ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯದ ಬದಲಾವಣೆ ಎಲ್ಲಿಂದ ಶುರು ಆಗಬೇಕು?

ಗ್ರಾಮ ಪಂಚಾಯಿತಿ.
ತಾಲೂಕು ಪಂಚಾಯಿತಿ.
ಜಿಲ್ಲಾ ಪಂಚಾಯಿತಿ( ಪರಿಷದ್)
ಕಾರ್ಪರೇಟರ್- ವಾರ್ಡ್ ಮೆಂಬರ್.

ಗ್ರಾಮ ಪಂಚಾಯಿತಿ ಚುಣಾಯಿತ ಸದಸ್ಯ- ಸಂಭಾವನೆ- ಗೌರವ ಧನ- ರು.1000/- ( ಒಂದು ಸಾವಿರ) ಪ್ರತಿ ತಿಂಗಳು.

ತಾಲೂಕು ಪಂಚಾಯಿತಿ ಚುಣಾಯಿತ ಸದಸ್ಯ,- ಸಂಭಾವನೆ- ರು. 2,000/- ( ಎರಡು ಸಾವಿರ), ಪ್ರತಿ ತಿಂಗಳು

ಜಿಲ್ಲಾ ಪಂಚಾಯಿತಿ ಚುಣಾಯಿತ ಅಧ್ಯಕ್ಷ- ಸಂಭಾವನೆ- ರು. 4,000/- ( ನಾಲ್ಕು ಸಾವಿರ), ಪ್ರತಿ ತಿಂಗಳು.

ಬೆಂಗಳೂರು ಮಹಾ ನಗರ ಪಾಲಿಕೆ ವಾರ್ಡ್ ಚುಣಾಯಿತ ಸದಸ್ಯ- ಕಾರ್ಪರೇಟರ್- ಸಂಭಾವನೆ- ರು. 7,500/- ( ಏಳು ಸಾವಿರದ ಐದು ನೂರು) ಪ್ರತಿ ತಿಂಗಳು.

  ಪ್ರಜಾಕೀಯ - ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ

ಮೇಲೆ ಹೇಳಿದ ಸಂಭಾವನೆಗಳು ಪ್ರತೀ ತಿಂಗಳು ಬರುವುದಿಲ್ಲ. 3 ರಿಂದ 6 ತಿಂಗಳಿಗೊಮ್ಮೆ ಬರುವುದು.

ಈ ಕಡಲೆ ಕಾಯಿ ಸಂಭಾವನೆಗಾಗಿ ಲಕ್ಷ- ಲಕ್ಷ ಖರ್ಚು ಮಾಡಿ ಚುಣಾವಣೆಗೆ ನಿಲ್ಲುವುದು, ಕೇವಲ ಭ್ರಷ್ಟಾಚಾರದಿಂದ ಹಣ ಸಂಪಾಧನೆ ಮಾಡಲು ಎಂದು ಕಣ್ಣಿಲ್ಲದವನಿಗೂ ತಿಳಿಯುವುದು.

ಪ್ರಜಾಕೀಯಾ ಬಂದಿರುವುದೆ ಭ್ರಷ್ಟಾಚಾರ ನಿರ್ಮೂಲನೆಗೆ ಎಂದಿರುವಾಗ, ಇಲ್ಲಿ ನಾವು ಪ್ರವೇಶ ಮಾಡುವುದು ಸರಿಯೇ ?

ಆಲೋಚಿಸಿ ಎಲ್ಲಾ ಪ್ರಜಾಕೀಯಾದ ಅನುಯಾಯಿಗಳೇ…

ಇಲ್ಲಿ ಭ್ರಷ್ಟ ವ್ಯವಸ್ಥೆಯು ಕೊಳೆತು ಹುಳವಾಗಿದೆ.

ದೇಶವನ್ನು ಮನುಷ್ಯ ದೇಹವೆಂದು ತಿಳಿದರೆ, ಇವುಗಳು ರಕ್ತದ ಲೋಮ ನಾಳಗಳು.
ಹ್ರದಯದಿಂದ ಹರಿಯುವ ರಕ್ತವೇ ಕೊಳೆತು ಹೋಗಿರುವುದರಿಂದ, ಈ ಲೋಮ ನಾಳ( end of blood vessel)ಗಳು ಅದೇ ರಕ್ತವನ್ನು ಹೊಂದಿರುತ್ತದೆ.

  ಪ್ರತೀಷ್ಟೆ ಹಾಗು ಪ್ರಚಾರಕ್ಕಾಗಿ ಪರದಾಡುವ ರಾಜಕಾರಣಿಗಳು - ಪ್ರಜಾಕೀಯಾ

ಆದ್ದರಿಂದ ಇವುಗಳನ್ನು ಸರಿ ಮಾಡ ಬೇಕಾದರೆ, ಹ್ರದಯದಿಂದ ಬರುವ ರಕ್ತ ಶುಧ್ಧವಾಗಿರ ಬೇಕಲ್ಲವೇ ?

ಇಲ್ಲಿ ಹ್ರದಯವೆಂದರೆ ರಾಜ್ಯ ಸರ್ಕಾರ ( MLAಗಳ ಸಮೂಹ) ಶುಧ್ಧವಾಗದೆ, ಲೋಮನಾಳದ ರಕ್ತ ಶುಧ್ಧ ಇರಲು ಹೇಗೆ ಸಾಧ್ಯ?

ಹ್ರದಯವೇ ಶುಧ್ಧ ರಕ್ತ ಸರಬರಾಜು ಮಾಡದಿದ್ದರೆ, ದೇಹ ಹೇಗೆ ಆರೋಗ್ಯವಾಗಿರಲು ಸಾಧ್ಯ ?

ಆದ್ದರಿಂದ, ಹ್ರದಯ ಸರಿಯಾಗಿ ಅಶುಧ್ಧ ರಕ್ತವನ್ನು ಶುಧ್ಧಿಕರಿಸಿ, ದೇಹದ ಎಲ್ಲಾ ಭಾಗಗಳಿಗೆ ಕಳುಹಿಸುವುದಿಲ್ಲವೋ, ಅಲ್ಲಿಯವರೆಗೆ ದೇಹವು ಅಸೌಖ್ಯದಿಂದ ನರಳುತ್ತಿರ ಬೇಕಾಗುವುದು.

ಈ ನರಳಾಟಿಕೆ ಇನ್ನೂ ಇರ ಬೇಕೇ ?

  ಶಾಸಕಾಂಗ ಸಭೆಯ ಸದಸ್ಯರ ಪಾತ್ರಗಳು ಮತ್ತು ಜವಾಬ್ದಾರಿಗಳು. ಶಾಸಕರ (ಎಂಎಲ್‌ಎ) ಪಾತ್ರವೇನು ತಿಳಿಯಿರಿ ?

ಅಥವಾ ಇದನ್ನು ಎಂದೆಂದಿಗೂ ಇರದ ಹಾಗೆ, ಬರದ ಹಾಗೆ ಮಾಡುವುದು ಪ್ರಜಾಕೀಯಾದ ತತ್ವವಲ್ಲವೇ ?

ಪ್ರಜೆಗಳೆ ಆಲೋಚಿಸಿ.

ಪ್ರಾರಂಭ ಎಲ್ಲಿ ಮಾಡ ಬೇಕು?

ಹ್ರದಯದಿಂದಲೆ, ಅಥವಾ ಲೋಮನಾಳದಿಂದಲೆ ?

– ಪ್ರಜಾಕೀಯ ಬೆಂಬಲಿಗರು

Leave a Reply

Your email address will not be published. Required fields are marked *

Translate »