ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಕೀಯ – ನಾಳೆಯ ತುರ್ತು ಪರಿಸ್ಥಿತಿ

ನೀರು – ನಾಳೆಯ ತುರ್ತು ಪರಿಸ್ಥಿತಿ.

ಪಟ್ಟಣವಾಗಲಿ- ಹಳ್ಳಿಗಳಾಗಲಿ ಮುಂದೆ ಮನುಷ್ಯ ಉಪಯೋಗಕ್ಕೆ ಬರುವ ನೀರಿನ ಬರಗಾಲ ಖಂಡಿತಾ ಬರುತ್ತದೆ.

ಇದು ಯಾಕೆ ಬರುವುದು ಎಂದು ಕೂಲಂಕುಷವಾಗಿ ವಿಶ್ಲೇಷಣೆ ಮಾಡಿದರೆ ತಿಳಿಯುವುದು.

ಭೂಮಿಯೊಳಗಿನ ನೀರಿನ ಮಟ್ಟ ವನ್ನು ಹಸಿರು ಗಿಡ- ಮರಗಳು ಭೂಮಿಯ ಒಳಗೆ ಇಂಗುವಂತೆ ಮಾಡುತ್ತದೆ. ಮಳೆ ಬಂದಾಗ ನೀರು ಹರಿದು ಕಾಲುವೆ, ಕಾಲುವೆಯಿಂದ ನದಿಗೆ ಹಾಗು ನದಿಯಿಂದ ಸಮುದ್ರ ಸೇರುತ್ತದೆ.

ನೀರು ನೆಲದಲ್ಲಿ ಇಂಗ ಬೇಕಾದರೆ ಎರಡೆ ಉಪಾಯಗಳು.

1. ಅಲ್ಲಲ್ಲಿ ಕೆರೆ, ಹೊಂಡ, Water Holes, ಆನೆಕಟ್ಟುಗಳು, ನೀರಿನ ಕಾಲುವೆಗಳು ನಿರ್ಮಾಣವಾಗ ಬೇಕು.

2. ಹುಲ್ಲು, ಗಿಡ ಹಾಗು ಮರಗಳಿರುವ ಭೂಮಿಯ ಭಾಗ 30- 40% ಪ್ರತೀ Sq. ಕಿಲೋ ಮೀಟರ್ಗೆ ಇರಬೇಕು.

ಆದರೆ ನಮ್ಮ ರಾಜಕಾರಣಿಗಳು ಹಾಗು ಸರಕಾರಿ- ನಗರ ಪಾಲಿಕೆ ಆಫೀಸರ್ ಗಳು ಬ್ರಿಟೀಷರ ಕಾಲದಲ್ಲಿ ಸಾರ್ವಜನಿಕ ಪಾರ್ಕ್, ಮಕ್ಕಳು ಆಟದ ಮೈದಾನು, ಕೆರೆ, ನೀರಿನ ಹೊಂಡ, ರಾಜ್ ಕಾಲುವೆ, ಫುಟ್ ಪಾತ್ಗಾಗಿ ಹಾಗು ಗಿಡ- ಮರಗಳನ್ನು ನೆಡಲು ಇಟ್ಟ ಸ್ಥಳಗಳನ್ನು ರೀಯಲ್ ಎಸ್ಟೇಟ್ ಮಾಫೀಯಾಗಳಿಗೆ ಮಾರಿ, ತಾವೂ ಆ ಕಂಪೆನಿಯ ಪಾಲುದಾರಿಕೆಯಲ್ಲಿ ಭಾಗ ವಹಿಸುತ್ತಾರೆ.

  ಪ್ರಜಾಕೀಯಾ - ಉತ್ತಮ ಪ್ರಜಾಕೀಯಾ ಪಕ್ಷ - ಮುಖ್ಯ ತತ್ವ- ನೀತಿ- ನಿಯಮಗಳು

ದೇಶ – ರಾಜ್ಯ ಹಾಗು ಪ್ರಜೆಗಳ ಅವಶ್ಯಕತೆಯನ್ನು ಗಾಳಿಗೆ ತೂರುತ್ತಾರೆ.

ಎಲ್ಲಾ ಸಮಸ್ಯೆಗಳಿಗೆ ಒಂದೆ ದಾರಿ.

ಪ್ರತಿಯೊಂದು ಬಿಲ್ಡಿಂಗ್, ರಸ್ತೆ, ಮನೆ, ಶಾಲೆ, ಆಸ್ಪತ್ರೆ, ವ್ಯಾಪಾರ ಮಳಿಗೆ ಹಾಗು ಯಾವುದೇ ಕಟ್ಟಡಕ್ಕೆ ಪರ್ಮಿಷನ್ ಕೊಡುವ ಮೊದಲು, ಅದಕ್ಕೆ ಸಂಬಂದ ಪಟ್ಟ ಸ್ಥಳದಲ್ಲಿ ಕನೀಷ್ಟ 30- 40% ಸ್ಥಳವನ್ನು ಹುಲ್ಲು ಜಾಗವಾಗಿ ಕಾದಿರಿಸ ಬೇಕು. ಬೇಕಾದರೆ ಅದರಲ್ಲಿ ಮರಗಳನ್ನು ನೆಡ ಬಹುದು. ಈ ಸ್ಥಳಗಳಲ್ಲಿ ಯಾವುದೆ ಕಾರ್ ಪಾರ್ಕಿಂಗ್ ಅಥವಾ ಯಾವುದೆ ಕಾಂಕ್ರೀಟ್ ಕೆಲಸ ಮಾಡ ಬಾರದು. ಇಲ್ಲಿ ಕೇವಲ ಮಳೆ ನೀರು ಭೂಮಿಗೆ ಇಂಗ ಬೇಕು.

ಆವಾಗಲೆ ಭೂಮಿಯ ನೀರಿನ ಮಟ್ಟ ಕಾಪಾಡ ಬಹುದು. ಕೆರೆ- ಹೊಂಡ, ಬಾವಿ, ಬೋರ್ವೆಲ್ ಗಳಲ್ಲಿ 365 ದಿನ ನೀರು ಸಿಗುವುದು.

ಪಟ್ಟಣಗಳಲ್ಲಿ ಪ್ರತೀ ಎರಡು ಕಿ.ಮಿ. ಗೆ ಒಂದು ಕಿ.ಮಿ. ನ ಸಾರ್ವಜನಿಕ ಪಾರ್ಕ್ ಇರಬೇಕು. ಅದರಲ್ಲಿ ಯಾವುದೆ ಕಟ್ಟಡ ಇರಬಾರದು. ಕೇವಲ ಮರ ಗಿಡಗಳಿರ ಬೇಕು.

  ರಾಯಚೂರಿನ ಸುತ್ತ ಮುತ್ತ ಇರುವ ಆಧ್ಯಾತ್ಮಿಕ ತಾಣಗಳು

ಎಲ್ಲಾ ಪಟ್ಟಣಗಳಲ್ಲಿ ಇದನ್ನು ಕಡ್ಡಾಯವಾಗಿ ಮಾಡಬೇಕು, ಯಾವುದೇ ಸಣ್ಣ- ದೊಡ್ಡ ಪಟ್ಟಣವೆಂಬ ತಾರತಮ್ಯವಿರಬಾರದು.

ನೀರು-ಗಾಳಿ ಗುಣ ಮಟ್ಟದ ಹಾಗು ಬೇಕಾದಷ್ಟು ಮುಂದೆ ಸಿಗಬೇಕಾದರೆ, ಇದೆ ಒಂದು ದಾರಿ- ಬೇರೆ ದಾರಿ ಇಲ್ಲ.

ಮೂರ್ಖ ರಾಜಕಾರಣಿಗಳೇ ಹಾಗು ಸರಕಾರಿ- ನಗರ ಪಾಲಿಕೆ ಆಫೀಸರ್ಗಳೆ, ನಿಮ್ಮ ಹಣದ ಹಾಗು ಸಂಪತ್ತಿನ ದುರಾಸೆಯನ್ನು ನಿಲ್ಲಿಸಿ, ಇದಕ್ಕಾಗಿ ಸೂಕ್ತ ಕಾನೂನು ತಂದು, ಅದರಲ್ಲಿ ಯಾವುದೆ ಗೊಂದಲವಿಲ್ಲದಂತೆ ಅದನ್ನು ಪರಿಪಾಲಿಸಿ.

ಇಲ್ಲವಾದರೆ, ನಮ್ಮ ದೇಶ- ರಾಜ್ಯ ನರಕ ಸಧ್ರಷ್ಯ ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೆ ಎಲ್ಲಾ ಪಟ್ಟಣಗಳು ಕೊಳೆತು ನಾರುತ್ತಿದೆ.
ನಡೆಯಲು ಪುಟ್ಟ ಪಾತ್ ಇಲ್ಲ, ಕೊಳೆತ ಗಾಳಿ ಹಾಗು ನೀರು ಮನುಷ್ಯನನ್ನು ದಿನೆ- ದಿನೆ, ಸ್ವಲ್ಪ- ಸ್ವಲ್ಪವಾಗಿಯೆ ಕೊಲ್ಲುತ್ತಿದೆ.

ಜನ ಸಂಖ್ಯೆಯಾ ಬೆಳವಣಿಗೆಗೆ ಸರಿಯಾಗಿ ನಮ್ಮ ಪಟ್ಟಣಗಳು ಬೆಳೆಯಲು ಕಲಿತೆ ಇಲ್ಲ. ಅದೇ ನಮ್ಮ ಇಂಜಿನಿಯರ್ ಗಳು ಬೇರೆ ದೇಶವನ್ನು ಸ್ವರ್ಗವಾಗಿ ಮಾಡುತ್ತಿದ್ದಾರೆ. ನೀವೂ ಭ್ರಷ್ಟಾಚಾರದಲ್ಲಿ ಸಂಪಾದಿಸಿದ ಹಣದಿಂದ ಅಂತಹ ಸ್ಥಳಗಳಿಗೆ ರಜಾ ಪ್ರವಾಸಗಳನ್ನು ಮಾಡುವಿರಿ. ಮೂರ್ಖರೇ, ಅದನ್ನಾದರೂ ನೋಡಿ ಕಲಿಯಿರಿ.

  ಪ್ರಜಾಕೀಯ - ಪ್ರಜೆ ಯ ಜೊತೆ ಚರ್ಚೆ

ನಾವು ಕೊನೇಗೆ ತಲುಪಿರುವೆವು. ಈಗಲಾದರೂ ಎದ್ದೇಳಿ.

ಒಂದೆ- ಒಂದು ದಾರಿ ಪಟ್ಟಣ ಹಳ್ಳಿಗಳಲ್ಲಿ 30 ರಿಂದ 40 % ಸ್ಥಳವನ್ನು ಹಸಿರು ಸ್ಥಳವಾಗಿ ಉಳಿಸಿ ಕೊಳ್ಳುವುದು.

ಇಲ್ಲವಾದರೆ, ಪ್ರಕೃತಿಯೆ ಬುದ್ದಿ ಕಲಿಸುವುದು.

ಯಾವುದೇ ಪ್ರವಾಹ, ಸುನಾಮಿ, ಭೂಕಂಪ, ನೆರೆ, ಪ್ರಕೃತಿ ವಿಕೋಪದಿಂದ ಈ ನಿಮ್ಮ ಭ್ರಷ್ಟಾಚಾರದಿಂದ ಸಾಕಿದ ನಿಮ್ಮ ಸಂಸಾರ ಹಾಗು ಬುಸಿನೆಸ್ಸನ್ನು ನೀರು, ಗಾಳಿ ಹಾಗು ಭೂಮಿ ನುಂಗುವುದರಲ್ಲಿ ಸಂಶಯವಿಲ್ಲ. ನಿಮ್ಮೊಂದಿಗೆ ಪಾಪದ ಪ್ರಜೆಗಳು, ಅವರು ಮಾಡದ ತಪ್ಪಿಗಾಗಿ ಬಲಿಯಾಗಬಹುದು.

ಜೈ ಪ್ರಜಾಕೀಯಾ
ಜೈ ಉತ್ತಮ ಪ್ರಜಾಕೀಯಾ ಪಕ್ಷ.

Leave a Reply

Your email address will not be published. Required fields are marked *

Translate »