ಎಲ್ಲರೊಳಗೆ ಒಂದಾಗು – ಭಾರತ
ಪ್ರಪಂಚದ ಬಾಷೆಗಳಲ್ಲಿ 50% ಗಿಂತ ಮೇಲಾಗಿ ಬಾಷೆಗಳು ಕೇವಲ ಭಾರತದಲ್ಲಿದೆ. ರಾಜ್ಯಗಳಲ್ಲಿ ಒಂದು ಬಾಷೆಯಾದರೂ, ಅದೂ ಕೂಡಾ 20 ಕಿ.ಮಿ.ಗೆ ಮಾತನಾಡುವ ಶೈಲಿಯೇ ಬೇರಾಗುವುದು.
ನಮ್ಮ ಆಹಾರ ಪದ್ದತಿ, ನಮ್ಮ ಉಡುಪು-ತೊಡುಗೆಗಳು, ವ್ಯವಹರಿಸುವ ರೀತಿ-ನೀತಿಗಳು, ಬದುಕುವ ರೀತಿ-ನೀತಿಗಳು, ಇತ್ಯಾದಿಗಳೂ ಬಾಷೆಯೊಂದಿಗೆ ಬದಲಾವಣೆ ಕಂಡು ಬರುವುದು.
ಇಷ್ಟೊಂದು ವೈವಿದ್ಯಮಯ ಜೀವನ ಶೈಲಿ ಬಾರತದಲ್ಲಿ ಕಂಡು ಬಂದಷ್ಷು, ಪ್ರಪಂಚದಲ್ಲಿ, ಬೇರೆ ಎಲ್ಲಿಯೂ ಕಂಡು ಬರುವುದಿಲ್ಲ. ಇದು, ಬಾರತ ದೇಶದ ವಿಶೇಷತೆ. ಇದನ್ನು ಗೌರವಿಸಿ ಬದುಕಲು ಕಲಿತಾಗ ಮಾತ್ರ ಶಾಂತಿ ಹಾಗು ನೆಮ್ಮದಿಯ ಜೀವನ ಆಗಲು ಸಾಧ್ಯ.
ಆದ್ದರಿಂದ “ವಿವಿದತೆಯಲ್ಲಿ ಏಕತೆಯನ್ನು” ಕಂಡು ಕೊಳ್ಳುವುದೇ ನಮ್ಮ ಭಾರತಿಯರ ಮೂಲ ಗುಣವಾಗಬೇಕು.
ಪ್ರಪಂಚದಲ್ಲಿರುವ ಎಲ್ಲಾ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಗಳು ನಮ್ಮ ಸುತ್ತ-ಮುತ್ತ ಇದ್ದು, ಅವುಗಳನ್ನೆಲ್ಲಾ ಗೌರವಿಸಿ, ತನ್ನ ಸ್ವಂತದ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯನ್ನು ಅನುಸರಿಸುವುದೇ ಭಾರತೀಯರ ಜೀವನ ಆಗಿರುವುದು. ಇದು, ಸಾವಿರಾರು ವರ್ಷದಿಂದ ನಡೆದು ಬಂದಿದೆ ಹಾಗು ಅದಕ್ಕೆ ನಾವು, ಭಾರತೀಯರು, ನಮ್ಮನ್ನು ಅಳವಡಿಸಿ ಕೊಂಡಿರುವೆವು.
ಆದ್ದರಿಂದ, ಹೆಮ್ಮೆಯಿಂದ ಹೇಳ ಬಹುದು, ನಾವು ಭಾರತೀಯರು “ಪ್ರಪಂಚದ ಸಾರ್ವತ್ರಿಕ ಪ್ರಜೆಗಳು – World’s Universal Citizens”. ನಾವು ಪ್ರಪಂಚದ ಯಾವುದೇ ದೇಶದಲ್ಲಿ ಬದುಕುವಂತಹ ಗುಣ ಹೊಂದಿದವರು ಹಾಗು ಈಗಾಗಲೇ ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಭಾರತೀಯರು ಕೆಲಸ ಅಥವಾ ವಾಸ ಮಾಡುತ್ತಿರುವರು.
ವಿವಿದತೆಯಲ್ಲಿ ಏಕತೆಯನ್ನು ಕಂಡಾಗಲೇ , ಭಾರತ ದೇಶದಲ್ಲಿ ಶಾಂತಿ- ಸೌಹಾರ್ದ ಬೆಳೆಯುವುದು. ಇದು ನಮ್ಮ ಭಾರತ ದೇಶದ ಮೂಲ ಮಂತ್ರ ಆಗಬೇಕು. ನಮ್ಮ ಸಂವಿಧಾನವೂ ಅದನ್ನೆ ಪ್ರತಿಪಾದಿಸುವುದು.
“ವಿವಿದತೆಯಲ್ಲಿ ಏಕತೆ” ಎಂಬುವುದರಲ್ಲಿ ಕುಂದು-ಕೊರತೆಗಳು ಉಂಟಾದಾಗ ಅಶಾಂತಿಯ ವಾತಾವರಣ ಸೃಷ್ಷಿ ಆಗುವುದು. ಅದು ಭಾರತ ದೇಶಕ್ಕೆ ಮಾರಕವಾಗುವುದು.
ನಮ್ಮ-ನಮ್ಮ ವೈಕ್ತಿಕ ಜೀವನದಲ್ಲಿ ನಾವೆಲ್ಲರೂ ಬೇರೆ-ಬೇರೆ ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯನ್ನು ಅನುಸರಿಸುವೆವು. ಆದರೆ ನಾವು, ಮನೆಯಿಂದ ಹೊರ ಬಂದಾಗ ಕೇವಲ ಭಾರತೀಯರು ಆಗಬೇಕು. ಸಾರ್ವಜನಿಕ ಪ್ರದೇಶದಲ್ಲಿ ನಾವೆಲ್ಲರೂ ಭಾರತದ ಪ್ರಜೆಗಳಾಗಿರುವೆವು. ಇದನ್ನು ಯಾರಾದರೂ ಅಲ್ಲಗಳೆವುದಾದರೆ, ಆವಾಗ ಅವನು/ಅವಳು ದೇಶಕ್ಕೆ-ದೇಶದ ಸಂವಿಧಾನಕ್ಕೆ ದ್ರೋಹ ಬಗೆದಂತೆ.
ಎಲ್ಲಿ ಮನ ಅಳುಕಿರದೋ, ಎಲ್ಲಿ ತಲೆ ಬಾಗಿರದೋ, ಎಲ್ಲಿ ತಿಳುವಿಗೆ ತೊಡಕು ತೋರದಿಹುದೇ , ಅದೇ ನಮ್ಮ ಭಾರತ ದೇಶ.
ಜೈ ಪ್ರಜಾಕೀಯ
ಜೈ ಉತ್ತಮ ಪ್ರಜಾಕೀಯ ಪಕ್ಷ (ಉ.ಪಿ.ಪಿ.)