ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಉತ್ತರಾಖಂಡದಲ್ಲಿದೆ ಊಖಿ ಮಂದಿರ – ಉಷೆ ಮಠ

ಉತ್ತರಾಖಂಡದಲ್ಲಿದೆ ಊಖಿ ಮಂದಿರ..!
(ಉಷೆ ಮಠ)

ಕೇದಾರನಾಥ ದೇವಸ್ಥಾನ
ಹಿಂದೂ ಧರ್ಮದಲ್ಲಿ ಅತೀ
ಶಕ್ತಿಯನ್ನು ಹೊಂದಿರುವ ಮಂದಿರ ಅಂದರೆ ಅದುವೇ ಹಿಮಾಲಯದಲ್ಲಿರುವ ಶ್ರೀ ಕೇದಾರನಾಥ ದೇವಸ್ಥಾನ ಈ ದೇವಸ್ಥಾನಕ್ಕೆ ೭೦೦೦ ಸಾವಿರ ವರ್ಷಗಳ ಪುರಾತನ ಪ್ರಾಚೀನವಾದದ್ದು, ಈ ದೇವಸ್ಥಾನವು ಪಾಂಡವರರಿಂದ ನಿರ್ಮಾಣ ವಾಗಿದ್ದು,
ಈ ಸ್ಥಳದಲ್ಲಿ ಪಾಂಡವರಿಗೆ ಶಿವನು ಮೋಕ್ಷವನ್ನು ಪ್ರಾಪ್ತಿಯಾಗಿದೆ ಎಂದು ಹೇಳುತ್ತಾರೆ.. ಅರ್ಜುನನ ಮೊಮ್ಮಗ ಪರೀಕ್ಷಿತ್ ಕೇದಾರನಾಥ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಾನೆ ಎಂದು ಗ್ರಂಥ ಪುರಾಣಗಳಲ್ಲಿದೆ.. ಅಂದಿನಿಂದ ಇಲ್ಲಿಯವರೆಗೆ ದಕ್ಷಿಣ ಭಾರತದ ಶುದ್ದ ವೀರಶೈವ ಜಂಗಮರು ಪ್ರಧಾನ ಅರ್ಚಕರಾಗಿ ಪೂಜೆಯನ್ನು ಸಲ್ಲಿಸುತ್ತಾರೆ..
ಗೌರಿಕುಂಡ :- ಗೌರಿಯು ಶಿವನಿಗೋಸ್ಕರ ೫ ವರ್ಷಗಳ ಕಾಲ ತಪ್ಪಸು ಮಾಡಿದ ಸ್ಥಳ.. ಕೇದಾರನಾಥ ದೇವಸ್ಥಾನಕ್ಕೆ ಹೋಗುವಾಗ ಸಿಗುವುದೇ ಗೌರಿಕುಂಡ..ಇಲ್ಲಿ ಮಂದಾಕಿನಿ‌ ನಂದಿಯ ದಡದಲ್ಲಿ ಬಿಸಿ‌ ನೀರಿನ ‌ಕುಂಡವಿದೆ. ಇದರಲ್ಲಿ ಸ್ನಾನ ಮಡುತ್ತಾರೆ

ತ್ರಿಯುಗನಾರಯಣ ಮಂದಿರ:-
ಈ ಮಂದಿರದಲ್ಲಿ ಶಿವ ಪಾರ್ವತಿ ಮದುವೆಯಾಗಿರುವ ಸ್ಥಳ, ವಿಷ್ಣುವಿನ ನೇತೃತ್ವದಲ್ಲಿ ಈ‌ ಮದುವೆ ನಡೆಯತ್ತದೆ..
ಮದುವೆಯಲ್ಲಿ ನಡೆದ ಹೋಮವು ಇಲ್ಲಿಯವರೆಗೂ ಆರಿಲ್ಲ.. ಹಾಗೇಯೇ ನಡೆದುಕೊಂಡು ‌ಬಂದಿದೆ..
ಈ‌ ಮಂದಿರಕ್ಕೆ ಮೂರು ಯುಗ-ಯುಗಗಳಿಂದ ಪೂಜೆಯನ್ನು ಮಾಡಿಕೊಂಡು ಬಂದಿರುವ ಮಂದಿರ
ಅದಕ್ಕೆ ತ್ರಿಯುಗನಾರಯಣ ಮಂದಿರ ಎಂದು ಕರೆಯುತ್ತಾರೆ…

ಏಕೆ ಉಖೀಮಠ ದರ್ಶನ ಮಾಡಬೇಕು:-
ಕೇದಾರನಾಥ, ಮದ್ಯಮಹೇಶ್ವರ, ತುಂಗಾನಾಥ, ರುದ್ರನಾಥ, ಕಲ್ಪೇಶ್ವರನಾಥ ಎಂದು ಪಂಚಕೇದಾರ ದೇವಸ್ಥಾನಗಳಿವೆ ಈ ಮಂದಿಗಳು ಆರು ತಿಂಗಳು ಮನುಷ್ಯರಿಂದ ಪೂಜೆ ಆಗುತ್ತದೆ..
ಮತ್ತೇ ಆರು ತಿಂಗಳು ದೇವತೆಗಳಿಂದ ಪೂಜೆ ಇರುತ್ತದೆ.. ಆರು ತಿಂಗಳುಗಳ ಕಾಲ ಮುಚ್ಚಿರುತ್ತದೆ‌‌.
ಎಲ್ಲಾ ದೇವಸ್ಥಾನದ ಉತ್ಸವ ಮೂರ್ತಿಗಳು ದೀಪಾವಳಿಯ‌ ಅಮವ್ಯಾಸೆಯಂದು ಉತ್ಸವದೊಂದಿಗೆ ಉಖೀಮಠಕ್ಕೆ ಬರುತ್ತವೆ ಉಖೀಮಠದಲ್ಲಿ ಆರು ತಿಂಗಳಗಳ ಕಾಲ ಪೂಜೆ ಸಲ್ಲಿಸುತ್ತಾರೆ..
ಪಂಚ ಕೇದಾರ ಯಾತ್ರೆ ಮಾಡಲು ಕಷ್ಟವಿರುತ್ತದೆ..ಪಂಚ ಕೇದಾರ ಯಾತ್ರೆ ಮಾಡಲು ಸಾಧ್ಯವಾಗದೇ ಇರುವವರು ಉಖೀಮಠದ ದರ್ಶನ ಮಾಡಿದರೆ ಪಂಚ ಕೇದಾರ ದರ್ಶನ ಮಾಡಿದ ಹಾಗೆ ಎಂದು ಪ್ರತೀತಿ ಇದೆ..
ಹಾಗೂ ಸಾವಿರಾರು ವರ್ಷಗಳ ಪುರಾತನ ಓಂಕಾರೇಶ್ವರ ಮಂದಿರವಿದೆ, ಆದಿ ಜಗದ್ಗುರು ಏಕೋರಾಮರಾಧ್ಯರು ಮಹಾಪೀಠವಿದೆ.. ಈ ಪುಣ್ಯಕ್ಷೇತ್ರ ಸಾವಿರಾರು ‌ವರ್ಷಗಳ ಪುರಾತನವಾದದ್ದು..‌

ಉಖೀಮಠ- ಉಷೇಮಠ
ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು ೧೯೫೦ ಕಿ.ಮೀ ದೂರದ ಉತ್ತರಾಖಂಡದಲ್ಲಿ, ಸಾವಿರ ವರ್ಷಕ್ಕೂ ಮೀರಿದ ಇತಿಹಾಸ ಹೊಂದಿರುವ ಅಚ್ಚ ಕನ್ನಡದ ಮಠವೊಂದು, ಜಗತ್ಪ್ರಸಿದ್ಧ ಕೇದಾರನಾಥ ದೇವಾಲಯದಲ್ಲಿ ಕೈಂಕರ್ಯ ನಡೆಸುತ್ತಿದೆ. ವೀರಶೈವ ಪರಂಪರೆಯ ಮೂಲ ಪಂಚಾಚಾರ್ಯರುಗಳಲ್ಲಿ ಒಬ್ಬರಾದ ಆದಿಜಗದ್ಗುರು ಏಕೋರಾಮರಾಧ್ಯರು ಸ್ಥಾಪಿಸಿರುವ ಈ ಕೇದಾರಪೀಠವು ಕನ್ನಡದ ಮೂಲ ಸಂಸ್ಕೃತಿಯನ್ನು ಹೊಂದಿರುವ ಮಠವಾಗಿ, ಮೂಲ ಪರಂಪರೆ, ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು, ಕರ್ನಾಟಕದ ಸಂಪರ್ಕವನ್ನು ಶತಶತಮಾನಗಳಿಂದಲೂ ಉಳಿಸಿ ಕೊಂಡು ಬಂದಿರುವುದು ವಿಶೇಷವಾಗಿದೆ.

  ಶೈವಕ್ಷೇತ್ರ ಮೋಪಿದೇವಿ ಸುಬ್ರಹ್ಮಣ್ಯೇಶ್ವರ ದೇವಾಲಯ

ಪಂಚಾಚಾರ್ಯರಲ್ಲೊಬ್ಬರಾದ ಆದಿಜಗದಗುರು ಏಕೋರಾಮರಾಧ್ಗರು :

ಆದಿಜಗದ್ಗುರು ರೇವಣಸಿದ್ಧ ಆರಾಧ್ಯರು,
ಆದಿಜಗದ್ಗುರು ಮರುಳಸಿದ್ದ ಆರಾಧ್ಯರು,
ಆದಿಜಗದ್ಗುರು ಏಕೋರಾಮ ಆರಾಧ್ಯರು,
ಆದಿಜಗದ್ಗುರು ಪಂಡಿತಾರಾಧ್ಯರು
ಆದಿಜಗದ್ಗುರು ವಿಶ್ವಾರಾಧ್ಯರು.
ಮೂಲ ವೀರಶೈವ ಪರಂಪರೆಯ ಪಂಚಾಚಾರ್ಯರಾಗಿದ್ದಾರೆ.

ಇವರು ಕ್ರಮವಾಗಿ ರಂಭಾಪುರಿ, ಉಜ್ಜಯನಿಪೀಠ, ಕೇದಾರಪೀಠ, ಶ್ರೀಶೈಲ ಪೀಠ, ಕಾಶಿಪೀಠಗಳನ್ನು ಸ್ಥಾಪಿಸಿ, ವೀರಶೈವ ಧರ್ಮವನ್ನು ವ್ಯಾಪಕವಾಗಿ ಪ್ರಚಾರಗೊಳಿಸಿದವರು. ಇವರಲ್ಲಿ, ಐತಿಹಾಸಿಕ ವ್ಯಕ್ತಿಯಾದ ಏಕೋರಾಮರಾಧ್ಯರನ್ನು ಕುರಿತಂತೆ ಹಲವಾರು ಕಾವ್ಯಗಳು ರಚಿತವಾಗಿದೆ. ಅವುಗಳಲ್ಲಿ ಹದಿನೈದು ಹದಿನಾರನೆಯ ಶತಮಾನಗಳಲ್ಲಿ ರಚಿತವಾಗಿರುವ ವೀರಶೈವ ಸದಾಚಾರ ಸಂಗ್ರಹ, ಸಿದ್ಧಾಂತ ಶಿಖಾಮಣಿ, ಚಿಕ್ಕಣಾರಾಧ್ಯನ ಪಂಚಬ್ರಹ್ಮೋದಯ ಭಾಷ್ಯ, ಸಾಸಲ ಚಿಕ್ಕಣಾರಾಧ್ಯನ ಪಂಚಬ್ರಹ್ಮೋದಯ ಭಾಷ್ಯ, ಸಿದ್ಧನಂಜೇಶನ ಗುರುರಾಜ ಚಾರಿತ್ರ ಮೊದಲಾದ ಚತುರಾರ್ಯರು, ಪಂಚಾಚಾರ್ಯರನ್ನು ಕುರಿತು ರಚಿತವಾದ ಕೃತಿಗಳಲ್ಲಿ ಏಕೋರಾಮರ ವಿಚಾರ ತಿಳಿದು ಬರುತ್ತದೆ. ಇದಲ್ಲದೆ, ಹದಿನಾರನೆಯ ಶತಮಾನದ ನಂಜಣಾರ್ಯ ರಚಿಸಿರುವ “ಏಕೋರಾಮರಾಧ್ಗರ ಪುರಾಣ” ಎನ್ನುವ ಷಟ್ಪದಿ ಕಾವ್ಯವು ಹದಿನಾರು ಸಂಧಿಗಳಲ್ಲಿ ಬಹಳ ವಿಸ್ತೃತವಾಗಿ ಇವರ ಚರಿತೆಯನ್ನು ತಿಳಿಸುತ್ತದೆ. ಇಷ್ಟೇ ಅಲ್ಲದೆ, ತೆಲುಗಿನ ಕೆಲವು ಕೃತಿಗಳೂ ಕೂಡ ಇವರನ್ನು ಕುರಿತ ಮಾಹಿತಿ ನೀಡುತ್ತದೆ.
ಈ ಕಾವ್ಯಗಳು ತಿಳಿಸುವಂತೆ, ಆಂಧ್ರಪ್ರದೇಶದ ದ್ರಾಕ್ಷಾರಾಮ ಎಂಬಲ್ಲಿ ಜನಿಸಿದ ಏಕೋರಾಮರಾಧ್ಯರ ತಂದೆ ರಾಮರುದ್ರ. ತಂದೆಯಂತೆಯೇ ರಾಮನಾಥನ ಅನನ್ಯ ಭಕ್ತನಾಗಿದ್ದ ಏಕೋರಾಮರಾಧ್ಯರಿಗೆ ಸ್ವತಃ ಶಿವನೇ ಬಂದು ದೀಕ್ಷೆನೀಡುತ್ತಾನೆ. ಆ ನಂತರ ಶೈವೋಪಾಸನೆಯನ್ನು ಲೋಕದಲ್ಲಿ ಪ್ರಚಾರ ಪಡಿಸುತ್ತಾ, ಜನರನ್ನು ಎಚ್ಚರಿಸುತ್ತಾ, ವೈಷ್ಣವ, ಜೈನ ಮೊದಲಾದ ಪರಸಮಯಿಗಳನ್ನು ವಾದದಲ್ಲಿ ಗೆದ್ದು ಶಿವಪಾರಮ್ಯವನ್ನು ಸಾರುತ್ತಾ, ಇಷ್ಟ ಪಟ್ಟವರಿಗೆ ಲಿಂಗ ದೀಕ್ಷೆ ನೀಡುತ್ತಾ ಏಕೋರಾಮರಾಧ್ಗರು ಲೋಕಸಂಚಾರ ಕೈಗೊಳ್ಳುತ್ತಾನೆ.

ಶ್ರೀ ಪೀಠದ (ಮಠ) ಹಿನ್ನೆಲೆ :
ಆದಿ ಜಗದ್ಗುರು ಏಕೋರಾಮರಾಧ್ಯರು ಸ್ಥಾಪಿಸಿದ ಕೇದಾರಪೀಠವನ್ನು ವೈರಾಗ್ಯ ಸಿಂಹಾಸನವೆಂದೂ ಕರೆಯಲಾಗುತ್ತದೆ. ಜೊತೆಗೆ ಇದು, ಇಲ್ಲಿನ ಸ್ಥಳೀಯರಿಂದ ಊಖೀಮಠ ಎಂದೇ ಪ್ರಸಿದ್ಧಿ ಪಡೆದಿದೆ. ಈ ಮಠಕ್ಕೆ ಸಂಬಂಧಿಸಿದ ಪ್ರಾಚೀನ ಪತ್ರಗಳಲ್ಲಿಯೂ ಕೂಡ ಊಖೀಮಠ ಎಂದೇ ನಮೂದಾಗಿದೆ. ಇದಕ್ಕೆ ಕೆಲವು ಪೌರಾಣಿಕ ಹಿನ್ನೆಲೆಯು ಐತಿಹ್ಯವಾಗಿ ಕೇಳಿ ಬರುತ್ತದೆ. ಜನಮೇಜಯರಾಯನು ಕೇದಾರಪೀಠದಲ್ಲಿದ್ದ ಆನಂದ ಲಿಂಗ ಜಂಗಮ ಸ್ವಾಮಿಗಳಿಗೆ ಬರೆದುಕೊಟ್ಟನೆಂದು ಹೇಳುವ ತಾಮ್ರಶಾಸನ ಒಂದು ಮಠದಲ್ಲಿದೆ. ದ್ವಾಪರ ಯುಗದಲ್ಲಿ ಕೃಷ್ಣನ ಮೊಮ್ಮಗ ಅನಿರುದ್ದ ಮತ್ತು ಬಾಣಾಸುರನ ಮಗಳು ಉಷಾದೇವಿಯರ ವಿವಾಹವು ಇದೇ ಜಾಗದಲ್ಲಿ ಜರುಗಿದ ಕಾರಣ ಉಷೆಯ ಹೆಸರು ಬ್ರಿಟಿಷ್ ರವರ ಆಳ್ವಿಕೆಯಲ್ಲಿ ಉಷೆಮಠ ವನ್ನು ಉಖೀಮಠ ಎಂದು ಕರೆಯಲ್ಪಟ್ಟು, ಇದನ್ನು ಊಖಿ ಮಠವೆಂದೇ ಗುರುತಿಸಲಾಗುತ್ತದೆ.

ಸಾವಿರಾರು ವರ್ಷಗಳಿಂದ ಈ ಮಠಕ್ಕೆ ಗಡ್ವಾಲ, ಟೆಹ್ರಿ, ಕಾಶ್ಮೀರ, ನೇಪಾಳ, ಉದಯಪುರ ಮೊದಲಾದ ಹಲವಾರು ಉತ್ತರಭಾರತದ ರಾಜರು ಶಿಷ್ಯರಾಗಿ ನಡೆದುಕೊಳ್ಳುತ್ತಾರೆ. ಹಲವಾರು ಜಹಗೀರುಗಳನ್ನು ನೀಡಿ, ಮಠ ನಡೆಸುವ ಧಾರ್ಮಿಕ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ದ್ವಾದಶ ಜೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ಮಂದಿರದ ಸಂಪೂರ್ಣ ಪೂಜಾ ವಿಧಿಗಳು ಮಠದ ಕೈಂಕರ್ಯವಾಗಿ ನಡೆದು ಬಂದಿದೆ.
ಪ್ರತಿವರ್ಷ ಹಿಮದಿಂದ ಆವೃತಗೊಂಡ ಸಂದರ್ಭದಲ್ಲಿ ಕೇದಾರನಾಥ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ ಹಾಗೂ ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. ಈ ಎರಡೂ ಕಾರ್ಯಕ್ರಮಗಳೂ ವೈರಾಗ್ಯ ಪೀಠಾಧಿಪತಿಗಳಾದ ಊಖಿ ಮಠದ ಗುರುಗಳ ಸಮ್ಮುಖದಲ್ಲಿಯೇ ನೆರವೇರುತ್ತದೆ. ಹಿಮಾವೃತಗೊಂಡ ಆರು ತಿಂಗಳುಗಳ ಕಾಲ ಕೇದಾರನಾಥನ ಉತ್ಸವಮೂರ್ತಿಯನ್ನು ಮಠದಲ್ಲಿ ಇರಿಸಿ, ಪೂಜೆ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಅಕ್ಷಯ ತೃತೀಯದಂದು ಬಾಗಿಲು ತೆರೆಯುವ ಸಂದರ್ಭದಲ್ಲಿ ಮಠದಿಂದ ವಿಜೃಂಭಣೆಯಾಗಿ ಶೋಭಾಯಾತ್ರೆ ಹೊರಡಿಸಲಾಗುತ್ತದೆ. ಜೊತೆಗೆ, ಜಗದ್ಗುರುಗಳ ತಲೆಯ ಮೇಲಿರುವ ಬಂಗಾರದ ಕಿರೀಟವನ್ನು ಕೇದಾರನಾಥನ ಬಾಗಿಲು ತೆರೆದ ಮೇಲೆ ಆರು ತಿಂಗಳುಗಳ ಕಾಲ ಕೇದಾರನಾಥನ ತಲೆಯ ಮೇಲೆ ಅಲಂಕರಿಸಲಾಗುತ್ತದೆ.

  ಕಗ್ಗ - ಜ್ಞಾನೋದಯ - Enlightened

ಟೆಹರೀ ಗಢವಾಲ ರಾಜಮನೆತನದವರು ಈ ಪೀಠದ ಅನನ್ಯ ಭಕ್ತರಾಗಿದ್ದು, ಈ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಬಂದವರಿಗೆ ಮೊದಲು ತಿಲಕೋತ್ಸವವನ್ನು ಮಾಡಿ ಅವರಿಗೆ ರಾವಲ್ ಎಂಬ ಉಪಾಧಿಯನ್ನು ಕೊಡುತ್ತಾರೆ. ನಂತರ ರಂಭಾಪುರೀ, ಉಜ್ಜಯಿನೀ, ಶ್ರೀಶೈಲ ಮತ್ತು ಕಾಶೀ ಪೀಠದ ಜಗದ್ಗುರುಗಳೆಲ್ಲರೂ ಅಥವಾ ಇವರಲ್ಲಿ ಯಾರಾದರೊಬ್ಬರು ಈ ರಾವಲ್‌ ರಿಗೆ ಜಗದ್ಗುರುತ್ವವನ್ನು ನೀಡುತ್ತಾರೆ. ಜೊತೆಗೆ ಈ ಪೀಠಾಧಿಪತಿಗಳಿಗೆ “ಕಿಂಕಿಣೀಜಟ್ಟಪಾದ ಶೃಂಖಲಾ, ತಿರ್ಯಗಾಂದೋಲನ, ಪಂಚಕಲಶ, ರಾಜಗುಚ್ಛ ನಕ್ರಮುಖ…” ಮೊದಲಾದ ಎಪ್ಪತ್ತೆರಡು ಬಿರುದುಗಳನ್ನು ಪ್ರಶಸ್ತಿಯಾಗಿ ನೀಡಿ ಗೌರವಿಸಲಾಗಿದೆ. ಈ ಪೀಠ ಸ್ಥಾಪನೆಯಾದಂದಿನಿಂದ ಬಂದ ಗುರುಪರಂಪರೆಯನ್ನು ಅನುಷ್ಟುಪ್‌ ಛಂದಸ್ಸಿನ ಶ್ಲೋಕದಲ್ಲಿ ರಚಿಸಿಡಲಾಗಿದೆಯಾದ್ದರಿಂದ ಎಲ್ಲ ಪೀಠಾಧಿಪತಿಗಳ ಹೆಸರು ಇದರಿಂದ ದೊರಕುತ್ತದೆ. ಈ ಎಲ್ಲರ ಹೆಸರಿನೊಂದಿಗೆ ಲಿಂಗ ಎಂಬ ಅಬಿಧಾನವನ್ನು ಸೇರಿಸಿ ಹೇಳಲಾಗುತ್ತದೆ. ಪ್ರಸ್ತುತ ಶ್ರೀ ರಾವಲ್‌ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಈ ಪೀಠವನ್ನು ಅಲಂಕರಿಸಿದ್ದಾರೆ.

ಹಿಂದೆ, ಊಖೀಮಠಕ್ಕೆ ಜಹಗೀರಾಗಿ ಪ್ರಾಪ್ತವಾಗಿದ್ದ ಸುಮಾರು ೧೪೨ ಗ್ರಾಮಗಳ ಒಡೆತನವನ್ನು ಶ್ರೀ ಮಠವು ಹೊಂದಿತ್ತು. ಬ್ರಿಟಿಷರ ಕಾಲದಲ್ಲಿ ಈ ಗ್ರಾಮಗಳ ಆಡಳಿತವನ್ನು ಸರ್ಕಾರ ಕಸಿದು ಕೊಂಡಿದ್ದಲ್ಲದೆ, ಮಠದ ಅಧೀನದಲ್ಲಿದ್ದ ಹಿಮಾಲಯದ 22 ಕ್ಷೇತ್ರಗಳ ಪೈಕಿ ಶ್ರೀ ಕೇದಾರನಾಥ, ಗುಪ್ತಕಾಶಿ, ಮಧ್ಯಮಹೇಶ್ವರ, ಊಖೀಮಠ ಈ ನಾಲ್ಕು ದೇವಸ್ಥಾನಗಳನ್ನು ಉಳಿದು ಮಿಕ್ಕ ದೇವಾಲ ಯಗಳ ಒಡೆತನವನ್ನೂ ಮಠ ಬಿಟ್ಟುಕೊಡಬೇ ಕಾಯಿತು.

ಕರ್ನಾಟಕದ ಸಂಪರ್ಕ :
ಶ್ರೀ ಕೇದಾರ ಪೀಠವು ಉತ್ತರಾಖಂಡದಲ್ಲಿದ್ದರೂ, ಕರ್ನಾಟಕದ ಸಂಪರ್ಕವನ್ನು ಅನಾದಿಕಾಲದಿಂದಲೂ ಉಳಿಸಿಕೊಂಡು ಬಂದಿರುವುದು ಈ ಮಠದ ಒಂದು ವಿಶೇಷತೆಯಾಗಿದೆ.

ಪ್ರಾಚೀನ ಕಾಲದಿಂದಲೂ ವಿದ್ವಾಂಸರು, ಅರಸರು ಭೇಟಿ ನೀಡಿರುವುದಕ್ಕೆ ಆಧಾರವೂ ಕೂಡ ದೊರಕುತ್ತದೆ. ಕೆಳದಿ ಅರಸರ ಕಾಲದಲ್ಲಿ ದೊಡ್ಡ ಸಂಕಣ್ಣನಾಯಕನು ಹದಿನಾರನೆಯ ಶತಮಾನದಲ್ಲಿ ಇಲ್ಲಿಗೆ ಭೇಟಿ ಇತ್ತಿದ್ದನ್ನು ಲಿಂಗಣ್ಣಕವಿಯ ಕೆಳದಿ ನೃಪವಿಜಯದಲ್ಲಿ ಬಣ್ಣಿಸಲಾಗಿದೆ.

ಕರಮೆಸೆವಾ ಕೇತಾರೇ
ಶ್ವರನಡಿದಾವರೆಯನೈದಿ ಪೂಜಿಸಿ ತದ್ಭೂ
ವರನಾಸ್ಥಾನದೊಳ್‌ ಜಂಗಮ
ವರ ಧರ್ಮಾರ್ಥಂ ಸಮಠಮನಿರದಾಗಿಸಿದಂ ||

ಇದರ ಪ್ರಕಾರ ಈತ ಕೇದಾರೇಶ್ವರನ ಕ್ಷೇತ್ರವನ್ನು ಸಂದರ್ಶಿಸಿದ ರಾಜನು, ಇಲ್ಲಿಯ ಮಠದಲ್ಲಿ ಧರ್ಮಕಾರ್ಯಗಳನ್ನೂ ನೆರವೇರಿಸಿ, ದಾನಗಳನ್ನು ನೀಡಿದ. ಜೊತೆಗೆ ಮೂಲ ಮಠಕ್ಕೆ ಪೂರಕವಾಗಿ ಮತ್ತೊಂದು ಮಠದ ಅನುಕೂಲತೆಗಳನ್ನು ಈತ ಒದಗಿಸಿರಬಹುದಾದ ಸೂಚನೆಯನ್ನೂ ಕಾವ್ಯ ನೀಡುತ್ತದೆ.

  ಮಹಾಭಾರತದಲ್ಲಿ ಬರುವ ನವಗುಂಜರ

ಆದಿ ಜಗದ್ಗುರು ಏಕೋರಾಮರಾಧ್ಯರು ಸ್ಥಾಪಿಸಿದ ಮೂಲ ಮಠವು ಪ್ರಕೃತಿಯ ವಿಕೋಪಕ್ಕೆ ಸಿಲುಕಿದ ಕಾರಣ ಕಾಲಕಾಲಕ್ಕೆ ಬಹಳಷ್ಟು ನೂತನ ರಚನೆಗಳನ್ನು ಹೊಂದಿದೆ. ಮಠಕ್ಕೆ ಹೊಂದಿಕೊಂಡಂತೆ ಪ್ರಾಚೀನ ಓಂಕಾರೇಶ್ವರ ದೇವಾಲಯವಿದೆ. ಮಠದ ಅಧೀನಲ್ಲಿರುವ ಗುಪ್ತಕಾಶಿ, ಮಧ್ಯಮಹೇಶ್ವರ, ಕೇದಾರನಾಧ ದೇವಾಲಯಗಳಲ್ಲಿ, ಕೇದಾರ ಪೀಠದ ಜಗದ್ಗುರುಗಳ ಶಿಷ್ಯರಾದ ದಕ್ಷಿಣ ಭಾರತದ ಜಂಗಮ ವಂಶದವರೇ ಅನಾದಿಕಾಲದಿಂದ ಇಂದಿನವರೆಗೆ ಪ್ರಧಾನ ಅರ್ಚಕರಾಗಿ ಕಾರ್ಯವನ್ನು ನಿರ್ವಹಿಸುತ್ತಲಿದ್ದಾರೆ. ಇಂದಿಗೂ ಆದಿ ಜಗದ್ಗುರು ಏಕೋರಾಮರಾಧ್ಯ ಪೀಠದ ರಾವಳರು ಕೇದಾರನಾಥ ದೇವಾಲಯದ ಪ್ರಧಾನ ಅರ್ಚಕರು. ಕೇದಾರನಾಥ ದೇವಾಲಯದ ಕಲಶದಲ್ಲಿ ಏಕೋರಾಮರ ಮೂರ್ತಿಯನ್ನು ಕಾಣಬಹುದು. ಅಷ್ಟೇ ಅಲ್ಲದೆ, ಅಲಂಕಾರ ಪೂಜೆಗೆ ಉಪಯೋಗಿಸುವ ಕಿರೀಟದಲ್ಲಿಯೂ ಸಹ ಏಕೋರಾಮರ ಮೂರ್ತಿಯನ್ನು ಕಂಡರಿಸಲಾಗಿದೆ.

ಕನ್ನಡನಾಡಿನ ಜಂಗಮ ಸಂಸ್ಕೃತಿ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಶ್ರೀ ಮಠದವರು ಸ್ಥಳೀಯ ಪರಂಪರೆ, ಸಂಸ್ಕೃತಿಗೂ ಆದ್ಯತೆ ನೀಡುತ್ತಾರೆ, ಅಲ್ಲಿನ ಗುಡ್ಡಗಾಡು ಜನರಿಗೆ ಹಲವಾರು ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಅವುಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿರುವುದೂ ಒಂದು. ಹಲವಾರು ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಸಂಸ್ಕೃತ, ಆಯುರ್ವೇದ ಮೊದಲಾದ ಅಧ್ಯಯನಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ, ವಿದ್ಯಾಕೇಂದ್ರವನ್ನು ವಿಶ್ವವಿದ್ಯಾಲಯವನ್ನಾಗಿಸುವಲ್ಲಿ ಯಶಸ್ವಿಯಾಗಿದೆ. ಶಿವಪೂಜೆ, ಅನ್ನದಾಸೋಹ, ವಸತಿ, ವಿದ್ಯಾದಾನ ಮೊದಲಾದ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬರುತ್ತಾ, ಸಾವಿರಾರು ಮೈಲಿದೂರದ ಕನ್ನಡ ಮಠ ಕನ್ನಡಿಗರಿಗಷ್ಟೇ ಅಲ್ಲದೆ ವಿಶ್ವಕ್ಕೇ ಶಾಂತಿ, ಕಲ್ಯಾಣಗಳನ್ನು ಹಾರೈಸುತ್ತಿದೆ.

ಕೇದಾರದಿಂದ ಬದರಿಗೆ ಹೋಗುವ ಹೊಸ ರಸ್ತೆ ನಿರ್ಮಾಣ ಆಗುವ ಮೊದಲು, ಊಖೀ ಮಠದ ರಸ್ತೆಯಲ್ಲಿಯೇ ಎಲ್ಲರೂ ಪ್ರಯಾಣಿಸ ಬೇಕಿತ್ತು. ಆದರೆ ಈಗ ಹೊಸ ರಸ್ತೆಯಲ್ಲಿ ಸಾಗುವವರು ಸುಮಾರು ೨೫ ಕಿ.ಮೀ ಹಿಂದೆ ಪ್ರಯಾಣ ಮಾಡಿ ಊಖೀಮಠವನ್ನು ಸಂದರ್ಶಿಸಬೇಕು. ಸಾವಿರಾರು ಮೈಲಿ ದೂರ ಪ್ರಯಾಣಿಸುವವರಿಗೆ ಇದು ಹೆಚ್ಚುವರಿ ಪ್ರಯಾಣ ಎನ್ನಿಸುವುದಿಲ್ಲ. ಆದರೆ ಮಾಹಿತಿ ಕೊರತೆಯಿಂದಾಗಿ ಹಲವರು ಊಖೀ ಮಠ ನೋಡದೆಯೇ ಮರಳುವುದುಂಟು…

🙏🙏🙏🙏🙏
ಶ್ರೀಮದ್ ಹಿಮವತ್ಕೇದಾರ ವೈರಾಗ್ಯ ಸಿಂಹಾಸನದೀಶ್ವರ ರಾವಲ್ ಪದವಿ ವಿಭೂಷಿತ ಶ್ರೀ ಶ್ರೀ ಶ್ರೀ 1008 ಜಗದ್ಗುರು ಭೀಮಶಂಕರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದರು.
ಆದಿ ಜಗದ್ಗುರು ಏಕೋರಾಮರಾಧ್ಯ ಹಿಮವತ್ಕೇದಾರ ಮಹಾ ಪೀಠ.
ಉಖೀಮಠ, ಗುಪ್ತಕಾಶಿ ಅಂಚೆ,
ರುದ್ರಪ್ರಯಾಗ ಜಿಲ್ಲೆ. ಉತ್ತರಖಾಂಡ ರಾಜ್ಯ

Leave a Reply

Your email address will not be published. Required fields are marked *

Translate »