ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾಗವತದ ಮಹಿಮೆ

ಭಾಗವತದ ಮಹಿಮೆ

ಹರಿದಾಸಕೃಷ್ಣ, ಎಂಬ ಪಂಡಿತನು ಮಣಿಪುರ ಗ್ರಾಮದಲ್ಲಿ ವಾಸಿಸುತ್ತಿದ್ದನು.
ಅವನು ಪ್ರತಿನಿತ್ಯವೂ ಭಾಗವತ ಪ್ರವಚನ ವನ್ನು ಮಾಡುತ್ತಿದ್ದನು. ವಿಶೇಷ ಎಂದರೆ, ಭಾಗವತದಲ್ಲಿ ಬರುವ ಆಯಾ ಪಾತ್ರಗಳಿಗೆ ಜೀವವನ್ನು ತುಂಬಿದಂತೆ ಭಾವಾಭಿನಯದ ಮೂಲಕ ಪ್ರವಚನ ಮಾಡುವುದನ್ನು ನೋಡುತ್ತಾ , ಕೇಳುತ್ತಿದ್ದರೆ, ರಾತ್ರಿ ಕಳೆದಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ಅಮೃತಪಾನ ದಂತ ಇಂಥ ಭಾಗವತವನ್ನು ಕೇಳದಿರುವವರು ಇರಲಿಲ್ಲ. ಕಣ್ಣಿಗೆ ಕಟ್ಟಿದಂತೆ ಅಲ್ಲಿಯೇ ನಡೆಯುತ್ತಿರುವಂತೆ, ಹೇಳುವುದನ್ನು ಕೇಳಲು ದೂರ ದೂರದಿಂದ ಬಂದು ಕೇಳುತ್ತಿದ್ದರು. ಪಂಡಿತನು ಸಾತ್ವಿಕ ಸ್ವಭಾವದವನು, ಕಥಾಕಾಲಕ್ಷೇಪ ಮುಗಿದ ನಂತರ ಯಾರು ಏನು ಕೊಡುತ್ತಿದ್ದರೋ ಅದನ್ನೇ ಸಂತೋಷದಿಂದ ತೆಗೆದುಕೊಳ್ಳುತ್ತಿದ್ದನು. ಅವನು ಒಂದು ಜೋಪಡಿಯಲ್ಲಿ
ಇರುತ್ತಿದ್ದನು. ನಿದ್ದೆ ಮಾಡುವ ಸಮಯ ಬಿಟ್ಟು ಉಳಿದ ಸಮಯದಲ್ಲೆಲ್ಲ ಹರಿನಾಮಸ್ಮರಣೆ ಮಾಡುತ್ತಿದ್ದನು. ಅವನ ಜೋಪಡಿಯ ಸಮೀಪದಲ್ಲಿ ಒಂದು ಮರವಿದ್ದು, ಅದರೊಳಗೊಂದು ಗೂಡಿನಲ್ಲಿ ಪುಟ್ಟಹಕ್ಕಿ ವಾಸಿಸುತ್ತಿತ್ತು.
ಅದು ಸಹ ದಿನರಾತ್ರಿ ದೇವರ ಸ್ಮರಣೆ ಮಾಡುತ್ತಿತ್ತು.

ಪಂಡಿತನು ಕಥಾಕ್ಷೇಪ ಮಾಡಲು ಹೋದಲ್ಲೆಲ್ಲ ತಾನು ಅವನ ಹಿಂದೆಯೇ ಹೋಗಿ ಅಲ್ಲೊಂದು ಮರದ ಮೇಲೆ ಕುಳಿತು ಪಂಡಿತರು ಹೇಳುತ್ತಿದ್ದ ಭಾಗವತವನ್ನು ಕೇಳುತ್ತಿತ್ತು, ಹಾಗೂ ಪಂಡಿತನು ಭಾಗವತ ಮುಗಿಸಿ ಮನೆಗೆ ಹೊರಟಾಗ ಅವನ ಹಿಂದೆಯೇ ಹಾರಿ ಬಂದು ತನ್ನ ಗೂಡಿನಲ್ಲಿ ಸೇರುತ್ತಿತ್ತು. ಇದೊಂದು ಪಂಡಿತನಿಗೆ ಗೊತ್ತಿರಲಿಲ್ಲ. ಒಂದು ದಿನ ಪಂಡಿತನಿಗೆ ಹುಷಾರು ತಪ್ಪಿತು. ಆಹಾರ, ನೀರು, ಔಷಧಿ ಗಳಿಲ್ಲದೆ , ನಿಶ್ಯಕ್ತಿಯಾಗಿ ಮಂಚದಿಂದ ಏಳಲಾಗದೇ ಹಾಗೆಯೇ ಮಲಗಿದ್ದನು. ರಾತ್ರಿ ಒಂದು ಹೊತ್ತಿನಲ್ಲಿ ಅವನಿಗೆ ಬಹಳ ಬಾಯಾರಿಕೆಯಾಯಿತು. ನೀರು ಕುಡಿಯಲು ಏಳಲು ಹೊರಟರೆ ಆಗಲಿಲ್ಲ . ಬಹಳ ಆಯಾಸದಿಂದ ನೀರು ನೀರು ಎಂದು ಕೂಗುತ್ತಿದ್ದುದು ಮರದ ಮೇಲೆ ಕುಳಿತಿದ್ದ ಹಕ್ಕಿಗೆ ಕೇಳಿಸಿತು. ಪಂಡಿತನ ಧ್ವನಿ ಕೇಳಿ ಹಾರಿ ಬಂದು ಗುಡಿಸಲ ಕಿಟಕಿ ಸಂದಿಯಿಂದ ಒಳಗೆ ಬಂದಿತು. ಮನೆಯೊಳಗೆ ಸುತ್ತಲೂ ನೋಡಿತು. ಒಂದು ತಾಮ್ರದ ತಂಬಿಗೆಯಲ್ಲಿ ನೀರು ಕಂಡಿತು. ಅದು ತನ್ನ ಕೊಕ್ಕಿನಲ್ಲಿ ನೀರು ತಂದು ಪಂಡಿತನ ಬಾಯೊಳಗೆ ಹಾಕಿತು. ಮತ್ತೆ ಹೋಗಿ ನೀರು ತರುವುದು ಮತ್ತೆ ಬಾಯಲ್ಲಿ ಹಾಕುವುದು. ಇದೇ ರೀತಿ ಒಂದು ರಾತ್ರಿ ಪೂರ್ತಿ ಮಾಡಿತು.

  ಬನಶಂಕರಿ ದೇವಿ ಮಹಾತ್ಮೆ

ನೀರು ಕುಡಿದುದರಿಂದ ಪಂಡಿತನಿಗೆ ಸ್ವಲ್ಪ ನಿದ್ರೆ ಬಂದು ಆರಾಮವಾಗಿ ಮರುದಿನಕ್ಕೆ ಪೂರ್ತಿ ಗುಣವಾಯಿತು. ನನ್ನ ಕಷ್ಟಕಾಲದಲ್ಲಿ ಶ್ರೀಹರಿಯೇ ಹಕ್ಕಿಯ ರೂಪದಲ್ಲಿ ಬಂದು ನನಗೆ ಸಹಾಯ ಮಾಡಿದ್ದಾನೆ ಎಂದುಕೊಂಡು ಮರದ ಹತ್ತಿರ ಬಂದು, ಹಕ್ಕಿಗೆ ಕೃತಜ್ಞತೆ ಹೇಳಿ, ಅಂದಿನಿಂದ ಒಂದು ಬಟ್ಟಲಿನಲ್ಲಿ ದವಸ ಧಾನ್ಯ ಇನ್ನೊಂದು ಬಟ್ಟಲಲ್ಲಿ ನೀರು ತುಂಬಿಸಿ ಮರದ ಕೆಳಗೆ ಇಡುತ್ತಿದ್ದನು. ಹಕ್ಕಿ ಪ್ರತಿನಿತ್ಯವೂ ಅದೇ ಧಾನ್ಯವನ್ನು ತಿಂದು ನೀರು ಕುಡಿಯುತ್ತಿತ್ತು. ಒಂದು ದಿನ ಪಂಡಿತ ಮರದ ಹತ್ತಿರ ಬಂದು ಹಕ್ಕಿಗೆ ನೋಡು ನಾನು ಪಕ್ಕದ ಗ್ರಾಮಕ್ಕೆ ಭಾಗವತ ಸಪ್ತಾಹ ಮಾಡಲು ಹೋಗುತ್ತಿದ್ದೇನೆ ಬರುವುದು ಏಳು ದಿನವಾಗುತ್ತದೆ ಅಲ್ಲಿಯತನಕ ನೀನು ಉಪವಾಸ ಇರಬೇಡ ಸಾಕಷ್ಟು ದವಸಧಾನ್ಯ ನೀರು ಇಟ್ಟಿದ್ದೇನೆ ಇದನ್ನು ತೆಗೆದುಕೋ ಎಂದು ಹೇಳಿ ಮರದ ಕೆಳಗೆ ಇಟ್ಟನು.

ಸಪ್ತಾಹ ಮಾಡಲು ಪಕ್ಕದ ಗ್ರಾಮಕ್ಕೆ ಪಂಡಿತನು ಹೊರಟನು. ಅವನು ಹೋದ ಸ್ವಲ್ಪಹೊತ್ತಿನಲ್ಲೇ ಹಕ್ಕಿಯು ಅವನ ಹಿಂದೆಯೇ ಹಾರಿ ಬಂದಿತು.ತಿರುಗಿ ನೋಡಿದ ಪಂಡಿತನು ಪಕ್ಷಿಯೇ ನಾನು ಏಳುದಿನಗಳ ಭಾಗವತ ಮಾಡಲು ದೂರದ ಹಳ್ಳಿಗೆ ಹೋಗುತ್ತಿದ್ದೇನೆ ನೀನು ಗೂಡಿಗೆ ಹೋಗು ಎಂದನು. ಆದರೆ ಹಕ್ಕಿ ಕೇಳದೆ ಅವರ ಹಿಂದೆ ಹಿಂದೆಯೇ ಹಾರುತ್ತ ಬಂದು ಭಾಗವತ ಹೇಳುತ್ತಿದ್ದ ಜಾಗದ ಸಮೀಪದಲ್ಲೇ ಇದ್ದ ಮರದ ಮೇಲೆ ಕುಳಿತು
ಏಳು ದಿನಗಳ ತನಕವು ಭಾಗವತ ಸಪ್ತಾಹ ವನ್ನು ಕೇಳಿತು. ನಂತರ ಪಂಡಿತನು ಮನೆಗೆ ಹೊರಟನು ಅವನ ಹಿಂದೆ ತಾನು ಗೂಡಿಗೆ ಬಂದಿತು. ಆ ದಿನ ರಾತ್ರಿ ಪಂಡಿತನು ಮಲಗಿರುವಾಗ ಪಕ್ಷಿ ಜೋರಾಗಿ ಅಳುತ್ತಿರುವುದು ಕೇಳಿತು. ಹೊರಗೆ ಮರದ ಹತ್ತಿರ ಬಂದು ಪಕ್ಷಿಯೇ ಏಕೆ ಅಳುತ್ತಿರುವೆ ನಿನಗೆ ಬಾಯಾರಿಕೆ ಆಗಿದೆಯೇ ಹಸಿವಾಗಿದೆಯೇ, ಹೇಳು ಕೊಡುತ್ತೇನೆ ಎಂದನು.

  ಅರ್ಜುನನ ಮಗ ಅರವಣನ ಮಹಾಭಾರತದ ಉಪ ಕತೆ

ಇದ್ದಕ್ಕಿದ್ದಂತೆ ಹಕ್ಕಿ ಮಾತಾಡತೊಡಗಿತು. ಪಂಡಿತರೆ, ನಾನೊಬ್ಬಳು ರಾಜಕುಮಾರಿ, ಪೂರ್ವಜನ್ಮದಲ್ಲಿ ನೀವು ಮಹರ್ಷಿ ಗಳಾಗಿದ್ದು ಊರಿನ ಜನಗಳಿಗೆ ಭಾಗವತವನ್ನು ಹೇಳುತ್ತಿದ್ದೀರಿ. ರಾಜಕುಮಾರಿಯಾದ ನಾನು
ಒಂದು ದಿನ, ತಿರುಗಾಡುತ್ತಾ ತಿರುಗಾಡುತ್ತಾ ಒಂದು ದಿನ ಅಲ್ಲಿಗೆ ಬಂದೆ, ಹಾಗೂ ನಿಮ್ಮನ್ನು ನೋಡಿ ವ್ಯಂಗ್ಯದಿಂದ ಗಹಗಹಿಸಿ ನಕ್ಕೆ, ಆಗ ನೀವು ಹೇಳುವ ಭಾಗವತವು ಅರ್ಧಕ್ಕೆ ನಿಂತು ಹೋಯಿತು. ನೀವು ಕೋಪದಿಂದ ನೀನು ಮುಂದಿನ ಜನ್ಮದಲ್ಲಿ ನಗಲಾಗದ ಹಕ್ಕಿಯಾಗು ಎಂದು ಶಾಪ ಕೊಟ್ಟಿರಿ. ನನಗೆ ಅರ್ಥವಾಗಿ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಯಾಚಿಸಿದೆ. ಆಗ ಸಮಾಧಾನಗೊಂಡ ನೀವು, ಮುಂದಿನ ಜನ್ಮದಲ್ಲಿ ನೀನು ಹಕ್ಕಿಯಾದರೆ, ನಾನು ಅದೇ ಊರಿನಲ್ಲಿ ಪಂಡಿತನಾಗಿ ಜನ್ಮತಾಳಿ. ಪ್ರತಿನಿತ್ಯವೂ ಭಾಗವತವನ್ನು ಮಾಡುತ್ತೇನೆ. ನೀನು ಭಾಗವತವನ್ನು ಕೇಳುತ್ತಾ 7 ವರ್ಷ ಕಳೆಯಬೇಕು ಹಾಗೂ ಒಂದು ಸಪ್ತಾಹ ವನ್ನು ಕೇಳಬೇಕು ಆಗ ನಿನ್ನ ಹಕ್ಕಿಯ ಜನ್ಮದಿಂದ ಮುಕ್ತಿಯಾಗಿ ವಿಷ್ಣು ಸಾಯುಜ್ಯ ಪದವಿಯನ್ನು ಪಡೆಯುವೆ. ಈ ರೀತಿ ಶಾಪದಿಂದ ನನಗೆ ಮುಕ್ತಿ ಮಾರ್ಗವನ್ನು ತೋರಿಸಿದಿರಿ. ನಾನು ಇದೇ ಮರದಲ್ಲಿ ವಾಸವಿದ್ದು ನಿಮ್ಮ ಭಾಗವತವನ್ನು ಕೇಳುತ್ತಾ ಏಳು ವರ್ಷಗಳು ಆಯಿತು ಹಾಗೂ ಪಕ್ಕದ ಊರಿಗೆ ಬಂದು ನೀವು ಮಾಡುತ್ತಿದ್ದ ಭಾಗವತ ಸಪ್ತಾಹವನ್ನು ಕೇಳಿದೆ. ಆದ್ದರಿಂದ ನನ್ನ ಶಾಪ ವಿಮೋಚನೆಯಾಗಿ ನಾಳೆ ದಿನ ಸೂರ್ಯೋದಯ ಆಗುತ್ತಿದ್ದಂತೆ ನಾನು ಸ್ವರ್ಗ ಲೋಕಕ್ಕೆ ಹೋಗುತ್ತೇನೆ ಎಂದಿತು.

  ಬಲರಾಮ ಜಯಂತಿ ಹಿನ್ನೆಲೆ ಪೂಜೆ ಮುಹೂರ್ತ

ಇದನ್ನು ಕೇಳಿದ ಪಟ್ಟ ಪಂಡಿತನು ಹಾಗಾದರೆ ಸಂತೋಷ ಪಡುವ ವಿಷಯ ಆದರೆ ನೀನು ಏಕೆ ಅಳುತ್ತಿರುವೆ ಎಂದನು. ಆಗ ಹಕ್ಕಿಯು, ಪಂಡಿತರೇ ನಾನು ಏಳು ವರ್ಷಗಳಿಂದ ನಿಮ್ಮ ಭಾಗವತ ಕಥಾಕಾಲಕ್ಷೇಪ ವನ್ನು ಕೇಳುತ್ತಾ ಬಂದಿದ್ದೇನೆ. ಇದರಿಂದ ನನಗೆ ಅತೀವ ಆನಂದವಾಗುತ್ತಿತ್ತು. ಸಾಕ್ಷಾತ್ ವಿಷ್ಣು ದರ್ಶನ ಕೊಟ್ಟಷ್ಟೇ ಸಂತೋಷವಾಗಿತ್ತು .ಇನ್ನು ಅಂತಹ ಸುಂದರವಾದ ಭಾಗವತ ಕೇಳುವುದನ್ನು ಬಿಟ್ಟು ಸ್ವರ್ಗಲೋಕಕ್ಕೆ ಹೋಗಬೇಕಲ್ಲ ಇದೇ ಚಿಂತೆಯಾಗಿದೆ. ನಾನು ಭಾಗವತ ಕೇಳುವುದನ್ನು ಬಿಟ್ಟು ಎಲ್ಲಿಗೂ ಹೋಗಲು ಇಷ್ಟವಿಲ್ಲ ಎಂದಿತು. ಆಗ ಪಂಡಿತನು, ನೀನು ಪುಣ್ಯವಂತೆ. ಭಾಗವತ ಕೇಳುವುದೇ ವಿಷ್ಣು ಸಾಯುಜ್ಯ ಪಡೆಯುವುದಕ್ಕಾಗಿ, ಸಾಕ್ಷಾತ್ ಶ್ರೀಹರಿಯೇ ಭಾಗವತ. ಒಂದು ಸಾರಿ ಭಾಗವತ ಕೇಳಿದರೇನೇ ವಿಷ್ಣು ತನ್ನ ಚರಣದಲ್ಲಿ ಸ್ಥಾನ ನೀಡುತ್ತಾನೆ. ಅಂತಹದರಲ್ಲಿ ನೀನು ಬಿಡದೆ ಏಳು ವರ್ಷಗಳ ಕಾಲ ಭಾಗವತ ಕೇಳಿರುವೆ. ನೀನಗೆ ಖಂಡಿತ ವಿಷ್ಣು ಸಾನಿದ್ಯವಿರುವ ವೈಕುಂಠ ಪ್ರಾಪ್ತಿಯಾಗುತ್ತದೆ. ಈಗ ಸಂತೋಷವಾಗಿ ಸ್ವರ್ಗಕ್ಕೆ ಹೋಗು ಎಂದು ಪಂಡಿತನು ಆಶೀರ್ವದಿಸಿದನು. ಪಕ್ಷಿ ಆನಂದದಿಂದ ಸ್ವರ್ಗಲೋಕಕ್ಕೆ ಹೋಯಿತು.

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು!
ಜಗದುದರನ ಅತಿ ವಿಮಲ ಗುಣ ರೂಪಗಳನು ಆಲೋಚನದಿ
ಭಾರತ ನಿಗಮತತಿಗಳ ಅತಿಕ್ರಮಿಸಿ ಕ್ರಿಯಾ ವಿಶೇಷಗಳ
ಬಗೆಬಗೆಯ ನೂತನವ ಕಾಣುತ ಮಿಗೆ ಹರುಷದಿಂ ಪೊಗಳಿ ಹಿಗ್ಗುವ ತ್ರಿಗುಣ ಮಾನಿ ಮಹಾಲಕ್ಷ್ಮಿಗೆ ಸಂತೈಸಲಿ ಅನುದಿನವು.

ಕೃಪೆ : ವಾಟ್ಸಪ್ಪ್

Leave a Reply

Your email address will not be published. Required fields are marked *

Translate »