊಳಗಾಗದೆ ಸ್ವತಂತ್ರವಾಗಿ ಕಾರ್ಯ ಮಾಡುವಂತಹ ಅವಕಾಶ ಮಾಡಿ ಕೊಡಬೇಕು.

ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗದ ಸದಸ್ಯರು ಅಥವಾ ಅವರ ಕುಟುಂಬದವರು ಯಾರೂ ಮಾಧ್ಯಮದಲ್ಲಿ ಪಾಲುದಾರರು ಆಗದಂತೆ ಕಾನೂನು ತರಬೇಕು.

ಮಾಧ್ಯಮವು ಸಮಾಜದ ಕಣ್ಣು. ಅದು ಸ್ವತಂತ್ರ ದ್ರಷ್ಟಿಯಿಂದ ಸಮಾಜವನ್ನು ಅವಲೋಕಿಸುವಂತಿರ ಬೇಕು.

ಸ್ವಚ್ಚ, ಸುಂದರ, ನಿಯಮಿತ, ಕಾನೂನು ಬದ್ದ, ಭ್ರಷ್ಟ ಮುಕ್ತ ಹಾಗು ನೆಮ್ಮದಿಯ ಸಮಾಜ ನಿರ್ಮಾಣ ಮಾಡ ಬೇಕು.

  ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ

ಇದೇ ನಮ್ಮೆಲ್ಲರ ಧ್ಯೇಯವಾಗ ಬೇಕು.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).

Leave a Reply

Your email address will not be published. Required fields are marked *

Translate »