ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜೆಗಳ ಪ್ರಜಾಕೀಯ

Prajaakeeya ಪ್ರಜೆಗಳ “ಪ್ರಜಾಕೀಯ”

ನಾನೊಬ್ಬ ಭಾರತದ ಪ್ರಜೆ, ಕರ್ನಾಟಕ ರಾಜ್ಯ ವಾಸಿ. ನನ್ನ ಮೊದಲ ಕರ್ತವ್ಯ, ನನ್ನ ಕುಟುಂಬ, ನನ್ನ ಸಮಾಜ, ನನ್ನ ರಾಜ್ಯ, ನನ್ನ ದೇಶ.

ಮೊಟ್ಟ ಮೊದಲು ನನ್ನ ಕರ್ತವ್ಯ, ನನ್ನ ಕುಟುಂಬದ ಮೂಲಭೂತ ಸೌಕರ್ಯ-ಸೌಲಭ್ಯ, ಏಳಿಗೆ, ರಕ್ಷಣೆ ಹಾಗು ಜವಾಬ್ದಾರಿ.
ಅದು ಆಗ ಬೇಕಾದರೆ, ನಾನು ಕಟ್ಟುವ ತೆರಿಗೆ ಹಣದಿಂದ ನನ್ನ ಕುಟುಂಬದ ಮೂಲಭೂತ ಸೌಕರ್ಯ- ಸೌಲಭ್ಯ ( ನೀರು, ವಿಧ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ರಸ್ತೆ- ಸಾರಿಗೆ, ಕಾನೂನು ವ್ಯವಸ್ಥೆ, ಕಸ ವಿಲೆವಾರಿ, ಇತ್ಯಾದಿ)ಗಳನ್ನು, ನಾನು ಆರಿಸಿ ಕಳುಹಿಸಿದ ಸರಕಾರವು ಮಾಡಬೇಕು. ಇವೆಲ್ಲಾ ಸಾರ್ವಜನಿಕ ವ್ಯವಸ್ಥೆಗಳು.

ಆದರೆ, ನನ್ನ ತೆರಿಗೆ ಹಣ ಭ್ರಷ್ಟಾಚಾರದಿಂದ ಪೋಲಾಗಿ, ಎಲ್ಲಾ ಸಾರ್ವಜನಿಕ ವ್ಯವಸ್ಥೆಗಳು ಕಳಪೆ ಆದಾಗ, ನನ್ನ ಕರ್ತವ್ಯ ಏನು ? ಆ ಸರಕಾರ ಅಥವಾ ಆ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಲ್ಲವೇ ? ಇದು ಪ್ರತೀಯೊಬ್ಬ ಪ್ರಜೆಯ ಕರ್ತವ್ಯವಲ್ಲವೇ ?

ಆದರೆ, ಮೊದಲು ನನ್ನಲ್ಲಿ(ಪ್ರಜೆ) ಬದಲಾವಣೆ ಆಗಬೇಕು. ಹೀಗೆ, ಪ್ರತಿಯೊಬ್ಬ ಪ್ರಜೆಯಲ್ಲಿ ಬದಲಾವಣೆ ಆಗಬೇಕು. ಆವಾಗಲೆ, ಸಮಾಜದಲ್ಲಿ ಆಗುವ ಕೆಟ್ಟ ವ್ಯವಸ್ಥೆಯ ಬದಲಾವಣೆ ಆಗಿ ಸ್ವಚ್ಚ ಸಮಾಜ ಹಾಗು ವ್ಯವಸ್ಥೆ ನಿರ್ಮಾಣ ಆಗುವುದು.

ಆದ್ದರಿಂದ, ಇಲ್ಲಿ ಬದಲಾವಣೆ ಆಗ ಬೇಕಿರುವುದು, ನಾನು, ನೀನು, ಅವನು, ಅವಳು, ಪ್ರಜೆಗಳು. ಪ್ರಜೆಗಳ ಮನಸ್ಥಿತಿ ಬದಲಾದರೆ, ಸಮಾಜವೇ ಬದಲಾಗುವುದು. ನಾವೇ ಸಮಾಜ, ಸಮಾಜವೇ ನಾವು. ದೇಶ-ರಾಜ್ಯ ಎಂಬುದು ಒಂದು ಬೌಗೋಳಿಕ ವ್ಯವಸ್ಥೆ. ಅದು ಶಾಶ್ವತ. ಬದಲಾವಣೆ ಆಗ ಬೇಕಿರುವುದು, ಅದರಲ್ಲಿ ವಾಸವಾಗಿರುವ ಪ್ರಜೆಗಳ ಮನಸ್ಸು, ಆಲೋಚನೆ ಹಾಗು ನಿರ್ಧಾರ.

ಕಳೆದ 75 ವರ್ಷ ನಾವೆಲ್ಲರೂ, ನಮ್ಮ ದೇಶದ ಸಂವಿಧಾನದಂತೆ ಮುಂದುವರಿಯುತ್ತಿರುವೆವು ಹಾಗು ಮುಂದೆ ಕೂಡಾ ಅದರಲ್ಲಿ ತಿಳಿಯ ಹೇಳಿದ ದಾರಿಯಲ್ಲಿಯೇ ನಡೆಯಬೇಕು. ಆದರೆ, ಅದರಂತೆ ನಡೆಯ ಬೇಕಾದ ನಮ್ಮ ಪ್ರಜಾ ಪ್ರತಿನಿಧಿಗಳು ಹಾಗು ಸರಕಾರಿ ಅಧಿಕಾರಿಗಳು, ನಮ್ಮ ದೇಶದ ತೆರಿಗೆ ಹಣವನ್ನು ಭ್ರಷ್ಟ ವ್ಯವಸ್ಥೆಯಿಂದ ಲೂಟಿ ಹೊಡೆದು, ನಮ್ಮ ಸಾರ್ವಜನಿಕ ಸೌಲಭ್ಯ-ಸೌಕರ್ಯಗಳು ಕಳಪೆಯಾಗಿ,, ಖಾಸಾಗಿಯವರ ಕೈಯಲ್ಲಿ ಪ್ರಜೆಗಳ ಜುಟ್ಟು ಕೊಟ್ಟಿರುವರು. ಅದು ವಿಧ್ಯಾಭ್ಯಾಸವಾಗಲಿ, ಆರೋಗ್ಯವಾಗಲಿ, ರಸ್ತೆ- ಸಾರಿಗೆ ಆಗಲಿ, ಕಾನೂನು ವ್ಯವಸ್ಥೆ ಆಗಲಿ, ಎಲ್ಲದರಲ್ಲೂ ಖಾಸಾಗಿಯವರು ಪ್ರಜೆಗಳನ್ನು ಹಿಂಡಿ ಹೀರುತ್ತಿರುವರು.

ಇದು ಖಂಡಿತಾ ನಮ್ಮ ಸಂವಿಧಾನದಂತೆ ನಡೆಯುವುದಿಲ್ಲ.

ಹಾಗಾದರೆ, ಇಲ್ಲಿ ಬದಲಾವಣೆ ಆಗ ಬೇಕಿರುವುದು, ನಮ್ಮ ತೆರಿಗೆ ಹಣವನ್ನು ನಿರ್ವಹಿಸುವ ಪ್ರಜೆಗಳ ಪ್ರತಿನಿಧಿಗಳು ಹಾಗು ಅವರೊಂದಿಗೆ ಸೇರಿ ಕೊಂಡಿರುವ ಸರಕಾರಿ ಅಧಿಕಾರಿಗಳು.

ಯಾವಾಗ ಸ್ವಚ್ಚ ಹಾಗು ಪ್ರಾಮಾಣಿಕ ಪ್ರಜಾ ಪ್ರತಿನಿಧಿಗಳು ಸರಕಾರದ ಜವಾಬ್ದಾರಿಯನ್ನು ವಹಿಸುವರೋ, ಅಂದು ಅಧಿಕಾರಿಗಳೂ ಸ್ವಚ್ಚ-ಪ್ರಾಮಾಣಿಕ ಆಗುವರು ಹಾಗು ಭ್ರಷ್ಟ ವ್ಯವಸ್ಥೆಗೆ ಕೊನೆ ಆಗುವುದು.

ಹಾಗಾದರೆ, ಇಲ್ಲಿ ಎಲ್ಲಾ ಭ್ರಷ್ಟ ವ್ಯವಸ್ಥೆಗೆ ಕಾರಣಿಭೂತರು, ನಾವು ಚುನಾಯಿಸಿ ಕಳುಹಿಸುವ ಪ್ರಜಾ ಪ್ರತಿನಿಧಿಗಳು-ರಾಜಕಾರಣಿಗಳು.

ಸರಕಾರದಲ್ಲಿ ಸ್ವಚ್ಚ- ಪ್ರಮಾಣಿಕ ಪ್ರಜಾ ಪ್ರತಿನಿಧಿಯನ್ನು ಚುನಾಯಿಸುವವರು ನಾವು, ಪ್ರಜೆಗಳೇ. ಕಳೆದ 75 ವರ್ಷದಿಂದ ನಡೆದು ಬರುತ್ತಿರುವ ಚುಣಾವಣಾ ಪ್ರಕ್ರಿಯೆಯಿಂದ ಖಂಡಿತಾ ಸಾಧ್ಯ ಆಗಲಿಲ್ಲ. ಭ್ರಷ್ಟಾಚಾರವು ದಿನೇ-ದಿನೇ ಉಲ್ಬಣ ಆಗುತ್ತಾ ಹೋಯಿತು.

ಸಾವಿರ-ಸಾವಿರ ಕೋಟಿ ಖರ್ಚು ಮಾಡಿ, ಚುನಾವಣೆ ನಿಲ್ಲುವ ಅಭ್ಯರ್ಥಿ ಹಾಗು ಪಕ್ಷಗಳು. ಭ್ರಷ್ಟಾಚಾರವನ್ನು ಹೋಗಲಾಡಿಸುದೆಂದು ತಿಳಿಯುವ ಪ್ರಜೆಗಳು, ನಾವೆಷ್ಟು ಮೂರ್ಖರು !

ಕಟ್ಟ-ಕಡೆಗೆ ನಮಗೆಲ್ಲರಿಗೂ ಕಂಡು ಬರುವ ಸತ್ಯವೇ, ಚುಣಾವಣೆಯಲ್ಲಿ ಖರ್ಚು ಮಾಡಲು, ಉಪಯೋಗಿಸಲ್ಪಡುವ ಭ್ರಹತ್ ಹಣದ ಹೊಳೆಯೇ, ಎಲ್ಲಾ ಭ್ರಷ್ಟ ವ್ಯವಸ್ಥೆಗೆ ಕಾರಣ.

ಇದು ನಿಲ್ಲ ಬೇಕಲ್ಲವೇ ?
ನಾವು ಪ್ರಜೆಗಳು ಸೇರಿ ಇದಕ್ಕೆ ಮುಕ್ತಾಯ ಹಾಡ ಬೇಕಲ್ಲವೇ ?
ಭ್ರಷ್ಟ ವ್ಯವಸ್ಥೆ ತೊಲಗ ಬೇಕಲ್ಲವೇ ?
ನಮ್ಮ ತೆರಿಗೆ ಹಣ ನೂರಕ್ಕೆ-ನೂರು ಶೇಖಡಾ ನಮ್ಮ ಮೂಲಭೂತ ಸೌಕರ್ಯ-ಸೌಲಭ್ಯಕ್ಕೆ ಉಪಯೋಗ ಆಗ ಬೇಕಲ್ಲವೇ ?
ರಾಜ್ಯ-ದೇಶದಲ್ಲಿ ಅಭಿವೃಧ್ಧಿ ಆಗ ಬೇಕಲ್ಲವೇ ?
ಎಲ್ಲಾ ಪ್ರಜೆಗಳು ನೆಮ್ಮದಿಯ ಜೀವನ ಸಾಗಿಸಬೇಕಲ್ಲವೇ ?
ಪ್ರತೀ ಪ್ರಜೆಗೂ ಮೂಲಭೂತ ಸೌಕರ್ಯ-ಸೌಲಭ್ಯ ಸಿಗ ಬೇಕಲ್ಲವೇ ?

ಹಾಗಾದರೆ, ಇಲ್ಲಿ ಆಗ ಬೇಕಾಗಿರುವುದು ಏನು ?

ಇದೊಂದು ಲಕ್ಷ-ಲಕ್ಷ ಕೋಟಿಯ ಪ್ರಶ್ನೆ.

ಇದಕ್ಕೆ ಪರಿಹಾರ ಅಥವಾ ಸಮಾಧಾನ ಏನೆಂದು ಹುಡುಕುತ್ತಾ ಹೋದರೆ ತಿಳಿಯುವಂತಹ ಮುಖ್ಯ ವಿಷಯ

1. ಪ್ರಾಮಾಣಿಕ, ಸಂಬಳ ಹಾಗು ನ್ಯಾಯ ಬದ್ದವಾದ ಸಂಭಾವನೆಗಾಗಿ ಕೆಲಸ ಮಾಡುವ ಪ್ರತಿನಿಧಿಯ ಆಯಿಕೆ.

2. ಹಣ ಉಪಯೋಗಿಸದೆ ಚುಣಾವಣೆಯಲ್ಲಿ ಭಾಗವಹಿಸುವುದು.

3. ಪ್ರತಿನಿಧಿಯು ತನ್ನ ದಾರಿ ತಪ್ಪದಂತೆ ಹಾಗು ತನ್ನ ಸಮಯವನ್ನು ಪ್ರಜೆಗಳಿಗೆ ಹಾಗು ರಾಜ್ಯಕ್ಕೆ ಮೀಸಲಿಡುವಂತೆ, ಅವನಿಗೆ ಕರ್ತವ್ಯ ನಿಭಾಯಿಸಲು ಒಂದು ಮಾರ್ಗ ಸೂಚಿ (SOP -Standard Operating Procedure).

4. ಸಮಯ-ಸಮಯಕ್ಕೆ ಪಕ್ಷದ ಕಡೆಯಿಂದ, ಪ್ರಜೆಗಳ ಅಭಿಪ್ರಾಯದಂತೆ ಅವನ ಮೌಲ್ಯ- ಮಾಪನ.

5. ಅವನ ಕ್ಷೇತ್ರದ ಮೆಜೋರಿಟಿ ಪ್ರಜೆಗಳು ಅವನನ್ನು ತಿರಸ್ಕರಿಸಿದಲ್ಲಿ, ಅವನಾಗಿಯೇ ರಾಜಿನಾಮೆ ಕೊಡುವೆನೆಂದು, ಚುಣಾವಣೆಯ ಮೊದಲೇ ಸಹಿ ಹಾಕಿ ಒಪ್ಪಿ ಕೊಂಡಿರುತ್ತಾನೆ.

ಇದು ಸಾಧ್ಯವೇ ?

ಮೇಲಿನ 5 ವ್ಯವಸ್ಥೆಯನ್ನು ಒಳಗೊಂಡು, ಯಾವುದೇ ಸಧಸ್ಯತ್ವ ಶುಲ್ಕ ಇಲ್ಲದೆ, ಪಾರ್ಟಿ ಫಂಡ್ ಇಲ್ಲದೆ ಹಾಗು ಯಾವುದೇ ದೇಣಿಗೆ ತೆಗೆದು ಕೊಳ್ಳದೆ ನಡೆಯುವ ಪ್ರಪಂಚದ ಏಕೈಕ ಪಕ್ಷ..

“ಪ್ರಜಾಕೀಯ ಸಿಧ್ಧಾಂತ”ದಂತೆ ನಡೆಯುವ “ಉತ್ತಮ ಪ್ರಜಾಕೀಯ ಪಕ್ಷ”.

ಇಲ್ಲಿ ನಾಯಕ-ಸೇವಕ ಸಂಸ್ಕ್ರತಿಯೂ ಇರುವುದಿಲ್ಲ. ಚುನಾಯಿತ ಪ್ರತಿನಿಧಿಯು ಸಂಬಳಕ್ಕಾಗಿ ಕೆಲಸ ಮಾಡುವ “ಪ್ರಜಾ ಕಾರ್ಮಿಕ” ನಾಗಿ ಪ್ರಜೆಗಳ- ರಾಜ್ಯದ ಕೆಲಸ ಮಾಡುವನು.

ಇಲ್ಲಿ ಒಂದು, ಪ್ರಜೆಗಳ ಮನಸ್ಸಿನಲ್ಲಿರುವ ಮಹತ್ತರ ಪ್ರಶ್ನೆ, ಇವೆಲ್ಲವನ್ನೂ ಹಣ ಖರ್ಚು ಮಾಡದೆ ರಾಜ್ಯದ ಮೂಲೆ- ಮೂಲೆಗೆ ಹೇಗೆ ತಲುಪುವುದೆಂದು ?

ಸಾಮಾಜಿಕ ಜಾಲತಾಣ (Social Media) ಎಂಬ ತಂತ್ರ ಜ್ಞಾನ ಇವೆಲ್ಲದರ ಕೊರತೆಯನ್ನು ನೀಗಿಸುವುದು. ಸುಮಾರು 50 ಕೋಟಿ ಭಾರತೀಯ ಯುವಕ -ಯುವತಿಯರು ಸಾಮಾಜಿಕ ಜಾಲತಾಣವನ್ಞು ಉಪಯೋಗಿಸುವರು. ಹಾಗೆ, ಅವಕಾಶ ಸಿಕ್ಕರೆ, ಟಿ.ವಿ ಹಾಗು ಪ್ರಿಂಟ್ ಮಾಧ್ಯಮಗಳನ್ನೂ ಉಪಯೋಗಿಸಲಾಗುವುದು. ಉಳಿದವರಿಗೆ, ನೇರ ಸಂಪರ್ಕದಿಂದ ತಮ್ಮ-ತಮ್ಮ ಕ್ಷೇತ್ರದ ಪ್ರಜೆಗಳಿಗೆ ತಿಳಿಸಲಾಗುವುದು.

ಈಗಾಗಲೆ, ಸುಮಾರು 40% ಕರ್ನಾಟಕದ ಪ್ರಜೆಗಳನ್ನು ತಲುಪಲಾಗಿದೆ. ಬರುವ ಕೆಲವೇ ವರ್ಷದಲ್ಲಿ ಸಂಪೂರ್ಣ ಕರ್ನಾಟಕವನ್ನು ಆವರಿಸುವುದರಲ್ಲಿ ಸಂಶಯ ಇಲ್ಲ.

ಇಲ್ಲಿ ವ್ಯಕ್ತಿ ವಿಶೇಷ ಇಲ್ಲದಿರುವುದರಿಂದ, ಸ್ವಂತ ಪ್ರತೀಷ್ಟೆ, ಹೆಸರು ಹಾಗು ಪ್ರಸಿಧ್ಧಿಗಾಗಿ ಖಂಡಿತಾ ಬರಬೇಡಿ. ಇಲ್ಲಿ ಅದಕ್ಕೆ ಅವಕಾಶ ಖಂಡಿತಾ ಇಲ್ಲ.

ಹೆಚ್ಚಿನ ವಿವರಗಳಿಗಾಗಿ:

  ಪ್ರಜಾಕೀಯಾ - ಸಭೆ ಸಮಾರಂಭ ಪ್ರಚಾರ ಬೇಕೆ? ಬೇಡವೇ?

Suresh Kundar
Website : www.prajaakeeya.org
App: UPP(i)PRAJAAKEEYA (play store).

Leave a Reply

Your email address will not be published. Required fields are marked *

Translate »