ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ ವಿಶ್ಲೇಷಣೆ – ಕರ್ನಾಟಕ ರಾಜ್ಯದ ಬಜೆಟ್ ಹಣ

ಕರ್ನಾಟಕ ರಾಜ್ಯ. ನಿಮಗೆ ತಿಳಿದಿದೆಯೇ, ನಾವು ಎಷ್ಟು ಸಂಪದ್ಬರಿತ ರಾಜ್ಯವೆಂದು ? ಪ್ರಜಾಕೀಯ ನಿಮಗಾಗಿ ತಂದಿದೆ ವಿಶ್ಲೇಷಣೆ

ರಾಜ್ಯದ ವಾರ್ಷಿಕ ಬಜೆಟ್( ಆದಾಯ) – 2018-19= 2,25,000 ಕೋಟಿ ( ಎರಡು ಲಕ್ಷದ ಇಪ್ಪತೈದು ಸಾವಿರ ಕೋಟಿ)

ಇದು ಮುಂದೆ 2023-24ಕ್ಕೆ 3,00,000 ಕೋಟಿ ಆಗ ಬಹುದು, ಆಗುವುದು.

ರಾಜ್ಯದ ಆದಾಯ 5 ವರ್ಷಕ್ಕೆ = 11,00,000- 12,00,000 ಕೋಟಿ ( ಹನ್ನೆರಡು ಲಕ್ಷ ಕೋಟಿ).

ನಿಮಗೆ ಈಗಲೂ ಅನಿಸುತ್ತಿದೆಯೇ, ನಮ್ಮ ರಾಜ್ಯ ಸಂಪದ್ಬರಿತವಲ್ಲವೆಂದು ?

ಈ ಸಂಪತ್ತನ್ನು ನಮ್ಮ ದೇಶದ ಪ್ರಜೆಗಳಿಂದ, ಅಂದರೆ 6.5 ಕೋಟಿ ಜನರಿಂದ ಭಾಗಿಸುವ

12,00,000,0000000÷ 6,50,00,000= ₹ 1,84,615.

ನಾವು ಪ್ರತೀ ಒಬ್ಬರು, ಬಿಕ್ಷುಕನಿಂದ ಹಿಡಿದು ಕೋಟ್ಯಾದಿಪತಿಯವರೆಗೆ, ಈಗ ಹುಟ್ಟಿದ ಮಗುವಿನಿಂದ ಹಿಡಿದು – ಈಗಲೆ ಸಾಯುವ ಮುದುಕನ ವರೆಗೆ ಸರಕಾರಕ್ಕೆ ₹ 1,84,615- 5 ವರ್ಷಕ್ಕೆ ತೆರಿಗೆ ಬರಿಸುತ್ತಿದ್ದೇವೇ.

ಪ್ರತೀ ಕುಟುಂಬದಲ್ಲಿ ನಾಲ್ಕು ಜನ ಸದಸ್ಯರಿರುವರೆಂದು ತಿಳಿದರೆ ( ತಂದೆ,ತಾಯಿ, 2ಮಕ್ಕಳು)

ಪ್ರತೀ ಕುಟುಂಬದಿಂದ ಬರುವ ತೆರಿಗೆ
₹ 7,38,460( ರುಪಾಯಿ ಏಳು ಲಕ್ಷದ ಮೂವತ್ತೆಂಟು ಸಾವಿರದ ನಾಲ್ಕುನೂರ ಅರುವತ್ತು) ಪ್ರತಿ ಐದು ವರ್ಷ.

ಇಲ್ಲಿ ಇನ್ನೊಂದು ಮುಖ್ಯ ವಿಷಯ, ಇದರಲ್ಲಿ ಆದಾಯ ತೆರಿಗೆಯ ( Income Tax) ಒಂದು ಪೈಸೆಯೂ ಇಲ್ಲ. ಯಾಕೆಂದರೆ ಆದಾಯ ತೆರಿಗೆ, ಡೈರೆಕ್ಟ್ ಕೇಂದ್ರ ಸರಕಾರಕ್ಕೆ ಹೋಗುವುದು.

  ತೆರಿಗೆ ತೆರಿಗೆ ತೆರಿಗೆ , ಯಾರು ಕಳ್ಳ ?

ಪುನಹ ಪ್ರಜೆಗಳು ಕೇಂದ್ರ ಸರಕಾರಕ್ಕೆ ಸುಮಾರು 2,25,000 ಕೋಟಿ ತೆರಿಗೆ ಕಟ್ಟುತ್ತೇವೆ
ಅವುಗಳು

  1. ಆದಾಯ ತೆರಿಗೆ – Income Tax.
  2. GST. ( 50%).
  3. Import Duty.
  4. Custom Duty.
  5. ಕೆಲವೊಂದು ಬೇರೆ ತೆರಿಗೆಗಳು.

ಇವೆಲ್ಲವೂ ನೇರ ಕೇಂದ್ರ ಸರಕಾರಕ್ಕೆ ಹೋಗುತ್ತದೆ.

ಕೇವಲ ಆದಾಯ ತೆರಿಗೆ ( Income Tax) ಸುಮಾರು 1,00,000 ಕೋಟಿ( ಒಂದು ಲಕ್ಷ ಕೋಟಿ) ಪ್ರತೀ ವರ್ಷ ಕರ್ನಾಟಕದಿಂದ ಕೇಂದ್ರ ಸರಕಾರಕ್ಕೆ ಕಟ್ಟುತ್ತಿದ್ದೇವೆ.

ಆದಾಯ ತೆರಿಗೆ ಪ್ರಮಾಣ ಕರ್ನಾಟಕ, 29 ರಾಜ್ಯ ಹಾಗು 7 ಕೇಂದ್ರ ಆಡಳಿತ ಪ್ರದೇಶದಲ್ಲಿ ಮೂರನೆ ಸ್ತಾನದಲ್ಲಿದೆ. ಮೊದಲು ಮಹಾರಾಷ್ಟ್ರ, ಎರಡನೆ ಸ್ತಾನ ದಿಲ್ಲಿ.

ನಮ್ಮ ರಾಜ್ಯದ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ಬಂದರು, ರೈಲ್ವೆ, ಇಂತಹ ಕೇಂದ್ರ ಸರ್ಕಾರದ ಯೋಜನೆಗಳಿಗೆ ಇದರ ಸ್ವಲ್ಪ ಭಾಗ ಉಪಯೋಗಿಸುವುದು.

ಕೇಂದ್ರ ಸರಕಾರಕ್ಕೆ ಕೊಡುವ ತೆರಿಗೆಯನ್ನು ಕೂಡಿಸಿದರೆ, ಪ್ರತೀ ಕುಟುಂಬವು ಸರ್ಕಾರಕ್ಕೆ ಸರಾಸರಿ ₹ 14,76,960 ತೆರಿಗೆ ಕಟ್ಟುತ್ತಿದೆ.

ಹೇಳಿ ಪ್ರಜೆಗಳೆ, ನಾವು ಕರ್ನಾಟಕದವರು ಬಡವರೇ ? ಅಥವಾ ನಮ್ಮ ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಹಣವಿಲ್ಲವೆ ?

ಒಬ್ಬ ಮೂರ್ಖನಿಗೂ ಅರ್ಥವಾಗುವುದು ಕರ್ನಾಟಕ ಎಷ್ಟು ಶ್ರೀಮಂತ ರಾಜ್ಯವೆಂದು.

  ಉತ್ತಮ ಪ್ರಜಾಕೀಯ ಪಕ್ಷ ಅಧಿಕೃತ ವಾಟ್ಸ್ಯಾಪ್ ಗುಂಪು

ಆದರೆ ಭ್ರಷ್ಟಾಚಾರವೂ ಎಲ್ಲವನ್ನೂ ತಿಂದು ತೇಗಿ ಸುತ್ತಿದೆ. ಪ್ರಜೆಗಳಲ್ಲಿ 1% ಭ್ರಷ್ಟ ಪ್ರಜೆಗಳು ಇದರ ಅನೈತಿಕ ಲಾಭ ಪಡೆದು ಮಜಾ ಮಾಡುತ್ತಿದ್ದಾರೆ.

ಇವರೆಲ್ಲಾ ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ರಾಜಕೀಯಾ ಪಾರ್ಟಿಗಳು, ಸರ್ಕಾರಿ ನೌಕರರು ಹಾಗು ಅವರೊಂದಿಗೆ ಸೇರಿ ಕೊಂಡ ಏಜೆಂಟ್ ಹಾಗು ಮಾಫಿಯಾಗಳು. ದೇಶಕ್ಕೆ – ರಾಜ್ಯಕ್ಕೆ ಹಿಡಿದ ಗೆದ್ದಲು ಹುಳಗಳು. ಈಗೀಗ ಅವರೊಂದಿಗೆ ಕೆಲವು ಮಾಧ್ಯಮಗಳೂ ಸೇರಿ ಕೊಂಡಿವೆ.

ಪ್ರಜೆಗಳೆ ಎದ್ದೇಳಿ, ದೇಶ- ರಾಜ್ಯ ಸಂಪೂರ್ಣ ಗೆದ್ದಲು ಹಿಡಿದು ಪುಡಿ- ಪುಡಿಯಾಗುವ‌ ಮೊದಲು ಸುದಾರಿಸ ಬೇಕು.

ಈಗಾಗಲೆ 72ವರ್ಷ ಹಾಗು ಮೂರು ತಲೆಮಾರು ವ್ಯರ್ಥವಾಗಿದೆ.

ಯಾವುದೆ ಗಲಾಟೆ- ಗದ್ದಲವಿಲ್ಲದೆ ಶಾಂತಿಯಿಂದ ಈ ಸ್ತಿತಿಯನ್ನು ಬದಲಾಯಿಸಲು ಹಾಗು ಅಬಿವ್ರದ್ದಿ ಪತದಲ್ಲಿ ಸಾಗಲು ನಮಗೊಂದು ವಿಕಲ್ಪವೂ ತಯಾರಿದೆ.

ಅದೇ ” ಪ್ರಜಾಕೀಯಾ” – ” ಉತ್ತಮ ಪ್ರಜಾಕೀಯಾ ಪಕ್ಷ ( ಉ.ಪಿ.ಪಿ).

ಯಾವುದೇ ಹಣದ ವ್ಯವಹಾರವಿಲ್ಲದೆ – No Party Fund, No Membership Fees, No Donation Accepted ಹಾಗು ಸಾಮಾನ್ಯ ವರ್ಕಿಂಗ್ ಕ್ಲಾಸ್ ಹಾಗು ಉ.ಪಿ.ಪಿ ಯ ಸೆಲೆಕ್ಷನ್ ಪ್ರಕ್ರೀಯೆಯಿಂದ ಆರಿಸಿ ಬಂದ ಪ್ರಮಾಣಿಕ ಪ್ರಜೆಗಳನ್ನು ಪ್ರತಿನಿಧಿಗಳಾಗಿ ಚುನಾವಣೆಗೆ ನಿಲ್ಲಿಸುವ ಉತ್ತಮ ಪ್ರಜಾಕೀಯಾ ಪಕ್ಷವೇ ಇದಕ್ಕೆ ವಿಕಲ್ಪ.

  ಪ್ರಜಾಕೀಯ - ರಾಜಕೀಯ

ಆರಿಸಿ ಬಂದ ಪ್ರತಿನಿಧಿಯು ಪ್ರಜಾ ಕಾರ್ಮಿಕನಾಗಿ ಪ್ರಜೆಗಳ ಅವಶ್ಯಕತೆಯನ್ನು ಕಾರ್ಯಾಂಗದಿಂದ ಮಾಡಿಸಿ, ರಾಜ್ಯವನ್ನು ಅಬಿವ್ಯದ್ದಿ ಪತದ ಕಡೆಗೆ ಕೊಂಡೊಯ್ಯಬೇಕು.

ಇದೊಂದು ಮೌನ ಕ್ರಾಂತಿ- Silent Revolution ಹಾಗು ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನಕ್ಕೆ ಎಳ್ಳಷ್ಟೂ ದಕ್ಕೆಬರದ ಹಾಗೆ ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೋಗೆಯಲೆಂದೆ ಬಂದಿದೆ ಪ್ರಜಾಕೀಯಾ.

ಇಲ್ಲಿ ಎಲ್ಲಾ ಪ್ರಜೆಗಳಿಗೂ ಸ್ವಾಗತ. ಯಾವುದೆ ಧರ್ಮ, ಜಾತಿ, ಪಂಗಡ, ಪ್ರಾಂತ್ಯವೆಂಬ ಭೇದ ಭಾವವಿಲ್ಲ. ಅಥವಾ ಯಾರನ್ನೂ ನಿಂದಿಸುವುದು- ಟೀಕೆ ಮಾಡುವ ಅವಶ್ಯಕತೆಯೆ ಇರುವುದಿಲ್ಲ.

ಇದೊಂದು ಸಂಪೂರ್ಣ ಬದಲಾವಣೆ, ಭ್ರಷ್ಟ ರಾಜಕಾರಣವನ್ನು ಈ ರಾಜ್ಯ ಹಾಗು ದೇಶದಿಂದ ತೊಲಗಿಸಲು.

UPP App – Google Play Store ನಲ್ಲಿ
“UPP(i)PRAJAAKEEYA”

UPP ವೆಬ್ ಸೈಟ್
www.prajaakeeya.org

ಮೂಲ – ಪ್ರಜಾಕೀಯ ಬೆಂಬಲಿಗರು

Leave a Reply

Your email address will not be published. Required fields are marked *

Translate »