ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಗಮನಕ್ಕೆ

ಎಲ್ಲಾ ಪ್ರಜಾಕೀಯಾ ಹಾಗು ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಗಮನಕ್ಕೆ.

ಯಾರು ಏನು ತಿನ್ನಬೇಕು, ಯಾವ ಬಟ್ಟೆ ಹಾಕಬೇಕು, ಯಾವ ಧರ್ಮ, ಜಾತಿ, ಭಾಷೆ, ಪಂಗಡವನ್ನು ಅನುಸರಿಸಬೇಕು, ಎಂಬ ವಿಷಯ ಆರಿಸಿ ಬಂದ ಪ್ರತಿನಿಧಿಗಳ ಕೆಲಸವಲ್ಲ.

ಅದನ್ನು ನಮ್ಮ ದೇಶದ ಸಂವಿಧಾನ ವಿವರವಾಗಿ ಈಗಾಗಲೇ ತಿಳಿಸಿರುವುದು. ಹಾಗೆ ಅ ಹಕ್ಕನ್ನು ಸಂವಿಧಾನದಲ್ಲಿ ಪ್ರಜೆಗಳಿಗೆ ಕೊಟ್ಟಿರುತ್ತದೆ. ಸಂವಿಧಾನದ ಪ್ರಕಾರವೇ ಇವರು ಆರಿಸಿ ಬಂದಿರುವುದಲ್ಲವೇ ?

ಕೇವಲ ನಮ್ಮ ತೆರಿಗೆ ಹಣವನ್ನು ಎಲ್ಲಿಯೂ ಭ್ರಷ್ಟಾಚಾರದ ಸೊಂಕು ಇಲ್ಲದೆ ಪ್ರಜೆಗಳ ಮೂಲಭೂತ ಸೌಕರ್ಯಕ್ಕಾಗಿ ಉಪಯೋಗಿಸಿ ರಾಜ್ಯದ-ದೇಶದ ಅಬಿವ್ರಧ್ಧಿ ಮಾಡುವುದು ಆರಿಸಿ ಬಂದ ಪ್ರತಿನಿಧಿಗಳ ಕೆಲಸ. ಅದಕ್ಕಾಗಿ ಪ್ರಜೆಗಳ ತೆರಿಗೆ ಹಣದಿಂದ ಇವರಿಗೆ ಸಂಬಳ, ಬತ್ತೆ, ವಾಹನ, ಆಫೀಸು, ಮೆಡಿಕಲ್, ಉಚಿತ ವಿಮಾನ ಯಾನ, ರೈಲ್ವೆ ಯಾನ, ಕೆಲಸಕ್ಕೆ ಜನ ಹಾಗು ಪಿಂಚಣಿ ಎಲ್ಲವನ್ನೂ ಕೊಡುತ್ತಿರುವೆವು.

ಅಷ್ಟೆ ಅಲ್ಲ, ಕಾರ್ಯಾಂಗದ ಸರ್ಕಾರಿ ನೌಕರರು ಭ್ರಷ್ಟಾಚಾರ ಮಾಡಿದಾಗ, ಅವರನ್ನು ನ್ಯಾಯಾಂಗಕ್ಕೆ ಶಿಕ್ಷೆ ಗುರಿಪಡಿಸಲು ಒಪ್ಪಿಸುವುದು. ಆದರೆ ಎಲ್ಲಿಯೂ ಪ್ರತಿನಿಧಿಗಳು ಕಾರ್ಯಾಂಗದ ಕ್ರೀಯೆಯಲ್ಲಿ ಕೈ ಹಾಕುವಂತಿಲ್ಲ.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಸಮಾಜ ಕಣ್ಣಾದ ಮಾಧ್ಯಮಗಳು ಎಲ್ಲವೂ ಸ್ವತಂತ್ರವಾಗಿ ಕೆಲಸ ಮಾಡ ಬೇಕು. ಒಬ್ಬರ ಭ್ರಷ್ಟಾಚಾರವನ್ನು ಇನ್ನೊಬ್ಬರು ಹಿಡಿದು ನ್ಯಾಯಾಂಗಕ್ಕೆ ಒಪ್ಪಿಸಬೇಕು.

  ಶ್ರಾವಣಮಾಸ ಕೃಷ್ಣಪಕ್ಷದ ಏಕಾದಶಿ "ಅಜಾ" ಏಕಾದಶಿ

ಆದರೆ ಈಗ ಎಲ್ಲವನ್ನೂ ಟ್ರಾನ್ಸ್ಫರ್ ಎಂಬ ಅಸ್ತ್ರ ಉಪಯೋಗಿಸಿ, ಶಾಸಕಾಂಗವು ಎಲ್ಲರನ್ನೂ ತನ್ನ ಕೈಯಲ್ಲಿಟ್ಟು ಕೊಂಡು, ಭ್ರಷ್ಟ ವ್ಯವಸ್ಥೆಯ ಆಗರವಾಗಿದೆ.

ಸರ್ಕಾರಿ ಟೆಂಡರ್, ಸರ್ಕಾರಿ ನೌಕರರ ನೇಮಕ, ಸರ್ಕಾರಿ ನೌಕರರ ಬಡ್ತಿ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಕೆಲಸಗಳು, ಸರ್ಕಾರಿ ಯೋಜನೆಗಳು, ಎಲ್ಲವೂ ಭ್ರಷ್ಟಾಚಾರದಿಂದಲೆ ನಡೆಯುತ್ತಿರುವುದರಿಂದ ಸಾಮಾನ್ಯ ಪ್ರಜೆ ನೆಮ್ಮದಿಯಿಂದ ಬದುಕಲು ಸಾಧ್ಯವೇ ?

ಇದು ಸಂಪೂರ್ಣ ನಿಲ್ಲಬೇಕು. ಆವಾಗಲೆ ದೇಶ- ರಾಜ್ಯ ಅಬಿವ್ರಧ್ಧಿಯಾಗುವುದು. ಬೇರೆ ಯಾವುದೇ ಪರಿಯಾಯವಿಲ್ಲ.

ಆದ್ದರಿಂದ ಯಾವುದೇ ಪ್ರತಿನಿಧಿ ಧರ್ಮ, ಜಾತಿ, ಪಂಗಡ, ಭಾಷೆ, ಆಹಾರ ವಿಧಾನ, ತೊಡುವ ಬಟ್ಟೆಯ ವಿಷಯ ಮಾತನಾಡಿದಲ್ಲಿ ಅವರನ್ನು ಸಂವಿಧಾನ ವಿರೋದಿಯೆಂದು ಪರಿಗಣಿಸಿ, ವಿರೋದ ಮಾಡ ಬೇಕು.

ಶೋಷಿತ ಪ್ರಜೆಗಳಿಗೆ ಸಂವಿಧಾನದಲ್ಲಿ ವಿಶೇಷ ಅವಕಾಶ ಈಗಾಗಲೆ ಇರುವುದರಿಂದ, ಅದೂ, ಸಂವಿಧಾನದ ನಿಯಮಗಳಂತೆ ನಡೆಯುತ್ತಿರುವುದು.

ಶಾಸಕರು – ಪ್ರಜಾ ಪ್ರತಿನಿಧಿಗಳು ಪ್ರಜೆ ಹಾಗು ಕಾರ್ಯಾಂಗದ ಮಧ್ಯೆ ಸೇತುವೆ ಆಗಬೇಕು. ಪ್ರಜೆಗಳ ಅವಶ್ಯಕತೆ ಹಾಗು ಮೂಲಭೂತ ಸೌಲಭ್ಯ- ಸೌಕರ್ಯಗಳನ್ನು ಕಾರ್ಯಾಂಗದಿಂದ ಮಾಡಿಸುವುದು ಶಾಸಕಾಂಗದ ಕೆಲಸ.

  ಕೋಪೇಶ್ವರ ದೇವಸ್ಥಾನ ಕೊಲ್ಲಾಪುರ

ಆದ್ದರಿಂದ ಕಾರ್ಯಾಂಗದಲ್ಲಿ ಪ್ರತಿಯೊಂದು ಕೆಲಸಕ್ಕೆ ನಿರ್ಧಿಷ್ಟ ವಿಧ್ಯಾಭ್ಯಾಸದ ಅವಶ್ಯಕತೆ ಇರುವುದು.

ಆದರೆ ಶಾಸಕಾಂಗದ ಸದಸ್ಯರಿಗೆ ಯಾವುದೇ ವಿಧ್ಯಾಭ್ಯಾಸದ ಅವಶ್ಯಕತೆ ಸಂವಿಧಾನದಲ್ಲಿಯೇ ಕೇಳಿಲ್ಲ. ಯಾಕೆಂದರೆ, ಇವರು ಕೇವಲ ಪ್ರಜೆಗಳ ಪ್ರತಿನಿಧಿಗಳು.

ಬೇಕಾದ ಎಲ್ಲಾ ಎಕ್ಸ್ಪರ್ಟ್ ಗಳು ಕಾರ್ಯಾಂಗದಲ್ಲಿದ್ದು , ಅಲ್ಲಿಂದಲೆ ಎಲ್ಲಾ ಪ್ರಕ್ರೀಯೆಗಳು ನಡೆಯಬೇಕು. ಆದರೆ ಈಗ ನಮ್ಮ ಶಾಸಕರು ದೇಶದ ಒಡೆಯರಂತೆ ಹಾಗು ಕಾರ್ಯಾಂಗದ ಬೋಸ್ ಗಳಂತೆ ವರ್ತಿಸುತ್ತಾರೆ. ಇದು ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಬರೆದಿದೆಯೆ ?

ಇವರು ಕೇವಲ ಶಾಸಕರು ಹಾಗು ಶಾಸನ( ಕಾನೂನು) ಮಾಡುವುದು ಇವರ ಪರಿಮಿತಿಯ ಕೆಲಸ. ಅದು ಕೂಡಾ ಪಾರ್ಲಿಮೆಂಟ್ ಹಾಗು ವಿಧಾನ ಸಭೆಯಲ್ಲಿ ಚರ್ಚಿಸಿ ಹಾಗು ಮೆಜೋರಿಟಿ ಓಟಿನ ಮುಖಾಂತರ ಪಾಸ್ ಆಗಬೇಕು. ಆನಂತರ ಮೇಲ್ಮನೆಯಲ್ಲಿ ಪಾಸಾಗಿ, ಪ್ರೆಸಿಡೆಂಟ್ ಹಾಗು ಗವರ್ನರ್ ಅಂಕಿತವಾಗ ಬೇಕು. ಆವಾಗಲೆ ಅದು ಕಾನೂನು ಆಗುವುದು.

ಇಲ್ಲಿ ಇನ್ನೊಂದು ವಿಷಯ, ಕರ್ನಾಟಕ ರಾಜ್ಯದಲ್ಲಿ ಕೇವಲ 224 ಶಾಸಕರು, ಆದರೆ ಕಾರ್ಯಾಂಗದಲ್ಲಿ 8,50,000( including 4,00,000 Teaching Staff and 80,000 Police Force) ಪ್ರಜೆಗಳಿರುವರು. ಇದು ಯಾಕೆ ಬರೆದೆನೆಂದರೆ, 224 ಪ್ರತಿನಿಧಿಗಳು 8,50,000 ಕಾರ್ಯಾಂಗದ ಪ್ರಜೆಗಳನ್ನು ಅವರ ಕೆಲಸದವರಂತೆ ನಡೆಸಿ ಕೊಳ್ಳುವುದು ಆನ್ಯಾಯವಲ್ಲವೇ ?

  ಮನೆಯಲ್ಲಿ ಗಣೇಶ ಮೂರ್ತಿ ಇಡಲು ಕೆಲವು ಪ್ರಮುಖ ವಾಸ್ತು ಸಲಹೆಗಳು

ಇದು ಯಾಕೆ ನಡೆಯುತ್ತಿರುವುದು ಎಂದು ಪ್ರಶ್ನೆ ಮಾಡಿದಾಗ ಕಂಡು ಬರುವುದು, ಇವರೆಲ್ಲರೂ ಭ್ರಷ್ಟಾಚಾರದಲ್ಲಿ ಪಾಲುದಾರರು. Guilty human is always a slave of dominating human. ಅಪರಾಧಿ ಭಾವನೆಯ ಮನುಷ್ಯ ಯಾವಾಗಲೂ ಬಲಿಷ್ಟ ಮನುಷ್ಯನ ಗುಲಾಮನಾಗುತ್ತಾನೆ.

ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗ ಎಲ್ಲರಿಗೂ ಪ್ರಜೆಗಳ ತೆರಿಗೆ ಹಣದಿಂದಲೆ ಸಂಭಾವನೆ ಸಿಗುವುದರಿಂದ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗಿಂತ ಶ್ರೇಷ್ಟವಾಗಿರುವುದು ಕೇವಲ ಪ್ರಜೆಗಳು. ದೇಶವು ಪ್ರಜೆಗಳ ತೆರಿಗೆ ಹಣದಿಂದಲೆ ನಡೆಯುವುದು.

“ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗು ಪ್ರಜೆಗಳಿಗೊಸ್ಕರ” ನಡೆಯುವ ಪ್ರಕ್ರೀಯೆಯೆ ಪ್ರಜಾಪ್ರಭುತ್ವವಾಗಿರುವುದು.

ಪ್ರಜಾಕೀಯಾದ ಹಾಗು ಉತ್ತಮ ಪ್ರಜಾಕೀಯಾ ಪಕ್ಷದ ಅಭ್ಯರ್ಥಿಗಳು ಇದನ್ನು ಸರಿಯಾಗಿ ಅರ್ಥ ಮಾಡಿ ಕೊಳ್ಳಬೇಕು.

ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »