ಪ್ರಜಾಕೀಯಾ – ಸರ್ಕಾರಿ ವಿಧ್ಯಾಭ್ಯಾಸ ವ್ಯವಸ್ಥೆ

ಸರ್ಕಾರಿ ವಿಧ್ಯಾಭ್ಯಾಸ ವ್ಯವಸ್ಥೆ.

6100 ಗ್ರಾಮ ಪಂಚಾಯಿತಿ.
6000 ವಾರ್ಡ್ಸ್ ಪಟ್ಟಣಗಳಲ್ಲಿ.

12100 ಟೋಟಲ್ ಸರ್ಕಾರಿ ಕೇಂದ್ರಗಳು.

ಗ್ರಾಮ ಪಂಚಾಯಿತಿ ಜನ ಸಂಖ್ಯೆ ಸುಮಾರು 4,00,000,00 ( 4 ಕೋಟಿ).

ವಾರ್ಡ್ ( ಪಟ್ಟಣ) ಜನ ಸಂಖ್ಯೆ ಸುಮಾರು 2,50,00,000 (2.5 ಕೋಟಿ)
( ಅರ್ಧ- 1,25,00,000 ( 1.25 ಕೋಟಿ) ಬೆಂಗಳೂರಿನಲ್ಲಿ)

ಟೋಟಲ್ 6.5 ಕೋಟಿ ಜನರಲ್ಲಿ 18 ವರ್ಷದ ಕೆಳಗೆ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ, ಸುಮಾರು 1.3 ಕೋಟಿ.

ಇಲೆಕ್ಷನ್ ಕಮಿಷನ್ ಪ್ರಕಾರ ಸುಮಾರು 5.2 ಕೋಟಿ ಮತದಾರರು, ಅಂದರೆ 18 ವರ್ಷಕ್ಕೆ ಮೇಲ್ಪಟ್ಟವರು.

1.3 ಕೋಟಿ ಮಕ್ಕಳ ವಿಧ್ಯಾಭ್ಯಾಸ ಜವಾಬ್ದಾರಿ ಸರಕಾರ ನೋಡಿ ಕೊಳ್ಳಬೇಕಾಗುವುದು.

6100 ಗ್ರಾಮ ಪಂಚಾಯಿತಿ ಹಾಗು 6000 ಪಟ್ಟಣ ವಾರ್ಡ್ಗಳಲ್ಲಿ ಈ ಮಕ್ಕಳಿಗೆ ಬೇಕಾದ ಅತ್ಯಾಧುನಿಕ ಶಾಲಾ ವ್ಯವಸ್ಥೆ
ಮಾಡಿ ಬೇಕು.

ಈ 12100 ಸೆಂಟರ್ ಗಳಲ್ಲಿ 2000 ಮಕ್ಕಳಿಗೆ ಬೇಕಾದ ಕಟ್ಟಡ, ಸಾರಿಗೆ, ಸೌಕರ್ಯ, ಆಟದ ಮೈಧಾನು, ಅಧ್ಯಾಪಕರು, ಎಲ್ಲಾ ತರಹದ ಪ್ರಯೋಗ ಶಾಲೆ, ಸೌಚಾಲಯ, ಊಟದ ವ್ಯವಸ್ಥೆ ಹಾಗು ನೀರಿನ ವ್ಯವಸ್ಥೆ ಮಾಡಿ ಬೇಕು.

  ಪ್ರಜಾಕೀಯ ಒಂದು ಮೌನ ಕ್ರಾಂತಿ Silent Revolution

2000 X 12,100= 2,42,00,000

ಅಂದರೆ 2.42 ಕೋಟಿ ಮಕ್ಕಳಿಗೆ ಬೇಕಾದಷ್ಟು. ಇರುವುದು ಕೇವಲ 1.3 ಕೋಟಿ ಮಕ್ಕಳು. ಅಂದರೆ ಈ ವ್ಯವಸ್ಥೆ ಮುಂದಿನ 25 ವರ್ಷಕ್ಕೆ ಸಾಕಾಗುವುದು.

ಇದು ಸರ್ಕಾರದಿಂದ ಕೂಡಲೆ ಆಗಬೇಕು.

ಕಳೆದ 72ವರ್ಷ, ಕೇವಲ ಕುರುಡು ಮಂತ್ರಿಗಳು ಹಾಗು ಸತ್ತು ಹೋದ ಸರಕಾರಗಳು ಕಾರ್ಯ ನಿರತವಾಗಿತ್ತು.

ಆರೋಗ್ಯ ವ್ಯವಸ್ಥೆ .

ಪ್ರತಿ 200 ಪ್ರಜ್ಞೆಯಲ್ಲಿ ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೆಂದು ಪರಿಗಣಿಸಿದರೆ.

ನಮ್ಮ ರಾಜ್ಯದಲ್ಲಿ ಬೇಕಾಗುವ ಆಸ್ಪತ್ರೆ ಹಾಸಿಗೆ( Bed)ಗಳು

6,50,00,000 ಜನ ಸಂಖ್ಯೆ ÷ 200 = 3,25,000 ಹಾಸಿಗೆ ಬೇಕು.

ಇದನ್ನು ಹೇಗೆ ಸಂಭವ ಮಾಡುವುದು ?

6100 ಗ್ರಾಮ ಪಂಚಾಯಿತಿ
6000 ವಾರ್ಡ್ ಗಳು
256 ತಾಲೂಕುಗಳು
30 ಜಿಲ್ಲೆಗಳು
8 ವಲಯಗಳು( ಪೂರ್ವ, ದಕ್ಷಿಣ ಪೂರ್ವ, ಉತ್ತರ, ಹೀಗೆ)

ಪ್ರತೀ ಗ್ರಾಮ ಪಂಚಾಯಿತಿ ಹಾಗು ವಾರ್ಡ್ಗಳಲ್ಲಿ 20 ಹಾಸಿಗೆಯ ಸಣ್ಣ ಆರೋಗ್ಯ ಕೇಂದ್ರ. ಮುಖ್ಯವಾಗಿ ಇದರಲ್ಲಿ 10 ಹಾಸಿಗೆ ಹೆರಿಗೆ ಕೆಲಸಕ್ಕೆ ಉಪಯೋಗಿಸ ಬೇಕು.

  ಕರ್ನಾಟಕದ MLA ಗೆ ಸಿಗುವ ಸಂಭಾವನೆ ವಿವರಗಳು

12100 X 20=2,42,000 ಹಾಸಿಗೆ.

ಹಾಗೆ, ಪ್ರತಿ ತಾಲೂಕು ಸೆಂಟರ್ನಲ್ಲಿ ಸಂಪೂರ್ಣ ಆಧುನಿಕ ಆಸ್ಪತ್ರೆ 500 ಹಾಸಿಗೆ.

256 ತಾಲೂಕು X 500= 1,28,000 ಹಾಸಿಗೆ.

ಪ್ರತಿ ಜಿಲ್ಲಾ ಸೆಂಟರ್ನಲ್ಲಿ 750 ಹಾಸಿಗೆಯ ಸುಸಜ್ಜಿತ ಸ್ಪೆಷಾಲಿಟಿ ಆಸ್ಪತ್ರೆ ಇರಬೇಕು.

30 ಜಿಲ್ಲೆ X 750 = 22,500 ಹಾಸಿಗೆ.

ಪ್ರತೀ ನಾಲ್ಕು ಅಥವಾ 5 ಜಿಲ್ಲೆಗೆ ಒಂದರಂತೆ ಸುಮಾರು 8 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸಿಟಿಗಳ ಹತ್ತಿರ- ಸಿಟಿಯ ಹೊರಗೆ ಇರಬೇಕು. ಇವುಗಳು 1000 ಹಾಸಿಗೆ ಇದ್ಧು AIIMS ( All India Institute of Medical Science-fiction) ನ ಲೆವೆಲ್ನ ಆಸ್ಪತ್ರೆ ಆಗಿರ ಬೇಕು. ಇವುಗಳಿಗೆ ಕೇಂದ್ರ ಸರಕಾರದಿಂದ ಪಂಡಿಂಗ್ ಆಗಲೂ ಸಾಧ್ಯವಿದೆ.

1000 X 8 =8,000 ಹಾಸಿಗೆ.

ಇದು ನಮ್ಮ ರಾಜ್ಯದ ಆರೋಗ್ಯ ವ್ಯವಸ್ಥೆಯಾಗಿರ ಬೇಕು.

ಟೋಟಲ್ ಹಾಸಿಗೆ

12,100 X 20= 2,42,000
256 X500. = 1,28,000
30 X 750. =. 22,500
8 X 1000. = 8,000

Total. =4,00,500 ಹಾಸಿಗೆ.

ಪ್ರತೀ 162 ಪ್ರಜೆಗಳಿಗೆ ಒಂದು ಹಾಸಿಗೆ ಇರುತ್ತದೆ.

  ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು ಗೊತ್ತಾ ?

ಮೇಲೆ ಹೇಳಿದ ವ್ಯವಸ್ಥೆಯನ್ನು ಸಂಪೂರ್ಣಗೊಳಿಸಿದ ಮೇಲೆ, ಪ್ರತೀ ಪ್ರಜೆಯಿಂದ ಒಂದು ಸಣ್ಣ ಆರೋಗ್ಯ ತೆರಿಗೆ ಪಡೆದು, ಅದನ್ನು ದೊಡ್ಡ ಅಂತರಾಷ್ಟ್ರೀಯ ಆರೋಗ್ಯ ವಿಮಾ ಕಂಪೆನಿಯಲ್ಲಿ ಎಲ್ಲಾ ಪ್ರಜೆಗಳನ್ನು ಆರೋಗ್ಯ ವಿಮೆಯಿಂದ ಕವರ್ ಮಾಡಿದರೆ, ಸರ್ಕಾರಕ್ಕೆ ಯಾವ ರೀತಿಯ ಹೊರೆ ಯಾಗುವುದಿಲ್ಲ. ಅದಕ್ಕೆ ಬೇಕಾದ ಕಠಿಣ ಕಾನೂನು- ನಿಯಮಗಳನ್ನು ತರ ಬಹುದು.

ಆ ನಂತರ, ವಿಧ್ಯಾಭ್ಯಾಸ ಹಾಗು ಆರೋಗ್ಯವನ್ನು ಮೆನೇಜ್ ಮಾಡಲು ಪ್ರೈವೇಟ್ ಸಂಸ್ಥೆಗಳಿಗೆ ಸರಕಾರದ ಕಡೆಯಿಂದ ಕೊಡ ಬಹುದು.

ಸರ್ಕಾರವು ನಿರಾಳವಾಗ ಬಹುದು. ವ್ಯವಸ್ಥೆಯು ಯಾವುದೆ ತೊಡಕ್ಕಿಲ್ಲದೆ ನಡೆಯುವುದು.

ಇದು ಖಂಡಿತಾ ಸಾಧ್ಯವಿದೆ ಹಾಗು ಇದೇ ಆಗಲೇ ಬೇಕು.

ಈ ಹಣದ ಗುಲಾಮಗಿರಿಯಿಂದ ಪ್ರಜೆಗಳೂ ನಿರಾಳವಾಗುವರು.

ರಾಜ್ಯವೂ ಅಬಿವ್ರಧ್ಧಿ ಹೊಂದಿದ ರಾಜ್ಯವಾಗುವುದು. ಅಲ್ಲದೆ, ನಾವು ಬೇರೆ ರಾಜ್ಯಗಳಿಗೆ ನಿಧರ್ಷಣವಾಗುವುದು ಖಂಡಿತಾ.

ಇದು ಕೇವಲ ಪ್ರಜಾಕೀಯಾದಿಂದ ಸಾಧ್ಯ.

Leave a Reply

Your email address will not be published. Required fields are marked *

Translate »