ಪ್ರಜಾಪ್ರಭುತ್ವ- Democracy.
ಭಾರತದ ಪ್ರಜಾಪ್ರಭುತ್ವವು ಕೇವಲ ಸರ್ಕಾರದಲ್ಲಿರುವ ರಾಜಕಾರಣಿ ಹಾಗು ರಾಜಕೀಯಾ ಪಕ್ಷಗಳಿಗಾಗಿ ನಡೆಯುತ್ತಿದೆ. ಪ್ರಜೆಗಳು ಕೇವಲ ಮತ ಹಾಕುವ ಒಂದು ದಿನದ ಪಾತ್ರದಾರಿಗಳಾಗಿರುವರು.
ಸರಕಾರದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು( CBI, ED, CVC, EC, etc.) ಪೊಲೀಸ್, ಭ್ರಷ್ಟಾಚಾರ ನಿಗ್ರಹ ಸಂಸ್ಥೆ, Intelligent Department, ಇವೆಲ್ಲಾ ದೇಶ ಹಾಗು ಪ್ರಜೆಗಳಿಗಾಗಿ ಕೆಲಸ ಮಾಡುವುದನ್ನು ಬಿಟ್ಟು, ಕೇವಲ ಆರಿಸಿ ಬಂದ ರಾಜಕಾರಣಿಗಳು ಹಾಗು ರಾಜಕೀಯಾ ಪಕ್ಷಗಳಿಗಾಗಿ ಕೆಲಸ ಮಾಡುತ್ತಿದೆ.
ಕಾರಣ, ವರ್ಗಾವಣೆ ಹಾಗು ಮೇಲ್ದರ್ಜೆಯ ಸಂಭಾವನೆಗಾಗಿ ಇದರ ಎಲ್ಲಾ ಆಫೀಸರ್ ಗಳು ರಾಜಕಾರಣಿ ಹಾಗು ರಾಜಕೀಯಾ ಪಕ್ಷಗಳಿಗೆ ಬೇಕಾದಂತೆ ನಡೆದು ಕೊಳ್ಳುತ್ತಿದೆ.
ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ನಿಲ್ಲುವುದಾದರೆ ಹೇಗೇ ? ಆದ್ದರಿಂದಲೇ ಕ್ರಿಮಿನಲ್ ಹಿನ್ನೆಲೆ ಇರುವ ರಾಜಕಾರಣಿಗಳು ದೇಶ ಆಳುತ್ತಿದ್ದಾರೆ.
ಇದು ನಮ್ಮ ದೇಶ ಹಾಗು ಪ್ರಜೆಗಳ ದುರಾದ್ರಷ್ಟ.
ಇದಕ್ಕೆ ಒಂದೆ- ಒಂದು ಪರಿಹಾರ, ಸಂವಿಧಾನದ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗು ಮಾಧ್ಯಮವನ್ನು ಹಾಗು ಸಂವಿಧಾನಾತ್ಮಕ ಸಂಸ್ಥೆ ಗಳನ್ನು ಈ ರಾಜಕಾರಣಿ ಹಾಗು ರಾಜಕೀಯಾ ಪಕ್ಷಗಳ ಮುಷ್ಟಿಯಿಂದ ಸ್ವಾತಂತ್ರಗೊಳಿಸ ಬೇಕು.
ಇದು ಕೇವಲ ಪ್ರಜಾಕೀಯಾದಿಂದಲೇ ಆಗಬೇಕು.
ನಿಜವಾದ ಪ್ರಜಾಪ್ರಭುತ್ವ ಹಾಗು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗ ಬೇಕು.
ಈ 72 ವರ್ಷದ ರಾಜಕೀಯಾ ನಮ್ಮ ದೇಶವನ್ನು ಸಾಮಾನ್ಯ ಜನರು ನರಳುವಂತಹ ನರಕ ಸಧ್ರಷ್ಯ ಪ್ರಪಂಚಕ್ಕೆ ತಳ್ಳಿದೆ.
ಎದ್ದೇಳಿ ಪ್ರಜೆಗಳಿಗೆ, ಸಮಯ ಮೀರಿಲ್ಲ, ನಿಜವಾದ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಸ್ದಾಪಿಸೋಣ.
ಜೈ ಪ್ರಜಾಕೀಯಾ.
ಜೈ ಉತ್ತಮ ಪ್ರಜಾಕೀಯಾ ಪಕ್ಷ.