ಪ್ರಜೆಗಳ ಪ್ರತಿನಿಧಿ ಯಾರಾಗಬೇಕು ? ಪ್ರಜಾಕೀಯ ದಾರಿಯಲ್ಲಿ
ಪ್ರಜೆಗಳಲ್ಲಿ ಒಬ್ಬ,
ಪ್ರಜೆಗಳ ಸಂಪರ್ಕದಲ್ಲಿದ್ದು,
ಪ್ರಜೆಗಳಿಗಾಗಿ ಮಿಡಿಯುವ ಮನಸ್ಸಿದ್ದವ,
ಪ್ರಜೆಗಳ ಅವಶ್ಯಕತೆಯನ್ನು ಕಾರ್ಯಾಂಗದಿಂದ ಮಾಡಿಸಿ ಕೊಳ್ಳುವವ,
ಪ್ರಜೆಗಳ ತೆರಿಗೆ ಹಣ ನೂರಕ್ಕೆ ನೂರು ಪ್ರಜೆಗಳ ಸೌಕರ್ಯ- ಸೌಲಭ್ಯಕ್ಕೆ ಉಪಯೋಗಿಸುವವ,
ಭ್ರಷ್ಟಾಚಾರವನ್ನು ತನ್ನ ಕಡೆ ಸುಳಿಯಲು ಬಿಡದವ,
ತನ್ನ ಸ್ವಂತ ಹಾಗು ಪ್ರಜೆಗಳ ಕೆಲಸಕ್ಕೆ ಯಾವುದೇ ಸಂಪರ್ಕ ಕಲ್ಪಿಸದವ,
ಚುಣಾಯಿತ ಜವಾಬ್ದಾರಿಯನ್ನು ಕೂಲಂಕುಷವಾಗಿ ಪರಿಪಾಲಿಸುವ,
ಪ್ರಜೆಗಳ ಪ್ರತಿನಿಧಿಯಾಗ ಬೇಕೆ ವಿನಹ,
ಉದ್ಯಮಿ,
ವಾಗ್ಮಿ,
ಪ್ರತಿಷ್ಟಿತ,
ಸುಳ್ಳು ಹೇಳುವವ,
ಹಣದ ಪಿಪಾಸಿ,
ಅಧಿಕಾರ ಧಾಹಿ,
ಭ್ರಷ್ಟ ರಾಜಕಾರಣಿ,
ನನ್ನಿಂದಲೆ ಎಲ್ಲವೂ ಎಂಬ ಅಹಂಕಾರ ಇರುವವ ಹಾಗು
ಜನರ ಭವಿಷ್ಯದ ಅರಿವಿಲ್ಲದವನು
ಪ್ರಜೆಗಳ ಪ್ರತಿನಿಧಿಯಾಗುವುದಲ್ಲ.
ಕಳೆದ 72 ವರ್ಷದಲ್ಲಿ ಕೇವಲ ಎರಡನೆಯದೇ ನಡೆದಿದೆ. ಖಂಡಿತಾ ಅಲ್ಲೊಂದು- ಇಲ್ಲೊಂದು ಅಪವಾದವಿದೆ. ಅವರಿಗೆ ಅವಕಾಶವೆ ಸಿಗುತ್ತಿಲ್ಲ.
ಸಮುದ್ರದಲ್ಲಿ ಸೇರಿದ ಎಲ್ಲ ತರಹದ ನೀರು ಉಪ್ಪಾಗುವುದು ಸ್ವಾಭಾವಿಕ.
ಉತ್ತಮ ಪ್ರಜಾಕೀಯಾ ಪಕ್ಷದ ಪ್ರತಿನಿಧಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸ ಬೇಕು.
ಇದು ನಿಜವಾದ ಬದಲಾವಣೆ.
ಇಲ್ಲಿಂದಲೆ ಭ್ರಷ್ಟಾಚಾರದ ನಿರ್ಮೂಲನೆ ಪ್ರಾರಂಭವಾಗ ಬೇಕು.