ಪ್ರಜಾಕೀಯಾ ನಂಬಿಕೆ – ಅಬಿವ್ರಧ್ಧಿ
ಒಬ್ಬ, ಒಂದು ಧರ್ಮ, ಜಾತಿ, ಪಂಗಡ, ಭಾಷೆ, ಪ್ರಾಂತ್ಯ, ಸಂಸ್ಕ್ರತಿಯನ್ನು ನಂಬಿದರೆ, ಅವನ ಮೂಲಭೂತ ಸೌಕರ್ಯವಾದ ನೀರು, ವಿದ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ವಸತಿ, ಕಾನೂನು ವ್ಯವಸ್ಥೆ, ಉದ್ಯೋಗ, ಕಸ ವಿಲೆವಾರಿ, ಇತ್ಯಾದಿಗಳು ಸಿಗುವುದಿಲ್ಲ.
ಆದ್ದರಿಂದ ಅಬಿವ್ರಧ್ಧಿಗೆ ಹಾಗು ನಂಬಿಕೆಗೆ ಯಾವ ನಂಟೂ ಇಲ್ಲ.
ಅಬಿವ್ರಧ್ಧಿ ಪ್ರಜೆಗಳ ಮೂಲಭೂತ ಸೌಕರ್ಯ- ಸೌಲಭ್ಯ ಒದಗಿಸುವ ಪ್ರಕ್ರೀಯೆ.
ಆದರೆ ಸಂಸ್ಕ್ರತಿ, ಧರ್ಮ, ಜಾತಿ, ಪಂಗಡ, ಇವೆಲ್ಲಾ ಪ್ರಜೆಗಳನ್ನು ವಿಂಗಡಿಸುವ ವಿಧಾನ.
ಯಾವುದೇ ಆರಿಸಿ ಬಂದ ಪ್ರತಿನಿಧಿಯಾಗಲಿ ಅಥವಾ ಸರಕಾರವಾಗಲಿ, ಅದು ಕೇವಲ ಅಬಿವ್ರದ್ದಿಯ ವಿಷಯ ಮಾತನಾಡಬೇಕೇ ವಿನಹ, ಬೇರೆ ಅಲ್ಲ.
ನಮ್ಮ ಸಂವಿಧಾನ ಅಥವಾ ಪೌರತ್ವದಲ್ಲಿ ಎಲ್ಲಿಯಾದರೂ “ಹಿಂದು ಭಾರತೀಯ, ಮುಸ್ಲಿಂ ಭಾರತೀಯ, ಕ್ರಿಶ್ಚನ್ ಭಾರತೀಯ, ಬುದ್ಧಿಸ್ಟ್ ಭಾರತೀಯ, ಜೈನ್ ಭಾರತೀಯಾ, ಯಹೂದಿ ಭಾರತೀಯ” ಎಂದು ಇರುವುದೇ ? ಕೇವಲ ಭಾರತೀಯಾ – Indian ಎಂದಲ್ಲವೇ .
ಮತ್ತೆ ಯಾಕೆ ಈ ಮೂರ್ಖ ರಾಜಕಾರಣಿಗಳು ಸಂಸ್ಕ್ರತಿ, ಧರ್ಮ, ಜಾತಿ, ಪಂಗಡ ಎಂದು ಒದರುತ್ತಿರುವರು ?
ಸಂಸ್ಕ್ರತಿ, ಧರ್ಮ, ಜಾತಿ, ಪಂಗಡ, ಭಾಷೆ, ಆಹಾರ ಸಂಸ್ಕ್ರತಿ, ಬಟ್ಟೆ ಸಂಸ್ಕ್ರತಿ, ಇವೆಲ್ಲಾ ಪ್ರತಿ ಪ್ರಜೆಯ ಖಾಸಾಗಿ ವಿಷಯ ಹಾಗು ಅವನ ನಂಬಿಕೆ ಮತ್ತು ಆಯಿಕೆ ವಿಷಯ ಎಂದು ಸಂವಿಧಾನವೂ ಖಾತ್ರಿ ಪಡಿಸಿರುವಾಗ, ಈ ರಾಜಕಾರಣಿಗಳು ಸಂವಿಧಾನಕ್ಕಿಂತಲೂ ಶ್ರೇಷ್ಟವಾಗುವರೇ ?
ಕಳೆದ 72 ವರ್ಷದಿಂದ ಇಂತಹ ರಾಜಕಾರಣಿಗಳಿಂದ ಮೋಸ ಹೋಗಿರುವೆವು.
ಇಲ್ಲಿ ಕೇವಲ ಎರಡು ವಿಂಗಡನೆ ಇರಬೇಕು.
1. ಆರ್ಥಿಕವಾಗಿ ಹಿಂದುಳಿದ ಪ್ರಜೆ(BPL)
2. ಆರ್ಥಿಕವಾಗಿ ಸಮ್ರದ್ದ ಪ್ರಜೆ( APL)
ತೆರಿಗೆ ಹಣದ ಹೆಚ್ಚಿನ ಪಾಲು ಈ ಆರ್ಥಿಕವಾಗಿ ಹಿಂದುಳಿದ ಪ್ರಜೆಗಳನ್ನು ಆರ್ಥಿಕವಾಗಿ ಮುಂದುವರಿಯುವುದಕ್ಕೆ ಪ್ರೋತ್ಸಾಹ ಕೊಡಲು ಉಪಯೋಗವಾದರೆ, ಸಮಾಜದಲ್ಲಿ ಸಮತೋಲನ ಬಂದು, ದೇಶವು ಅಬಿವ್ರದ್ದಿ ಹೊಂದಿದ ದೇಶವಾಗುವುದು.
ದೇಶದ ಎಲ್ಲಾ ಸಂಪತ್ತು ಪ್ರಜೆಗಳ ಸಂಪತ್ತಲ್ಲವೇ ?
ಪ್ರಜೆಗಳು ಕಟ್ಟಿದ ತೆರಿಗೆ ಹಣವೇ ದೇಶವನ್ನು ನಡೆಸುತ್ತಿರುವುದಲ್ಲವೇ ?
ಪ್ರಜೆಗಳೇ ಎದ್ದೇಳಿ.
ಪ್ರಜೇಯೇ ಅಗ್ರಗಣ್ಯ. Citizen’s are Supreme.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).