ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

G D P – Gross Domestic Products – ಒಟ್ಟು ರಾಷ್ಟ್ರೀಯ ಉತ್ಪನ್ನ

G D P – Gross Domestic Products – ಒಟ್ಟು ರಾಷ್ಟ್ರೀಯ ಉತ್ಪನ್ನ

ಯಾವುದೇ ದೇಶದ ಆರ್ಥಿಕ ಪರಿಸ್ತಿತಿಯನ್ನು ಮಾಪನೆ ಮಾಡಲು ಇದರ ಅತೀ ಅವಶ್ಯಕತೆ ಇದೆ. GDP -ಒಟ್ಟು ರಾಷ್ಟ್ರೀಯ ಉತ್ಪನ್ನವು ಕೆಳಗಿನ ಮೂರು ವಿಷಯದ ಮೇಲೆ ನಿರ್ಧಾರ ಆಗುವುದು.

1. ಕೃಷಿ ಉತ್ಪನ್ನ.
2. ಕೈಗಾರಿಕೆಯ ಉತ್ಪನ್ನ.
3. ಎಲ್ಲಾ ರೀತಿಯ ಸೇವೆಗಳ ಬೆಲೆ.

ಮೇಲಿನ ಮೂರು ರೀತಿಯ ಉತ್ಪನ್ನದ ಮಾರುಕಟ್ಟೆ ಬೆಲೆಯೇ GDP- ಒಟ್ಟು ರಾಷ್ಟ್ರೀಯ ಉತ್ಪನ್ನ. ಇದು ಒಂದು ನಿರ್ಧಿಷ್ಟ ಸಮಯ, ಅಂದರೆ ಒಂದು ವರ್ಷ(12 ತಿಂಗಳು)ದ ಒಟ್ಟು ಉತ್ಪನ್ನ ಆಗಿರುವುದು.

ಬೇರೆ ದೇಶದಲ್ಲಿ ಉತ್ಪನ್ನವಾದ ವಸ್ತುಗಳನ್ನು ನಮ್ಮ ದೇಶಕ್ಕೆ ಆಮದು(Import) ಮಾಡಿ, ನಮ್ಮ ದೇಶದಲ್ಲಿ ಮಾರಲ್ಪಟ್ಟರೆ, ಅದು ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಬರುವುದಿಲ್ಲ.

ಹಾಗಾದರೆ, ಈ “ಒಟ್ಟು ರಾಷ್ಟ್ರೀಯ ಉತ್ಪನ್ನ” ವನ್ನು ಲೆಕ್ಕ ಮಾಡುವುದಾದರೆ ಹೇಗೆ ?

GDP = C + I + G + ( X – M )

C = Consumer Expenditure – ಗ್ರಾಹಕ (ಬಳಕೆದಾರ-ಉಪಭೋಗಿ) ಮಾಡುವ ಖರ್ಚು.
I = Industrial Investments- ಕೈಗಾರಿಕೆಯಲ್ಲಿ ಹೂಡಿಕೆ.
G = Government Expenditure- ಸರಕಾರ ಮಾಡುವ ಖರ್ಚು.
X = Export – ರಫ್ತು.
M = Import – ಆಮದು.

ಈ ತತ್ವವನ್ನು ಹುಟ್ಟಿ ಹಾಕಿದ ಅರ್ಥ ಶಾಸ್ತ್ರಜ್ಞನ ಹೆಸರು ಸೈಮನ್ ಕುಟ್ಲೆಜ್.

ಈಗ ಎಲ್ಲಾ ದೇಶಗಳು ಇದನ್ನೆ ಅನುಸರಿಸುತ್ತದೆ ಹಾಗು ವರ್ಲ್ಡ ಬ್ಯಾಂಕ್ ಹಾಗು ಎಲ್ಲಾ ಅಂತರಾಷ್ಟ್ರೀಯ ಹಣ ಕಾಸು ಸಂಸ್ಥೆಗಳೂ, ಇದನ್ನೆ ಅನುಸರಿಸುವುದು.

ಎಲ್ಲರಿಗೂ ಅರ್ಥ ಹಾಗು ಮನದಟ್ಟಾಗಲಿ ಎಂದು ಇದನ್ನು ಸರಳ ರೂಪದಲ್ಲಿ ತಿಳಿಸಲಾಗಿದೆ. ದೇಶದ-ರಾಜ್ಯದ ಆರ್ಥಿಕ ಪರಿಸ್ತಿತಿಯು ಈ ಅಂಕಿ-ಅಂಶಗಳಿಂದ ತಿಳಿಯುವದು.

ಹೀಗೆ ರಾಜ್ಯದ “ಒಟ್ಟು ರಾಜ್ಯದ ಉತ್ಪನ್ನ” ವನ್ನು GSDP ಎಂದು ಕರೆಯುವರು.

ಉದಾಹರಣೆಗೆ:
2019-20 GDP -ಒಟ್ಟು ರಾಷ್ಟ್ರೀಯ ಉತ್ಪನ್ನ = 145.69 ಲಕ್ಷ ಕೋಟಿ.
2019-20 GSDP- ಒಟ್ಟು ರಾಜ್ಯದ ಉತ್ಪನ್ನ = 18.3 ಲಕ್ಷ ಕೋಟಿ.

ಯಾವುದೇ ವಸ್ತು ಅಥವಾ ಸರ್ವೀಸ್ ಬೇರೆ ದೇಶದಿಂದ ಆಮದು ಮಾಡಿ, ಅದನ್ನು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಒದಗಿಸಿದಾಗ, ಅದನ್ನು ಒಟ್ಟು ರಾಷ್ಟೀಯ ಉತ್ಪನ್ನದಿಂದ ಕಳೆದ ನಂತರವೇ, ನಿಜವಾದ ಒಟ್ಟು ರಾಷ್ಟ್ರೀಯ ಉತ್ಪನ್ನ ಸಿಗುವುದು.

ಇದರಿಂದ ದೇಶದ ಹಾಗು ರಾಜ್ಯದ ಆರ್ಥಿಕ ಪರಿಸ್ಥಿತಿಯ ಪರಿಚಯವಾಗುವುದರಿಂದ, ಎಲ್ಲರೂ, ಇಂತಹ ಮೂಲಭೂತ ಅಂಕಿ- ಅಂಶಗಳನ್ನು ತಿಳಿಯುವುದರಿಂದ, ಜಾಗ್ರತ ಹಾಗು ಪ್ರಜ್ಞಾವಂತ ಪ್ರಜೆಯಾಗುವರು.

ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)

Leave a Reply

Your email address will not be published. Required fields are marked *

Translate »