ಇದು ನಿಮಗೆ ಯಾವಾಗಲೂ ತಿಳಿದಿರಲಿ …

ಇದು ನಿಮಗೆ ಯಾವಾಗಲೂ ತಿಳಿದಿರಲಿ ….

1 , ದಿನದಲ್ಲಿ ಒಂದು ಕ್ಷಣ ಕಳೆಯಿತು ಎಂದರೆ , ನಿನ್ನ ಆಯುಷ್ಯದಲ್ಲಿ ಒಂದು ಕ್ಷಣ ಕಡಿಮೆಯಾಯಿತು ಎಂದರ್ಥ , ಆದ್ದರಿಂದ ಸಮಯದ ಮೌಲ್ಯದ ಬಗ್ಗೆ ನಿನಗೆ ಅರಿವಿರಲಿ .

2 , ಕಾಲಚಕ್ರದ ಹೊಡೆತಕ್ಕೆ ಸಿಕ್ಕ ನಿನ್ನ ಎಲ್ಲಾ ಇಂದ್ರಿಯಗಳು ಕಾಲಕ್ರಮೇಣ ತೇಜಸ್ಸನ್ನು ಕಳೆದುಕೊಳ್ಳುತ್ತವೆ . ಆದ್ದರಿಂದ ನಿನ್ನ ಬಾಹ್ಯ ಸೌಂದರ್ಯದ ಬಗ್ಗೆ ಗರ್ವ ಪಡದೆ , ನಿನ್ನ ಇಂದ್ರಿಯಗಳು ಸುಸ್ಥಿತಿಯಲ್ಲಿ ಇರುವಾಗಲೇ ಅದನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸು .

  1. ವಾಸ್ತವವಾಗಿ ಈ ಪ್ರಪಂಚದಲ್ಲಿ ನೀನು ಸದಾ ಒಂಟಿಯೇ ಈ ಜಗತ್ತಿಗೆ ನೀನು ಬರುವಾಗ ಒಂಟಿಯಾಗಿಯೇ ಬಂದಿದ್ದು ಈಗ ಜಗತ್ತಿನಲ್ಲಿ ಒಂಟಿಯಾಗಿಯೇ , ದೈಹಿಕ , ಮಾನಸಿಕ ರುಜುವನ್ನು ಅನುಭವಿಸುತ್ತಿದ್ದಿ , ಕೊನೆಗೆ ನೀನು ಈ ಜಗತ್ತನ್ನು ಬಿಡುವಾಗಲೂ ಒಂಟಿಯಾಗಿಯೇ ಬಿಡಬೇಕು . ಆದ್ದರಿಂದ ನನ್ನೊಂದಿಗೆ ಎಲ್ಲರೂ ಇದ್ದಾರೆ ‘ ಎನ್ನುವ ಭ್ರಮೆಯನ್ನು ಬಿಟ್ಟು ನಿನ್ನ ಅಂತರಂಗದಲ್ಲೇ , ಸದಾ ನಿನ್ನೊಂದಿಗೆ ಇರುವ ಪರಮಾತ್ಮನಲ್ಲಿ ಶುದ್ಧಪ್ರೀತಿಯನ್ನು ಬೆಳೆಸಿಕೊಂಡು ನಿನ್ನ ಒಂಟಿತನವನ್ನು ಕಳೆದುಕೊಳ್ಳಬೇಕು.
  ಸಂತಾನದ ರೂಪದಲ್ಲಿ ಯಾರು ಮರುಜನ್ಮಿಸುತ್ತಾರೆ?

4 , ಈ ಬದುಕು ಎನ್ನುವುದು ಸುಖ ದುಖಗಳ ಮಿಶ್ರಣ . ಇಲ್ಲಿ ನಿನಗೆ ಸುಖ ಬೇಕು ಎಂದಾದಲ್ಲಿ ನೀನು ದುಃಖವನ್ನು ಸ್ವೀಕರಿಸಲು ಸಿದ್ದವಾಗಿರಲೇಬೇಕು . ಆದ್ದರಿಂದ ಬದುಕಿನ ವಾಸ್ತವಿಕತೆಯ ಬಗ್ಗೆ ನಿನಗೆ ಅರಿವಿರಲಿ .

  1. ನಿನ್ನ ಬದುಕಿನ ಸುಖ ದುಖಗಳಿಗೆ ಕಾರಣ ನೀನೆ , ಅಂದರೆ ನೀನು ಮಾಡುವ ಕೆಲಸಗಳೇ , ಆದ್ದರಿಂದ ಭಗವಂತನ ಪ್ರೀತಿಗೊಸ್ಕರ , ಸದಾ ನಿಸ್ವಾರ್ಥಭಾವದಿಂದ ಕಾಯೇನ ವಾಚಾ ಮನಸಾ ಒಳ್ಳೆಯ ಕೆಲಸಗಳನ್ನು ಮಾತ್ರ ಮಾಡು .
  2. ನೀನು ಈ ಪ್ರಪಂಚಕ್ಕೆ ಹೆಚ್ಚು ಹೆಚ್ಚು ಅಂಟಿಕೊಂಡಷ್ಟೂ ಹೆಚ್ಚು ಹೆಚ್ಚು ದುಃಖವನ್ನು ನೀನು ಅನುಭವಿಸಬೇಕಾಗುತ್ತದೆ . ಆದ್ದರಿಂದ ನಿರ್ಲಿಪ್ತ ಮನೋಭಾವದಿಂದ ಜೀವನದಲ್ಲಿ ನಿನ್ನ ಕರ್ತವ್ಯವನ್ನು ಶ್ರದ್ದೆಯಿಂದ ಮಾಡಲು ಕಲಿತುಕೊಳ್ಳಬೇಕು.
  3. ನಿನಗೆ ಜೀವನದಲ್ಲಿ ಮನಃಶಾಂತಿ ಬೇಕಾಗಿದ್ದಲ್ಲಿ ಬೇರೆಯವರ ಟೀಕೆಗಳಿಗೆ ಗಮನ ಕೊಡದೇ ನಿನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಬಾಳುವುದನ್ನು ಕಲಿತುಕೋ ಈ ಜಗತ್ತನ್ನು ಮೆಚ್ಚಿಸಲು ಆ ಜನಾರ್ಧನನಿಂದಲೂ ಸಾಧ್ಯವಿಲ್ಲ . ಆದ್ದರಿಂದ ನಿನ್ನ ಅಂತರಂಗದಲ್ಲೇ ಇರುವ ಆ ಪರಮಾತ್ಮನು ಮೆಚ್ಚುವಂತೆ ನೀನು ಬಾಳಿದರೆ ಸಾಕು .
  4. ಈ ಬದುಕೇ ಒಂದು ದೀರ್ಘ ಕನಸು ನಿನ್ನ ಕುಟುಂಬ , ಬಂಧುಬಳಗ , ಸ್ನೇಹಿತರು , ಹಣ , ಅಧಿಕಾರ , ಕೊನೆಗೆ ನಿನ್ನ ಕರ್ಮಕ್ಕೆ ತಕ್ಕಂತೆ ಈಗ ನಿನಗೆ ಬಂದಿರುವ ಈ ದೇಹ , ಇವೆಲ್ಲವೂ ಸಮುದ್ರದ ಅಲೆಗಳಂತೆ ಬಂದು ಹೋಗುವಂತದ್ದು . ಆದ್ದರಿಂದ ಈ ಬದುಕಿನ ಬಗ್ಗೆ ಸ್ವಲ್ಪ ಗಂಭೀರವಾಗಿ ಆಲೋಚಿಸುವುದನ್ನು ಕಲಿತುಕೋ . ಅನಿತ್ಯವಾದ ವಸ್ತುಗಳ ಮೇಲೆ ಅತಿಯಾದ ವ್ಯಾಮೋಹವನ್ನು ಎಂದಿಗೂ ಬೆಳೆಸಿಕೊಳ್ಳದೇ , ಜೀವನದಲ್ಲಿ ಸೇವಾ ಹಾಗೂ ತ್ಯಾಗ ಮನೋಭಾವವನ್ನು ಬೆಳೆಸಿಕೊಂಡು , ನಿನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು.
  5. ನೀನು ಈ ಜಗತ್ತಿನಲ್ಲಿ ಯಾರನ್ನು ಬೇಕಾದರೂ ವಂಚಿಸಬಹುದು . ಆದರೆ ನಿನ್ನನ್ನು ಮಾತ್ರ ನೀನು ಎಂದಿಗೂ ವಂಚಿಸಿಕೊಳ್ಳಲಾರೆ . ಆದ್ದರಿಂದ ಆತ್ಮಸಾಕ್ಷಿಗೆ ವಿರುದ್ಧವಾಗಿ ಎಂದಿಗೂ ಯಾವ ಕೆಲಸವನ್ನೂ ಮಾಡಬೇಡ .
  6. ನೀನು ಎಷ್ಟೆ ಬುದ್ದಿವಂತನಾಗಿರು ,ಎಷ್ಟೇ ಜ್ಞಾನವನ್ನು ಸಂಪಾದಿಸಿಕೊಂಡಿರು , ಆದರೆ ನಿನ್ನನ್ನು ನೀನು ಅರಿತುಕೊಳ್ಳದಿದ್ದಲ್ಲಿ ( ಆತ್ಮಜ್ಞಾನವನ್ನು ಹೊಂದದಿದ್ದಲ್ಲಿ ನೀನು ಎಂದಿಗೂ ಪರಿಪೂರ್ಣ ನಾಗಲಾರೆ . ಆದ್ದರಿಂದ ಆತ್ಮಜ್ಞಾನವನ್ನು ಹೊಂದುವುದಕ್ಕೆ ಪೂರಕವಾಗಿ ನಿನ್ನ ಲೌಕಿಕ ಜೀವನದ ಕರ್ತವ್ಯಗಳನ್ನು ಶ್ರದ್ದೆಯಿಂದ ಮಾಡುವುದನ್ನು ಕಲಿತುಕೊಳ್ಳಬೇಕು.

Leave a Reply

Your email address will not be published. Required fields are marked *

Translate »