ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯದಿಂದ ಗ್ರಾಮ ಅಭಿವೃದ್ಧಿ ಯೋಜನೆ ಹೇಗಿರುತ್ತೆ ?

ಕರ್ನಾಟಕದ ಸೂಕ್ಷ್ಮ ಗ್ರಾಮ ಅಭಿವೃದ್ಧಿ ಯೋಜನೆ ಪ್ರಜಾಕೀಯದ ಸಂಪೂರ್ಣ ಪಾರದರ್ಶಕ ರೀತಿಯ ಯೋಜನೆ. MICRO PLANNING OF KARNATAKA villages by prajaakeeya.

ಇಲ್ಲಿ ನಾವು ಸಂಪೂರ್ಣ ಕರ್ನಾಟಕದ ಅಭಿವೃದ್ಧಿ ಹಾಗು ಬೆಳವಣಿಗೆಯ ವಿಷಯ ಮಾತನಾಡಲು ಹೊರಟಿರುವೆವು.

ಕಳೆದ 70 ವರ್ಷದಲ್ಲಿ ಕೇವಲ ಒಂದು ಸರ್ಕಾರ ಮಾಡಿದ್ದನ್ನು ಇನ್ನೊಂದು ಸರಕಾರ ಅದಕ್ಕೆ ಪೂರಕವಾಗಿ ” ಅಲ್ಲಿ ಸ್ವಲ್ಪ- ಇಲ್ಲಿ ಸ್ವಲ್ಪ” ಎಂಬ ನಿಯಮವನ್ನು ಅನುಸರಿಸಿ, ಕೇವಲ ತ್ಯಾಪೆ( Patch Work) ಕೆಲಸ ಮಾಡುತ್ತಾ, ಒಬ್ಬ ಮಾಡಿದ ತಪ್ಪನ್ನು ಇನ್ನೊಬ್ಬ ಅನುಸರಿಸುತ್ತಾ ರಾಜ್ಯದ ಎಲ್ಲಾ ವ್ಯವಸ್ಥೆಯನ್ನು
ಕಳಪೆ ವ್ಯವಸ್ಥೆಯಾಗಿ ಮಾಡಿದೆ.

ಅದು ನೀರಿನ, ವಿಧ್ಯುತ್, ವಿಧ್ಯಾಭ್ಯಾಸ, ಆರೋಗ್ಯ, ವಸತಿ, ಆಹಾರ ಯೋಜನೆ( PDS- Ration), ರಸ್ತೆ- ಸಾರಿಗೆ, ಉದ್ಯೋಗ, ಪ್ರವಾಸಿ ಕೇಂದ್ರ, ತ್ಯಾಜ್ಯ ವಿಲೆವಾರಿ, ಪಟ್ಟಣಗಳ ವ್ಯವಸ್ಥೆ, ಇತ್ಯಾದಿಗಳ ವ್ಯವಸ್ಥೆ ತುಂಬಹ ಕಳಪೆ ಮಟ್ಟದ್ದಾಗಿ, ಎಲ್ಲವನ್ನೂ ಖಾಸಾಗಿ ಕ್ಷೇತ್ರಕ್ಕೆ ಅನುಕೂಲ ಮಾಡಿ ಕೊಡುವುದೇ ಸರಕಾರಗಳ ಆದ್ಯತೆಯಾಗಿದೆ.

ಖಾಸಾಗಿಯಲ್ಲಿ ಹೂಡಿಕೆ ಮಾಡುವವರು ಸರ್ಕಾರದಲ್ಲಿರುವವರು ಅಥವಾ ಇವರ ಸಂಬಂಧಿಕರು ಅಥವಾ ಇವರಿಗೆ ಚುಣಾವಣೆಗೆ ಹಣ ಒದಗಿಸಿವ ಮಾಫಿಯಾಗಳೆ ಇದರ ಮಾಲಿಕರಾಗಿರುತ್ತಾರೆ.

ಇದೊಂದು ವಿಷ ವರ್ತುಲ.

ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಹಾಗು ಬಡವರ ಬೆಳವಣಿಗೆ ಹಾಗು ಅಬಿವ್ರದ್ದಿ ಸಾಧ್ಯವೇ ?

ಇಲ್ಲಿ ಮುಖ್ಯವಾಗಿ ವಿಧ್ಯಾಭ್ಯಾಸ ಹಾಗು ಆರೋಗ್ಯ ಸಂಪೂರ್ಣ ಸರಕಾರದಿಂದ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯ ಹಾಗು ಸೌಲಭ್ಯವನ್ನು ಸಂಪೂರ್ಣ ಉಚಿತವಾಗಿ ಪ್ರಜೆಗಳಿಗೆ ಒದಗಿಸುವುದು ಸರಕಾರದ ಆದ್ಯತೆಯಾಗ ಬೇಕು.

18 ವರ್ಷ ಪ್ರಾಯದವರೆಗೆ ಸಂಪೂರ್ಣ ವಿಧ್ಯಾಭ್ಯಾಸದ ಹೊಣೆ ಸರಕಾರದ್ದಾಗಿರ ಬೇಕು.

ಅಷ್ಟೆ ಅಲ್ಲ, ಈಗಿನ ಶಾಲಾ ವಿಧ್ಯಾಭ್ಯಾಸ ಕೇವಲ ಪರೀಕ್ಷೆಗಾಗಿ ನಡೆಯುತ್ತಿದೆ.

ಮಗುವಿನ ಸಾಮಾಜಿಕ ಹಾಗು ಮಾನಸಿಕ ಅಬಿವ್ಯದ್ದಿಗೆ ಇಲ್ಲಿ ಎಳ್ಳಷ್ಟು ಅವಕಾಶವಿಲ್ಲ.

ಎಲ್ಲವೂ ಪರೀಕ್ಷೆಯ ಶೇಖಡಾವಾರಿನಲ್ಲಿಯೆ ನಿರ್ಧರಿಸುವ ಈ ಪದ್ದತಿಯು ಬ್ರಿಟೀಷರು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿ, ಬಳುವಳಿಯಾಗಿ ನಮಗೆ ಕೊಟ್ಟು ಹೋದದ್ದನ್ನು‌, ನಾವು ಮುಂದುವರಿಸುತ್ತಾ ಹೋಗುತ್ತಿದ್ದೇವೆ.

ಒಂದು ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟು ಕೊಳ್ಳಲು, ಯಾವುದೆ ಅಸ್ತ್ರ- ಶಸ್ತ್ರದ ಅವಶ್ಯಕತೆ ಇಲ್ಲ. ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸುವ ವಿಧ್ಯಾಭ್ಯಾಸ ಪದ್ದತಿ ಸಾಕು. ಅದನ್ನೆ ಬ್ರಿಟೀಷರು ಮಾಡಿದ್ದಾರೆ.

  ಪಾರದರ್ಶಕ ಸರಕಾರ - ಪ್ರಜಾಕೀಯ

ಇಲ್ಲಿ ನಾವು ಕೊಡ ಬೇಕಾದ ವಿದ್ಯಾಭ್ಯಾಸದಲ್ಲಿ ಒಬ್ಬ ವಿಧ್ಯಾರ್ಥಿಯು ತನ್ನ 18 ವಯಸ್ಸಿಗೆ ತಲುಪುವಷ್ಟರಲ್ಲಿ ತನ್ನ ಕಾಲ ಮೇಲೆ, ಅಂದರೆ ಸ್ವಾವಲಂಬಿಯಾಗಿ ಬದುಕುವಷ್ಟು ಸಶಕ್ತನಾಗಿ ಮಾಡುವುದೇ ನಿಜವಾದ ವಿಧ್ಯಾಭ್ಯಾಸವಾಗ ಬೇಕು.

ಆವಾಗ ನಾವು ಒಬ್ಬ “Productive Citizen”ನನ್ನು ಉಂಟು ಮಾಡಿದಂತಾಗುವುದು. ಇದು ದೇಶದ ಎಲ್ಲಾ ಬೆಳವಣಿಗೆ ಹಾಗು ಅಬಿವ್ರದ್ದಿಗೆ ಕಾರಣವಾಗುವುದು.

ನನ್ನ ಆಲೋಚನೆಯ ಪ್ರಕಾರ ಸಮಯ ಇನ್ನೂ ಮಿಂಚಿ ಹೋಗಿಲ್ಲ.

ಇದಕ್ಕೆ ರಾಜ್ಯದ ಸೂಕ್ಷ್ಮ ಯೋಜನೆ ಹಾಗು ಪರಿಕಲ್ಪನೆ ಮಾಡ ಬೇಕಾಗಿದೆ.

ಅದು ಹೇಗೇ ?

Integrated Grama Panchayat.

ಸಂಪೂರ್ಣ ಸ್ವಾವಲಂಬಿ ಗ್ರಾಮ ಪಂಚಾಯಿತಿ.

ನಮ್ಮ ರಾಜ್ಯದ ಸರ್ಕಾರಿ ವಿಂಗಡನೆಗಳು.

  1. ಜಲ್ಲೆ- District- 30
  2. ತಾಲೂಕು- 230- 270.
  3. A. ಗ್ರಾಮ ಪಂಚಾಯಿತಿ- 6090.
    B. ವಾರ್ಡ್ಗಳು( ಪಟ್ಟಣ)- 6000.
    = 12, 090 ( ಅತೀ ಕಡೆಯ ಸರ್ಕಾರಿ ವಿಭಾಗ)
  4. ಹಳ್ಳಿಗಳು- 29,700.

ಪ್ರತೀ ಗ್ರಾಮ ಪಂಚಾಯಿತಿ ಹಾಗು ಪಟ್ಟಣದಲ್ಲಿ ವಾರ್ಡ್ಗಳು ನಮ್ಮ Micro- Planning Centre ಗಳಾಗ ಬೇಕು.

ಅಂದರೆ ಸುಮಾರು 12,100 ಕೇಂದ್ರಗಳು.

ಒಂದು ಗ್ರಾಮ ಪಂಚಾಯಿತಿ ಎಂದರೆ 2 ರಿಂದ 7 ಹಳ್ಳಿಗಳು, ಸುಮಾರು 5 ರಿಂದ 10 ಚದರ ಕಿಮೀ. ಇದರಲ್ಲಿ 5 ರಿಂದ 10,000 ಜನಸಂಖ್ಯೆ ಇರಬಹುದು.

ಹಾಗೆ ಪಟ್ಟಣದ ವಾರ್ಡ್ಗಳು 2 ರಿಂದ 4 ಚದರ ಕಿಮೀ. ಇದ್ದು ಜನ ಸಂಖ್ಯೆ 20,000 ರಿಂದ 50,000 ಸಾವಿರ( ಬೆಂಗಳೂರಿ ನಂತಹ ಪಟ್ಟಣದಲ್ಲಿ) ಇರಬಹುದು.

ಈ 12,100 ಕೇಂದ್ರದಲ್ಲಿ ಸೂಕ್ಷ್ಮ ಯೋಜನೆಗಳು ಏನೆಂದು ಮೊದಲು ಪಟ್ಟಿ ಮಾಡುವ.

  1. ಅಂಗನವಾಡಿಯಿಂದ ಹಿಡಿದು 12ನೇ ಕ್ಲಾಸಿನ ವರೆಗೆ ಸಂಪೂರ್ಣ ಆಧುನಿಕ ಸೌಕರ್ಯವಿರುವ ಶಾಲೆ.
    ಸುಮಾರು 2000 ರಿಂದ 3000 ಸಾವಿರ ವಿಧ್ಯಾರ್ಥಿಗಳಿಗೆ ಅವಕಾಶವಿರುವ ಹಾಗು ವಿಧ್ಯಾರ್ಥಿಗಳಿಗೆ ಶಾಲೆಯದ್ದೆ ಸಾರಿಗೆ ವ್ಯವಸ್ಥೆ ಇರ ಬೇಕು. ಇಲ್ಲಿ ಕನೀಷ್ಟ 5 ಎಕ್ರೆ ಸ್ಥಳ ಮಕ್ಕಳ ಆಟದ ಮೈದಾನವಾಗಿರ ಬೇಕು.
  2. ಆರೋಗ್ಯ ಕೇಂದ್ರ- ಎಲ್ಲಾ ಆಧುನಿಕ ವ್ಯವಸ್ಥೆ ಇರುವ ಆರೋಗ್ಯ ಕೇಂದ್ರ. ಇಲ್ಲಿ ಬೆಡ್ ಇರುವುದಿಲ್ಲ, ಆದರೆ ಎಲ್ಲಾ ರೀತಿಯ ಟೆಸ್ಟ್
    ಮಾಡುವ ಉಪಕರಣವಿರ ಬೇಕು.
  3. ಹೆರಿಗೆ ಆಸ್ಪತ್ರೆ- 10 ರಿಂದ 20 ಬೆಡ್ ಹಾಗು ಸುಸಜ್ಜಿತ ಹೆರಿಗೆ ರೂಮ್( Theatre), ಇಲ್ಲಿ 24 ಗಂಟೆ ಒಬ್ಬ ಹೆರಿಗೆ ಡಾಕ್ಟರ್ ( ಗೈನಾಕಾಲಜಿಸ್ಟ್) ಇರಬೇಕು. ಕನಿಷ್ಟ ಕಾಲ್ ಡೂಟಿಯಲ್ಲಾದರು ಇರಬೇಕು.
  4. ಸುಸಜ್ಜಿತ Veternary- ಪ್ರಾಣಿಗಳ ಆಸ್ಪತ್ರೆ ಇರ ಬೇಕು.
  5. ಒಂದು ಹಿರಿಯ ನಾಗರೀಕರ ವಸತಿ ಸೌಲಭ್ಯ – Old Age home 20 ರಿಂದ 50 ಜನರಿಗೆ ಇರಬೇಕು.
  6. ಒಂದು 500 ರಿಂದ 1000 ಜನರಿಗೆ ಬೇಕಾಗುವ ಕಮ್ಯುನಿಟಿ ಸೆಂಟರ್- ಪಾರ್ಟಿ ಹಾಲ್ ಇರ ಬೇಕು.
  7. ಅಗತ್ಯವಿದ್ದರೆ ಒಂದು ಅನಾತಾಶ್ರಮವು ಈ ಇರಬಹುದು.
  8. ಎಲ್ಲಾ ಗ್ರಾಮ ಪಂಚಾಯಿತಿ ಹಾಗು ಸರ್ಕಾರಿ ಕಾರ್ಯಾಲಯ ವು ಇದರಲ್ಲಿಯೆ ಇರಬೇಕು.
  ಪ್ರಜಾಕೀಯಾ ಸಿದ್ಧಾಂತ - ಉತ್ತಮ ಪ್ರಜಾಕೀಯಾ ಪಕ್ಷ

ಇಲ್ಲಿ ಶಾಲೆಗೆ 50% ಸ್ಥಳ, ಹಾಗು ಉಳಿದವುಗಳಿಗೆ 50% ಸ್ಥಳ ಇರಬೇಕು.

ಇದಕ್ಕೆ ಬೇಕಾಗಿರುವುದು 10 ರಿಂದ 15 ಎಕ್ರೆ ಸ್ಥಳ.

ಈಗಾಗಲೆ ಕೆಲವು ಶಾಲೆಗಳಲ್ಲಿ ಇದು ಲಭ್ಯವಿದೆ.

ಇಂತಹ 12,100 ಕೇಂದ್ರಗಳು ಸಂಪೂರ್ಣ ಮೂಲ ಭೂತ ಸೌಕರ್ಯವನ್ನು ಒದಗಿಸುವಂತಾಗುವುದು.

ಈಗ ಕರ್ನಾಟಕದಲ್ಲಿ 80,000 ಅಂಗನವಾಡಿ, 40,000 ಸರಕಾರಿ ಶಾಲೆಗಳು ಹಾಗು 20,000 ಖಾಸಾಗಿ ಶಾಲೆಗಳಿವೆ.

ಇವುಗಳಲ್ಲಿ ಸುಮಾರು 1,20,00,000( ಒಂದು ಕೋಟಿ ಇಪ್ಪತ್ತು ಲಕ್ಷ ) ಮಕ್ಕಳಿಗೆ ಅವಕಾಶವಿದೆ.

ಸರಕಾರಿ ಶಾಲೆಗಳಲ್ಲಿ ಸರಾಸರಿ 88 ಮಕ್ಕಳು- ಪ್ರತಿ ಸ್ಕೂಲ್ನಲ್ಲಿ ಇದ್ದಾರೆ. ಅದೇ ಖಾಸಾಗಿ ಯಲ್ಲಿ 268 ಮಕ್ಕಳು ಸರಾಸರಿ ಇದ್ದಾರೆ.

ಈಗಾಗಲೆ ವರ್ಷಕ್ಕೆ ನೂರಾರು ಸರ್ಕಾರಿ ಶಾಲೆಗಳು ಯಾವುದೆ ಸರಿಯಾದ ವ್ಯವಸ್ಥೆಯ ಅಭಾವದಿಂದ ಮುಚ್ಚಲ್ಪಡುತ್ತಿದೆ.

ನಾನು ಮೇಲೆ ತಿಳಿಸಿದಂತೆ, 12,100 ಶಾಲೆಗಳಲ್ಲಿ, ಪ್ರತೀ ಶಾಲೆಯಲ್ಲಿ 2000 ಮಕ್ಕಳಿಗೆ ( ಅಂಗನವಾಡಿ ಯಿಂದ – 12ನೇ ತರಗತಿಯವರೆಗೆ) ವ್ಯವಸ್ಥೆ ಮಾಡಿದರೆ

12,100× 2000= 2,42,00,000.

ಅಂದರೆ ಮುಂದಿನ 25ವರ್ಷದಲ್ಲಿ ಜನ ಸಂಖ್ಯೆ ಎರಡು ಪಟ್ಟು ಆದರೂ ಈ ವ್ಯವಸ್ಥೆ ಸಾಕಾಗುವುದು.

ಇದು One Time Investment on people. ಇದು ಒಮ್ಮೆ ಹೂಡಿಕೆ ಮಾಡ ಬೇಕಾಗುತ್ತದೆ.

ನಂತರ ಇದನ್ನು ಕೇವಲ 10 ರಿಂದ 20% ಖರ್ಚಿನಲ್ಲಿ ಮೈಂಟೈನ್ ಮಾಡಲು ಸಾಧ್ಯ.

  ಭಾರತದಲ್ಲಿ ತೆರಿಗೆ ಕೊಡುವವರು ಯಾರು ? Who are the Tax Payers in India ?

ಒಂದೊಂದು ಕೇಂದ್ರಕ್ಕೂ 25 ಕೋಟಿ ಖರ್ಚು ಮಾಡಿದರೂ, ಸುಮಾರು 3,02,500 ಕೋಟಿ ಬೇಕಾಗುವುದು.

ಪ್ರತೀ ವರ್ಷ 60,000 ಕೋಟಿ ಇದಕ್ಕಾಗಿ ಉಪಯೋಗಿಸಿದರೆ 5 ವರ್ಷದಲ್ಲಿ ಇದನ್ನು ಮಾಡ ಬಹುದು.

ವಿಧ್ಯಾಭ್ಯಾಸ, ಆರೋಗ್ಯ, ಸಮಾಜ ಕಲ್ಯಾಣ, ಸರ್ಕಾರಿ ಕಾರ್ಯಾಲಯಕ್ಕೆ ಬಜೆಟ್ನಲ್ಲಿ ನಿರ್ಧರಿಸಿದ ಹಣದ ಒಂದು ಭಾಗವನ್ನು ಇದಕ್ಕೆ ಉಪಯೋಗಿಸ ಬಹುದು. ಕೇಂದ್ರ ಸರ್ಕಾರದಿಂದಲೂ ಇದಕ್ಕೆ ಬೇಕಾದ ಹಣ ಸಿಗುವುದು. ಅವಶ್ಯಕತೆ ಇದ್ದರೆ ಜಾಗತಿಕ ಬ್ಯಾಂಕ್( World Bank) ನಿಂದ ಸಾಲವೂ ಪಡೆಯ ಬಹುದು.

ಇದನ್ನು ಸರಿಯಾಗಿ ಮಾಡಿ ಬಿಟ್ಟರೆ, ಬರುವ 25 ವರ್ಷ ಯಾವುದೆ ಬೇರೆ ಹೂಡಿಕೆ, ಈ ಕ್ಷೇತ್ರದಲ್ಲಿ ಮಾಡುವ ಅವಶ್ಯಕತೆ ಇಲ್ಲ. ಇದು ರಾಜ್ಯದ ಸಂಪತ್ತನ್ನೂ ಮೇಲೆತ್ತುವುದು.

ಈ ಯೋಜನೆಯ 20% ಮಾಡುತ್ತಲೆ, ಈಗ ಇರುವ ಹೆಚ್ಚಿಗೆ (40,000- 12,100=27,900) ಸರ್ಕಾರಿ ಶಾಲಾ ಸ್ಥಳಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡಿ ಬೇಕಾದ ಹಣದ ವ್ಯವಸ್ಥೆ ಮಾಡಲೂ ಬಹುದು.

ಇಲ್ಲಿ ಒಂದು ವಿಷಯ ಅತೀ ಪ್ರಾಮುಖ್ಯ ವಾಗಿದೆ, ಅದೆನೆಂದರೆ ಇವುಗಳನ್ನು ಅಂತಾರಾಷ್ಟ್ರೀಯ ಮಟ್ಟದ ಯೋಜನೆಯಾಗಿರ ಬೇಕು.

ವಿಧ್ಯಾಭ್ಯಾಸ ಹಾಗು ಆರೋಗ್ಯ ಅಂತರಾಷ್ಟ್ರೀಯ ಮಟ್ಟದ್ದಾಗಿ ಉಚಿತವಾಗಿ ಪ್ರಜೆಗಳಿಗೆ ಸಿಗುವಂತಾದರೆ, ಈ ರಾಜ್ಯ ಅಬಿವ್ರಧ್ಧಿ ಹೊಂದಿದ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ.

ಆದರೆ ಈಗಿನ ಭ್ರಷ್ಟ ರಾಜಕೀಯಾ ವ್ಯವಸ್ಥೆಯಲ್ಲಿ ಇದು ಖಂಡಿತಾ ಸಾಧ್ಯವಿಲ್ಲ.

ಪ್ರಜಾಕೀಯಾವೇ ಇದನ್ನು ಪ್ರಜೆಗಳ ಸಹಕಾರದಿಂದ, ಯಾವುದೆ ಭ್ರಷ್ಟಾಚಾರವಿಲ್ಲದೆ ಮಾಡಲು ಸಾಧ್ಯ.

ಬದಲಾವಣೆ ಹಾಗು ಅಬಿವ್ರಧ್ಧಿ ಬೇಕಾದರೆ ವಿಚಾರಗಳಿಗೆ ಮತ ಹಾಕಿ.

ಟೂಥ್ ಪೇಸ್ಟ್ ನಂತೆ ಜಾಹಿರಾತು- ಸಭೆಗಳಿಂದ ಮಾರಿ ಕೊಂಡ ಹಾಗು ನಿಮ್ಮ ಮತ ಖರೀದಿಸಿದ ರಾಜಕಾರಣಿಯಿಂದಲ್ಲ‌.

ಪ್ರಜೆಗಳೆ, ಬದಲಾವಣೆ ನಿಮ್ಮಲ್ಲಿ ಹಾಗು ನಿಮ್ಮಿಂದಲೆ ಸಾಧ್ಯ.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ ‌

ಮೂಲ – ಪ್ರಜಾಕೀಯ ಬೆಂಬಲಿಗ

Leave a Reply

Your email address will not be published. Required fields are marked *

Translate »