ನಮ್ಮ ರಾಜಕೀಯಾ ನಾಯಕರು ಹಾಗೂ ಚುನಾವಣಾ ವ್ಯವಸ್ಥೆ ಯ ಹಣೆ ಬರಹ ದ ಬಗ್ಗೆ ಪ್ರಜಾಕೀಯದ ವಿಶ್ಲೇಷಣೆ.
ಇಲ್ಲಿಯವರೆಗೆ ನಡೆದ ಚುನಾವಣೆ ಯು ನಮ್ಮ ರಾಜಕೀಯಾ ವ್ಯಕ್ತಿಗಳ ಪ್ರತೀಷ್ಟೆಗೆ ಭೂತಕನ್ನಡಿ ಹಿಡಿದಂತಿದೆ.
ಅದು ಪ್ರಧಾನ ಮಂತ್ರಿಯಾಗಲಿ, ಮುಖ್ಯ ಮಂತ್ರಿಯಾಗಲಿ, ಯಾವುದೇ ಮಂತ್ರಿಯಾಗಲಿ, ವಿರೋಧ ಪಕ್ಷದ ನಾಯಕನಾಗಲಿ, ಯಾವುದೇ ಪಾರ್ಟಿಯ ಅಧ್ಯಕ್ಷನಾಗಲಿ, ಎಲ್ಲರ ಹಣೆಬರಹ ಒಂದೆ.
ಎಲ್ಲ ಕಡೆ ಹೆಚ್ಚಾಗಿ 50ರಿಂದ 60% ಮತದಾನವಾಗುತ್ತದೆ.
ಅಂದರೆ ಅರ್ಥ, ಈ ಪ್ರತೀಷ್ಟಿತ ರಾಜಕಾರಣಿಗಳ ಪ್ರಭಾವ ಎಷ್ಟಿದೆ ಅಂದರೆ 40 ರಿಂದ 45% ಪ್ರಜೆಗಳು ಮತದಾನವೇ ಮಾಡುವುದಿಲ್ಲ.
ದೊಡ್ಡ- ದೊಡ್ಡ ಬಡಾಯಿ ಕೊಚ್ಚುತ್ತಿರುವ ಈ ರಾಜಕಾರಣಿಗಳು ಜನರ ಮೆಚ್ಚುಗೆಯನ್ನು ಎಷ್ಟು ಪಡೆದಿರವರೆಂದು ಇಲ್ಲಿ ರುಜುವಾತು ಆಗುತ್ತದೆ.
ಕೋಟಿ- ಕೋಟಿ ಖರ್ಚು ಮಾಡಿ ಕೇವಲ 55% ಜನರನ್ನು ಮತಗಟ್ಟೆಗೆ ಬರುವಂತೆ ಮಾಡುವ ಇವರ ಸಾಹಸ ಉತ್ತರ ಕುಮಾರನಿಗಿಂತ ಎನೂ ಕಡಿಮೆ ಇಲ್ಲ.
ವಾರೇ ವಾಹ್ !
ನಾನು ಮಾಡಿದೆ, ನನ್ನಿಂದಲೆ ಆದದ್ದು, ನಾನಿಲ್ಲದೆ ದೇಶ ನಡೆಯುವುದಿಲ್ಲ, ನನಗೆ ವಿಕಲ್ಪವೇ ಇಲ್ಲ, ಎಂದು ಎದೆ ಬಡಿದು ಕೊಳ್ಳುವ ರಾಜಕಾರಣಿ ಹಾಗು ಅವರ ಹಿಂಬಾಲಕರೇ, ಸ್ವಲ್ಪ ನಿಮ್ಮ ಬುಧ್ಧಿಯೊಳಗೆ ಹೊಕ್ಕು ಅನ್ವೇಷಣೆ ಮಾಡಿ.
ನಿಜವಾದ ಜನಪ್ರೀಯತೆ ನಿಮಗೆ ಇರುವುದಾದರೆ 80 ರಿಂದ 90% ಮತದಾರರನ್ನು ಮತದಾನ ಮಾಡುವಂತೆ ಮಾಡಿ. ಆವಾಗ ನಿಮ್ಮ ಜನಪ್ರೀಯತೆಗೆ ಬೆಲೆ ಬರುತ್ತದೆ.
20 ರಿಂದ 30% ಮತ ಪಡೆದು ದೇಶದ ಸರಕಾರ ಮಾಡುವುದಲ್ಲ.
80 ರಿಂದ 90% ಮತಧಾನವಾಗಿ ಅದರಲ್ಲಿ 50% ಗಿಂತ ಹೆಚ್ಚಿಗೆ ಮತದಾನ ಪಡೆದು ಸರಕಾರ ರಚಿಸಿದರೆ, ಅದು ನಿಮ್ಮ ನಿಜವಾದ ಜನಪ್ರೀಯತೆ.
ಆವಾಗ ನಿಜವಾದ ಮೇಜೋರಿಟಿ ಸರಕಾರವಾಗುವುದು.
ನಿಮ್ಮ ವರ್ತನೆ ಹಾಗು ನೀವು ಮಾಡಿದ ಭ್ರಷ್ಟ ವ್ಯವಸ್ಥೆ ಯಿಂದ ಬೇಸತ್ತ ಜನರು ಮತ ಕಟ್ಟೆಗೆ ಬರುವುದನ್ನೆ ನಿಲ್ಲಿಸಿರುವರು.
ಎದ್ದೇಳಿ ರಾಜಕಾರಣಿಗಳೇ, ಜನರ ಮನಸ್ಸಿನಲ್ಲಿ ಭ್ರಷ್ಟಾಚಾರವಿಲ್ಲದೆ ಬದಲಾವಣೆ ಹಾಗು ಅಬಿವ್ರದ್ದಿ ಪತದ ಕಡೆಗೆ ಸಾಗುವಂತಹ, ಜನರ ಕಣ್ಣಿಗೆ ಕಾಣುವಂತಹ ಕಾರ್ಯಕ್ರಮ ಮಾಡಿ ತೋರಿಸಿ. ಮತಧಾರನ ಮುದುಡಿರುವ ಮನಸ್ಸನ್ನು ಅರಳಿಸಲು ಪ್ರಯತ್ನಿಸಿ.
ಇಲ್ಲವಾದರೆ, ದಿನಾಲು ಮನೆಯ ಮುಂದೆ ಎಸೆಯಲು ಪಡುವ ವಾರ್ತಾ ಪತ್ರಿಕೆಯಷ್ಟೆ ನಿಮಗೆ ಮಹತ್ವ ಉಳಿಯುವುದು. ಒಂದು ಅರ್ಧ ಗಂಟೆ ಓದಿ ಮೂಲೆಗೆಸುವ ರದ್ದಿ (Waste) ಪೇಪರುಗಳಾಗುವಿರಿ.
ಪ್ರಜೆಗಳೆ ಎದ್ದೇಳಿ, ನಿಮ್ಮ ಮೂಲಭೂತ ಸಾಕರ್ಯಗಳಾದ ವಿದ್ಯೆ, ಆರೋಗ್ಯ, ವಸತಿ, ನೀರು, ವಿಧ್ಯುತ್, ಉದ್ಯೋಗ, ಸರಿಯಾದ ಸಾರಿಗೆ ವ್ಯವಸ್ಥೆ ಒದಗಿಸುವ ವಿಚಾರವಂತಹ ಪಾರ್ಟಿಯ ಸರ್ಕಾರಗಳನ್ನು ಚುಣಾಯಿಸಿ, ದೇಶದ ಬದಲಾವಣೆ ಹಾಗು ಅಭಿವೃದ್ಧಿಗೆ ನಾಂದಿ ಹಾಡುವ.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.
ಮೂಲ – ಪ್ರಜಾಕೀಯ ಬೆಂಬಲಿಗರು