Who are the Tax Payers in India ? ಭಾರತದಲ್ಲಿ ತೆರಿಗೆ ಕೊಡುವವರು ಯಾರು ?
ಕಳೆದ 75 ವರ್ಷದಿಂದ, ಕೇವಲ ಆದಾಯ ತೆರಿಗೆ (Income Tax) ಕೊಡುವವನನ್ನು, ತೆರಿಗೆ ಕೊಡುವವ(Tax Payer) ಎಂದು ಸಂಬೋದಿಸಲಾಗಿದೆ.
ಆದರೆ, ಅಲ್ಲಿರುವ ಸತ್ಯವೇ ಬೇರೆ. ಕೇಂದ್ರ ಸರಕಾರದ ವಾರ್ಷಿಕ ಬಜೆಟ್ನ (2022-23)ಲ್ಲಿ, ಆದಾಯ ತೆರಿಗೆಯು ಬಜೆಟ್ನ ಕೇವಲ 16% ಮಾತ್ರ. ಉಳಿದ 84% ಭಾಗ ಬೇರೆ ತೆರಿಗೆ ಹಾಗು ಸಾಲದ ಮೂಲಕ ಪೂರೈಸಲಾಗುತ್ತಿದೆ.
ಆದಾಯ ತೆರಿಗೆ, ಖಂಡಿತಾ, ಯಾವ ರಾಜ್ಯ ಸರಕಾರಕ್ಕೆ ಆಗಲಿ ಅಥವಾ ರಾಜ್ಯ ಸರಕಾರದ ಬಜೆಟ್ನಲ್ಲಿ ಬರುವುದಿಲ್ಲ. ಆದಾಯ ತೆರಿಗೆ ಹಾಗು ರಾಜ್ಯ ಸರಕಾರಕ್ಕೆ ಸಂಬಂದ ಇಲ್ಲ. ಆದ್ದರಿಂದ, ಈ ತೆರಿಗೆ ಕೊಡುವವನ (Tax Payer) ಆದಾಯ ತೆರಿಗೆಯ ಪಾತ್ರ ರಾಜ್ಯ ಸರಕಾರದ ಬೊಕ್ಕಸಕ್ಕೆ ಸಂಬಂದ ಇಲ್ಲ. ಆದರೆ ಅವನು GST, ಇತ್ಯಾದಿ ತೆರಿಗೆಗಳನ್ನು ಖಂಡಿತಾ ರಾಜ್ಯ ಸರಕಾರದ ಬೊಕ್ಕಸಕ್ಕೆ ಕೊಡುವನು.
ಕೇಂದ್ರ ಸರಕಾರ, ತಮ್ಮ ಬೊಕ್ಕಸದಿಂದ ಫೈನಾನ್ಸ್ ಕಮಿಷನ್ (ಈಗ 15 ನೇ ಫೈನಾನ್ಸ್ ಕಮಿಷನ್) ನಮ್ಮ ಸ್ಥಳಿಯ ಸಂಸ್ಥೆ( ಗ್ರಾಮ ಪಂಚಾಯಿತಿ, ಎಲ್ಲಾ ಪಟ್ಟಣ ಸಭೆ, ನಗರ ಸಭೆ ಹಾಗು ಮಹಾ ನಗರ ಪಾಲಿಕೆ)ಗಳಿಗೆ ಪ್ರತೀ ವರ್ಷ ಒಂದಷ್ಟು ತೆರಿಗೆ ಹಣವನ್ನು (ಸುಮಾರು 2 ಲಕ್ಷ ಕೋಟಿ)ರಾಜ್ಯಗಳಿಗೆ ಕಳುಹಿಸುವುದು. ಹಾಗೆ, ಬಡವರಿಗೆ(BPL), ಪಬ್ಲಿಕ್ ಡಿಸ್ಟ್ರೀಬೂಷನ್ ಸಿಸ್ಟಮ್(PDS) ಆಹಾರ ದಾನ್ಯವನ್ನು ಒದಗಿಸಲು ಹಣವನ್ನು ( ಸುಮಾರು 2 ಲಕ್ಷ ಕೋಟಿ) ಉಪಯೋಗಿಸುವುದು. ಹಾಗೆ, ಕೆಲವೊಂದು, ಕೇಂದ್ರ ಸರಕಾರದ ಯೋಜನೆ ( ಮನ್ರೇಗಾ, ಸ್ವಚ್ಚ ಭಾರತ ಮಿಷನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಇತ್ಯಾದಿ) ಗಳಿಂದ, ರಾಜ್ಯಗಳಿಗೆ ಬರುವುದು. ನೇಷನಲ್ ಹೈವೆ, ಬಂದರು, ವಿಮಾನ ನಿಲ್ದಾಣ, ರೈಲ್ವೆ, ಇತ್ಯಾದಿ ಕೇಂದ್ರ ಸರಕಾರದ ಜವಾಬ್ದಾರಿಯ ಸಂಸ್ಥೆಗಳಿಗೂ, ಕೇಂದ್ರ ಸರಕಾರದಿಂದ ಹಣ ಬರುವುದು.
ಆದರೆ, ನಿಜವಾದ ತೆರಿಗೆ ಕೊಡುವವರು, ಖಂಡಿತಾ, ಭಾರತದ ಎಲ್ಲಾ ಪ್ರಜೆಗಳು, ಕೇವಲ ಆದಾಯ ತೆರಿಗೆ ಕೊಡುವವನಲ್ಲ. ರಾಜ್ಯ ಸರಕಾರದ ಬೊಕ್ಕಸಕ್ಕೆ ಬರುವ 100% ಆದಾಯ ಹಾಗು ಕೇಂದ್ರ ಸರಕಾರಕ್ಕೆ ಹೋಗುವ 84% ಆದಾಯದಲ್ಲಿ ಪ್ರತಿಯೊಬ್ಬ ಪ್ರಜೆಯ ಕೊಡುಗೆ ಇರುವುದು. ಆದ್ದರಿಂದ ಕೇವಲ ಆದಾಯ ತೆರಿಗೆ ಕೊಡುವ ಕೇವಲ 6 ಕೋಟಿ ಪ್ರಜೆಗಳನ್ನು ತೆರಿಗೆ ಕೊಡುವವರು(Tax Payer) ಎಂದು ಸಂಬೋದಿಸುವುದು ತಪ್ಪಲ್ಲವೇ ? ಉಳಿದ 65 ಕೋಟಿ ಸಂಪಾದನೆ ಮಾಡುವವರೂ ತೆರಿಗೆ ಕೊಡುತ್ತಾರೆ.
ಇನ್ನೊಂದು ಮುಖ್ಯ ವಿಷಯ, ಆದಾಯ ತೆರಿಗೆ ಕೊಡುವ ವ್ಯವಸಾಯಿ ಅಥವಾ ಅವನಿಗೆ ಕೆಲಸ ಮಾಡುವ ದೊಡ್ಡ ಸಂಬಳದ ನೌಕರರಿಗೆ ಬರುವ ಹಣ ಎಲ್ಲಿಂದ ? ಅದು ಕೂಡಾ ಸಾಮಾನ್ಯ ಪ್ರಜೆಗಳಿಂದ. ಅವನು ಯಾವುದೇ ವಸ್ತು ಅಥವಾ ಸೇವೆಯನ್ನು ಪ್ರಜೆಗಳಿಗೆ ಮಾರಿ, ಅದರಿಂದ ಬಂದ ಹಣದಿಂದ ನೌಕರರಿಗೆ ಸಂಬಳ ಕೊಡುತ್ತಾನೆ ಹಾಗು ಬಂದ ಅಧಿಕ ಆದಾಯದಿಂದ, ಆದಾಯ ತೆರಿಗೆ ಕಟ್ಟುತ್ತಾನೆ. ಅವನಿಗೆ, ಆಕಾಶದಿಂದ ಬರುವುದಿಲ್ಲ !
ಕಟ್ಟ ಕಡೆಗೆ ಎಲ್ಲಾ ತೆರಿಗೆಗೂ ಮೂಲ, ಭಾರತದ ಎಲ್ಲಾ ಪ್ರಜೆಗಳು. ಆದ್ದರಿಂದ, ತೆರಿಗೆ ಹಣವನ್ನು ಖರ್ಚು-ವೆಚ್ಚ ಮಾಡುವಾಗ ಕೇಳ ಬೇಕಾದವರು, ಭಾರತದ ಎಲ್ಲಾ ಪ್ರಜೆಗಳು. ಆದಾಯ ತೆರಿಗೆ ಕೊಡವ ಕೇವಲ 5% ಪ್ರಜೆಗಳು ಅಲ್ಲ.
ಈಗ ಅತೀ ಹೆಚ್ಚು ತೆರಿಗೆ ಕೊಡುವವರು, ಪೆಟ್ರೋಲ್, ಡಿಸಿಲ್, ಗ್ಯಾಸ್ ಹಾಗು ಲಿಕ್ಕರ್ ಖರೀದಿಸುವವರು. ಪ್ರತೀ ಲೀಟರ್ಗೆ, ಸುಮಾರು 60-65% ತೆರಿಗೆ ಕಟ್ಟುತ್ತಿರುವರು.
ಆದ್ದರಿಂದ ಪ್ರಜೆಗಳಿಗೆ ಅಧಿಕಾರ ಹಾಗು ಪಾರಧರ್ಶಕ ಆಡಳಿತ ಕೊಡಬೇಕು ಎಂಬ ಸಿಧ್ಧಾಂತವನ್ನು ಅಳವಡಿಸಿ ಕೊಂಡಿರುವ ಪ್ರಜಾಕೀಯವು ಸೂಕ್ತವಾದ ಆಯ್ಕೆ.
ಜೈ ಪ್ರಜಾಕೀಯ