ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಅಪರಾಧ ತಡೆ ಮುಂಜಾಗ್ರತೆ ಕ್ರಮಗಳು

👉 ಅಪರಾಧ ತಡೆ ಮುಂಜಾಗ್ರತೆ ಕ್ರಮಗಳು.

ಸುರಕ್ಷಾ ಸಲಹೆಗಳು

ಮನೆಯಲ್ಲಿರುವಾಗ ಪಾಲಿಸಬೇಕಾದ ಸಲಹೆಗಳು :

  1. ಮನೆಯಲ್ಲಿ ಒಂಟಿಯಾಗಿರುವಾಗ ಮುಂಬಾಗಿಲು ಹಾಕಿಕೊಂಡು ಕೆಲಸ ಮಾಡುವುದನ್ನು ಮರೆಯಬೇಡಿ.
  2. ಮುಂಬಾಗಿಲು ಮತ್ತು ಹಿಂಬಾಗಿಲಿಗೆ, ಸಮಾನ ಪ್ರಾಮುಖ್ಯತೆ ನೀಡಿ.
  3. ಆದಷ್ಟು ಮುಂಬಾಗಿಲು ಮತ್ತು ಹಿಂಬಾಗಿಲುಗಳಿಗೆ ಕಂಪ್ಯೂಟರೈಸ್ ಲಾಕ್‌ಗಳನ್ನು ಅಳವಡಿಸಲು ಪ್ರಯತ್ನಿಸಿ.
    4 ಮನೆಯ ಬಾಗಿಲು ತಟ್ಟಿದಾಗ, ಬೆಲ್ ಮಾಡಿದಾಗ ತಕ್ಷಣ ಬಾಗಿಲು ತೆರೆಯದೆ ಕಿಟಿಕಿಯಿಂದ ನೋಡಿ ಖಚಿತಪಡಿಸಿಕೊಂಡು
    ವ್ಯವಹರಿಸಿ,
  4. ಅಪರಿಚಿತರು ಮನೆ ಬಳಿ ಬಂದು ನೀರು, ವಿಳಾಸ ಇತ್ಯಾದಿ ಕೇಳಲು ಬಂದಾಗ ಆದಷ್ಟು ಜಾಗ್ರತೆಯಿಂದ ವ್ಯವಹರಿಸಿ.
  5. ನೆರೆಹೊರೆಯವರೊಂದಿಗೆ ಸಂಭಾಷಣೆಯಲ್ಲಿ ತೊಡಗಲು ಅಥವಾ ಸಮಯ ಕಳೆಯಲು ತೆರಳುವಾಗ ಮನೆಗೆ ಮತ್ತು ಗೇಟಿಗೆ ಬೀಗ ಹಾಕುವುದನ್ನು ಮರೆಯಬೇಡಿ.
  6. ಮನೆಯಲ್ಲಿ ಅಪ್ರಾಪ್ತ ವಯಸ್ಸಿನವರನ್ನು, ವಯೋವೃದ್ಧರನ್ನು ಬಿಟ್ಟು ಹೋಗುವುದನ್ನು ತಪ್ಪಿಸಿ.
  7. ಅಂಚೆ, ಕೊರಿಯರ್,ಪಾರ್ಸೆಲ್ ಉಡುಗೊರೆಗಳನ್ನು ಪಡೆದುಕೊಳ್ಳುವಾಗ ಖಚಿತಪಡಿಸಿಕೊಂಡು ವ್ಯವಹರಿಸಿ.
  8. ಕಿಟಕಿಯ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡುವುದನ್ನು ತಪ್ಪಿಸಿ.
  9. ಬೆಲೆ ಬಾಳುವ ವಸ್ತುಗಳನ್ನು ಆದಷ್ಟು ಬ್ಯಾಂಕ್ ಲಾಕರ್‌ಗಳಲ್ಲಿ ಇಡುವುದು ಉತ್ತಮ.
  10. ಮನೆ ಬಾಗಿಲುಗಳಿಗೆ ಮ್ಯಾಜಿಕ್ ಐ, ಅಲಾರ್ಮ್ ಸಿಸ್ಟಂಗಳಂತ ಸುರಕ್ಷಾ ಸಾಮಾಗ್ರಿಗಳ ಬಳಕೆಗೆ ಒತ್ತುಕೊಡಿ.
  11. ನೀವು ಮನೆಯಲ್ಲಿ ಮಲಗುವ ಸಮಯದಲ್ಲಿ ಬಾಗಿಲು, ಕಿಟಕಿ, ಗೇಟ್‌ಗೆ ಬೀಗ ಹಾಕಿ ಭದ್ರಪಡಿಸಿರುವುದನ್ನು ಪುನಃ
    ಖಚಿತಪಡಿಸಿಕೊಳ್ಳುವುದು.
  12. ಮನೆಗೆ ಬೀಗ ಹಾಕಿ ಪರ ಊರಿಗೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ಸ್ಥಳೀಯ, ಪೋಲಿಸ್ ಠಾಣೆಗೆ ಮಾಹಿತಿ ನೀಡಿ.
  13. ಮನೆಯ ಮುಂದೆ ನಿಲ್ಲಿಸುವ ವಾಹನಗಳ ಸುರಕ್ಷತೆ ಬಗ್ಗೆ ಗಮನಹರಿಸಿ.
  14. ಹೊಸದಾಗಿ ಬಾಡಿಗೆ ಬರುವ ವ್ಯಕ್ತಿಗಳ ಬಗ್ಗೆ, ಮನೆ ಕೆಲಸದವರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಭಾವಚಿತ್ರವನ್ನುಪಡೆಯುವುದು ಒಳಿತು.
  15. ಮನೆಯ ಮಾಲೀಕರು ಬಾಡಿಗೆದಾರರಿಗೆ ಮನೆಯನ್ನು ಬಾಡಿಗೆಗೆ ನೀಡುವಾಗ ಬಾಡಿಗೆದಾರರ ಹಿನ್ನೆಲೆ, ಭಾವಚಿತ್ರವನ್ನು
    ಪಡೆಯುವುದು ಒಳಿತು.
  16. ಮನೆಯ ತಾರಸಿಯ ಮೇಲೆ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
  17. ಅನುಮಾನಾಸ್ಪದ ವ್ಯಕ್ತಿ, ವಸ್ತು, ವಾಹನಗಳ ಬಗ್ಗೆ ತಕ್ಷಣ ಹತ್ತಿರದ ಪೋಲಿಸ್ ಠಾಣೆಗೆ ಮಾಹಿತಿ ನೀಡಿ.
  18. ಮನೆ ಬಿಟ್ಟು ಹೊರ ಹೋಗುವಾಗ ಆದಷ್ಟು ಡೋರ್ ಲಾಕ್ ಬಳಕೆ ಮಾಡಿ.
    20, ಚಿನ್ನದ ಒಡವೆಗಳನ್ನು ಪಾಲಿಷ್ ಮಾಡುತ್ತೇವೆಂದು ಚಿನ್ನದ ಒಡವೆ ಮಾರಾಟ ಮಾಡಲು ಮನೆಯ ಬಳಿ ಬರುವವರ ಬಗ್ಗೆ ತಕ್ಷಣವೇ ಪೋಲಿಸರಿಗೆ ಮಾಹಿತಿ ನೀಡಿ.
    21, ಚಿನ್ನದ ಒಡವೆಗಳನ್ನು ಅಧಿಕೃತ ಅಂಗಡಿಗಳಲ್ಲಿ ಖರೀದಿಸಿ.
  19. ಅಕ್ಕಪಕ್ಕದ ಮನೆಯವರ ಪರಿಚಯ, ದೂರವಾಣಿ ಸಂಖ್ಯೆಯಂತಹ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಒಳಿತು.
  20. ಮನೆಯ ಗೇಟಿನಿಂದ ಹೊರ ನಡೆಯುವಾಗ ಅಕ್ಕಪಕ್ಕದಲ್ಲಿ ಯಾವುದಾದರೂ ವ್ಯಕ್ತಿ ನಿಮ್ಮನ್ನು ಗಮನಿಸುತ್ತಿದ್ದಾರೆಯೇ?
    ಹಿಂಬಾಲಿಸುತ್ತಿದ್ದಾರೆಯೇ? ಎಂದು ಗಮನಿಸಿ
  21. ಅಪರಿಚಿತರ ಮಾತಿಗ್ಗೆ ಮರುಳಾಗಿ ಅವರು ಹೇಳುವ ಮಾತನ್ನು ನಂಬಬೇಡಿ
  22. ಕಿಟಕಿಗಳಿಗೆ ತಂತಿ ಜಾಲರಿಯನ್ನು ದಯಮಾಡಿ ಅಳವಡಿಸಿ.
  23. ಮನೆ ಕೆಲಸದವರ ಹಾಗೂ ಹೊರಗಿನವರ ಮುಂದೆ ಬೆಲೆ ಬಾಳುವ ನಗ ನಾಣ್ಯಗಳ ಪ್ರದರ್ಶನ ಬೇಡ.
  24. ಹೊರ ಊರಿಗೆ ಮನೆ ಬಿಟ್ಟು ಹೋಗುವ ಮುಂಚೆ ದಿನಪತ್ರಿಕೆ, ಹಾಲು ಹಾಕುವವನಿಗೆ ಸೂಚನೆ ನೀಡಿ,
  25. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ
    29, ಗುಜರಿ ವ್ಯಾಪಾರಸ್ಥರ ಬಗ್ಗೆ ನಿಗಾ ವಹಿಸುವುದು. ಈ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿ ➢ ವಾಹನ ಕಳವು ನಿಷೇಧ ಮುನ್ನೆಚ್ಚರಿಕೆಗಳು :
  26. ನಿಮ್ಮ ವಾಹನಗಳಿಗೆ ಭದ್ರವಾದ ಬೀಗ, ಸ್ಟೀರಿಂಗ್ ಲಾಕ್, ಕ್ವಾರ್ಟ‌್ರಗ್ಲಾಸ್ ಲಾಕ್ ಹಾಕುವ ವ್ಯವಸ್ಥೆ ಮಾಡಿ.
  27. ಕಳವು ನಿರೋಧಕ ಅಲರಾಂ ಗಂಟೆಗಳನ್ನು ಅಳವಡಿಸಿ.
  28. ವಾಹನ ನಿಲುಗಡೆ ಮಾಡಿದಾಗ ಕಿಟಕಿ, ಬಾಗಿಲುಗಳನ್ನು ಸರಿಯಾಗಿ ಮುಚ್ಚಿದ ಬಗ್ಗೆ ಖಾತ್ರಿಪಡಿಸಿಕೊಳ್ಳಿ,
  29. ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ, ಪಾರ್ಕಿಂಗ್‌ನವರಿಂದ ಟೋಕನ್ ಪಡೆಯಿರಿ.
  30. ವಾಹನಕ್ಕೆ ಬೀಗ ಹಾಕದೆ ಕ್ಷಣಕಾಲವೂ ನಿಲ್ಲಿಸಿ ಬೇರೆ ಕೆಲಸಕ್ಕೆ ಹೋಗಬೇಡಿ. .
  31. ವಾಹನಗಳನ್ನು ನಿಲುಗಡೆ ಮಾಡಿದ ನಂತರ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ವಾಹನದಲ್ಲಿ ಇಟ್ಟು ಬೇರೆ ಕಡೆ ತೆರಳಬೇಡಿ
  32. ವಾಹನ ಕಳ್ಳತನವಾದಾಗ ತಕ್ಷಣ ಪೋಲಿಸ್ ಠಾಣೆಗೆ / ಪೋಲಿಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ.
  33. ವಾಹನ ಖರೀದಿಗೆ ಮೂಲ ದಾಖಲಾತಿ, ನೈಜತೆ ಪರಿಶೀಲಿಸಿದ ನಂತರ ಖರೀದಿಸಿ. ➢ ಸುಲಿಗೆ ನಿರೋಧಕ ಮುನ್ನೆಚ್ಚರಿಕೆಗಳು :ಪ್ರಯತ್ನ
  34. ಜನರಿಲ್ಲದ ಪ್ರದೇಶಗಳಲ್ಲಿ ಒಂಟಿಯಾಗಿ ಹೆಂಗಸರು ಓಡಾಡುವುದನ್ನು ಆದಷ್ಟು ತಪ್ಪಿಸಿ.
  35. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವುದು, ಮಾತನಾಡಿಸುವ ಮಾಡಿದಾಗ
    ಎಚ್ಚರದಿಂದ ವ್ಯವಹರಿಸಿ.
  36. ಜನರಿಲ್ಲದ ಪ್ರದೇಶದಲ್ಲಿ ಕಾಲು ದಾರಿಗಳನ್ನು ಉಪಯೋಗಿಸಬೇಡಿ.
  37. ಆದಷ್ಟು ವೃದ್ಧರು, ಮಕ್ಕಳು ಮೈ ಮೇಲೆ ಒಡವೆಗಳನ್ನುಧರಿಸಿ ತಿರುಗುವ ಪರಿಪಾಠವನ್ನು ತಪ್ಪಿಸಿ.
  38. ಚಿನ್ನದ ಆಭರಣವನ್ನು ಧರಿಸಿ ತಿರುಗಾಡುವ ಸಂದರ್ಭದಲ್ಲಿ ಒಡವೆಗಳನ್ನು ಬಟ್ಟೆಯಿಂದ ಮರೆಮಾಡಿಕೊಳ್ಳಿ,
  39. ಬಾಡಿಗೆ ವಾಹನಗಳಲ್ಲಿ ಹೋಗುವಾಗ ನೀವು ತಿಳಿಸಿದ ಸ್ಥಳಕ್ಕೆ ಹೋಗುತ್ತಿದ್ದಾನೆಯೇ? ಎಂಬುದನ್ನು ಖಾತ್ರಿಪಡಿಸಿಕೊಳ್ಳಿ
  40. ಬ್ಯಾಂಕ್, ಅಂಗಡಿ, ಪೋಸ್ಟ್ ಆಫೀಸ್‌ಗಳ ಬಳಿ ಅಪರಿಚಿತರು ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ತಿಳಿಸಿದಾಗ ಮೊದಲು ನಿಮ್ಮ
    ಬಳಿಯಿರುವ ಹಣ ಸುಭದ್ರವಾಗಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ.
  41. ಮೋಹಕ್ಕೆ ಬಲಿಯಾಗಿ ಸುಲಿಗೆಗೆ ಒಳಗಾಗಬೇಡಿ.
  42. ಜನನಿಬಿಡ ಪ್ರದೇಶಗಳಲ್ಲಿ, ಪಾರ್ಕ್‌ಗಳಲ್ಲಿ ಕತ್ತಲೆಯಲ್ಲಿ ಕುಳಿತುಕೊಳ್ಳುವ ಹವ್ಯಾಸ ತಪ್ಪಿಸಿ.
  43. ಅಪರಿಚಿತರು ನಂಬಿಸುವ ಅತೀಂದ್ರಿಯ ಶಕ್ತಿಗಳು, ಮಹನ್ ಪುರುಷರೆಂದು ಹೇಳಿದಾಗ ನಿಮ್ಮ ಮಾನಸಿಕ ಸಮತೋಲವನ್ನು ಕಳೆದುಕೊಂಡು ಅವರ ನಿಯಂತ್ರಣಕ್ಕೆ ಒಳಗಾಗಿ ಮೋಸ ಹೋಗಬೇಡಿ.
  44. ನಿಮ್ಮ ಡೋರ್‌ನ ಸಿಕ್ರೇಟ್ ನಂಬರನ್ನು ಗೌಪ್ಯವಾಗಿಡಿ.
  45. ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಮೈಮೇಲೆ ಮಲ ಅಥವಾ ಗಲೀಜು ಪದಾರ್ಥಗಳನ್ನು ಎಸೆದು ತಮ್ಮಲ್ಲಿರುವ್ ಸೊತ್ತುಗಳನ್ನು ಕಸಿದುಕೊಂಡು ಪರಾರಿಯಾಗುವ ತಂಡಗಳಿದ್ದು ಅದರ ಬಗ್ಗೆ ಎಚ್ಚರ ವಹಿಸುವುದು. ➢ ಡಕಾಯಿತ ನಿರೋಧಕ ಮುನ್ನೆಚ್ಚರಿಕೆಗಳು :

1, ನಗರದ ಹೊರವಲಯದಲ್ಲಿರುವ ಮನೆಯವರು ನಾಯಿ ಸಾಕುವುದು ಒಳಿತು.

  1. ರಾತ್ರಿ ವೇಳೆ ನಾಯಿಯನ್ನು ಕಟ್ಟಿ ಹಾಕದೆ ಬಿಡುವುದು ಉತ್ತಮ.
    3, ವಿದ್ಯುತ್ ತಂತಿ ಬೇಲಿಯನ್ನು ಅಳವಡಿಸುವುದು ಉತ್ತಮ.
    4, ಆತ್ಮ ರಕ್ಷಣೆಗೆ ಬಳಸುವ ಸಾಮಾಗ್ರಿಗಳಾದ ದೊಣ್ಣೆ, ಖಾರದ ಪುಡಿ, ಮಚ್ಚು ಇತ್ಯಾದಿ ತಕ್ಷಣ ಕೈಗೆ ಸಿಗುವಂತೆ ಇಟ್ಟುಕೊಳ್ಳಿ.
  2. ಡಕಾಯಿತರ ಚಹರೆ, ಧರಿಸಿದ ಬಟ್ಟೆ, ಮಾತನಾಡುವ ಭಾಷೆ, ಶೈಲಿ, ತಂಡದ ಸಂಖ್ಯೆ, ವಿಶೇಷ ಗುಣಲಕ್ಷಣಗಳನ್ನು ಸೂಕ್ಷ್ಮ ಗಮನಿಸಿ ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿ,
  3. ಆತ್ಮ ರಕ್ಷಣೆಗೆ ಕಾನೂನಿನಡಿ ರಕ್ಷಣೆ ನಿಮಗಿದೆ
  4. ಬೆಲೆ ಬಾಳುವ ವಸ್ತುಗಳಿಗೆ ವಿಮೆ ಮಾಡಿಸಿ,
  5. ಬಂದೂಕು ಪರವಾನಿಗೆ ಹೊಂದಿದ ಬಂದೂಕುಗಳನ್ನೇ ಖರೀದಿಸಿ ಆತ್ಮರಕ್ಷಣೆಗೆ ಬಳಸಿ,
  6. ನಿಮ್ಮ ಸಂಪತ್ತು ಅಪರಾಧಿಗಳಿಗೆ ಪ್ರಚೋದನೆ ನೀಡದಿರಲಿ.
  7. ನಿಮ್ಮ ಮೊಬೈಲ್‌ನ ಐ.ಎಂ.ಇ.ಐ. ನಂಬರನ್ನು ಒಂದು ಕಡೆ ಡೈರಿಯಲ್ಲಿ ಬರೆದಿಡಿ. ➢ ಸರಗಳ್ಳತನ ತಡೆಯುವ ಬಗ್ಗೆ ಸಲಹೆಗಳು :

1, ಒಂಟಿಯಾಗಿ ಜನರಿಲ್ಲದಪ್ರದೇಶಗಳಲ್ಲಿ ಹೆಂಗಸರು ಓಡಾಡುವುದನ್ನು ತಪ್ಪಿಸಿ.

  1. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ನಿಧಾನವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದಾಗ ಅವರ ಕೈಗೆಟಕುವ ಅಂತರದಲ್ಲಿ ನಿಲ್ಲಬೇಡಿ.
  2. ಅನುಮಾನಾಸ್ಪದ ವಾಹನಗಳು ನಿಮ್ಮ ಬಳಿ ಬರುವಾಗ ವಾಹನದ ವಿಧ, ಬಣ್ಣ, ನೊಂದಣಿ ಸಂಖ್ಯೆ ವಾಹನ ಸವಾರರು
    ಧರಿಸಿರುವ ಬಟ್ಟೆ, ಚಹರೆ, ಮುಖದಲ್ಲಿ ಗುರುತಿಸಬಹುದಾದ ಯಾವುದಾದರೂ ವಿಶೇಷತೆಗಳು ಇತ್ಯಾದಿಗಳ ಬಗ್ಗೆ
    ಸೂಕ್ಷ್ಮವಾಗಿ ಗಮನಿಸಿ,
  3. ನಿಮ್ಮ ಬಳಿ ಅನುಮಾನಾಸ್ಪದ ವ್ಯಕ್ತಿ ಬಂದರೆ ತಕ್ಷಣ ಜೋರಾಗಿ ಕೂಗಿಕೊಂಡು ಅಕ್ಕಪಕ್ಕದವರನ್ನು ಸೇರಿಸಿ,
  4. ವಾಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಚಿನ್ನದ ಸರಗಳನ್ನು ಬಟ್ಟೆಯಿಂದ ಮರೆ ಮಾಡಿಕೊಳ್ಳಿ
  5. ಸರ ಮತ್ತು ಧರಿಸುವ ಬಟ್ಟೆಗೆ ಹೊಂದಿಸಿ ಸೇಫ್ಟಿ ಪಿನ್‌ಗಳನ್ನು ಹಾಕಿ.
  6. ಅನಾವಶ್ಯಕವಾಗಿ ಅಧಿಕ ಆಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ, ಕಳ್ಳರನ್ನು ಆಕರ್ಷಿಸಬೇಡಿ.
  7. ಮನೆಯಿಂದ ಹೊರಗೆ ಹೋಗುವಾಗ, ಅಂಗಡಿಗೆ ಹೋಗುವಾಗ, ಅಂಗಡಿಯಿಂದ ಸಾಮಾನು ಖರೀದಿಸಿ ಹೊರಡುವಾಗ ಜಾಗ್ರತೆ ಅಗತ್ಯ.
  8. ಬೆಳಗಿನ ಸಮುಯದಲ್ಲಿ ದೇವಸ್ಥಾನಕ್ಕೆ, ಅಂಗಡಿಗೆ ಒಂಟಿಯಾಗಿ ಹೋಗುವುದನ್ನು ತಪ್ಪಿಸಿ.
  9. ಎದುರಿನಿಂದ ಬರುವ ವಾಹನಗಳ ದೀಪದ ಬೆಳಕು ಕಣ್ಣಿಗೆ ಬಿದ್ದಾಗ ನೀವು ಧರಿಸಿದ ಚಿನ್ನದ ಸರವನ್ನು ಗಟ್ಟಿಯಾಗಿ
    ಹಿಡಿದುಕೊಳ್ಳಿ
  10. ಕತ್ತಲೆ ಪ್ರದೇಶದಲ್ಲಿ ಪವರ್ ಕಟ್ ಆದ ಸಮಯದಲ್ಲಿ ನಡೆದಾಡುವಾಗ ನಿಮ್ಮ ಆಭರಣಗಳ ಕಡೆ ಹೆಚ್ಚಿನ ಗಮನ ವಹಿಸಿ
    ಹಾಗೂ ನಿಮ್ಮ ಜೊತೆಗಾರರಿಗೂ ಸರಗಳ್ಳತನಗಳ ಬಗ್ಗೆ ಮನವರಿಕೆ ಮಾಡಿಕೊಡಿ.
  11. ಅಪರಾಧ ತಡೆ ಮತ್ತು ಪತ್ತೆ ಪೋಲಿಸರಿಗಷ್ಟೇ ಜವಾಬ್ದಾರಿ ಎಂದು ಭಾವಿಸಬೇಡಿ. ನಿಮ್ಮ ಸಹಕಾರ ಕೂಡ ಅತ್ಯಗತ್ಯ ಸಮುದಾಯ ಪೊಲಿಸಿಂಗ್‌ಗೆ ಸಹಕರಿಸಿ. ➢ ಪ್ರಯಾಣಿಸುವಾಗ ಪಾಲಿಸಬೇಕಾದ ಸಲಹೆಗಳು :
  12. ಬಾಡಿಗೆ ವಾಹನದಲ್ಲಿ ಪ್ರಯಾಣಿಸುವಾಗ ವಾಹನದ ಸಂಖ್ಯೆ, ಚಾಲಕರ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ.
    2, ಆಟೋ, ಟ್ಯಾಕ್ಸಿಗಳಲ್ಲಿ ಬಂದಾಗ ನಿಮ್ಮ ಜೊತೆ ತಂದಿರುವ ಎಲ್ಲಾ ಲಗೇಜುಗಳನ್ನು ತೆಗೆದುಕೊಂಡಿದ್ದೀರಾ ಎಂದು ಇಳಿಯುವ
    ಮುನ್ನ ಖಚಿತಪಡಿಸಿಕೊಳ್ಳಿ.
  13. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಿಂದ ಆಟೋದಲ್ಲಿ ಹೋಗುವಾಗ ಪ್ರೀ-ಪೇ ಆಟೋ ನಿಲ್ದಾಣದಿಂದ ಪ್ರಯಾಣ ಬೆಳೆಸಿ
  14. ಬಸ್ ಹತ್ತುವ ಮೊದಲು ನೀವು ತಲುಪುವ ಸ್ಥಳಕ್ಕೆ ಬಸ್ ಹೋಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  15. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಕುಳಿತುಕೊಳ್ಳುವಾಗ ಅಕ್ಕಪಕ್ಕದವರ ಚಲನವಲನಗಳ ಬಗ್ಗೆ ಗಮನವಹಿಸಿ.
  16. ಲಗೇಜ್ ಬ್ಯಾಗ್‌ಗಳನ್ನು ಒಂದು ಸ್ಥಳದಲ್ಲಿ ಇಟ್ಟು ಮತ್ತೊಂದು ಸ್ಥಳಕ್ಕೆ ಹೋಗಬೇಡಿ.
  17. ಅಪರಿಚಿತರ, ಅಕ್ಕಪಕ್ಕದವರ ಲಗೇಜಿನ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಡಿ.
  18. ಲಗೇಜ್ ಬ್ಯಾಗ್‌ಗಳಲ್ಲಿ ನಗ – ನಾಣ್ಯಗಳನ್ನು ಕಾಣುವಂತೆ ಇಡಬೇಡಿ ಮತ್ತು ಪ್ರದರ್ಶಿಸಬೇಡಿ.
  19. ಮಕ್ಕಳನ್ನು ಲಗೇಜ್ ಬಳಿ ಬಿಟ್ಟು ಬೇರೆ ಕಡೆಗೆ ಹೋಗಬೇಡಿ
  20. ಅಪರಿಚಿತರ ಕರವಸ್ತ್ರ ಮತ್ತು ವಸ್ತುಗಳ ಬಳಕೆ ಮಾಡುವುದನ್ನು ತಪ್ಪಿಸಿ.
    11, ಶೌಚಾಲಯದ ಬಳಿ ಲಗೇಜ್‌ಗಳನ್ನಿಟ್ಟು ಒಳ ಹೋಗುವುದಾಗಲಿ, ಮಕ್ಕಳ ಕೈಗೆ ಬೆಲೆ ಬಾಳುವ ವಸ್ತುಗಳುಳ್ಳ ಬ್ಯಾಗ್,
    ವ್ಯಾನಿಟಿ ಬ್ಯಾಗ್ ಇತರ ಬೆಲೆ ಬಾಳುವ ವಸ್ತುಗಳನ್ನು ಕೊಟ್ಟು ಹೋಗಬೇಡಿ.
  21. ಅಪರಿಚಿತರ ಕೈಯಲ್ಲಿ ಟಿಕೇಟ್ ತರಿಸಲು, ಬುಕ್ಕಿಂಗ್ ಮಾಡಿಸಲು ಹಣ ನೀಡಬೇಡಿ.
    13, ಅಪರಿಚಿತ ವ್ಯಕ್ತಿಗಳು ಪರಿಚಿತರಂತೆ ಗ್ರಾಮಸ್ಥರಂತೆ | ಬಂಧುಗಳಂತೆ ನಟಿಸುವವರನ್ನು ನಂಬಬೇಡಿ.
  22. ವೃದ್ಧರು, ಅಪ್ರಾಪ್ತ ವಯಸ್ಸಿನವರನ್ನು ಬೆಲೆಬಾಳುವ ವಸ್ತುಗಳೊಂದಿಗೆ ಪ್ರಯಾಣಿಸುವುದನ್ನು ತಪ್ಪಿಸಿ,
    15.ನಿಮ್ಮ ಗಮನ ಬೇರೆಡೆ ಸೆಳೆದು ನಿಮ್ಮ ಬಳಿ ಇರುವ ಬೆಲೆ ಬಾಳುವ ವಸ್ತು, ಬ್ಯಾಗ್, ಪರ್ಸ್, ಸೂಟ್ ಕೇಸ್ ಗಳನ್ನು
    ಕಿತ್ತುಕೊಳ್ಳಲು ಪ್ರಯತ್ನಿಸಬಹುದು, ಎಚ್ಚರವಿರಲಿ.
    16, ಬಸ್ ಹತ್ತುವ ಮತ್ತು ಇಳಿಯುವ ಮುನ್ನ ಎಲ್ಲಾ ಕಾಲೇಜುಗಳನ್ನು ತೆಗೆದುಕೊಂಡ ಬಗ್ಗೆ ಗಮನಹರಿಸಿ,
  23. ನೂಕು ನುಗ್ಗಲಿನಲ್ಲಿ ಬಸ್‌ಗಳನ್ನು ಹತ್ತುವಾಗ ಮತ್ತು ಇಳಿಯುವಾಗ ನಿಮ್ಮ ಮೊಬೈಲ್ ಸಂಭಾಷಣೆಯನ್ನು ನಿಲ್ಲಿಸಿ,
    ನಿಮ್ಮ ಇರುವ ಲಗೇಜ್, ಹಣ, ಆಭರಣ ಇನ್ನಿತರ ವಸ್ತುಗಳ ಬಗ್ಗೆ ಹೆಚ್ಚಿನ ಗಮನವಿರಿಸಿ.
  24. ಬಸ್ ಹತ್ತಿದ ನಂತರ ನಿಮ್ಮ ಬಳಿ ಇರುವ ವಸ್ತುಗಳ ಕ್ರಮಬದ್ಧತೆಯನ್ನು ಪರಿಶೀಲಿಸಿಕೊಳ್ಳಿ,
  25. ಅಪರಿಚಿತರ ನೆರವು ಪಡೆದು ತಿಂಡಿ, ತಿನಿಸು, ಕಾಫಿ, ಟೀ, ಕೂಲ್‌ಡ್ರಿಂಕ್ಸ್ ಇತ್ಯಾದಿಗಳನ್ನು ತರಿಸಿಕೊಂಡು ಸೇವಿಸಬೇಡಿ,
  26. ಸಹ ಪ್ರಯಾಣಿಕರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವಾಗ ಅಪರಿಚಿತರು ನೀಡುವ ತಿಂಡಿ ತಿನಿಸುಗಳನ್ನು ತಿನ್ನಬೇಡಿ,
  27. ಬಸ್ ಹತ್ತಿದ ನಂತರ ವಿನಾಕಾರಣ ಲಗೇಜ್ ಇಟ್ಟು ಕೆಳಗೆ ಇಳಿಯುವ ಹವ್ಯಾಸ ಬಿಡಿ.
  28. ಬೆಲೆ ಬಾಳುವ ವಸ್ತುಗಳನ್ನು ಕೊಂಡೊಯ್ಯುವಾಗ ಮೈಮರೆತು ನಿದ್ರೆ ಮಾಡಬೇಡಿ: –
  29. ಪ್ರಯಾಣದ ಮಧ್ಯೆ ಕಾಫಿ/ಟೀ ಕುಡಿಯಲು, ತಿಂಡಿ ತಿನ್ನಲು, ವಸ್ತುಗಳನ್ನು ಖರೀದಿಸಲು ಬಸ್ಸಿನಿಂದ ಇಳಿದು ಹೋಗುವಾಗ ಬೆಲೆ ಬಾಳುವ ವಸ್ತುಗಳನ್ನು ಹಾಗೂ ಲಗೇಜನ್ನು ಬಿಟ್ಟು ಹೋಗಬೇಡಿ.
  30. ನಿಮ್ಮ ಬಳಿ ಇರುವ ಮೊಬೈಲ್, ಐಪಾಡ್, ಪಾಮ್‌ಟಾಪ್, ಲ್ಯಾಪ್‌ಟಾಪ್ ಹಾಗೂ ವಿದ್ಯುನ್ಮಾನ ಉಪಕರಣಗಳ ಬಗ್ಗೆ
    ಕಾಳಜಿ ಇರಲಿ.
  31. ರಾತ್ರಿ ವೇಳೆ ಪ್ರಯಾಣಿಸುವಾಗ ಸಹ ಪ್ರಯಾಣಿಕರನ್ನು ನಂಬಿ ನಿದ್ರೆಗೆ ಜಾರಬೇಡಿ.
  32. ರಾತ್ರಿ ವೇಳೆ ಪ್ರಯಾಣ ಮಾಡುವಾಗ ಸರ್ಕಾರಿ ಸಂಚಾರಿ ವ್ಯವಸ್ಥೆ ಬಳಕೆಗೆ ಪ್ರಾಶಸ್ತ್ಯ ನೀಡಿ.
  33. ಅಪರಿಚಿತರ ಮಾತಿಗೆ ಮರುಳಾಗಬೇಡಿ ಮತ್ತು ಅವರು ಹೇಳುವ ಮಾತನ್ನು ನಂಬಬೇಡಿ.
  34. ಪ್ರಯಾಣದ ಮಾಹಿತಿಯನ್ನು ಸಂಬಂಧಿಕರಿಗೆ, ಸ್ನೇಹಿತರಿಗೆ ತಿಳಿಸುವುದು ಒಳಿತು.
  35. ನೀವು ಮನೆಗೆ ಬಂದಾಗ ಬಾಗಿಲು, ಕಿಟಕಿ ಮುಂತಾದುವುಗಳು ಜಖಂ ಆಗಿದ್ದರೆ ಮನೆ ಪ್ರವೇಶಿಸದೆ ಕೂಡಲೇ ದೂರವಾಣಿ
  36. ಅಪರಿಚಿತರ ವಾಹನದ ಪ್ರಯೋಜನವನ್ನು ಪಡೆಯಬೇಡಿ.
  37. ವಾಹನದಲ್ಲಿ ಸಂಚರಿಸುವ ಸಮಯ ವಾಹನ ನಂಬ್ರ ತಿಳಿದುಕೊಳ್ಳತಕ್ಕದ್ದು ➢ ಮಾದಕ ದ್ರವ್ಯಗಳಿಂದ ಸಮಾಜದ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳು:

1, ಮನುಷ್ಯನ ಆರೋಗ್ಯದ ಮೇಲೆ ಹಾಗೂ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದ್ದು ಇದರಿಂದಾಗಿ ಆತನ ಆಯುಷ್ಯವು
ಕಡಿಮೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

  1. ಸಮಾಜದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಅಪಘಾತಗಳು, ವಿವಿಧ ರೀತಿಯ ಅಪರಾಧಗಳು ಉಂಟಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಅನಾನುಕೂಲ ಉಂಟುಮಾಡುತ್ತದೆ.
  2. ಯುವ ಸಮುದಾಯ ಇದನ್ನು ಸೇವಿಸುವುದರಿಂದ ಕುಟುಂಬದಲ್ಲಿರುವ ಸಂಬಂಧಗಳ ಮೇಲೆ ತೀವ್ರ ತರವಾದ ಸಮಸ್ಯೆಗಳು ಉಂಟಾಗಿ ಆನೇಕ ಸಮಸ್ಯೆಗೆ ದಾರಿಮಾಡಿಕೊಡುತ್ತದೆ.
  3. ಮಕ್ಕಳು ಹಾಗೂ ಯುವಕರು ಇದನ್ನು ಸೇವಿಸುವುದರಿಂದ ಅವರ ಶೈಕ್ಷಣಿಕ ರಂಗದಲ್ಲಿ ಏಳಿಗೆ ಕಾಣುವಲ್ಲಿ ವಿಫಲರಾಗುವಲ್ಲಿ ಯಾವುದೇ ಸಂದೇಹವಿಲ್ಲ. *ವಿ.ಸೂ: ಮಾದಕ ದ್ರವ್ಯ ಸೇವನೆ /ಮಾರಾಟದ ಬಗ್ಗೆ ಯಾವುದೇ ಮಾಹಿತಿಯಿದ್ದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವುದು. ಮಾಹಿತಿ ನೀಡಿದವರ ಗೌಪ್ಯತೆಯನ್ನು *ಕಾಪಾಡಲಾಗುವುದು. ➢ ಸಾಮಾನ್ಯ*
  4. ಮೊಬೈಲ್‌ನಲ್ಲಿ/ಇಂಟರ್‌ನೆಟ್‌ನಲ್ಲಿ ಬರುವ ಬಹುಮಾನದ ಆಮಿಷ ಇರುವ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವಾಗ ಎಚ್ಚರಿಕೆ ವಹಿಸುವುದು.
  5. ತಮ್ಮ ಬಂದು ವೀಸಾ ಮಾಡಿಸಿಕೊಡುವುದಾಗಿ ಹೇಳುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರುವುದು ಹಾಗೂ ಪೋಲಿಸರಿಗೆ
    ಮಾಹಿತಿ ನೀಡುವುದು. ➢ ಮಾಹಿತಿಯನ್ನು ಪೋಲಿಸ್ ಠಾಣೆಗೆ ನೀಡುವ ಮಾದರಿ :
    ➢ 1, ಹೆಸರು ಹೇಳಲು ಇಚ್ಛಿಸಿದಲ್ಲಿ ನಿಮ್ಮ ಹೆಸರು ಮತ್ತು ವಿಳಾಸ
    ➢ 2. ಘಟನೆ ನಡೆದ ಸ್ಥಳ, ಸಮಯ ಮತ್ತು ಗಾಯಗೊಂಡಿದ್ದಲ್ಲಿ ಅವರ ವಿವರ 🙏🙏🙏

Leave a Reply

Your email address will not be published. Required fields are marked *

Translate »