ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯಾವೇ ನಿಜವಾದ ಪ್ರಜಾಪ್ರಭುತ್ವ

ಕಟ್ಟು-ನಿಟ್ಟು, ಸಂಸ್ಕಾರ-ಧರ್ಮ, ಮಾನ- ಮರ್ಯಾದೆ, ಸಣ್ಣ – ದೊಡ್ಡ ಕೆಲಸವೆಂಬ ಮಾನಸಿಕ ಹಾಗು ಭಾವಾನಾತ್ಮಕ ಸ್ತಿತಿಯಿಂದ ಹೊರಬರುವುದಿಲ್ಲವೊ, ಅಂದಿನ ವರೆಗೆ ನಾವೆಲ್ಲರೂ ಹಣದ ಹಾಗು ಹಣವಂತರ ಗುಲಾಮ ಹಾಗು ಬಕೆಟ್ಗಳಾಗಿ ಬದುಕುವುದರಲ್ಲಿ ಸಂಶಯವಿಲ್ಲ. ದೇಶವೂ- ರಾಜ್ಯವೂ ಸುದಾರಿಸುವುದಿಲ್ಲ.

ಯಾವಾಗ ನಾವು ಪ್ರಯೋಗಾತ್ಮಕ ( Practical)ವಾಗಿ ಆಲೋಚಿಸಿ, ನಮ್ಮ ದೇಶದ- ರಾಜ್ಯದ ಕಾನೂನನ್ನು ಶಿರಸಾವಹಿಸಿ ಪಾಲೀಸುವೆವೊ, ಆವಾಗ ರಾಜ್ಯ- ದೇಶ ಅಬಿವ್ರದ್ದಿ ಹೊಂದುವುದು.

ಎಲ್ಲಾ ಅಬಿವ್ರಧ್ಧಿ ಹೊಂದಿದ ದೇಶಗಳಲ್ಲಿ ಭಾವನೆಗಿಂತ, ಮನುಷ್ಯನ ನಿಜವಾದ ಅವಶ್ಯಕತೆಯ ಕಡೆ ಗಮನ ಕೊಡಲಾಗಿದೆ. ಮನುಷ್ಯನ ಅವಶ್ಯಕತೆಯನ್ನು ಪೂರೈಸುವುದು, ಸರ್ಕಾರದ ಮೂಲಭೂತ ಕರ್ತವ್ಯವೆಂದು ಪರಿಗಣಿಸಲಾಗುತ್ತಿದೆ.

ಆದರೆ, ನಮ್ಮಂತಹ ಸಂಪತ್ಬರಿತ ದೇಶದಲ್ಲಿ ಧರ್ಮ, ಜಾತಿ, ಪಂಗಡ, ಮಾನ- ಮರ್ಯಾದೆ, ಭಾವನೆ, ಕಟ್ಟು-ನಿಟ್ಟು,ಹಣವಂತ- ಬಡವ, ಸಣ್ಣ ಕೆಲಸದವ- ದೊಡ್ಡ ಕೆಲಸದವ, ಇವೆಲ್ಲಾ ಪ್ರಾಮುಖ್ಯವಾಗಿ, ನಿಜವಾದ ಪ್ರಜೆಯ ಅವಶ್ಯಕತೆ ಕಡೆ ಗಮನವೇ ಇಲ್ಲ. ನಾವು ಭಾವಾನಾತ್ಮಕ ಜೀವನ ಜೀವಿಸುತ್ತಿದ್ದೇವೆ.

ಒಬ್ಬ ಹುಡುಗಿ ತನ್ನ ಯೌವನದಲ್ಲಿ ಒಂದು ತಪ್ಪು ಮಾಡಿದರೆ, ಅವಳ ಜೀವನವನ್ನೆ ಈ ಸಮಾಜ ಹಾಳು ಮಾಡುತ್ತದೆ. ಅವಳು ಖಂಡಿತಾ ಯಾರಿಗೂ ಹಾನಿ ಮಾಡಿಲ್ಲ.

  ಪ್ರಜಾಕೀಯ ಹನ್ನೆರಡು ಸೂತ್ರಗಳು ಹಾಗು ಪ್ರಜೆಗಳ ಅವಶ್ಯಕತೆಗಳು

ಆದರೆ ಸಾವಿರ- ಸಾವಿರ ಕೋಟಿ ಜನರು ಹಣವನ್ನು ಕದ್ದು, ಐದು- ಹತ್ತು ಕ್ರಿಮಿನಲ್ ಕೇಸ್ ಇದ್ದರೂ, ಅವರನ್ನು ಗೌರವದಿಂದ ನೋಡುವ ಸಮಾಜ, ಸುಧಾರಿಸುವುದಾದರೂ ಹೇಗೆ. ಅದೇ ಕದ್ದ ಹಣವನ್ನು ಸ್ವಲ್ಪ ದೇವಾಸ್ತನ, ಮಸ್ಜಿದ್, ಚರ್ಚ್,‌ ಶಾಲೆ, ಕಾಲೇಜುಗಳಿಗೆ ಧಾನ ಕೊಟ್ಟರೆ, ಅವನ ಹಿಂದೆ ನೂರಾರು ಜನರು ಓಡುತ್ತಾರೆ. ಆವಾಗ ದೇವರೂ ಇಲ್ಲ, ನಾವೆ ಅವನ ಪಾಪಕ್ಕೆ ಪರಿಹಾರ ಕೊಡುತ್ತೇವೆ.

ಎಂತಹ ಪಾಪಿ ಸಮಾಜದಲ್ಲಿ ನಾವು ಬದುಕುತ್ತಿರುವೆವು ?

ಅದು ಇನ್ನೂ ದುಸ್ತಿತಿಗೆ ಹೋಗಲು ಕಾರಣ, ನಮ್ಮ ಮಾಧ್ಯಮಗಳು. ಜನರ ಅವಶ್ಯಕತೆಯಾದ ವಿಧ್ಯಾಭ್ಯಾಸ, ಆರೋಗ್ಯ, ನೀರು, ವಿಧ್ಯುತ್, ಆಹಾರ, ಸಾರಿಗೆ, ಮನೆ, ಇತ್ಯಾದಿಗಳನ್ನು ಯಾವ ಮಾಧ್ಯಮವೂ ಮಾತನಾಡುವುದಿಲ್ಲ. ಕೇವಲ ಸೆನ್ಸೇಷನಲ್ ವಿಷಯ ಬಿಟ್ಟರೆ, ಉಳಿದವುಗಳು ಅವರಿಗೆ ಬೇಕಿಲ್ಲ.

  ಶ್ರಾವಣಮಾಸ ಕೃಷ್ಣಪಕ್ಷದ ಏಕಾದಶಿ "ಅಜಾ" ಏಕಾದಶಿ

ಭಾವನೆಯಲ್ಲಿ ಬದುಕುವ ಪ್ರಜೆಗಳಿಗೆ, ಭಾವಾನಾತ್ಮಕ ವಿಷಯ ಮಾತನಾಡುವ ರಾಜಕಾರಣಿ, ಭಾವನೆಯನ್ನು ಕೆರಳಿಸುವ ವಾರ್ತೆ ಕೊಡುವ ಮಾಧ್ಯಮ, ಭಾವನೆಯ ಉಪಯೋಗ ಪಡೆಯುವ ಧರ್ಮ ಗುರುಗಳು, ಹೀಗೆ ಭಾವನೆಯಲ್ಲಿಯೇ ಬದುಕಿ ಸಾವುವ ಪ್ರಜೆಗಳ ರಾಜ್ಯ- ದೇಶ ಎಂದೂ ಅಬಿವ್ರದ್ದಿಯಾಗುವುದಿಲ್ಲ.

We must become Practical People.

ಇಲ್ಲಿ ಯಾರೂ ಆ ಧರ್ಮದವ- ಈ ಧರ್ಮದವ, ಜಾತಿಯವ, ಪಂಗಡದವ, ದೊಡ್ಡವ- ಸಣ್ಣವ, ಹಣವಂತ- ಬಡವ ಎಂಬ ಬೇಧ
ಭಾವವಿಲ್ಲದೆ, ಕೇವಲ ಪ್ರಜೆ( Citizen) ಎಂದು “Indian” ಸಂಬೋದಿಸುವಂತಾಗ ಬೇಕು. ಎಲ್ಲಾ ಅಬಿವ್ರಧ್ಧಿ ಹೊಂದಿದ ದೇಶಗಳಲ್ಲಿ ಇದೆ ಸತ್ಯ.

ಅದರಲ್ಲೂ ಸರಕಾರದ ಕೆಲಸದಲ್ಲಿ ಭಾವನೆಗಳು ಬರಲೇ ಬಾರದು. ಈ ಭಾವನೆಗಳಿಂದಲೆ ಫೇವರಿಸ್ಮ್ ಬಂದು, ಭ್ರಷ್ಟಾಚಾರ ಎಂಬ ಬ್ರಹತ್ ರಾಕ್ಷಸನ ಸೃಷ್ಟಿಯಾಗಿದೆ.

ಅದರಲ್ಲೂ ಕಾನೂನು ವ್ಯವಹಾರದಲ್ಲಿ ಖಂಡಿತಾ ಭಾವನೆಯ ಗಂದ- ಗಾಳಿ ಇರಬಾರದು.

ಈ ಭಾವನೆಗಳು ನಮ್ಮ ಪ್ರಜಾಪ್ರಭುತ್ವವನ್ನು ಸಂಪೂರ್ಣ ದಾರಿ ತಪ್ಪಿಸಿದೆ. ಕೆಲವೊಂದು ಹಣವಂತ ಪ್ರಜೆಗಳ ಗುಲಾಮರಾಗಿ ಬದುಕುವಂತೆ ಮಾಡಿದೆ. ಇದು 300 ವರ್ಷದ ಬ್ರಿಟೀಷ್ ಸರಕಾರಕ್ಕಿಂತಲೂ ಕೀಳು ಮಟ್ಟಕ್ಕಿಳಿದಿದೆ.

  ಭಾರತದಲ್ಲಿ ತೆರಿಗೆ ಕೊಡುವವರು ಯಾರು ? Who are the Tax Payers in India ?

ಒಬ್ಬ ಜನ ಪ್ರತಿನಿಧಿಯನ್ನು ಸಂದರ್ಶಿಸಲು ಸಾಮಾನ್ಯರಿಂದ ಸಾಧ್ಯವಿಲ್ಲದಂತಾಗಿದೆ. ಸರ್ಕಾರಿ ನೌಕರರು ಬ್ರಿಟೀಷ್ ಜನರಲ್ ಗಿಂತ ಹೆಚ್ಚಾಗಿ ಗದರಿಸಿ- ಹೆದರಿಸಿ ಮಾತನಾಡುತ್ತಾರೆ. ಯಾರೊ ಬಿಕ್ಷೆ ಬೇಡಲು ಬಂದಿರುವಂತೆ ಪ್ರಜೆಗಳನ್ನು ಸಂಭೊದಿಸುತ್ತಾರೆ.

ಎಲ್ಲಿದೆ ಪ್ರಜಾಪ್ರಭುತ್ವ ? ಪ್ರಜೆಗಳ ಪ್ರಭುತ್ವವಿರ ಬೇಕಾದಲ್ಲಿ, ರಾಜಕಾರಣಿ- ಸರ್ಕಾರಿ ನೌಕರರು ಪ್ರಜೆಗಳ ಪ್ರಭುಗಳಾಗಿ ಮೆರೆಯುತ್ತಿರುವರು. ಪ್ರಜೆಗಳು ಅವರಿಂದ ಬಿಕ್ಷೆ ಬೇಡುವ ಪರಿಸ್ತಿತಿಯಾಗಿದೆ.

ಇದು ಬದಲಾವಣೆ ಆಗಲೇ ಬೇಕು. ಇಲ್ಲವಾದರೆ ಇದು ಇನ್ನೊಂದು ಈಜಿಪ್ತ್ ಅಥವಾ ಯುಗೊಸ್ಲಾವಿಯಾ ಆಗ ಬಹುದು.

ಭ್ರಷ್ಟಾಚಾರ ನಿಲ್ಲಲೇ ಬೇಕು.

ಕೇವಲ ಪ್ರಜಾಕೀಯಾವೇ ನಿಜವಾದ ಪ್ರಜಾಪ್ರಭುತ್ವವನ್ನು ಸ್ತಾಪಿಸಲು ಸಾಧ್ಯ.

Leave a Reply

Your email address will not be published. Required fields are marked *

Translate »