ಪ್ರಜಾಕೀಯ ಪ್ರಜೆಗಳಿಗೆ ಯೋಜನೆಗಳನ್ನು ತಲುಪಿಸುವ ವಿಧಾನ

ಸರ್ಕಾರಿ ಯೋಜನೆಗಳನ್ನು ನಿಜವಾದ ಫಲಾನುಭವಿಗೆ ತಲುಪಿಸುವ ವಿಧಾನ.

Delivery of Government Programs to Citizens.

ನಮ್ಮ ರಾಜ್ಯದ ಹಾಗು ದೇಶದ ಪ್ರತೀ ಯೋಜನೆಯು ನಿಜವಾದ ಫಲಾನುಭವಿಗಳಿಗೆ ತಲುಪದೆ ಅರ್ಧ ದಾರಿಯಲ್ಲೆ ಭ್ರಷ್ಟರ ಕೈ ಸೇರುತ್ತಿವೆ.

ಕಾರಣ ಸರಿಯಾದ ಅಂಕಿ ಅಂಶವಾಗಲೀ, ಅಥವಾ ನಿಜವಾದ ಫ್ರಲಾನುಭವಿಗಳ ವಿವರ ಸರಿಯಾಗಿ ಸಂಗ್ರಹಿಸದೆ ಯೋಜನೆಗಳ ಅನಾವರಣವಾಗುತ್ತಿದೆ.

ಉದಾಹರಣೆಗೆ, ರೈತರ ಸಾಲ ಮನ್ನಾ – ಕಳೆದ ಒಂದು ವರ್ಷದಿಂದ ಡ್ರಾಮಾ ನಡೆಯುತ್ತಿದೆ. ಕಾರಣ, ಸರಿಯಾದ ಅಂಕಿ ಅಂಶಗಳನ್ನು ಸಂಗ್ರಹಿಸದೆ ಯೋಜನೆಯನ್ನು ತಯಾರಿಸಲಾಯಿತು.

ಮೋದಲೆ ಎಲ್ಲಾ ಅಂಕಿ ಅಂಶಗಳನ್ನು ತಯಾರಿಸಿದ್ದರೆ, ನೇರ ರೈತರ ಬ್ಯಾಂಕ್ ಖಾತೆಗೆ ಹಣ ತಲುಪಿಸ ಬಹುದಿತ್ತು. ಇದು ಯಾವ ಅಂಕಿ- ಅಂಶಗಳನ್ನು ತಯಾರಿಸದೆ ಮಾಡಿದ ಯೋಜನೆಗಳು.

ಇದು ಬೇಕೆಂತಲೆ ಮಾಡುತ್ತಿರುವರೋ ಅಥವಾ ಇವರಿಗೆ ಇದೊಂದು ಪ್ರಾಮುಖ್ಯವಾದುದೆಂದು ತೋರುವುದಿಲ್ಲವೋ ?

ಈಗ ನಮ್ಮ ಸರ್ಕಾರದ ಅಂಗಗಳು ಗ್ರಾಮ ಪಂಚಾಯಿತಿಯವರೆಗೆ ಪಸರಿಸಿರುವುದರಿಂದ, ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳ ಸಂಪೂರ್ಣ ಪಟ್ಟಿ ತಯಾರಾಗಿ, ಅದನ್ನು ಕೂಲಂಕುಷವಾಗಿ ವೆರಿಫೈ ಮಾಡಿದ ಮೇಲೆ, ಯಾವುದೇ ಯೋಜನೆಗಳನ್ನು ಕಾರ್ಯರೂಪಕ್ಕೆ ತರ ಬೇಕು. ಇದು ಪಟ್ಟಣಗಳಲ್ಲಿ ವಾರ್ಡ್ಗಳು ಮಾಡ ಬೇಕು.

  ಪ್ರಜಾಕೀಯಾ ನಂಬಿಕೆ - ಅಬಿವ್ರಧ್ಧಿ

ಈ ಪಟ್ಟಿಗಳನ್ನು( List) ಪ್ರಜೆಗಳ ಪರಿಶೀಲನೆಗೆ ತೆರೆದಿರ ಬೇಕು. ಪ್ರಜೆಗಳೇ ಇದನ್ನು ಕೂಲಂಕುಷವಾಗಿ ಪರಿಶೀಲಿಸುವರು‌.

ಎಷ್ಟು ಸಾಮಾನ್ಯವಾಗಿ ಇದನ್ನು ಮಾಡ ಬಹುದಲ್ಲವೇ ?

ಆದರೆ ನಮ್ಮ ಸರಕಾರ ಹಾಗು ಸರಕಾರಿ ಪರಿಣಿತರು, ತಮ್ಮ ಏರ್ ಕಂಡಿಷನ್ ಆಫೀಸಿನಲ್ಲಿ ಕುಳಿತು ಕೊಂಡು, ಯಾರೋ ತಯಾರಿಸಿದ ಅಂಕಿ- ಅಂಶಗಳನ್ನು ತಮ್ಮ ಕಂಪೂಟರ್ನಲ್ಲಿ ಇಟ್ಟು ಕೊಂಡು, ಅದರ ಪ್ರಕಾರ ಎಲ್ಲಾ ಯೋಜನೆಗಳನ್ನು ಮಾಡುತ್ತಾರೆ.

ವಾರೇ ವಾಹ್……

ಉದಾಹರಣೆಗೆ, ನಮ್ಮ ಕರ್ನಾಟಕದಲ್ಲಿ 5 ಕೋಟಿ ಮತದಾರರಿರುವರೆಂದು ಎಲೆಕ್ಷನ್ ಕಮಿಷನ್ ಡಿಕ್ಲೇರ್ ಮಾಡಿದಾಗ, ಈ ಸರಕಾರಿ ಬಾಬುಗಳು ಅದನ್ನೆ ಉಪಯೋಗಿಸಿ ನಮ್ಮ ರಾಜ್ಯದಲ್ಲಿ 1.5 ಕೋಟಿ ಶಾಲಾ ಮಕ್ಕಳಿದ್ದಾರೆ ಎಂದು ಪರಿಗಣಿಸುತ್ತಾರೆ.

  ಪ್ರಜಾಕೀಯ ಹನ್ನೆರಡು ಸೂತ್ರಗಳು ಹಾಗು ಪ್ರಜೆಗಳ ಅವಶ್ಯಕತೆಗಳು

ಅದು ಹೇಗೆ ಅಂದರೆ, ಮತದಾರರು 18 ವರ್ಷಕ್ಕೆ ಮೇಲ್ಪಟ್ಟವರು. ಆದ್ದರಿಂದ 6.5 ಕೋಟಿ ಜನಸಂಖ್ಯೆಯಿಂದ 5 ಕೋಟಿ ತೆಗೆದರೆ 1.5 ಕೋಟಿ 18 ವರ್ಷಕ್ಕಿಂತ ಕೆಳಗಿನವರು. ಹೀಗೆ ಲೆಕ್ಕಾಚಾರವಾಗುವುದು ಖಂಡಿತಾ ತಪ್ಪು.

ಪ್ರತೀಯೊಂದು ಜನರಿಗೆ ನೇರ ತಲುಪ ಬೇಕಾದ ಯೋಜನೆಗಳಿಗೆ ಅದರದ್ದೆ ಆದ ಸರ್ವೇ ನಡೆಯಲೆ ಬೇಕು. ಆವಾಗ ಮಾತ್ರ ನಿಜವಾದ ಫಲಾನುಭವಿಗಳಿಗೆ ಅದು ತಲುಪುವುದು.

ಒಂದು ಗ್ರಾಮ ಪಂಚಾಯಿತಿ ಎಂದರೆ 2× 5 ಕಿ.ಮಿ. ( 2 ರಿಂದ 5 ಹಳ್ಳಿಗಳು), ಹಾಗೆ ವಾರ್ಡ್ ಎಂದರೆ 1×2 ಕಿ.ಮಿ( 10-20 Street).

ಇವುಗಳನ್ನು 10 ರಿಂದ 15 ದಿನದಲ್ಲಿ ಸಂಪೂರ್ಣ ಮಾಹಿತಿ ಸಂಗ್ರಹಿಸ ಬಹುದು.

ಒಬ್ಬ ಗ್ರಹಿಣಿ ಕೂಡಾ ಮಾರ್ಕೆಟಿಗೆ ಹೋದಾಗ, ಮನೆಯಲ್ಲಿ ಎಷ್ಟು ಮೆಂಬರ್ ಇರುವರು ಹಾಗು ಯಾರ್ಯಾರು ಎನು ತಿನ್ನುತ್ತಾರೆ ಎಂಬ ಸರ್ವೇ ಮಾಡಿ, ಬೇಕಾದ ಸಾಮಾಗ್ರಿಗಳನ್ನು ಕರೀದಿಸುತ್ತಾಳೆ.

  ಉತ್ತಮ ಪ್ರಜಾಕೀಯ ಪಕ್ಷದ (UPP) ಪ್ರತಿಯೊಂದು ಜಿಲ್ಲೆಯ ಟೆಲಿಗ್ರಾಮ್ ಗ್ರೂಪ್ ಲಿಂಕ್ - uttama prajaakeeya party district telegram group link

ಹಾಗಿರುವಾಗ, ಸರ್ವೇ ಮಾಡುವುದು, ಸಾವಿರ- ಸಾವಿರ ಕೋಟಿ ಖರ್ಚು ಮಾಡುವ ಸರಕಾರದ ಜವಾಬ್ದಾರಿಯಾಗುವುದಿಲ್ಲವೇ ?

ಸರಕಾರದ ಅಂಗಗಳನ್ನು ಇದನ್ನು ಕೂಲಂಕುಷವಾಗಿ ಮಾಡಲು ಉಪಯೋಗಿಸಲು ಪಡ ಬೇಕು. ಹಾಗೆ ಆದಲ್ಲಿ, ಪ್ರತೀ ಪ್ರಜೆಯ ಮನೆಗೆ ಹೋಗಿ ಎಲ್ಲಾ ಸೌಕರ್ಯ- ಸೌಲಭ್ಯಗಳನ್ನು ಒದಗಿಸ ಬಹುದು.

ಎಲ್ಲಕ್ಕಿಂತಲೂ ಮಿಗಿಲಾಗಿ ಸರಕಾರ ಹಾಗು ಪ್ರಜೆಗಳ ಒಂದಕ್ಕೆ- ಒಂದು ಸಂಪರ್ಕ ಬೆಳೆದು, ಇದು ರಾಮರಾಜ್ಯವಾಗುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

ಇದರಿಂದ ಭ್ರಷ್ಟಾಚಾರವೂ ಸ್ವಲ್ಪ ಮಟ್ಟಿಗೆ ಹತೋಟಿಯಲ್ಲಿರುವುದು.

– ಪ್ರಜಾಕೀಯಾ ಬೆಂಬಲಿಗರು

Leave a Reply

Your email address will not be published.

Translate »

You cannot copy content of this page