ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜೆಗಳ ಪ್ರತಿನಿಧಿ ಯಾರಾಗ ಬೇಕು ? – ಪ್ರಜಾಕೀಯ

ಪ್ರಜೆಗಳ ಪ್ರತಿನಿಧಿ ಯಾರಾಗ ಬೇಕು ? – ಪ್ರಜಾಕೀಯದ ಚಿಂತನೆ

 1. ತನ್ನ ಸಂಪೂರ್ಣ ಸಮಯ ಪ್ರಜೆಗಳಿಗಾಗಿ ಮೀಸಲಿಡುವ ಪ್ರಜೆ.
 2. ಕೇವಲ MLA- MP ಗಳಿಗೆ ಸಿಗುವ ಸಂಭಾವನೆ ( ಸಂಬಳ- ಭತ್ತೆ) ಯಲ್ಲಿ ಜೀವನ ಮಾಡುವ ದ್ರಡ ಸಂಕಲ್ಪ.
 3. ಇದರೊಂದಿಗೆ ತನ್ನ ಕುಟುಂಬವನ್ನೂ ಕಡೆಗಣಿಸದೆ, ಅವರಿಗೂ ಕ್ವಾಲಿಟಿ ಸಮಯ ಕೊಡ ಬೇಕು.
 4. ಯಾವುದೇ ಅನೈತಿಕ ಹಣ ಮಾಡುವ ಎಳ್ಳಷ್ಟು ಆಸೆ ಇರಬಾರದು.
 5. ಪ್ರಾಮಾಣಿಕವಾಗಿ ಬದುಕುವ ಹಂಬಲವಿರ ಬೇಕು.
 6. ಪ್ರತಿ ಪ್ರಜೆಯ ತೊಂದರೆಗಳನ್ನು ಆಲಿಸುವ ಹ್ರಧಯವಂತನಾಗಿರ ಬೇಕು.
 7. ತನ್ನ ಕ್ಷೇತ್ರದ ವಿಷಯ ವಿವರವಾಗಿ ತಿಳಿದುಕೊಂಡು, ಅದಕ್ಕೆ ತಕ್ಕಂತೆ ಅವಶ್ಯಕತೆಗಣುಗುಣವಾಗಿ ಕಾರ್ಯಮಾಡುವ ಕಾರ್ಯ ಕುಶಲತೆ ಹೊಂದಿರ ಬೇಕು.
 8. ಎಲ್ಲದರಲ್ಲೂ ಪಾರದರ್ಶಕತೆಯಿಂದ ವ್ಯವಹಾರ ಮಾಡುವ ಮಾನಸಿಕ ಪ್ರಬುದ್ಧತೆ ಇರ ಬೇಕು.
 9. ಜೀವನವು ಶಿಸ್ತು ಬದ್ದವಾಗಿ, ಯಾವುದೇ ಕ್ರಿಮಿನಲ್ ಕೇಸ್ ಗಳಲ್ಲಿ ಬೆರೆತಿರ ಬಾರದು. ಸಂಪೂರ್ಣ ಸ್ವಚ್ಚ ಜೀವನ ಮಾಡಿರ ಬೇಕು ಹಾಗು ಮುಂದೆಯೂ ಅದನ್ನು ಕಾಪಾಡಿಕೊಂಡು ಬರುವಂತಹ ದ್ರಡತೆ ಇರಬೇಕು.
 10. ಕನ್ನಡ- ಇಂಗ್ಲೀಷ್ ಭಾಷೆಯಲ್ಲಿ ಓದುವ, ಬರೆಯುವ ಹಾಗು ಮಾತನಾಡುವ ಅನುಭವವಿರಬೇಕು.
 11. ಪ್ರತೀಷ್ಟೆ ಅಥವಾ ಘನತೆ ಎಂಬ ಮನೋಭಾವ ಇರಲೇ ಬಾರದು. ತಾನೂ ಪ್ರಜೆಗಳಳ್ಳೊಬ್ಬನು ಎಂಬ ದ್ರಡವಾದ ನಂಬಿಕೆ ಇರಬೇಕು.
 12. ತನ್ನ ಸ್ಥಾನ- ಮಾನದ ಅನೈತಿಕ ಉಪಯೋಗ ಎಲ್ಲಿಯೂ ಮಾಡ ಬಾರದು.
 13. ಎಲ್ಲವೂ ಪ್ರಜೆಗಳ ಮೇಲೆ ಕೇಂದ್ರಿಕರಿತವಾಗಿರ ಬೇಕು.
 14. ಆತ್ಮಸಾಕ್ಷಿಯಾಗಿ ಎಲ್ಲಾ ವ್ಯವಹಾರವನ್ನು ಮಾಡುವ ಸ್ವಚ್ಚಂದ ಮನಸಿನವನಾಗಿರ ಬೇಕು.
 15. ಪ್ರಜೆಗಳ ವಿಧೇಯ ಕೆಲಸದವನಾಗಿ, ತನ್ನ ಕರ್ತವ್ಯವನ್ನು ಶಿರಸಾ ವಹಿಸಿ ಮಾಡುವುದೇ – ಪ್ರಜೆಗಳ ಪ್ರತಿನಿಧಿ.

Leave a Reply

Your email address will not be published. Required fields are marked *

Translate »