ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

Education System – ವಿಧ್ಯಾಭ್ಯಾಸ ನೀತಿ – ಪ್ರಜಾಕೀಯ

Education System. ವಿಧ್ಯಾಭ್ಯಾಸ ನೀತಿ.

1. ಮಕ್ಕಳಿಗೆ ಯಾವುದೇ ರೀತಿಯ ಒತ್ತಡವಿರಬಾರದು.

2. ಮಕ್ಕಳು ಮುಕ್ತ ಮನಸ್ಸಿನಿಂದ ಶಾಲೆಯ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರನ್ನು ತಯಾರು ಮಾಡಬೇಕು.

3. ಮಕ್ಕಳು ಸಂತೋಷದಿಂದ ಖುಶಿ- ಖುಶಿಯಾಗಿ ಶಾಲೆಗೆ ಹೋಗುವ ವಾತಾವರಣ ನಿರ್ಮಿಸ ಬೇಕು.

4. ಮಕ್ಕಳ ಮನೊ ವಿಕಾಸಕ್ಕೆ ಅನುಕೂಲವಾದ ಶಾಲಾ ವಾತಾವರಣ ನಿರ್ಮಿಸ ಬೇಕು.

5. ಆಟ- ಊಟದೊಂದಿಗೆ ಮಗು ಕಲಿಯುವಂತಾಗ ಬೇಕು.

6. ಮಗುವೇ ಶಾಲೆಗೆ ಹೋಗುವ ಹಟ ಹಿಡಿಯುವಂತಹ ಹಾಗು ಯಾವುದೇ ಅಪರಾಧಿ ಭಾವ ( Guilty Concious) ಮಕ್ಕಳಲ್ಲಿ ಮೂಡದಂತೆ ಶಾಲಾ ವಾತಾವರಣ ಆಗಬೇಕು.

7. ಮಕ್ಕಳ ತಪ್ಪನ್ನು ದೊಡ್ಡದಾಗಿ ತೋರಿಸದೆ, ಅದನ್ನು ಸಮಾಧಾನದಿಂದ ತಿದ್ದುವ ಮನೋಭಾವದ ಶಾಲಾ ಸಿಬ್ಬಂದಿ ವರ್ಗವಾಗ ಬೇಕು.

8. ಎಲ್ಲಾ ಶಾಲೆಗಳಲ್ಲಿ ಬೇಕಾದ ಸಾರಿಗೆ ವ್ಯವಸ್ಥೆ ಇರಬೇಕು.

  ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು?

9. ಶಾಲೆಗಳಲ್ಲಿ ಎಲ್ಲಾ ರೀತಿಯ ಆಟದ ( Sports) ವ್ಯವಸ್ಥೆ, ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಕೂಡಾ ಇರಬೇಕು.

10.ಶಾಲಾ ಕಟ್ಟಡ ವಿಧ್ಯಾರ್ಥಿಗಳ ಅವಶ್ಯಕತೆಯ ಸಾಧನದೊಂದಿಗೆ ತಯಾರು ಮಾಡಬೇಕು.

11. ಕ್ರಷಿಯಿಂದ ಹಿಡಿದು ಎಲ್ಲಾ ಕೈಗಾರಿಕಾ ಕೇಂದ್ರಗಳಿಗೆ ಮಕ್ಕಳನ್ನು ಕನೀಷ್ಟ ವರ್ಷಕ್ಕೆ ಮೂರರಿಂದ ಆರು ಬಾರಿ ಮುಖತಾ ತೋರಿಸ ಬೇಕು. ಇದರಿಂದ ಮಕ್ಕಳ ನಿಜವಾದ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟಂತಾಗಿ, ಮಗು 18 ವರ್ಷಕ್ಕೆ ಬರುವಷ್ಟರಲ್ಲಿ ತನ್ನ ಪ್ರತಿಭೆ ಹಾಗು ಫ್ಯಾಶನ್ ಗುರುತಿಸಿ ಕೊಳ್ಳಲು ಸಹಾಯವಾಗುವುದು.

12. ಪರೀಕ್ಷೆಯ ಒತ್ತಡವನ್ನು ಕನೀಷ್ಟ ಮಾಡ ಬೇಕು.

13. ವಿಧ್ಯಾಭ್ಯಾಸ, ಕೇವಲ ಕೆಲಸ ಸಿಗುವುದಕ್ಕೆ ಸೀಮಿತವಾಗದೆ, ಮಕ್ಕಳ ಮನೋ ಧೈರ್ಯವನ್ನು – ಸೆಲ್ಫ್ ಕಾನ್ಫಿಡೆನ್ಸ್ ನ್ನು ಹೆಚ್ಚಿಸುವಲ್ಲಿ ಸಹಾಯವಾಗ ಬೇಕು.

14. ಕನ್ನಡ ಹಾಗು ಇಂಗ್ಲೀಷ್ ಎರಡು ಭಾಷೆಯಲ್ಲಿ ಮಕ್ಕಳು ಮಾತನಾಡುವಷ್ಟು ಖಂಡಿತಾ 7ನೇ ತರಗತಿಗೆ ಬರುವ ಮೊದಲೇ ಕಲಿತಿರ ಬೇಕು. ಒಂದು ಮಾತ್ರ್ ಭಾಷೆ, ಇನ್ನೊಂದು ವ್ಯವಹಾರ ಭಾಷೆ. ಮಗು ಯೌವನ ಅವಸ್ಥೆ ಯಲ್ಲಿ ಯಾವುದೇ ರೀತಿಯ ಭಾಷೆಯ ನೆಪದಲ್ಲಿ ಹಿಂಜರಿಯ ಬಾರದು. ನಾವು ತುಳು ಮಾತನಾಡುವವರು ಕಡಿಮೆ ಎಂದರೆ ಮೂರು ಭಾಷೆ ಮಾತನಾಡುತ್ತೇವೆ. ಆದ್ದರಿಂದ ಪ್ರತೀ ಮಗು ಎರಡು ಭಾಷೆ ಕಲಿಯಲು ಯಾವುದೇ ಅಡಚಣೆ ಇಲ್ಲ. ನಾನು 5 ಭಾಷೆ ಮಾತನಾಡುತ್ತೇನೆ ಹಾಗು ಬರೆಯಲು ಓದಲೂ ಕಲಿತ್ತಿದ್ದೇನೆ. ಯಾವುದೇ ಒತ್ತಡದಿಂದ ಈ ಭಾಷೆಗಳನ್ನು ಕಲಿತ್ತಿಲ್ಲ.

  ಮಕರ ಸಂಕ್ರಾಂತಿಯ ಮಹತ್ವ

15. ಮಕ್ಕಳಿಗೆ ಹೋಮ್ ವರ್ಕ್ ಎಂಬ ಪಿಡುಗಿನಿಂದ ದೂರ ಇಡಬೇಕು. ಎಲ್ಲವೂ ಶಾಲೆಯಲ್ಲಿಯೆ ಮಗು ಮಾಡ ಬೇಕು. ಕೇವಲ ಶಾಲೆಯಲ್ಲಿ ಮಾಡುವಷ್ಟು ಸಿಲೆಬಸ್ ಇರಬೇಕು. ಎಲ್ಲಿಯೂ ಒತ್ತಡ ಬರಬಾರದು.

16. ಮಗುವಿನ ಬಾಲ್ಯ ಶಾಲೆಯ ಹೋಮ್ ವರ್ಕ್, ಪರೀಕ್ಷೆ, ತಂದೆ-ತಾಯಿಯ ಒತ್ತಡ, ಬೇರೆ ಮಕ್ಕಳೊಂದಿಗೆ ಹೊಲಿಸುವ ಒತ್ತಡ, ಟೀಚರ್ಗಳ ಒತ್ತಡದಿಂದ ಮುದುಡಿ ಹೋಗ ಬಾರದು. ಮರದಲ್ಲಿ ಅರಳುವ ಮೊಗ್ಗಿನಂತೆ ಸ್ವಚ್ಚಂದ ವಾತಾವರಣದಲ್ಲಿ ಮಕ್ಕಳ ಬೆಳವಣಿಗೆ ಆಗಬೇಕು.ಒತ್ತಡ ರಹಿತ ಬಾಲ್ಯವಾಗಿ, ಮಕ್ಕಳ ಮನಸ್ಸು ಸೂಕ್ತವಾಗಿ ಯಾವುದೆ ಅಪರಾಧಿ ಭಾವನೆ ಇಲ್ಲದೆ ಬೆಳೆಯಬೇಕು.

  ಸಾವಿನ ನಂತರ ಜೀವ ಎಲ್ಲಿಗೆ ಹೋಗುತ್ತದೆ? ಸ್ವರ್ಗ ನರಕಗಳು ಇರುವುದು ನಿಜವೇ?

ಆವಾಗಲೆ ಸಂಶೋಧನೆ( Innovative) ಮಾಡುವ ಯುವ ಸಮಾಜದ ನಿರ್ಮಾಣವಾಗುವುದು. ಧೈರ್ಯವಾಗಿ( Confident) ಜೀವನ ನಡೆಸುವ ಯುವ ಸಮೂಹವೇ ಉತ್ಪತ್ತಿಯಾಗುವುದು.

Most Productive & Innovative Young Population ನಿರ್ಮಾಣವಾಗುವುದು.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ( UPP).

Leave a Reply

Your email address will not be published. Required fields are marked *

Translate »