ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪುರುಷರಿಗೆ ಪ್ರವೇಶವಿಲ್ಲದ ಭಾರತದ 7 ದೇವಸ್ಥಾನಗಳು – Men’s Restricted 7 Temples

ಪುರುಷರಿಗೆ ಪ್ರವೇಶವಿಲ್ಲದ ಭಾರತದ 7 ದೇವಸ್ಥಾನಗಳು 
1. ಚಕ್ಕುಲತುಕವು ಮಂದಿರ / Chakkulathukavu Devi Temple
2. ಕೊಟ್ಟಂಕುಲಂರ ದೇವಿ / Kottankulangara Devi Temple 
3. ಮಾತಾ ಮಂದಿರ / Maata Mandir
4. ಕಾಮಾಖ್ಯ ದೇವಾಲಯ / Kamakhya Temple 
5. ಸಾವಿತ್ರಿ ದೇವಾಲಯ / Savitri temple 
6. ಭಗವತಿ ಮಾ ಮಂದಿರ / Shri Amman Temple, Vijayanagari
7. ಅಟ್ಟುಕಲ್ ಮಂದಿರ / Attukal Bhagavathy Temple

1. ಚಕ್ಕುಲತುಕವು ಮಂದಿರ:  ಕೇರಳದಲ್ಲಿರುವ ಭಗವತಿ ದೇವಿಯ ದೇವಾಲಯ. ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು, ಡಿಸೆಂಬರ್ ಮೊದಲ ವಾರದ ಶುಕ್ರವಾರದಿಂದ 10 ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದ ತೊಳೆಯುವರು.

https://goo.gl/maps/anwaZy4nJ5g5rQRc8

2. ಕೊಟ್ಟಂಕುಲಂರ ದೇವಿ, ಕೇರಳ: ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಪುರುಷರು ಮಹಿಳೆಯರ ವೇಷ ಧರಿಸಿ ಬಂದು ಮಹಿಳೆಯರ ಆಶೀರ್ವಾದ ಪಡೆದುಕೊಳ್ಳುತ್ತಾರೆ.

  ಚೂಡಾಮಣಿ ಸೂರ್ಯ ಗ್ರಹಣದ ಸಂಪೂರ್ಣ ವಿವರ

https://goo.gl/maps/oWyW95exsCV7oP3r8

3.ಮಾತಾ ಮಂದಿರ: ಬಿಹಾರದ ಮುಝಫ್ಫರಪುರದಲ್ಲಿರುವ ಈ ಮಂದಿರಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಂದಿರದ ಒಳಗೆ ಪುರುಷ ಅರ್ಚಕರಿಗೂ ಪ್ರವೇಶವಿಲ್ಲ. ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ.

https://goo.gl/maps/wHxeYPEVz8bzXJLF8

4. ಕಾಮಾಖ್ಯ ದೇವಾಲಯ :  ಗುಹವಾತಿಯಲ್ಲಿರುವ ಕಾಮಾಖ್ಯ ದೇವಾಲಯದ ರೀತಿಯಲ್ಲೇ ಇದು ಸಹ ಇದೆ. ತಿಂಗಳಿನ ಕೆಲ ದಿನ ಇಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ. ದೇವಿ ತನ್ನ ನಿಸರ್ಗದ ಕ್ರಿಯೆಯಲ್ಲಿ ಇರುತ್ತಾಳೆ ಎಂನ ನಂಬಿಕೆ ಇದ್ದು ಆ ಸಂದರ್ಭ ಪುರುಷರಿಗೆ ಪ್ರವೇಶ ಇಲ್ಲ.

https://goo.gl/maps/ECge9WiZ6X3uQWG97

5. ಸಾವಿತ್ರಿ ದೇವಾಲಯ, ರಾಜಸ್ಥಾನ:  ರಾಜಸ್ಥಾನದ ಪುಷ್ಕರ್ ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞವೊಂದನ್ನು ಆಯೋಜಿಸುವರು. ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು. ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆಯಾಗುವರು ಮತ್ತು ವಿಧಿವಿಧಾನಗಳನ್ನು ಪೂರೈಸುವರು. ಇದರಿಂದ ಕೋಪಿತರಾದ ಸರಸ್ವತಿ ದೇವಿಯು ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶಿಸಬಾರದು ಮತ್ತು ಹಾಗೊಂದು ವೇಳೆ ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಶಾಪ ನೀಡಿದ್ದಾಳೆ ಎಂದು ಪುರಾಣ ಹೇಳುತ್ತದೆ.

  ಶ್ರೀಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ ಉಡುಪಿ

https://goo.gl/maps/Hu8E27C4xNdmvLqS7

6.  ಭಗವತಿ ಮಾ ಮಂದಿರ :  ಈ ಮಂದಿರವು ಕನ್ಯಾಕುಮಾರಿಯಲ್ಲಿದೆ. ಕನ್ಯಾ ಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿಯು ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರದ ಆವರಣದ ತನಕ ಮಾತ್ರ ಪ್ರವೇಶವಿದೆ. ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ.

https://goo.gl/maps/dUbGvmf867pMT7Q9A

  ಮಂತ್ರಾಲಯದ ಪಂಚಮುಖಿ ಆಂಜನೇಯ ದೇವಸ್ಥಾನ..!

7. ಅಟ್ಟುಕಲ್ ಮಂದಿರ: ಕೇರಳದ ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಬರೆದಿದ್ದಾರೆ. ಹಬ್ಬದ ವೇಳೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ

https://goo.gl/maps/xoHK6tzoNfZ3VYRZ6

Leave a Reply

Your email address will not be published. Required fields are marked *

Translate »