ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜನಸಂಖ್ಯೆ ಸ್ಪೋಟ ಬೆಂಗಳೂರು- POPULATION EXPLOSION -BENGALURU

ಜನಸಂಖ್ಯೆ ಸ್ಪೋಟ ಬೆಂಗಳೂರು- POPULATION EXPLOSION -BENGALURU

ಯಾವುದೇ ರೀತಿಯ ವಿಮರ್ಶೆ ಮಾಡುವ ಮೊದಲು, ನಾವು ಕಳೆದ 50 ವರ್ಷದ, ಬೆಂಗಳೂರು ನಗರದ ಜನ ಸಂಖ್ಯೆಯ ಅಂಕಿ ಅಂಶಗಳನ್ನು ತಿಳಿಯುವುದು ಉತ್ತಮವೆಂದು ನನ್ನ ಅನಿಸಿಕೆ.

ವರ್ಷ ಜನಸಂಖ್ಯೆ ಬೆಳವಣಿಗೆ ಶೇಖಡಾ
ಬೆಳವಣಿಗೆ

1970. 16,15,000. — —

1980. 28,12,000. 11,62,000. 70%

1990. 40,43,000. 12,31,000 43.8%

2000. 55,81,000. 15,38,000 38%

2010. 82,96,000. 27,15,000. 48%

2019. 1,18,83,000. 35,87,000. 43%

Total increase of population in last 49 Years=

1,02,68,000 (1 ಕೋಟಿ 2 ಲಕ್ಷದ 68 ಸಾವಿರ)

636% (636 ಶೇಖಡಾ)

2021ರಲ್ಲಿ 1,27,65,000 ಜನಸಂಖ್ಯೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದ 6.8 ಕೋಟಿ ಜನ ಸಂಖ್ಯೆಯಲ್ಲಿ ಸುಮಾರು 18.8 % ಶೇಖಡಾ ಕೇವಲ ಬೆಂಗಳೂರು ಪಟ್ಟಣದಲ್ಲಿರುವುದು. ಅಂದರೆ ಸುಮಾರು 50 X 50 Km ನಲ್ಲಿ ಇರುವುದು..

ಮುಂಬೈಯಂತಹ ಇನ್ನೂ ಜನ ಸಾಂದ್ರತೆ ಜಾಸ್ತಿ ಇರುವ ಪಟ್ಟಣದಲ್ಲಿ ಕಳೆದ 75 ವರ್ಷದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಯತೇಷ್ಟ ಆಗಿರುವುದು. ಅಲ್ಲಿಯ ಲೋಕಲ್ ರೈಲ್ವೆ, BEST ಬಸ್ ವ್ಯವಸ್ಥೆ ಹಾಗು ಈಗ ಮೆಟ್ರೋ ಟ್ರೈನ್ಗಳು ತುಂಬಹ ಸಮಂಜಸವಾಗಿ ನಡೆಯುತ್ತಿರುವುದು.

ಮುಂಬೈ ಪಟ್ಟಣದಲ್ಲಿ 2,04,11,000( 2 ಕೋಟಿ 4 ಲಕ್ಷದ 11ಸಾವಿರ) ಜನ ಸಂಖ್ಯೆ ಇರುವಲ್ಲಿ ಕೇವಲ 40,00,000 (40 ಲಕ್ಷ ) ವಾಹನಗಳಿದ್ದು, 1,27,65,000( 1 ಕೋಟಿ 27 ಲಕ್ಷದ 65 ಸಾವಿರ) ಜನ ಸಂಖ್ಯೆ ಇರುವ ಬೆಂಗಳೂರಿನಲ್ಲಿ 80,00,000( 80 ಲಕ್ಷ) ವಾಹನಗಳಿರುವುದು ಅತಿರೇಖಾ ಹಾಗು ಆದ್ದರಿಂದ ಎಲ್ಲಾ ಕಡೆ ವಾಹನಗಳ ಚಲನೆ ಕುಂಟಿತವಾಗಿದೆ. ಮುಂಬೈಗಿಂತ ನಾಲ್ಕು ಪಟ್ಟು ವಾಹನ ದಟ್ಟನೆ ಇದೆ.

ಬೆಂಗಳೂರಿನಲ್ಲಿ, ಕಳೆದ 50 ವರ್ಷದಿಂದ ಸರಿಯಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆಳವಣಿಗೆ ಆಗಲೇ ಇಲ್ಲ. ಆದ್ದರಿಂದ ಜನರು ದ್ವಿಚಕ್ರ ವಾಹನದ (55,00,000- 55 ಲಕ್ಷ) ಮಾರು ಹೋಗ ಬೇಕಾಯಿತು. ಇದು, ಇಂದು ಪ್ರಜೆಗಳಿಗೂ ಮಾರಕ ಹಾಗು ಪಟ್ಟಣದಲ್ಲಿ ವಾತಾವರಣ ಕಲುಸಿತ ಮಾಡುತ್ತಿದೆ.

ಇದಕ್ಕೆ ಯಾರು ಹೊಣೆ ? ಖಂಡಿತಾ, ಕಳೆದ 50 ವರ್ಷದಲ್ಲಿ ಬಂದ ಎಲ್ಲಾ ಸರಕಾರಗಳು. ಜನ ಸಂಖ್ಯೆ ಬೆಳವಣಿಗೆಯೊಂದಿಗೆ ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಬೆಳವಣಿಗೆ ಮಾಡಬೇಕಿತ್ತು. ಅಷ್ಟೆ ಅಲ್ಲ, ಮುಂದಿನ 25 ರಿಂದ 50 ವರ್ಷಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಬೇಕಿತ್ತು.

ಎಲ್ಲಾ ಕೈಗಾರಿಕೆಗಳನ್ನು, ತಮ್ಮ ರಿಯಲ್ ಎಸ್ಟೇಟ್ ವ್ಯವಹಾರದ ಲಾಭಕ್ಕಾಗಿ ಒಂದೇ ಪಟ್ಟಣದಲ್ಲಿ ನಿರ್ಮಿಸಿ, ಕರ್ನಾಟಕದ ಹಾಗು ಬೇರೆ ರಾಜ್ಯದ ಪ್ರಜೆಗಳು, ಬೆಂಗಳೂರಿಗೆ ಪಲಾಯಣ ಮಾಡುವಂತೆ ಮಾಡಿರುವರು. ಇದು ಸರಕಾರಗಳ ವಿಪರೀತ ವಿಫಲತೆ.

ಅದರಲ್ಲೂ, ಐ.ಟಿ. ಉಧ್ಯಮ ಎಲ್ಲಿಯೂ ನಡೆಯ ಬಹುದಿತ್ತು. ಅದು ಈಗ ” ವರ್ಕ್ ಫ್ರಮ್ ಹೋಮ್” ಸಾಬೀತು ಪಡಿಸಿದೆ.

ಇನ್ನಾದರೂ, ಸರಕಾರಗಳು ಎಚ್ಚೆತ್ತು, ಬೇರೆ ಪಟ್ಟಣಗಳು ಬೆಳವಣಿಗೆ ಆಗುವಂತೆ ನೋಡಿ ಕೊಳ್ಳಲಿ.

ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)

ಈ ಜನಸಂಖ್ಯೆಯ ಸ್ಪೋಟದೊಂದಿಗೆ ಬೆಂಗಳೂರಿನ ಸಾರಿಗೆ ವ್ಯವಸ್ಥೆ, ರಸ್ತೆಗಳು ಹಾಗು ಬೇರೆ ವ್ಮವಸ್ಥೆಗಳು ಖಂಡಿತಾ ಬೆಳವಣಿಗೆ ಆಗಲಿಲ್ಲ.

Leave a Reply

Your email address will not be published. Required fields are marked *

Translate »