*ರಾಜಕೀಯ
**ಮೊದಲು, ಅನೈತಿಕವಾಗಿ ಸಂಪಾದಿಸಿದ ಹಣದಿಂದ ಸಮಾಜ ಸೇವೆ.
**ಅದರಿಂದ ಜನರ ದೃಷ್ಟಿಗೆ ಬಿದ್ದು ಪ್ರತೀಷ್ಟಿತನಾಗುವುದು.
**ಅದರೊಂದಿಗೆ ಹಣಕ್ಕಾಗಿ ಬೂಟು ನೆಕ್ಕುವ ಕೆಲವೊಂದು ಹಿಂಬಾಲಕರ ಹಿಂಡು ನಿರ್ಮಾಣ.
**ಸುಳ್ಳು ಆಶ್ವಾಸನೆ ಹಾಗು ಆಗದ-ಹೋಗದ ಭರವಸೆ – ಪ್ರಣಾಳಿಕೆಯಿಂದ ಪ್ರಜೆಗಳಿಗೆ ಮೋಸ ಮಾಡುವುದು.
**ಕಡೆಗೆ, ಚುಣಾವಣೆ ನಿಂತು, ಕೆಲವೊಂದು ಕೋಟಿ ಖರ್ಚು ಮಾಡಿ ಚುನಾಯಿತನಾಗುವುದು.
**ಅಲ್ಲಿಂದ, ನಮ್ಮ ತೆರಿಗೆ ಹಣದ ಲೂಟಿ ಪ್ರಾರಂಭ.
**ಸಮಾಜ ಸೇವೆ ಎಂಬ ಅಸ್ತ್ರವನ್ನು ಉಪಯೋಗಿಸಿ ರಾಜ್ಯ-ದೇಶ ಲೂಟಿ ಮಾಡುವುದು.
**ಬೆರಳು ತೋರಿಸಿ, ಕುತ್ತಿಗೆ ಕೊಯ್ಯುವುದು.
**ಎಚ್ಚರ- ಎಚ್ಚರ, ದೇಶ-ರಾಜ್ಯವನ್ನು ಸಾಲದಿಂದ ಮುಳುಗಿಸುವ ವಿಧಾನ.
**ಈಗಾಗಲೇ ದೇಶ ಹಾಗು ಕೆಲವು ರಾಜ್ಯಗಳಲ್ಲಿ 20 ರಿಂದ 30% ತೆರಿಗೆ ಹಣ, ಸಾಲದ ಕಂತು ಹಾಗು ಬಡ್ಡಿ ಕಟ್ಟಲು ಉಪಯೋಗಿಸಲು ಪಡುತ್ತಿದೆ.
**ಇನ್ನೊಂದು 20% , ನಿರ್ದಿಷ್ಟ ಖರ್ಚುಗಳಾದ ಸಂಬಳ ಹಾಗು ಪಿಂಚಣಿಗೆ ಉಪಯೋಗಿಸಲು ಪಡುತ್ತಿದೆ.
**ಉಳಿದ 50% ನಲ್ಲಿ ಭ್ರಷ್ಟರ ಹಾಗು ಭ್ರಷ್ಟ ವ್ಯವಸ್ಥೆಯ ಪಾಲು ತೆಗೆದರೆ, ಅಭಿವೃಧ್ಧಿಗೆ ಉಳಿಯುವುದು ಎಷ್ಟೆಂದು ಆಲೋಚಿಸಿ.
**ಇದು ರಾಜಕೀಯ.
**ಪ್ರಜಾಕೀಯ
**ಮೊದಲು ಯಾರಿಗೂ ತಿಳಿಯದ ಅಸಾಮಾನ್ಯ ಪ್ರಜೆ.
**ಸಮಾಜ ಸೇವೆ, ಹೋರಾಟದ ಪಿಡುಗು ಇಲ್ಲ.
**ವ್ಯಕ್ತಿ ಹಾಗು ಪಕ್ಷ ವಿಶೇಷಕ್ಕೆ ಮತ ಕೇಳದೆ, ಕೇವಲ ವಿಚಾರಕ್ಕಾಗಿ ಮತ ಕೇಳುವುದು.
**ಯಾವುದೇ ಹಣ ಉಪಯೋಗಿಸದೆ ಚುಣಾವಣೆಯಲ್ಲಿ ಭಾಗವಹಿಸುವುದು.
**ಯಾವುದೇ ಅಶ್ವಾಸನೆ – ಪ್ರಣಾಳಿಕೆಗಳು ಇಲ್ಲ. ಕೇವಲ ಅಧಿಕಾರ ಪ್ರಜೆಗಳಿಗೆ ಹಸ್ತಾಂತರ.
**ಚುನಾಯಿತನಾದರೆ, ಪ್ರಜಾ ಕಾರ್ಮಿಕನಾಗಿ ಜನರ ಕೆಲಸ ಮಾಡುವುದು, ಸಂಬಳಕ್ಕಾಗಿ.
**ಪ್ರಜೆಗಳ ಕೆಲಸ ಹಾಗು ಮೂಲಭೂತ ಸೌಕರ್ಯ- ಸೌಲಭ್ಯವನ್ನು ಗುಣ ಮಟ್ಟದಲ್ಲಿ ಒದಗಿಸುವುದು.
**ಪ್ರಜೆಗಳ ತೆರಿಗೆ ಹಣ, ನೂರಕ್ಕೆ ನೂರು ಶೇಖಡಾ ಪ್ರಜೆಗಳ ಕೆಲಸಕ್ಕಾಗಿ ಉಪಯೋಗಿಸುವುದು.
**ಇದೇ ನಿಜವಾದ ಸಮಾಜ ಸೇವೆ ಅಲ್ಲವೇ ? ಇದಕ್ಕಿಂತ ದೊಡ್ಡ ಸಮಾಜ ಸೇವೆ ಇದೆಯೇ?
**ಎಲ್ಲರಿಗೂ ಮೂಲಭೂತ ಸೌಕರ್ಯ-ಸೌಲಭ್ಯ ಒದಗಿಸಿದರೆ, ಸಮಾಜ ಸೇವೆಯ ಅವಶ್ಯಕತೆ ಇದೆಯೇ ?
**ಪ್ರಜಾಕೀಯವು ಸತ್ಯದ ಹಾದಿ. ಅದರಲ್ಲಿ ನಡೆದು ಗುರಿ ತಲುಪುವುದು ಪ್ರಜೆಗಳೇ.*